ಪ್ರವಾಸೋದ್ಯಮ ಸಚಿವಾಲಯ

ಕೋಲ್ಕತ್ತಾದ ಶ್ರೇಷ್ಠ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ನಾಳಿನ ಎರಡನೇ “ದೇಖೋ ಅಪ್ನಾ ದೇಶ್” ವೆಬಿನಾರ್ ಸರಣಿಯಲ್ಲಿ ತಿಳಿಯಿರಿ

Posted On: 15 APR 2020 4:58PM by PIB Bengaluru

ಕೋಲ್ಕತ್ತಾದ ಶ್ರೇಷ್ಠ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ನಾಳಿನ ಎರಡನೇ “ದೇಖೋ ಅಪ್ನಾ ದೇಶ್” ವೆಬಿನಾರ್ ಸರಣಿಯಲ್ಲಿ ತಿಳಿಯಿರಿ

ಲಾಕ್ ಡೌನ್ ವೇಳೆ ಪ್ರವಾಸೋದ್ಯಮ ಸಚಿವಾಲಯದಿಂದ ಭಾರತದ ವೈವಿಧ್ಯಮಯ ಹಾಗೂ ಗಮನಾರ್ಹ ಸಂಸ್ಕೃತಿ ಮತ್ತು ಇತಿಹಾಸ ಬಿಂಬಿಸುವ ವೆಬಿನಾರ್ ಸರಣಿ ಪ್ರದರ್ಶನ ಆರಂಭ

 

ಪ್ರವಾಸೋದ್ಯಮ ಸಚಿವಾಲಯದ “ದೇಖೋ ಅಪ್ನಾ ದೇಶ್” ವೆಬಿನಾರ್ ಸರಣಿಗೆ ಲಾಕ್ ಡೌನ್ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವೆಬಿನಾರ್ ಸರಣಿಯಲ್ಲಿ ಹಲವು ತಾಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಮತ್ತು ನಮ್ಮ ಹೆಮ್ಮೆಯ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಆಳ ಮತ್ತು ಅಗಲವನ್ನು ಪರಿಚಯಿಸಲಾಗುತ್ತಿದೆ. ನಿನ್ನೆ ನಡೆದ ಮೊದಲ ವೆಬಿನಾರ್ ಸರಣಿಯಲ್ಲಿ ದೆಹಲಿಯ ಸುದೀರ್ಘ ಇತಿಹಾಸದ ಸರಣಿ ಬಿಚ್ಚಿಕೊಂಡಿತು. “ನಗರಗಳ ನಗರ – ದೆಹಲಿಯ ವೈಯಕ್ತಿಕ ಡೈರಿ” ಹೆಸರಿನಲ್ಲಿ ವೆಬಿನಾರ್ ಸರಣಿಗೆ ಸುಮಾರು 5700 ಮಂದಿ ನೋಂದಣಿ ಮಾಡಿಕೊಂಡಿದ್ದರು ಮತ್ತು ಅದನ್ನು ಅತ್ಯಂತ ಚೆನ್ನಾಗಿ ಸ್ವೀಕರಿಸಿದರು. ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಾಮಾಜಿಕ ಇತಿಹಾಸವನ್ನು ತಿಳಿಸಿ ಕೊಡುವುದು ಈ ಸರಣಿಯ ಪ್ರಮುಖ ಉದ್ದೇಶವಾಗಿದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://youtu.be/LWlBc8F_Us4 ವೆಬಿನಾರ್ ನ ಸಂಪೂರ್ಣ ಚಿತ್ರಣವನ್ನು ವೀಕ್ಷಿಸಬಹುದು.

ದೆಹಲಿಯ ಯಶಸ್ಸಿನ ನಂತರ ಇದೀಗ ನಾಳೆ(ಏಪ್ರಿಲ್ 16) ಬೆಳಗ್ಗೆ 11.00 ರಿಂದ 12.00 ಗಂಟೆಯ ನಡುವೆ ಎರಡನೇ ಸರಣಿಯ “ದೇಖೋ ಅಪ್ನಾ ದೇಶ್” ವೆಬಿನಾರ್ ನಡೆಯಲಿದೆ. ಈ ಸರಣಿಯಲ್ಲಿ ಜನರಿಗೆ “ಕೋಲ್ಕತ್ತಾ – ಸಂಸ್ಕೃತಿಯ ಸಮ್ಮಿಲನ”ದ ಬಗ್ಗೆ ತಿಳಿದುಕೊಳ್ಳಲು ಅವಕಾಶವಿದೆ. ಕೋಲ್ಕತ್ತಾಕ್ಕೆ ತನ್ನದೇ ಆದ ಇತಿಹಾಸ ಮತ್ತು ಸಂಸ್ಕೃತಿ ಇದೆ. ಈ ನಗರದ ಮೇಲೆ ಹಲವು ವಿದೇಶಿ ಮತ್ತು ರಾಷ್ಟ್ರೀಯ ಪ್ರಭಾವಗಳಾಗಿದ್ದು, ಅವುಗಳನ್ನೆಲ್ಲಾ ತನ್ನಲ್ಲಿ ಹುದುಗಿಸಿಕೊಂಡಿದೆ. ಅದರ ಶ್ರೀಮಂತಿಕೆ ಈಗಲೂ ಕೂಡ ಬಲಿಷ್ಠವಾಗಿ ತನ್ನೊಡಲಲ್ಲಿ ಇಟ್ಟುಕೊಂಡಿದೆ. ಈ ವೆಬಿನಾರ್ ನಲ್ಲಿ ಹೇಗೆ ವೈವಿಧ್ಯತೆಯನ್ನು ಜೀವಂತವಾಗಿರಿಸಿ ಕೊಳ್ಳಲಾಗಿದೆ ಮತ್ತು ಹೆಚ್ಚಿನ ಜಾಗೃತಿ ಮೂಲಕ ಪ್ರವಾಸಿ ಮನೋಭಾವದೊಂದಿಗೆ ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈ ವೆಬಿನಾರ್ ನಲ್ಲಿ ಇಫ್ತೆಖಾರ್ ಅಸನ್, ರಾಮಾನುಜ್ ಘೋಷ್, ರಿತ್ವಿಕ್ ಘೋಷ್ ಮತ್ತು ಅನಿರ್ಬನ್ ದತ್ತ ಪ್ರಮುಖ ಭಾಷಣಕಾರರಾಗಿದ್ದು, ಅವರು ಭಾಗವಹಿಸುವವರನ್ನು ಅದ್ಭುತ ನಗರಿ ಕೋಲ್ಕತ್ತಾಕ್ಕೆ ಕರೆದೊಯ್ಯಲಿದ್ದಾರೆ.

ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: https://bit.ly/WebinarCalcutta

ಕೋವಿಡ್-19 ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನ ಮನುಕುಲದ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಹಾಗಾಗಿ ದೇಶದಲ್ಲಿ ಅಥವಾ ಗಡಿಯಾಚೆಯಿಂದ ಯಾವುದೇ ಸಂಚಾರ ಇಲ್ಲದಿರುವುದರಿಂದ ಸ್ವಾಭಾವಿಕವಾಗಿಯೇ ಪ್ರವಾಸೋದ್ಯಮ ವಲಯದ ಮೇಲೂ ಗಂಭೀರ ಪರಿಣಾಮವಾಗಿದೆ. ಪ್ರವಾಸೋದ್ಯಮ ಸಚಿವಾಲಯ ಈ ಅನಿರೀಕ್ಷಿತ ಸಂದರ್ಭಗಳಲ್ಲಿ ಮಾನವರ ಸಂಪರ್ಕ ಕಾಯ್ದುಕೊಳ್ಳಲು ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದೆ ಮತ್ತು ಈ ಸಂಕಷ್ಟದ ಸಮಯ ಕಳೆದು, ಎಲ್ಲವೂ ಒಳ್ಳೆಯದಾಗಲಿದೆ. ಆನಂತರ ಸದ್ಯದಲ್ಲೇ ಪ್ರಯಾಣಗಳನ್ನು ಆರಂಭಿಸಬಹುದು ಎನ್ನುವ ವಿಶ್ವಾಸದಲ್ಲಿದೆ. ಅದೇ ಅನಿಸಿಕೆಯೊಂದಿಗೆ ಸಚಿವಾಲಯ “ದೇಖೋ ಅಪ್ನಾ ದೇಶ್” ವೆಬಿನಾರ್ ಸರಣಿಯನ್ನು ಆರಂಭಿಸಿದೆ.

***



(Release ID: 1614949) Visitor Counter : 147