ಪಂಚಾಯತ್ ರಾಜ್ ಸಚಿವಾಲಯ
ದೇಶದಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಗ್ರಾಮ ಪಂಚಾಯ್ತಿಗಳಿಂದ ಹಲವು ಕ್ರಮಗಳು
Posted On:
14 APR 2020 5:42PM by PIB Bengaluru
ದೇಶದಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಗ್ರಾಮ ಪಂಚಾಯ್ತಿಗಳಿಂದ ಹಲವು ಕ್ರಮಗಳು
ಉತ್ತಮ ಪದ್ದತಿಗಳ ಅಳವಡಿಕೆ ಸೇರಿದಂತೆ ವೆಬ್ ಸೈಟ್, ಸಾಮಾಜಿಕ ಮಾಧ್ಯಮಗಳು, ಭಿತ್ತಿಪತ್ರಗಳು, ಗೋಡೆ ಬರಹದ ಮೂಲಕ ಜಾಗೃತಿ: ಸೋಂಕು ನಿವಾರಣಾದ್ರಾವಣ ಸಿಂಪಡಣೆ, ಗ್ರಾಮವಾಸಿಗಳಿಗೆ ಸ್ಥಳೀಯವಾಗಿಯೇ ಉತ್ಪಾದಿಸಲಾದ ವೈಯಕ್ತಿಕ ರಕ್ಷಾ ಕವಚ ವಿತರಣೆ, ಅಗತ್ಯವಿರುವವರಿಗೆ ಉಚಿತ ಆಹಾರಧಾನ್ಯ ಮತ್ತು ಹಣಕಾಸಿನ ನೆರವು ಮತ್ತು ಮನೆಬಾಗಿಲಿಗೆ ಅತ್ಯವಶ್ಯಕ ವಸ್ತುಗಳ ಪೂರೈಕೆ
ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಭಾರತ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ, ರಾಜ್ಯ ಸರ್ಕಾರಗಳ ನಿಕಟ ಸಹಭಾಗಿತ್ವದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಲಾಕ್ ಡೌನ್ ನಿಯಮಾವಳಿಗಳು ಉಲ್ಲಂಘನೆಯಾಗದಂತೆ ರಾಜ್ಯ ಮತ್ತು ಜಿಲ್ಲಾಡಳಿತಗಳೊಂದಿಗೆ ನಿರಂತರ ಸಮಾಲೋಚನೆ ಮತ್ತು ಮಾರ್ಗದರ್ಶನದಲ್ಲಿ ತೊಡಗಿದ್ದು, ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಪಂಚಾಯಿತಿ ಮಟ್ಟದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವುಗಳನ್ನು ಇತರೆಯವರು ಉತ್ತಮ ಮಾದರಿ ಪದ್ಧತಿಗಳನ್ನಾಗಿ ತಾವೂ ಅಳವಡಿಸಿಕೊಂಡಿದ್ದಾರೆ. ಅವುಗಳಲ್ಲಿ ಕೆಲವುಗಳ ವಿವರ ಹೀಗಿದೆ.
ರಾಜಸ್ಥಾನ : ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಸಾಮಾಜಿಕ ಮಾಧ್ಯಮ ವಾಟ್ಸ್ ಅಪ್ ಗ್ರೂಪ್ ಬಳಕೆ ಮಾಡಿಕೊಂಡು ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಎಲ್ಲೆಡೆ ಭಿತ್ತಿ ಪತ್ತಗಳನ್ನು ಅಂಟಿಸುವ ಮೂಲಕ ಜನರಿಗೆ ತಳಮಟ್ಟದಲ್ಲಿ ಮಾಹಿತಿಯನ್ನು ಒದಗಿಸುವ ಕಾರ್ಯ ಮಾಡುತ್ತಿವೆ. ನಿರಂತರವಾಗಿ ಶುಚಿಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಮತ್ತು ಹನುಮಗಡ ಜಿಲ್ಲೆಯ ಮಕ್ಕಸಾರ್ ಗ್ರಾಮ ಪಂಚಾಯಿತಿಯಿಂದ ಗ್ರಾಮದ ರಸ್ತೆಗಳಲ್ಲಿ ಸೋಡಿಯಂ ಹೈಪೊಕ್ಲೋರೈಟ್ ಸಿಂಪಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾಮಾಜಿಕ ಸಂಘಟನೆಗಳ ಸದಸ್ಯರಿಗೆ ಮುಖಗವಸುಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ ನಾಗರಿಕರಿಗೆ ಪದೇ ಪದೇ ತಮ್ಮ ಕಣ್ಣು, ಮೂಗು ಮತ್ತು ಬಾಯಿಗಳನ್ನು ಮುಟ್ಟಿಕೊಳ್ಳಬಾರದು, ಆಗಾಗ್ಗೆ ಸೋಪ್ ಗಳನ್ನು ಬಳಸಿ ಕೈತೊಳೆದುಕೊಳ್ಳಬೇಕು ಮತ್ತು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ತಿಳಿಸಲಾಗುತ್ತಿದೆ. ಗ್ರಾಮಗಳಲ್ಲಿ ಪಡಿತರ ಧಾನ್ಯ ವಿತರಣೆ ಜೊತೆಗೆ, ಸಮಾಜ ಸೇವಾ ಸಂಘಟನೆಗಳಿಂದ ಪಶುಗಳಿಗೆ ಆಹಾರವನ್ನೂ ಸಹ ವಿತರಿಸಲಾಗುತ್ತಿದೆ.
