ಹಣಕಾಸು ಸಚಿವಾಲಯ

ಜಿ-20 ರಾಷ್ಟ್ರಗಳ ಎರಡನೇ ಹಾಗೂ ಕೇಂದ್ರ ಬ್ಯಾಂಕ್ ಗಳ ಗೌರ್ನರ್ ಗಳ ಸಭೆಯಲ್ಲಿ ಭಾಗಿಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್

Posted On: 15 APR 2020 8:37PM by PIB Bengaluru

ಜಿ-20 ರಾಷ್ಟ್ರಗಳ ಎರಡನೇ ಹಾಗೂ ಕೇಂದ್ರ ಬ್ಯಾಂಕ್ ಗಳ ಗೌರ್ನರ್ ಗಳ ಸಭೆಯಲ್ಲಿ ಭಾಗಿಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ಆಯಾಮಗಳ ಕುರಿತು ಸೌದಿ ಅರೆಬಿಯನ್ ಪ್ರೆಸಿಡೆನ್ಸಿಯಲ್ಲಿಂದು ನಡೆದ ಜಿ-20 ರಾಷ್ಟ್ರಗಳ ಹಣಕಾಸು ಸಚಿವರ ಎರಡನೇ ಹಾಗೂ ಕೇಂದ್ರೀಯ ಬ್ಯಾಂಕುಗಳ ಗೌರ್ನರ್ ಗಳ(ಎಫ್ಎಂಸಿಬಿಜಿ) ವಸ್ತುಶಃ(ವರ್ಚುಯಲ್ ಮೀಟಿಂಗ್ ) ಸಭೆಯಲ್ಲಿ ಭಾಗವಹಿಸಿದ್ದರು

https://ci4.googleusercontent.com/proxy/KF600ucAqGTlxyoQp4WUsR2hX_WWeCL2NYLXGvp379SdLzYHCFUAINOdo3Tos48EbfKKtw_tQ7CEq0xfiVp-amKIF2AXJNUc3DCOs51eRUKGu9Uu17MF=s0-d-e1-ft#https://static.pib.gov.in/WriteReadData/userfiles/image/image0010ZX5.jpg

ಹಣಕಾಸು ಸಚಿವರು, ಕೋವಿಡ್-19 ಎದುರಿಸಲು ಜಿ-20 ರಾಷ್ಟ್ರಗಳ ಕ್ರಿಯಾ ಯೋಜನೆ ಸಿದ್ಧತೆ ಕುರಿತಂತೆ ಅಪ್ರತಿಮ (ಎಕ್ಸಟ್ರಾಡಿನರಿ) ನಾಯಕರ ಶೃಂಗಸಭೆಯಲ್ಲಿ ಜಿ-20 ನಾಯಕರು ಕೈಗೊಂಡ ನಿರ್ಧಾರದಂತೆ ಎಲ್ಲ ವಿಧದಲ್ಲೂ ನಿರ್ಧಾರಗಳನ್ನು ಪಾಲಿಸುತ್ತಿರುವ ಸೌದಿ ದೊರೆಯ ನಿರಂತರ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಮತಿ ಸೀತಾರಾಮನ್ ಅವರು, 2020ರ ಮಾರ್ಚ್ 31ರಂದು ನಡೆದ ಎರಡನೇ ಎಕ್ಸಟ್ರಾಡಿನರಿ ವರ್ಚುಯಲ್ ಜಿ-20(ಎಫ್ಎಂಸಿಬಿಜಿ) ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು, ಜಾಗತಿಕ ಆರ್ಥಿಕತೆಯನ್ನು ಕ್ಷಿಪ್ರವಾಗಿ ಪುನಶ್ಚೇತನಗೊಳಿಸಲು ಮತ್ತು ಹಣಕಾಸು ವ್ಯವಸ್ಥೆ ನಿರಂತರವಾಗಿ ಬೆಂಬಲಿಸಲು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮನ್ವಯದ ಕ್ರಮಗಳನ್ನು ಕೈಗೊಳ್ಳುವ ಪ್ರಾಮುಖ್ಯತೆ ಬಗ್ಗೆ ಅವರು ಮಾತನಾಡಿದ್ದರು.

ಇಂದು ಸಚಿವರು, ಸುಸ್ಥಿರ ರೀತಿಯಲ್ಲಿ ಸೂಕ್ಷ್ಮ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಜೀವಗಳನ್ನು ಉಳಿಸುವ ಸಲುವಾಗಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗೌರ್ನರ್ ಗಳ ಪಾತ್ರದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ಅವರು ತನ್ನ ಜಿ-20 ಸಹವರ್ತಿಗಳೊಂದಿಗೆ, ಭಾರತ ಸರ್ಕಾರ ದುರ್ಬಲ ವರ್ಗದವರಿಗಾಗಿ ಅತ್ಯಂತ ಕ್ಷಿಪ್ರ ರೀತಿಯಲ್ಲಿ ಸಕಾಲದಲ್ಲಿ ಮತ್ತು ತ್ವರಿತ ನೆರವು ನೀಡಲು ಕೈಗೊಂಡ ಕ್ರಮಗಳನ್ನು ವಿವರಿಸಿದರು. ಅವರು ಕೆಲವೇ ವಾರಗಳಲ್ಲಿ ಭಾರತ 320 ಮಿಲಿಯನ್ ಗೂ ಅಧಿಕ ಜನರಿಗೆ 3.9 ಮಿಲಿಯನ್ ಹಣಕಾಸು ನೆರವನ್ನು ವಿತರಣೆ ಮಾಡಿದೆ. ವಿಶೇಷವಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ನೇರ ನಗದು ವರ್ಗಾವಣೆಗೆ ಒತ್ತು ನೀಡಲಾಗಿತ್ತು. ಹಾಗಾಗಿ ಫಲಾನುಭವಿಗಳು ಸಾರ್ವಜನಿಕ ಸ್ಥಳಗಳಲ್ಲಿ ಒಗ್ಗೂಡುವುದನ್ನು ಕನಿಷ್ಠಗೊಳಿಸಲಾಗಿದೆ ಎಂದು ಹೇಳಿದರು. ನಮ್ಮ ಪ್ರಧಾನಮಂತ್ರಿಗಳು ಕೈಗೊಂಡ ಮಹತ್ವದ ಆರ್ಥಿಕ ಸುಧಾರಣೆಗಳಲ್ಲಿ ಒಂದಾದ ಹಣಕಾಸು ಸೇರ್ಪಡೆಯ ದೂರದೃಷ್ಟಿಯ ಕ್ರಮಗಳ ಫಲಿತಾಂಶಗಳನ್ನು ಈಗ ಭಾರತ ಕಾಣುತ್ತಿದೆ ಎಂದು ಅವರು ಹಣಕಾಸು ಸಚಿವರುಗಳು ಮತ್ತು ಕೇಂದ್ರ ಬ್ಯಾಂಕ್ ಗಳ ಗೌರ್ನರ್ ಗಳಿಗೆ ತಿಳಿಸಿದರು.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳು ಮಾರುಕಟ್ಟೆಯನ್ನು ನಿಯಂತ್ರಿಸಲು ಹಾಗೂ ಸಾಲದ ಹರಿವು ಹೆಚ್ಚಿಸಲು ಕೈಗೊಂಡ ಹಲವು ಹಣಕಾಸು ನೀತಿ ಕ್ರಮಗಳನ್ನು ವಿವರಿಸಿದರು. ಈ ಕ್ರಮಗಳಲ್ಲಿ 50 ಬಿಲಿಯನ್ ಅಮೆರಿಕನ್ ಡಾಲರ್ ನಗದು ನೆರವು, ಸುಲಭ ಸಾಲಕ್ಕೆ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕ್ರಮಗಳು, ಅವಧಿ ಸಾಲಗಳ ಕಂತು ಪಾವತಿಗೆ ಮೂರು ತಿಂಗಳ ವಿಸ್ತರಣೆ ಪರಿಹಾರ, ದುಡಿಯುವ ಹಣಕಾಸು ಬಂಡವಾಳಕ್ಕೆ ಮತ್ತು ಸಾಲದ ಮೇಲಿನ ಬಡ್ಡಿಪಾವತಿ ಮುಂದೂಡಿಕೆ ಮತ್ತಿತರ ಕ್ರಮಗಳು ಸೇರಿವೆ ಎಂದರು.

ಜಿ-20 ರಾಷ್ಟ್ರಗಳ ಸದಸ್ಯರು, ಜಿ20 ನಾಯಕರ ನಿರ್ದೇಶನದ ಮೇರೆಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಜೀವಗಳನ್ನು ಉಳಿಸುವುದು, ಜನರ ಉದ್ಯೋಗಗಳು ಹಾಗೂ ಆದಾಯವನ್ನು ರಕ್ಷಿಸುವುದು, ವಿಶ್ವಾಸವನ್ನು ಪುನರ್ ಸ್ಥಾಪಿಸುವುದು, ಹಣಕಾಸು ಸ್ಥಿರತೆಯನ್ನು ಕಾಯ್ದುಕೊಳ್ಳುವುದು, ಅತ್ಯಂತ ತ್ವರಿತ ರೀತಿಯಲ್ಲಿ ಪುನಶ್ಚೇತನ ಮತ್ತು ಚೇತರಿಕೆ ಕ್ರಮಗಳನ್ನು ಕೈಗೊಳ್ಳುವುದು, ಅಗತ್ಯವಿರುವ ರಾಷ್ಟ್ರಗಳಿಗೆ ನೆರವು ಒದಗಿಸುವುದು, ಸಾರ್ವಜನಿಕ ಆರೋಗ್ಯ ವಿಷಯಗಳಲ್ಲಿ ಸಮನ್ವಯ ಮೂಡಿಸುವುದು, ಹಣಕಾಸು ಕ್ರಮಗಳು ಮತ್ತು ಜಾಗತಿಕ ಪೂರೈಕೆ ಸರಣಿ ಮೇಲೆ ಆಗುವ ಅಡೆತಡೆಗಳನ್ನು ಕಡಿಮೆ ಮಾಡುವುದು ಸೇರಿದೆ. ಕ್ರಿಯಾ ಯೋಜನೆ ಕುರಿತು ಮಾತನಾಡಿದ ಗೌರವಾನ್ವಿತ ಕೇಂದ್ರ ಸಚಿವರು, ಈ ಕ್ರಮ ಸರಿಯಾದ ಹೆಜ್ಜೆಯಾಗಿದೆ, ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಜಿ20 ಸದಸ್ಯ ರಾಷ್ಟ್ರಗಳು ಕೈಗೊಳ್ಳಬೇಕಾದ ಸಾಮೂಹಿಕ ಹಾಗೂ ವೈಯಕ್ತಿಕ ಕ್ರಮಗಳ ಮಾರ್ಗದರ್ಶಿ ಸೂತ್ರವಾಗಿದೆ ಎಂದರು. ಸದ್ಯದಲ್ಲೇ ಇಡೀ ಜಾಗತಿಕ ಸಮುದಾಯ ಈ ಸಂಕಷ್ಟದಿಂದ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಈಗ ಕಲಿತಿರುವ ಪಾಠಗಳಿಂದ ನಾವು, ಭವಿಷ್ಯದಲ್ಲಿ ಯಾವುದೇ ಬಿಕ್ಕಟ್ಟುಗಳು ಎದುರಾದರೂ, ಅವುಗಳನ್ನು ಎದುರಿಸುವಂತಹ ಸದೃಢ ನೀತಿಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

***



(Release ID: 1614868) Visitor Counter : 220