ಕೃಷಿ ಸಚಿವಾಲಯ
ಲಾಕ್ ಡೌನ್ ಸಮಯದಲ್ಲಿ ಆಹಾರ ಧಾನ್ಯಗಳು ಮತ್ತು ಹಾಳಾಗುವ ವಸ್ತುಗಳನ್ನು ಸಾಗಿಸಲು ಅನುಕೂಲವಾಗುವಂತೆ “ಕಿಸಾನ್ ರಥ್” ಮೊಬೈಲ್ ಆ್ಯಪ್ ಗೆ ಚಾಲನೆ ನೀಡಿದ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್
Posted On:
17 APR 2020 3:51PM by PIB Bengaluru
ಲಾಕ್ ಡೌನ್ ಸಮಯದಲ್ಲಿ ಆಹಾರ ಧಾನ್ಯಗಳು ಮತ್ತು ಹಾಳಾಗುವ ವಸ್ತುಗಳನ್ನು ಸಾಗಿಸಲು ಅನುಕೂಲವಾಗುವಂತೆ “ಕಿಸಾನ್ ರಥ್” ಮೊಬೈಲ್ ಆ್ಯಪ್ ಗೆ ಚಾಲನೆ ನೀಡಿದ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್
ಕಿಸಾನ್ ರಥ್ ಕೃಷಿ ಉತ್ಪನ್ನಗಳ ಸಾಗಾಣಿಕೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು: ಶ್ರೀ ತೋಮರ್
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಭವನದಲ್ಲಿ ರೈತ ಸ್ನೇಹಿ ಮೊಬೈಲ್ ಆ್ಯಪ್ ಗೆ ಚಾಲನೆ ನೀಡಿದರು. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಅಭಿವೃದ್ಧಿಪಡಿಸಿದ್ದು, ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಾಗಾಣಿಕೆಗೆ ಪ್ರಾರ್ಥಮಿಕ ಮತ್ತು ದ್ವಿತೀಯ ಬಗೆಯ (ತರುವಾಯದ) ಸಾರಿಗೆ ವಾಹನಗಳನ್ನು ಹುಡುಕುವಲ್ಲಿ ಅನುಕೂಲವಾಗುವಂತೆ. ಪ್ರಾಥಮಿಕ ಸಾರಿಗೆಯಲ್ಲಿ ಫಾರ್ಮ್‌ನಿಂದ ಮಂಡಿಗಳಿಗೆ, ಎಫ್‌ಪಿಒ ಕಲೆಕ್ಷನ್ ಸೆಂಟರ್ ಮತ್ತು ಗೋದಾಮುಗಳು ಮುಂತಾದವು ಸೇರಿವೆ. ದ್ವಿತೀಯ ಸಾರಿಗೆಯಲ್ಲಿ ಮಂಡಿಗಳಿಂದ ರಾಜ್ಯದೊಳಗೆ ಮತ್ತು ಅಂತರ ರಾಜ್ಯ ಮಂಡಿಗಳು, ಸಂಸ್ಕರಣಾ ಘಟಕಗಳು, ರೈಲ್ವೆ ನಿಲ್ದಾಣ, ಗೋದಾಮುಗಳು ಮತ್ತು ಸಗಟು ವ್ಯಾಪಾರಿಗಳಿಗೆ ಸಾಗಾಣಿಕೆ ಇರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಶ್ರೀ ತೋಮರ್, ಲಾಕ್ ಡೌನ್ ನ ಮಧ್ಯೆ ಕೃಷಿ ಚಟುವಟಿಕೆಗಳು ನಡೆಯಬೇಕಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು. ಕಟಾವು ಮತ್ತು ಬಿತ್ತನೆ ನಡೆಯುತ್ತಿರುವಾಗ, ಕಿಸಾನ್ ರಥ್ ಅಪ್ಲಿಕೇಶನ್‌ನೊಂದಿಗೆ ಸಾರಿಗೆ ಸುಲಭವಾಗಲಿದೆ ಏಕೆಂದರೆ ಇದು ರೈತರು ಮತ್ತು ವ್ಯಾಪಾರಿಗಳಿಗೆ ಫಾರ್ಮ್ ಗೇಟ್‌ನಿಂದ ಮಂಡಿ ಮತ್ತು ಮಂಡಿಯಿಂದ ಮಂಡಿಗೆ ದೇಶಾದ್ಯಂತ ಉತ್ಪನ್ನಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ದೇಶವು ಕೋವಿಡ್-19 ಪರಿಸ್ಥಿತಿಯಲ್ಲಿರುವಾಗ, ಈ 'ಕಿಸಾನ್ ರಥ್' ಆ್ಯಪ್ ದೇಶದ ರೈತರು, ಎಫ್‌ಪಿಒಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ತಮ್ಮ ಬಾಗಿಲಿನಿಂದ ಮಾರುಕಟ್ಟೆಗಳಿಗೆ ಸಾಗಿಸಲು ಸೂಕ್ತವಾದ ಸಾರಿಗೆ ಸೌಲಭ್ಯವನ್ನು ಕಂಡುಕೊಳ್ಳುವ ಆಯ್ಕೆಯನ್ನು ಹೊಂದಲು ಹೆಚ್ಚು ಅನುಕೂಲವಾಗಲಿದೆ.
