ಪಂಚಾಯತ್ ರಾಜ್ ಸಚಿವಾಲಯ

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಹರಡುವಿಕೆ ನಿಗ್ರಹಿಸಲು ದೇಶದ ಗ್ರಾಮ ಪಂಚಾಯಿತಿಗಳಿಂದ ಸಕ್ರಿಯ ಕ್ರಮಗಳು

Posted On: 16 APR 2020 11:14AM by PIB Bengaluru

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಹರಡುವಿಕೆ ನಿಗ್ರಹಿಸಲು ದೇಶದ ಗ್ರಾಮ ಪಂಚಾಯಿತಿಗಳಿಂದ ಸಕ್ರಿಯ ಕ್ರಮಗಳು

ಸಾರ್ವಜನಿಕ ಸ್ಥಳಗಳ ದೈನಂದಿನ ನೈರ್ಮಲ್ಯೀಕರಣ; ನಿರ್ಗತಿಕ ವ್ಯಕ್ತಿಗಳು ಮತ್ತು ವಲಸಿಗರಿಗೆ ಆಶ್ರಯ ಮತ್ತು ಕ್ವಾರಂಟೈನ್ ಸೌಲಭ್ಯ; ಅಗತ್ಯವಿರುವವರಿಗೆ ರಕ್ಷಣಾತ್ಮಕ ಸಾಧನ, ಹಣಕಾಸಿನ ನೆರವು ಮತ್ತು ಆಹಾರ/ ಪಡಿತರವನ್ನು ಒದಗಿಸುವುದು ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಕ್ರಮಗಳಲ್ಲಿ ಸೇರಿವೆ

 

ದೇಶದ ಒಳಪ್ರದೇಶಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ದೇಶಾದ್ಯಂತ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯಿತಿಗಳು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಲಾಕ್ಡೌನ್ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಮತ್ತು ಸಾಮಾಜಿಕ ಅಂತರದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಪಂಚಾಯತಿ ರಾಜ್ ಸಚಿವಾಲಯ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯಿತಿಗಳೊಂದಿಗೆ ನಿಕಟ ಸಮನ್ವಯದಲ್ಲಿದೆ.

ಪಂಚಾಯತ್ ಮಟ್ಟದಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇವುಗಳನ್ನು ಇತರರು ಉತ್ತಮ ಅಭ್ಯಾಸಗಳ ಮಾದರಿಗಳಾಗಿ ಅನುಸರಿಸಬಹುದು. ಅವುಗಳಲ್ಲಿ ಕೆಲವು

ಉತ್ತರ ಪ್ರದೇಶ:

  • ಸಿದ್ಧಾರ್ಥನಗರ ಜಿಲ್ಲೆಯಲ್ಲಿ, ಪೋಸ್ಟ್ಮ್ಯಾನ್ ಒಬ್ಬರು ಮೈಕ್ರೊ ಎಟಿಎಂ ಮೂಲಕ ಹಣದ ಲಭ್ಯತೆಯನ್ನು ಒದಗಿಸುವ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿದ್ದಾರೆ.

https://ci6.googleusercontent.com/proxy/0vn4YtrkYHzatn-j4nFSE8pdvlNN5vYAPLYmKS6zV-Det50Q0Q4hI92AJocxf_8wO1w0hdMpHJXGJ4RNWUw-OJcVgn3rL6qMhArEFIOtrR9RCuUkUlsW=s0-d-e1-ft#https://static.pib.gov.in/WriteReadData/userfiles/image/image001T6CU.jpg

 