ಬಿಹಾರ : ಭಾರತ-ನೇಪಾಳ ಗಡಿಯಿಂದ 14 ಕಿ.ಮೀ ದೂರದಲ್ಲಿರುವ ಸಿಂಗ್ವಾನಿ ಗ್ರಾಮ ಪಂಚಾಯಿತಿಯಲ್ಲಿ ಸರಪಂಚರು ಗೋಡೆ ಬರಹಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಛತ್ತೀಸ್ ಗಢ : ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಗ್ರಾಮವಾಸಿಗಳು ಮತ್ತು ವಲಸಿಗರಿಗೆ ವಿಚಾರ ಪುನರ್ ಮನನ ಮಾಡಿಕೊಡಲಾಗುತ್ತಿದೆ ಮತ್ತು ಗ್ರಾಮಗಳಿಗೆ ವಾಪಸ್ಸಾಗಿರುವ ಜನರು ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕಂಕೇರ್ ಜಿಲ್ಲೆಯಲ್ಲಿ ತಿಳಿಸಿ ಕೊಡಲಾಗುತ್ತಿದೆ. ಮನ್ರೇಗಾ ಕೃಷಿ ಕಾರ್ಮಿಕರು ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈತೊಳೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ತಮಿಳುನಾಡು : ಕಣ್ಣಾನೂರು ಗ್ರಾಮ ಪಂಚಾಯಿತಿಯಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಮೆಟ್ಟುಪಟ್ಟಿ ಗ್ರಾಮ ಪಂಚಾಯಿತಿಯಿಂದ ಗ್ರಾಮಗಳಲ್ಲಿ ಪಡಿತರ ಮತ್ತು ಅವಶ್ಯಕ ಸಾಮಗ್ರಿ ವಿತರಣೆ ವೇಳೆ ಗ್ರಾಮಸ್ಥರ ನಡುವೆ ಸಾಮಾಜಿಕ ಅಂತರ ಕಾಯ್ದಕೊಳ್ಳಲಾಗುತ್ತಿದೆ. ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಉತ್ತರ ಬ್ಲಾಕ್ ನ ವಡಕ್ಕಿಪಾಳ್ಯಂನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ತಿರುವಳ್ಳೂರು ಜಿಲ್ಲೆಯ ಪುಲ್ಲಾರಂಬಕ್ಕಂ ಬ್ಲಾಕ್ ನಲ್ಲಿ ಹಿಂದುಳಿದ ಸಮುದಾಯಗಳಿಗೆ ವಾಹನಗಳ ಮೂಲಕ ತರಕಾರಿಗಳನ್ನು ವಿತರಿಸಲಾಗುತ್ತಿದೆ. ವಿರುಧುನಗರ್ ಬ್ಲಾಕ್ ನಲ್ಲಿ ಸಾಮಾಜಿಕ ಸ್ವಚ್ಛತೆ ಮತ್ತು ಸೋಂಕು ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಿರುವಣ್ಣಾಮಲೈ ಜಿಲ್ಲೆಯಲ್ಲಿ ಪ್ರತಿಯೊಂದು ಮನೆಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಜಿಲ್ಲಯಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕರ್ತರಿಗೆ ಮೂರು ಬಗೆಯ ಪಿಪಿಇ ಕಿಟ್ ಗಳನ್ನು ವಿತರಿಸಲಾಗಿದೆ.
