ರಕ್ಷಣಾ ಸಚಿವಾಲಯ

ಕೋವಿಡ್ -19 ವಿರುದ್ದ ಹೋರಾಟದಲ್ಲಿ ಕಂಟೋನ್ಮೆಂಟ್ ಮಂಡಳಿಗಳ ಕ್ರಮಗಳ ಬಗ್ಗೆ ರಕ್ಷಣಾ ಸಚಿವರಾದ ಶ್ರೀ ರಾಜ್ ನಾಥ ಸಿಂಗ್ ಅವರಿಂದ ಪರಾಮರ್ಶೆ

Posted On: 16 APR 2020 4:55PM by PIB Bengaluru

ಕೋವಿಡ್ -19 ವಿರುದ್ದ ಹೋರಾಟದಲ್ಲಿ ಕಂಟೋನ್ಮೆಂಟ್ ಮಂಡಳಿಗಳ ಕ್ರಮಗಳ ಬಗ್ಗೆ ರಕ್ಷಣಾ ಸಚಿವರಾದ ಶ್ರೀ ರಾಜ್ ನಾಥ ಸಿಂಗ್ ಅವರಿಂದ ಪರಾಮರ್ಶೆ

 

ರಕ್ಷಣಾ ಸಚಿವರಾದ ಶ್ರೀ ರಾಜ್ ನಾಥ ಸಿಂಗ್ ಅವರು ಇಂದು ದೇಶಾದ್ಯಂತ ಇರುವ 62 ಕಂಟೋನ್ಮೆಂಟ್ ಮಂಡಳಿಗಳು ಕೊರೊನಾವೈರಸ್ (ಕೋವಿಡ್ -19) ಹರಡದಂತೆ ಕೈಗೊಂಡಿರುವ ಪ್ರತಿಬಂಧಕ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು. ರಕ್ಷಣಾ ಎಸ್ಟೇಟುಗಳ ಮಹಾನಿರ್ದೇಶಕರಾದ (ಡಿ.ಜಿ.ಡಿ.ಇ.) ಶ್ರೀಮತಿ ದೀಪಾ ಬಾಜ್ವಾ ಅವರು ಜಾಗತಿಕ ಸಾಂಕ್ರಾಮಿಕದ ವಿರುದ್ದದ ಹೋರಾಟದಲ್ಲಿ ಸಿ.ಬಿ.ಗಳ ಬದ್ದತೆಯ ಬಗ್ಗೆ ರಕ್ಷಣಾ ಮಂತ್ರಿಗಳಿಗೆ ಭರವಸೆ ನೀಡಿದರು.

ಎಲ್ಲಾ ಕಂಟೋನ್ಮೆಂಟ್ ಗಳಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ,ಇತರ ವಿಷಯಗಳಾದ ನೈರ್ಮಲ್ಯೀಕರಣದ ಆವಶ್ಯಕ ಸೇವೆಗಳ ನಿರ್ವಹಣೆ, ವೈದ್ಯಕೀಯ ಸೇವೆಗಳು, ಮತ್ತು ನೀರು ಪೂರೈಕೆ ಇತ್ಯಾದಿಗಳ ಬಗ್ಗೆ ಶ್ರೀಮತಿ ಬಾಜ್ವಾ ಅವರು ಸಚಿವರಿಗೆ ಒಟ್ಟು ನೋಟದ ವಿವರಗಳನ್ನು ಒದಗಿಸಿದರು. ಆಸ್ಪತ್ರೆಗಳನ್ನು ಗುರುತಿಸುವಿಕೆ, ಕ್ವಾರಂಟೈನ್ ಗಾಗಿ ಶಾಲೆಗಳು, ಸಮುದಾಯ ಭವನಗಳನ್ನು ಗುರುತಿಸುವಿಕೆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು. ನಿವಾಸಿಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಕೈಗೊಳ್ಳಲಾಗಿರುವ ನಿರಂತರ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ಒದಗಿಸಿದರು. ಸಾಮಾಜಿಕ ಅಂತರದ ಜಾರಿ, ದುರ್ಬಲರಿಗೆ ಆಹಾರ ಮತ್ತು ಪಡಿತರ ವ್ಯವಸ್ಥೆಯನ್ನು ಅಸೋಸಿಯೇಶನ್ ವತಿಯಿಂದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಮಾಜ ಸೇವಾ ಸಂಘಟನೆಗಳ ಮೂಲಕ ಮಾಡಲಾಗಿರುವ ಬಗ್ಗೆಯೂ ಅವರು ತಿಳಿಸಿದರು. ಸಿ.ಬಿ.ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಆಡಳಿತಗಳು ಮತ್ತು ಸ್ಥಳೀಯ ಮಿಲಿಟರಿ ಅಧಿಕಾರಿಗಳ (ಎಲ್.ಎಂ.ಎ. ಗಳು) ಜೊತೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಸಚಿವರಾದ ಶ್ರೀ ರಾಜ್ ನಾಥ ಸಿಂಗ್ ಅವರಿಗೆ ತಿಳಿಸಲಾಯಿತು.

ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಅವರು ರಾಜ್ಯಗಳ ವಿಪತ್ತು ಪ್ರತಿಕ್ರಿಯಾ ನಿಧಿ (ಎಸ್.ಡಿ.ಆರ್.ಎಫ್.) ನ್ನು ಸಿ.ಬಿ.ಗಳಿಗೆ ಕೂಡಾ ಬಿಡುಗಡೆ ಮಾಡುವ ಕುರಿತಂತೆ ಮುಖ್ಯ ಕಾರ್ಯದರ್ಶಿಗಳ ಜೊತೆ ಪ್ರಸ್ತಾಪ ಮಾಡಿರುವುದನ್ನು ರಕ್ಷಣಾ ಮಂತ್ರಿಗಳು ಗಮನಿಸಿದರು. ಈ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ರಾಜ್ ನಾಥ ಸಿಂಗ್ ಅವರು ಕಂಟೋನ್ಮೆಂಟ್ ಮಂಡಳಿಗಳು ನೈರ್ಮಲ್ಯದ ಅತ್ಯುತ್ತಮ ಮಾನದಂಡಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಶುಚಿತ್ವ ಕಾಪಾಡಿಕೊಂಡು ನಾಗರಿಕ ವಸತಿಯ ಪ್ರದೇಶಗಳಲ್ಲಿ ಕ್ರಿಮಿನಾಶಕ ಧೂಮವನ್ನು ಹರಡುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ವಲಸೆಗಾರರಿಗೆ/ ದಿನಗೂಲಿಗಳಿಗೆ ಆಹಾರ ಮತ್ತು ವಸತಿ ಒದಗಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು ಎಂಬುದನ್ನೂ ಅವರು ಸಲಹೆ ಮಾಡಿದರು.

***



(Release ID: 1615238) Visitor Counter : 207