ಹಣಕಾಸು ಸಚಿವಾಲಯ

ಎಂ ಎಸ್ ಎಂ ಇ ಗಳಿಗೆ ಪರಿಹಾರವಾಗಿ, ಕಳೆದ 10 ದಿನಗಳಲ್ಲಿ ರೂ. 5,204 ಕೋಟಿ ಆದಾಯ ತೆರಿಗೆ ಮರುಪಾವತಿ: ಸಿಬಿಡಿಟಿ

Posted On: 17 APR 2020 9:10PM by PIB Bengaluru

ಎಂ ಎಸ್ ಎಂ ಇ ಗಳಿಗೆ ಪರಿಹಾರವಾಗಿ, ಕಳೆದ 10 ದಿನಗಳಲ್ಲಿ ರೂ. 5,204 ಕೋಟಿ ಆದಾಯ ತೆರಿಗೆ ಮರುಪಾವತಿ: ಸಿಬಿಡಿಟಿ

 

ಏಪ್ರಿಲ್ 8, 2020 ರಿಂದ ರೂ. 5,204 ಕೋಟಿ ಮೌಲ್ಯದ ಆದಾಯ ತೆರಿಗೆ ಮರುಪಾವತಿಯನ್ನು, ಸುಮಾರು 8.2 ಲಕ್ಷ ಸಣ್ಣ ವ್ಯಾಪಾರಗಳಿಗೆ (ಮಾಲೀಕರು, ಸಂಸ್ಥೆಗಳು, ಕಾರ್ಪೊರೇಟ್ ಮತ್ತು ಸಂಘಗಳು) ಮಾಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇಂದು ತಿಳಿಸಿದೆ. ಕೊವಿಡ್ – 19 ಸಾಂಕ್ರಾಮಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ಯಾವುದೇ ಸಂಬಳ ಕಡಿತ ಮತ್ತು ಕೆಲಸದಿಂದ ವಜಾಮಾಡುವ ಅಗತ್ಯವಿಲ್ಲದೇ. ಎಂ ಎಸ್ ಎಂ ಇ ಗಳು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಮುಂದುವರೆಸಲು ಈ ಆದಾಯ ತೆರಿಗೆ ಮರುಪಾವತಿ ಸಹಾಯ ಮಾಡುತ್ತದೆ.

ಕೊವಿಡ್ – 19 ಸಾಂಕ್ರಾಮಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ತೆರಿಗೆ ಪಾವತಿದಾರರಿಗೆ ಸಹಾಯವಾಗಲು ಆದಾಯ ತೆರಿಗೆ ಇಲಾಖೆ ಇಲ್ಲಿಯವರೆಗೆ ಗರಿಷ್ಠ ರೂ. 5 ಲಕ್ಷದವರೆಗೆ ಸುಮಾರು 14 ಲಕ್ಷದವರೆಗೆ ಮರುಪಾವತಿಗಳನ್ನು ಮಾಡಿದೆ, ಸರ್ಕಾರದ ಈ ನಿರ್ಧಾರದ ಕುರಿತು ಏಪ್ರಿಲ್ 8, 2020 ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ ನಂತರದಿಂದ ಇದು ಜಾರಿಗೆ ಬಂದಿದೆ ಎಂದು ಸಿಬಿಡಿಟಿ ತಿಳಿಸಿದೆ. ಎಂ ಎಸ್ ಎಂ ಇ ವಲಯದಲ್ಲಿ ಸಣ್ಣ-ಪುಟ್ಟ ವ್ಯಾಪಾರಗಳಿಗೆ ಪರಿಹಾರ ಒದಗಿಸುವುದನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಬೇಗ ರೂ. 7,760 ಕೋಟಿ ಮರುಪಾವತಿಯನ್ನು ಸಿಬಿಡಿಟಿ ಬಿಡುಗಡೆಗೊಳಿಸಿದೆ.

ಸುಮಾರು 1.74 ಲಕ್ಷ ಪ್ರಕರಣಗಳಲ್ಲಿ, ಸದ್ಯದ ಪರಿಸ್ಥಿತಿಗೆ ಹೊಂದಾಣಿಕೆ ಮಾಡಲು, ತೆರಿಗೆ ಪಾವತಿದಾರರಿಂದ ಅವರು ಬಾಕಿ ಇರುವ ತೆರಿಗೆ ಪಾವತಿಯ ನಿರೀಕ್ಷೆ ಇದ್ದು, 7 ದಿನಗಳೊಳಗಾಗಿ ಪ್ರತಿಕ್ರಿಯೆ ನೀಡಬೇಕೆಂದು ಕೋರಿ ಈಗಾಗಲೇ ಜ್ಞಾಪನಾ ಮಿಂಚಂಚೆಯನ್ನು ಕಳುಹಿಸಲಾಗಿದೆ. ಇದು ಮರುಪಾವತಿಯನ್ನು ತ್ವರಿತವಾಗಿ ಕೈಗೊಳ್ಳಲು ಸಹಾಯಕವಾಗುತ್ತದೆ.

ಈ ಪ್ರತಿಕ್ರಿಯೆಗಳನ್ನು ತೆರಿಗೆದಾರರು ಆನ್ ಲೈನ್ ನಲ್ಲಿ ಇ-ಫೈಲಿಂಗ್ ಖಾತೆ ಮೂಲಕ www.incometaxindiaefiling.gov.in ಗೆ ಒದಗಿಸಬಹುದಾಗಿದೆ.

***



(Release ID: 1615695) Visitor Counter : 176