  • ಮೀರತ್ ವಿಭಾಗದ ಎಲ್ಲಾ 6 ಜಿಲ್ಲೆಗಳಲ್ಲಿ ಸುಮಾರು 20,000 ವಲಸಿಗರನ್ನು ಗುರುತಿಸಲಾಗಿದೆ. ಒಟ್ಟು 600 ವಲಸಿಗರು ವಿದೇಶಿ ಪ್ರವಾಸದ ಇತಿಹಾಸವನ್ನು ಹೊಂದಿದ್ದಾರೆ.
  • ಒಟ್ಟು 700 ಕ್ವಾರಂಟೈನ್ ಕೇಂದ್ರಗಳು 6600 ಜನರೊಂದಿಗೆ ಕಾರ್ಯನಿರ್ವಹಿಸುತ್ತಿವೆ.
  • ಆಹಾರ ಮತ್ತು ವಸತಿ ಸೌಕರ್ಯಗಳನ್ನು ಗ್ರಾಮಪ್ರಧಾನ / ಕಾರ್ಯದರ್ಶಿ ಮಾಡಿದ್ದಾರೆ.
  • ಎಲ್ಲಾ ನಿರ್ಗತಿಕ ಕುಟುಂಬಗಳಿಗೆ ತಿಂಗಳಿಗೆ 1000 ರೂ.ಪರಿಹಾರ ನೀಡಲಾಗಿದೆ.
  • ವಲಸಿಗರು ಮತ್ತು ದುರ್ಬಲರಿಗೆ ಪಡಿತರ / ಬೇಯಿಸಿದ ಆಹಾರವನ್ನು ಪ್ರತಿದಿನ ವಿತರಿಸಲಾಗುತ್ತಿದೆ.
  • ಎಲ್ಲಾ 2820 ಪೌರಕಾರ್ಮಿಕರಿಗೆ ಮುಖಗವಸುಗಳು, ಸ್ಯಾನಿಟೈಜರ್ / ಸಾಬೂನುಗಳು, ಕೈಗವಸುಗಳು ಇತ್ಯಾದಿಗಳನ್ನು ಒದಗಿಸಲಾಗಿದೆ ಮತ್ತು ಇವರು ಪ್ರತಿದಿನ ಹಳ್ಳಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.
  • ದುರ್ಬಲ ಪ್ರದೇಶಗಳಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಮತ್ತು ಬೀಚಿಂಗ್ ಪೌಡರ್ ಬಳಸಿ ನಿಯಮಿತವಾಗಿ ನೈರ್ಮಲ್ಯೀಕರಣ ಮಾಡಲಾಗುತ್ತಿದೆ.

https://ci3.googleusercontent.com/proxy/kUyvajMJ60cL0mxqjrnPYfHRPLiFN0sBTD5sw7_ucqQylgCdwmqwSRtuJ_PTjYjpUkKWuTZICoiCrC_ROOTHCnGxoL8Z1gM_JNI1fjsYVziLb0szhr6E=s0-d-e1-ft#https://static.pib.gov.in/WriteReadData/userfiles/image/image00255RT.jpghttps://ci4.googleusercontent.com/proxy/ZerKVZXkhx07m3v8XWQM3AYzifxdY0CniItsuWFFxxr9PfDrOeYkzmjvLE4_clXkONWGEBKqxU33LjXdHEEDLt5MIrHY0L0JNvbY95JTtF4tF-CYjYHg=s0-d-e1-ft#https://static.pib.gov.in/WriteReadData/userfiles/image/image003QFF9.png

 

ಕೇರಳ:

ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ 1304 ಸಮುದಾಯ ಅಡಿಗೆಮನೆಗಳನ್ನು ಪ್ರಾರಂಭಿಸಲಾಗಿದೆ. ಪೈಕಿ 1100 ಸಮುದಾಯ ಅಡಿಗೆಮನೆಗಳು ಕುಡುಂಬಶ್ರೀ (ರಾಜ್ಯ ಮಹಿಳಾ ಸಬಲೀಕರಣ ಕಾರ್ಯಕ್ರಮ) ಯೊಂದಿಗೆ ಕೆಲಸ ಮಾಡುತ್ತಿವೆ ಮತ್ತು ಉಳಿದವುಗಳನ್ನು ಸ್ವತಃ ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳೇ ನಡೆಸುತ್ತವೆ.

  • ಕುಡುಂಬಶ್ರೀ ಸುಮಾರು 300 ಟೈಲರಿಂಗ್ ಘಟಕಗಳ ಮೂಲಕ 18 ಲಕ್ಷಕ್ಕೂ ಹೆಚ್ಚು ಹತ್ತಿ ಮುಖಗವಸುಗಳನ್ನು ತಯಾರಿಸಿ ವಿತರಿಸಿವೆ.
  • ಅಲ್ಲದೆ, 21 ಮೈಕ್ರೋ ಎಂಟರ್ಪ್ರೈಸ್ ಘಟಕಗಳು 2700 ಲೀಟರ್ ಸ್ಯಾನಿಟೈಜರ್ಗಳನ್ನು ತಯಾರಿಸಿವೆ.
  • ಕುಡುಂಬಶ್ರೀಯ 360 ಸಮುದಾಯ ಸಲಹೆಗಾರರ ಮೂಲಕ, ಅಗತ್ಯವಿರುವವರಿಗೆ ವಿವಿಧ ಮಾನಸಿಕ ಸಮಸ್ಯೆಗಳಿಗಾಗಿ ಸಮಾಲೋಚನೆ ಮತ್ತು ಮಾನಸಿಕ ಬೆಂಬಲವನ್ನು ನೀಡಲಾಗುತ್ತಿದೆ. ಮಾರ್ಚ್ 15 ರಿಂದ ಏಪ್ರಿಲ್ 5 ರವರೆಗೆ 49,488 ಜನರು ಸೇವೆಗಳನ್ನು ಪಡೆದುಕೊಂಡಿದ್ದಾರೆ.
  • ಕುಡುಂಬಶ್ರೀ ಸಹಾಯದಿಂದ ಎಲ್ಎಸ್ಜಿಐಗಳು ಲಾಕ್ಡೌನ್ ಸಮಯದಲ್ಲಿ ಕೋವಿಡ್ -19 ಬಗ್ಗೆ ಸರ್ಕಾರದ ಸೂಚನೆಗಳ ಬಗ್ಗೆ ತಿಳಿಸಲು 22 ಲಕ್ಷ ನೆರೆಹೊರೆಯ ಗುಂಪು (ಎನ್ಎಚ್ಜಿ) ಸದಸ್ಯರೊಂದಿಗೆ 1.9 ಲಕ್ಷ ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ. ಪ್ರಸ್ತುತ ವೇದಿಕೆಯ ಮೂಲಕ ಮಾಹಿತಿಯನ್ನು ಎನ್ಎಚ್ಜಿ ಗುಂಪುಗಳಿಗೆ ಕಳುಹಿಸಲಾಗುತ್ತಿದೆ.

https://ci3.googleusercontent.com/proxy/H5sG9VGzXjwPeG9W8DW6fmFt0zay_wPIEfaikoP6V7YzG-6lSO-YZmgijcDf-pqBhND0rrjnyGpV6tJIciyKbIixOdltl4prU5QZcoN4NCSQqYWwl4dE=s0-d-e1-ft#https://static.pib.gov.in/WriteReadData/userfiles/image/image004D9KC.png

 

ದಾದ್ರಾ ಮತ್ತು ನಗರ ಹವೇಲಿ:

  • ಪಂಚಾಯತ್ ಪ್ರದೇಶಗಳ ನೈರ್ಮಲ್ಯೀಕರಣದ ಜೊತೆಗೆ ಪ್ರತಿದಿನ ಮಾಡಬೇಕಾದ ಹಾಗೂ ಮಾಡದಿರುವ ಕೆಲಸಗಳ ಬಗ್ಗೆ ಜಾಗೃತಿ ನೀಡಲಾಗುತ್ತಿದೆ.
  • ಗ್ರಾಮೀಣ ಪ್ರದೇಶದಲ್ಲಿ 1.32 ಲಕ್ಷ ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು 17,400 ಮುಖಗವಸುಗಳನ್ನು ಉಚಿತವಾಗಿ ವಿತರಿಸಲಾಗಿದೆ
  • ನಿರ್ದಿಷ್ಟ ಸಮಯಕ್ಕಾಗಿ ಅಂಗಡಿಗಳನ್ನು ತೆರೆಯಲಾಗುತ್ತದೆ; ಸಾಮಾಜಿಕ ಅಂತರವನ್ನು ಅನುಸರಿಸಲು ಅಂಗಡಿಗಳ ಆವರಣದಲ್ಲಿ ಗುರುತು ಮಾಡಲಾಗಿದೆ.
  • ದಾರಿತಪ್ಪಿದ ದನಕರುಗಳು ಮತ್ತು ಪ್ರಾಣಿಗಳಿಗೆ ಆಹಾರ ಸೇರಿದಂತೆ ಅಕ್ಷಯ ಪಾತ್ರ ಪ್ರತಿಷ್ಠಾನದ ಮೂಲಕ ಅಗತ್ಯವಿರುವವರಿಗೆ ದೈನಂದಿನ ಬೇಯಿಸಿದ ಊಟದ ವಿತರಣೆ.
  • ಮೂರು ಐಇಸಿ ವಾಹನಗಳ ಮೂಲಕ 20 ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳಲ್ಲಿ ಕೋವಿಡ್-19 ಕುರಿತು ಜಾಗೃತಿ ಪ್ರಸಾರ ಮಾಡಲಾಗುತ್ತಿದೆ.
  • ಎಲ್ಲಾ 20 ಗ್ರಾಮ ಪಂಚಾಯಿತಿಗಳಲ್ಲಿ 10000 ಕರಪತ್ರಗಳನ್ನು ವಿತರಿಸಲಾಗಿದೆ.
  • ಎಲ್ಲಾ ಎತ್ತರದ ಕಟ್ಟಡಗಳ ಲಿಫ್ಟ್ಗಳನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ವಿಕಲಾಂಗ ವ್ಯಕ್ತಿಗಳಿಗೆ ಮಾತ್ರ ಲಿಫ್ಟ್ಗಳನ್ನು ಬಳಸುವಂತೆ ನಿವಾಸಿಗಳಿಗೆ ಅರಿವು ಮೂಡಿಸಲಾಗಿದೆ.

Description: C:\Users\ravi gupta\Documents\SHUBHA RD\DN Haveli best practce.jpg

ಆಂಧ್ರಪ್ರದೇಶ:

ಮನೆ ಮನೆ ಸಮೀಕ್ಷೆ ಮತ್ತು ಮುಖಗವಸುಗಳ ವಿತರಣೆ: ಕೋವಿಡ್-19 ನಿಗ್ರಹಕ್ಕೆ ಸರ್ಕಾರವು ನಾಗರಿಕರಿಗೆ 16 ಕೋಟಿಗೂ ಹೆಚ್ಚು ಮುಖಗವಸುಗಳನ್ನು ವಿತರಿಸಲಿದೆ ಮತ್ತು ರಾಜ್ಯವು ಮೂರನೇ ಸುತ್ತಿನ ಮನೆ-ಮನೆ ಸಮೀಕ್ಷೆಯನ್ನು ಸಹ ನಡೆಸುತ್ತಿದೆ.

 

  • ಕೋವಿಡ್ ಪ್ರಕರಣಗಳನ್ನು ಗುರುತಿಸುವ ಕಾರ್ಯದಲ್ಲಿ ಒಟ್ಟು 1.47 ಕೋಟಿ ಕುಟುಂಬಗಳಲ್ಲಿ 1.43 ಕೋಟಿ ಕುಟುಂಬಗಳು ಸೇರಿವೆ.
  • ಇಲ್ಲಿಯವರೆಗೆ, 32,349 ಪ್ರಕರಣಗಳನ್ನು ವೈದ್ಯಕೀಯ ಅಧಿಕಾರಿಗಳಿಗೆ ಉಲ್ಲೇಖಿಸಲಾಗಿದೆ, ಅದರಲ್ಲಿ 9,107 ಪ್ರಕರಣಗಳನ್ನು ಪರೀಕ್ಷೆಗೆ ಶಿಫಾರಸು ಮಾಡಲಾಗಿದೆ.

https://ci5.googleusercontent.com/proxy/9ZDcmK4u0pGo0QhM5P67hPfrrV1LuwMENckVcFJtdTW3KJCngviSPmImKWvSipsgNE2CDJm5NfyVHIounBLshCJz3C6l3NndcN_VHi7ZZKG5n_fC1gqj=s0-d-e1-ft#https://static.pib.gov.in/WriteReadData/userfiles/image/image006H6HB.pnghttps://ci6.googleusercontent.com/proxy/QjlbiXjof2CTS_ingc3rLvKKcmqnB2Rrl5mXnklvpmJk-Oxt55tZ3c_b2l7n_lpl7Gt2QDyouY9ONLj1CNxY9dEPk-2dBmSefigzxu7JggzSy7rwSeI9=s0-d-e1-ft#https://static.pib.gov.in/WriteReadData/userfiles/image/image0079Y0A.png

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನೀಡಿದ ಸಲಹೆಗಳಿಗೆ ಅನುಸಾರವಾಗಿ ಸಮೀಕ್ಷೆಯನ್ನು ಮಾಡಲಾಗುತ್ತಿದೆ.

***



(Release ID: 1614961) Visitor Counter : 262