ಒಡಿಶಾ : ಲಾಕ್ ಡೌನ್ ವೇಳೆ ಕಟಕ್, ಭುವನೇಶ್ವರ್ ಮತ್ತು ಭದ್ರಾಕ್ ಗಳಲ್ಲಿ ನಿರ್ಗತಿಕರಿಗೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಆಹಾರ ವಿತರಿಸಲಾಗುತ್ತಿದೆ. ಭಂಡಾರಿಪೊಖಾರಿ ಗ್ರಾಮ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ 1,000 ರೂ. ಆಹಾರ ಭದ್ರತಾ ಸಹಾಯ ಧನವನ್ನು ವಿತರಿಸಲಾಗಿದೆ. ಭದ್ರಕ್ ಗ್ರಾಮ ಪಂಚಾಯಿತಿಯ ಸಾದರ್ ಗ್ರಾಮ ಪಂಚಾಯಿತಿ ಪ್ರದೇಶಗಳಲ್ಲಿ ಒಡಿಶಾದ ಅಗ್ನಿಶಾಮಕ ಸೇವೆಗಳಿಂದ ಸ್ಯಾನಿಟೈಸೇಶನ್ ಮಾಡಲಾಗಿದೆ. ‘ಹೆಚ್ಚಿನ ಜೀವನೋಪಾಯ - ಕಡಿಮೆದಟ್ಟಣೆ’ ಹೆಸರಿನಲ್ಲಿ ಸಾದರ್ ಬ್ಲಾಕ್ ನಲ್ಲಿ ಸಮೀಪದ ಗ್ರಾಮ ಪಂಚಾಯಿತಿಗಳಿಂದ ತರಕಾರಿ ಬೆಳೆಗಾರರಿಗೆ ಬೆಂಬಲ ನೀಡಲಾಗುತ್ತಿದೆ. ಭದ್ರಕ್ ನಲ್ಲಿ ಸ್ಥಳೀಯ ಅಗತ್ಯತೆ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ನಿಮಯವನ್ನು ಪಾಲನೆ ಮಾಡಲಾಗುತ್ತಿದೆ. ಬಿಲಾಸ್ ಪುರ್ ಜಿಲ್ಲೆಯ ಬಮಟಾ ಬ್ಲಾಕ್ ಗ್ರಾಮ ಪಂಚಾಯಿತಿಯ ಪ್ರಧಾನ್, ಗ್ರಾಮಸ್ಥರಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಕೆಲಸವನ್ನಷ್ಟೇ ಮಾಡದೆ, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳು, ಅಂಗನವಾಡಿಗಳು, ಗ್ರಾಮ ಪಂಚಾಯಿತಿ ಕಚೇರಿ, ದೇವಾಲಯ, ಮನೆಗಳು, ಬೀದಿಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳ ಸ್ಯಾನಿಟೈಸೇಶನ್ ಮಾಡಿಸಿದ್ದಾರೆ. ಆಕೆ ಗ್ರಾಮಸ್ಥರಿಗೆ ಮಾಸ್ಕ್ ಮತ್ತು ಸ್ಯಾನಿಟೈಸೇಶನ್ ಗಳನ್ನು ವಿತರಿಸುತ್ತಿದ್ದಾರೆ ಹಾಗೂ ಸ್ಥಳೀಯ ಯುವಕರ ಸಹಾಯದಿಂದ ವಲಸೆ ಕಾರ್ಮಿಕರಿಗೆ ಆಹಾರಧಾನ್ಯಗಳನ್ನು ವಿತರಿಸುತ್ತಿದ್ದಾರೆ.