"ಕಿಸಾನ್ ರಥ್" ಹೆಸರಿನ ಮೊಬೈಲ್ ಆ್ಯಪ್ ರೈತರು ಮತ್ತು ವ್ಯಾಪಾರಿಗಳಿಗೆ ಆಹಾರ ಧಾನ್ಯ (ಕಾಳುಗಳು, ಏಕದಳ, , ದ್ವಿದಳ ಧಾನ್ಯಗಳು, ಇತ್ಯಾದಿ), ಹಣ್ಣುಗಳು ಮತ್ತು ತರಕಾರಿಗಳು, ಎಣ್ಣೆ ಬೀಜಗಳು, ಮಸಾಲೆಗಳು, ನಾರಿನ ಬೆಳೆಗಳು, ಹೂಗಳು , ಬಿದಿರು, ಲಾಗ್ ಮತ್ತು ಸಣ್ಣ ಅರಣ್ಯ ಉತ್ಪನ್ನಗಳು, ತೆಂಗಿನಕಾಯಿ ಇತ್ಯಾದಿ. ಈ ಆ್ಯಪ್ ರೀಫರ್ (ರೆಫ್ರಿಜರೇಟೆಡ್) ವಾಹನಗಳಿಂದ ಹಾಳಾಗುವ ಸರಕುಗಳ ಸಾಗಣೆಗೆ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುತ್ತದೆ.
ಕೃಷಿ ಉತ್ಪನ್ನಗಳ ಸಾಗಣೆಯು ಪೂರೈಕೆ ಸರಪಳಿಯ ನಿರ್ಣಾಯಕ ಮತ್ತು ಅನಿವಾರ್ಯ ಅಂಶವಾಗಿದೆ. ಪ್ರಸ್ತುತ ಲಾಕ್‌ಡೌನ್ ಕಾರಣದಿಂದಾಗಿ ದೇಶದಲ್ಲಿ ಹಿಂದೆಂದೂ ಕಾಣದಂತಹ ಪರಿಸ್ಥಿತಿಯಲ್ಲಿ, “ಕಿಸಾನ್ ರಥ್” ರೈತರು, ಗೋದಾಮುಗಳು, ಎಫ್‌ಪಿಒಗಳು, ಎಪಿಎಂಸಿ ಮಂಡಿಗಳು ಮತ್ತು ರಾಜ್ಯದೊಳಗೆ ಮತ್ತು ಅಂತರರಾಜ್ಯ ಖರೀದಿದಾರರ ನಡುವೆ ಸುಗಮ ಮತ್ತು ತಡೆರಹಿತ ಪೂರೈಕೆ ಸಂಪರ್ಕವನ್ನು ಖಚಿತಪಡಿಸುತ್ತದೆ ಮತ್ತು ಆಹಾರದ ವ್ಯರ್ಥವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಸಮಯೋಚಿತ ಸೇವೆಗಳನ್ನು ಒದಗಿಸುವುದು. ಇವೆಲ್ಲವೂ ಹಾಳಾಗುವ ಸರಕುಗಳಿಗೆ ಉತ್ತಮ ಬೆಲೆ ಸಿಗುವುದಕ್ಕೆ ಕಾರಣವಾಗುತ್ತವೆ.
ಸರಕು ರವಾನೆದಾರರು (ರೈತ, ಎಫ್‌ಪಿಒಗಳು, ಖರೀದಿದಾರ/ ವ್ಯಾಪಾರಿ) ಈ ಆ‍್ಯಪ್ ನಲ್ಲಿ ಸಾಗಣೆಕೆಗಾಗಿ ತಮ್ಮ ಕೋರಿಕೆಯನ್ನು ಇಡಲು ಅದು ಮಾರುಕಟ್ಟೆಯಲ್ಲಿರುವ ಸಾಗಾಣಿಕೆದಾರರಿಗೆ ಪ್ರಸಾರವಾಗುತ್ತದೆ, ನಂತರ ರವಾನೆದಾರರ ಅಗತ್ಯಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಗಳನ್ನು ವಿವಿಧ ಟ್ರಕ್ಕರ್‌ಗಳು ಮತ್ತು ಫ್ಲೀಟ್ ಮಾಲೀಕರಿಂದ ಪಡೆದು ರವಾನೆದಾರರಿಗೆ ಬೆಲೆ ಮತ್ತು ಟ್ರಕ್ಕರ್ ವಿವರಗಳನ್ನು ಒದಗಿಸುತ್ತದೆ. ಅದರ ನಂತರ, ರವಾನೆದಾರರು ನೇರವಾಗಿ ಟ್ರಕ್ಕರ್‌ನೊಂದಿಗೆ ಮಾತುಕತೆ ನಡೆಸಿ ಒಪ್ಪಂದವನ್ನು ಅಂತಿಮಗೊಳಿಸುತ್ತಾರೆ. ಟ್ರಿಪ್ ಪೂರ್ಣಗೊಂಡ ನಂತರ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಟ್ರಕ್ಕರ್‌ಗೆ ರೇಟಿಂಗ್/ ಪ್ರತಿಕ್ರಿಯೆಯನ್ನು ನೀಡಬಹುದು, ಇದು ಕೆಲವು ಸಮಯದವರೆಗೆ ಟ್ರಾನ್ಸ್‌ಪೋರ್ಟರ್‌ಗೆ ತಮ್ಮ ಸೇವೆಗಳನ್ನು ಸುಧಾರಿಸಲು ಪ್ರತಿಕ್ರಿಯೆಯು ಕಾರ್ಯವಿಧಾನವಾಗಿ ಪರಿಣಮಿಸುತ್ತದೆ. ಭವಿಷ್ಯದಲ್ಲಿ ಸಾಗಾಣಿಕಾ ಸೇವಾ ಪೂರೈಕೆದಾರರ ಆಯ್ಕೆ ಪ್ರಕ್ರಿಯೆಯಲ್ಲಿ ಇದು ರವಾನೆದಾರರಿಗೆ ಸಹಾಯ ಮಾಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ತೋಮರ್, ‘ಕಿಸಾನ್ ರಥ್’ ಮೊಬೈಲ್ ಆ್ಯಪ್ ದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಂಡಿ ಮಂಡಿಗಳ ನಡುವೆ ಮತ್ತು ಅಂತರರಾಜ್ಯ ವ್ಯಾಪಾರಕ್ಕೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ. “ಕಿಸಾನ್ ಕಾ ಅಪ್ನಾ ವಾಹನ್” ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಆ್ಯಪ್ ಕೃಷಿ ಉತ್ಪನ್ನಗಳ ಸಾಗಣೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಸಚಿವರು ಹೇಳಿದರು.
ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರು, ಶ್ರೀ ಪರ್ಶೋತ್ತಂ ರೂಪಾಲಾ ಮತ್ತು ಶ್ರೀ ಕೈಲಾಶ್ ಚೌಧರಿ, ಕಾರ್ಯದರ್ಶಿ (ಎಸಿ ಮತ್ತು ಎಫ್‌ಡಬ್ಲ್ಯು), ಶ್ರೀ ಸಂಜಯ್ ಅಗರ್ವಾಲ್, ಶ್ರೀ ಅಜಯ್ ಪ್ರಕಾಶ್ ಸಾಹ್ನಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಾರ್ಯದರ್ಶಿ, ಡಾ. ನೀತಾ ವರ್ಮಾ, ಎನ್ಐಸಿ ಹಿರಿಯ ಮಹಾನಿರ್ದೇಶಕರು, ಸಚಿವಾಲಯದ ಅಧಿಕಾರಿಗಳು ಮತ್ತು ಇತರರು ಕಿಸಾನ್ ರಥ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
ಈ ಮೊಬೈಲ್ ಅಪ್ಲಿಕೇಶನ್. ಆರಂಭದಲ್ಲಿ ಆಂಡ್ರಾಯ್ಡ್ ಆವೃತ್ತಿಯಲ್ಲಿ 8 ಭಾಷೆಗಳಲ್ಲಿ ಲಭ್ಯವಾಗಲಿದೆ ಮತ್ತು ಭಾರತದಾತ್ಯಂತ ಬಳಕೆಗೆ ಸಿದ್ಧವಾಗಿದೆ.
***
(Release ID: 1615559)
Visitor Counter : 284
Read this release in:
Odia
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam