ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ (ಎಸ್ ಟಿಪಿಐ) ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿ ಕಂಪನಿಗಳ ನಾಲ್ಕು ತಿಂಗಳ ಬಾಡಿಗೆ ಮನ್ನಾ ಮಾಡಿದ ಮೋದಿ ಸರ್ಕಾರ

Posted On: 16 APR 2020 6:20PM by PIB Bengaluru

ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ (ಎಸ್ ಟಿಪಿಐ) ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿ ಕಂಪನಿಗಳ ನಾಲ್ಕು ತಿಂಗಳ ಬಾಡಿಗೆ ಮನ್ನಾ ಮಾಡಿದ ಮೋದಿ ಸರ್ಕಾರ

 

ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಸವಾಲುಗಳು ಮತ್ತು ಆನಂತರದ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಪ್ರಮುಖ ನಿರ್ಧಾರವನ್ನು ಕೈಗೊಂಡು, ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ (ಎಸ್ ಟಿಪಿಐ)ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಣ್ಣ ಪ್ರಮಾಣದ ಐಟಿ ಘಟಕಗಳಿಗೆ ಬಾಡಿಗೆ ಪಾವತಿಯಿಂದ ದೊಡ್ಡ ಪರಿಹಾರವನ್ನು ನೀಡಿದೆ. ಬಹುತೇಕ ಘಟಕಗಳು ತಂತ್ರಜ್ಞಾನ ಸಂಬಂಧಿ ಎಂಎಸ್ಎಂಇ ಅಥವಾ ನವೋದ್ಯಮಗಳಾಗಿವೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ),ದೇಶಾದ್ಯಂತ ಎಸ್ ಟಿಪಿಐ ಆವರಣಗಳಿಂದ ಕಾರ್ಯ ನಿರ್ವಹಿಸುತ್ತಿರುವಂತಹ ಘಟಕಗಳಿಗೆ 01.03.2020 ರಿಂದ 30.06.2020ರ ವರೆಗೆ ಅಂದರೆ ನಾಲ್ಕು ತಿಂಗಳ ಅವಧಿಯ ಬಾಡಿಗೆ ಮನ್ನಾ ಮಾಡಲು ನಿರ್ಧರಿಸಿದೆ.

ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ ಬರುವ ಸ್ವಾಯತ್ತ ಸಂಸ್ಥೆ ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ (ಎಸ್ ಟಿಪಿಐ) ದೇಶಾದ್ಯಂತ 60 ಕೇಂದ್ರಗಳನ್ನು ಹೊಂದಿದೆ. ಕೋವಿಡ್-19 ಸಾಂಕ್ರಾಮಿಕ ಉದ್ಭವಿಸಿರುವ ಈ ಸಂದರ್ಭದಲ್ಲಿ ಎದುರಾಗಿರುವ ಬಿಕ್ಕಟ್ಟು ನಿವಾರಣೆಗೆ ಉದ್ಯಮಕ್ಕೆ ಪರಿಹಾರ ಒದಗಿಸುವ ದೃಷ್ಟಿಯಿಂದ ಈ ಕೇಂದ್ರಗಳ ಆವರಣದಿಂದ ಕಾರ್ಯ ನಿರ್ವಹಿಸುತ್ತಿರುವಂತಹ ಘಟಕಗಳಿಗೆ ಬಾಡಿಗೆ ಪಾವತಿ ಮನ್ನಾ ಮಾಡಲಾಗಿದೆ. ಇದರಿಂದಾಗಿ 60 ಎಸ್ ಟಿಪಿಐ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 200 ಐಟಿ/ ಐಟಿಇಎಸ್ ಎಂಎಸ್ಎಂಇಗಳಿಗೆ ಅನುಕೂಲವಾಗಲಿದೆ. 01.03.2020ರಿಂದ 30.06.2020ರ ಅವಧಿಗೆ ನಾಲ್ಕು ತಿಂಗಳು ಬಾಡಿಗೆ ಮನ್ನಾ ಮಾಡಿರುವುದರಿಂದ ಅಂದಾಜು ಒಟ್ಟು 5 ಕೋಟಿ ರೂ. ವೆಚ್ಚ ತಗುಲಲಿದೆ. ಈ ಘಟಕಗಳಲ್ಲಿ ನೇರವಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 3,000 ಐಟಿ/ ಐಟಿಇಎಸ್ ಸಿಬ್ಬಂದಿಗಳ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

***


(Release ID: 1615244) Visitor Counter : 243