ತೆಲಂಗಾಣ : ತೆಲಂಗಾಣ ರಾಜ್ಯಾದ್ಯಂತ ಎಲ್ಲ ರಾಜ್ಯಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ. ಕೋವಿಡ್-19 ಶಿಷ್ಟಾಚಾರದ ಬಗ್ಗೆ ಸರಪಂಚರು, ಕೌನ್ಸಿಲರ್ ಗಳು, ಜಿಲ್ಲಾ ಪರಿಷತ್ ಸದಸ್ಯರು, ಮುನಿಸಿಪಲ್ ಅಧ್ಯಕ್ಷರು, ತಹಸಿಲ್ದಾರ್ ಸೇರಿದ ಎಲ್ಲರಿಗೂ ತರಬೇತಿ ನೀಡಲಾಗಿದೆ. ರಂಗಾರೆಡ್ಡಿ ಜಿಲ್ಲೆಯ ಎಸ್ ಬಿ ಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ವಿನೂತನ ಕ್ರಮ ಕೈಗೊಂಡಿದ್ದು, ಅಲ್ಲಿ ಗ್ರಾಮವನ್ನು ಪ್ರವೇಶಿಸುವ ಮುನ್ನ ಸರ್ಕಾರಿ ಅಧಿಕಾರಿಗಳು ಮತ್ತು ಯಾವುದೇ ಸಾರ್ವಜನಿಕ ಸ್ವಯಂ ಸೇವಕರಿಗೆ ಸ್ಯಾನಿಟೈಸೇಶನ್ ಮಾಡಿದ ನಂತರವೇ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಶಂಕರಪಲ್ಲಿ ಮಂಡಲ ಅಧ್ಯಕ್ಷರು ತಾವೇ ಮಾಸ್ಕ್ ಗಳನ್ನು ಹೊಲಿಸಿ, ಕೊಟ್ಟಪಲ್ಲಿ ಗ್ರಾಮಸ್ಥರಿಗೆ ವಿತರಿಸಿದ್ದಾರೆ. ಮೇಡಕ್ ಜಿಲ್ಲೆಯ ಶಲ್ಕರಾಮಪೇಟ್ ಮಂಡಲ್ಲಿ ಎಂಪಿಡಿಒ, ಲಾಕ್ ಡೌನ್ ವೇಳೆಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆಯಲಾಗದಂತೆಹ ಫಲಾನುಭವಿಗಳಗೆ ನೇರವಾಗಿ ಪಿಂಚಣಿ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
ಮಹಾರಾಷ್ಟ್ರ : ಮಹಾರಾಷ್ಟ್ರ ರಾಜ್ಯದಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುತ್ತಿದ್ದಾರೆ. ದ್ರೋಣಕಲ್ ನಲ್ಲಿ ಆ ರೀತಿ ಬರಿಗಾಲಿನಲ್ಲಿ ನಡೆದು ಹೋಗುತ್ತಿದ್ದವರನ್ನು ಗುರುತಿಸಿದ ಅಧಿಕಾರಿಗಳು ಅವರಿಗೆ ಊಟ, ಕುಡಿಯುವ ನೀರು ಹಾಗೂ ವಸತಿಯನ್ನು ಒದಗಿಸಿದ್ದಾರೆ.
ಕರ್ನಾಟಕ : ಉತ್ತರ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಕೋವಿಡ್-19 ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಲಾಕ್ ಡೌನ್ ಗಿಂತ ಮುಂಚೆಯೇ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಅದು ಭಟ್ಕಳ ಸಮುದ್ರ ತೀರದಲ್ಲಿ ಸಾಮಾನ್ಯವಾಗಿ ಸ್ಥಳೀಯ ಜನರು, ಮೀನುಗಾರರು ಮತ್ತು ಪ್ರವಾಸಿಗರು ಸೇರುತ್ತಾರೆ. ಪಂಚಾಯಿತಿ ಅಧ್ಯಕ್ಷರು ಮೊದಲಿಗೆ ಕಾರ್ಯತಂತ್ರ ರೂಪಿಸಿ, ಸಮುದ್ರ ತೀರ ಸೇರುವ ಮಾರ್ಗದ ಗಡಿಗಳಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಿ, ಅಲ್ಲಿ ಜನದಟ್ಟಣೆಯನ್ನು ತಪ್ಪಿಸಿದರು. ಅಲ್ಲದೆ ಅವರು, ನೆರೆಯ ಗ್ರಾಮ ಪಂಚಾಯಿತಿಗಳೂ ಕೂಡ ಇದೇ ರೀತಿಯ ಕಾರ್ಯತಂತ್ರವನ್ನು ಅನುಸರಿಸುವಂತೆ ಬೆಂಬಲ ನೀಡಿದರು. ಅವರು ಕೊರೊನಾ ಸೋಂಕು ಮತ್ತು ಅದರ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕರಪತ್ರಗಳನ್ನು ಮುದ್ರಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು.
ಲಡಾಖ್ : ಲೇಹ್ ಜಿಲ್ಲೆಯ ದಿಸ್ಕೇತ್ ನುಬ್ರಾ ಗ್ರಾಮ ಪಂಚಾಯಿತಿ ಮತ್ತು ಕಾರ್ಗಿಲ್ ಜಿಲ್ಲೆಯ(ಅತ್ಯಂತ ಹೆಚ್ಚಿನ ಶೀತರ ತಾಣ) ದ್ರಾಸ್ ಬ್ಲಾಕ್ ನ ಛೌಕಿಯಾಲ್ ಗ್ರಾಮ ಪಂಚಾಯಿತಿಯಲ್ಲಿ ಆಹಾರ ಪೂರೈಕೆ ವಿತರಣೆಯನ್ನು ಕೈಗೊಳ್ಳಲಾಗಿದೆ. ಲಡಾಖ್ ನಲ್ಲಿ ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಸೌಕರ್ಯಗಳನ್ನು ಒದಗಿಸಲಾಗಿದೆ.
ಜಾರ್ಖಂಡ್ : ಕೊಡೆರ್ಮಾ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿಯಿಂದ ಉಚಿತ ಪಡಿತರ ಧಾನ್ಯಗಳನ್ನು ವಿತರಿಸಲಾಗಿದೆ.
ಕೇರಳ : ಎರ್ನಾಕುಲಂ ಜಿಲ್ಲೆಯ ವಡಕ್ಕೇಕ್ಕರ ಗ್ರಾಮ ಪಂಚಾಯಿತಿಯಲ್ಲಿ ವೆಬ್ ಸೈಟ್ ಆರಂಭಿಸಲಾಗಿದ್ದು, ಅದು ತುರ್ತು ಪ್ರತಿಸ್ಪಂದನಾ ಚಟುವಟಿಕೆಗಳ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ : ಸರ್ಕಾರ ಯಾರಿಗೆ ನಿಜವಾಗಿ ಸಹಾಯ ಬೇಕಿದೆಯೋ ಅಂತಹವರನ್ನು ಗುರುತಿಸಿದೆ. ಅವರಿಗೆ ತರಕಾರಿ, ಪಡಿತರ ಧಾನ್ಯ, ಚಿಕನ್ ಬೇಕರಿ ಉತ್ಪನ್ನಗಳು, ಕುಡಿಯುವ ನೀರು ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ. ಕೆಲವು ಕುಟುಂಬಗಳಿಗೆ ಆರ್ಥಿಕ ಸಹಾಯವನ್ನೂ ಸಹ ಮಾಡಲಾಗಿದೆ. ಇಡೀ ದ್ವೀಪದಲ್ಲಿ ಮನೆಮನೆಗೂ ಭೇಟಿ ನೀಡಿ, ಅಗತ್ಯತೆಗಳನ್ನು ಪೂರೈಸಲಾಗಿದೆ. ಜನರ ಆರೋಗ್ಯಕ್ಕಾಗಿ ಸ್ವಯಂ ಸೇವಕರು 24×7 ಕಾರ್ಯನಿರ್ವಹಿಸುತ್ತಿದ್ದಾರೆ. ನೀಲ್ ಕೇಂದ್ರ ಪಂಚಾಯಿತಿಯಲ್ಲಿ ನೈರ್ಮಲ್ಯ ಕಾರ್ಯಕರ್ತರು ಮಳಿಗೆಗಳು, ತರಕಾರಿ ಮಾರುಕಟ್ಟೆ, ಪಂಚಾಯತ್ ಭವನ ಮತ್ತು ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲ ಬಜಾರ್ ಪ್ರದೇಶದಲ್ಲಿ ನೈರ್ಮಲೀಕರಣ ಕೈಗೊಂಡಿದ್ದಾರೆ.
ಗೋವಾ : ಸತ್ತಾರಿ(ಉತ್ತರ ಗೋವ)ದ ಸೊನಲ್ ಗ್ರಾಮದಲ್ಲಿ ಗ್ರಾಮಸ್ಥರೇ ಮರದ ಗೇಟ್ ಗಳನ್ನು ಹಾಕಿ ಗ್ರಾಮವನ್ನು ಸೀಲ್ ಮಾಡಿದ್ದಾರೆ. ಇದನ್ನು ದಿನದ 24 ಗಂಟೆಯೂ ಯುವಕರು ನಿಗಾವಹಿಸುತ್ತಿದ್ದಾರೆ. ಅವಶ್ಯಕ ವಸ್ತುಗಳು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿದ್ದು, ನಿವಾಸಿಗಳು ಹೊರಗೆ ಹೋಗದೆ ಅಲ್ಲೇ ಪಡೆಯಬಹುದಾಗಿದೆ.
***
(Release ID: 1614654)
Visitor Counter : 352
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu