ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರಕ್ಕೆ ನೆರವಾಗಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಿಂದ ಹಲವಾರು ಕ್ರಮಗಳು

Posted On: 14 APR 2020 11:33AM by PIB Bengaluru

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರಕ್ಕೆ ನೆರವಾಗಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಿಂದ ಹಲವಾರು ಕ್ರಮಗಳು

ಎಂಎಸ್ಡಿಇ  ಕೌಶಲ್ಯ ವ್ಯವಸ್ಥೆಯಡಿ ತರಬೇತಿ ಪಡೆದ 1,75,000 ಆರೋಗ್ಯ ವೃತ್ತಿಪರರನ್ನು ರಾಜ್ಯಗಳಿಗೆ ಒದಗಿಸಲಾಗಿದೆ

ಕ್ವಾರಂಟೈನ್ ಕೇಂದ್ರಗಳು/ ಪ್ರತ್ಯೇಕ ವಾರ್ಡ್ಗಳ ಉದ್ದೇಶಕ್ಕಾಗಿ ರಾಜ್ಯಗಳಿಗೆ 33 ಕ್ಷೇತ್ರ ಸಂಸ್ಥೆಗಳ ಸೌಲಭ್ಯಗಳನ್ನು ನೀಡಲಾಗಿದೆ

ಜನ ಶಿಕ್ಷಣ ಸಂಸ್ಥಾನದಿಂದ ಸುಮಾರು 5 ಲಕ್ಷ ಮುಖಗವಸುಗಳ ತಯಾರಿಕೆ

ಲಾಕ್ಡೌನ್ ಅವಧಿಯಲ್ಲಿ ಎಲ್ಲಾ ಸಂಸ್ಥೆಗಳು ತಮ್ಮ ಅಪ್ರೆಂಟಿಸ್ಗಳಿಗೆ ಸಂಪೂರ್ಣ ಸ್ಟೈಪಂಡ್ ಪಾವತಿಸುವಂತೆ ಸೂಚನೆ

 

ಕೋವಿಡ್-19 ವಿರುದ್ಧ ಹೋರಾಡಲು ಮತ್ತು ವಿವಿಧ ಪಾಲುದಾರರ ಕಷ್ಟಗಳನ್ನು ನಿವಾರಿಸಲು ರಾಷ್ಟ್ರಕ್ಕೆ ಸಹಾಯ ಮಾಡುವ ಪ್ರಯತ್ನದಲ್ಲಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂಎಸ್ಡಿಇ) ಹಲವಾರು ಕ್ರಮಗಳನ್ನು ಕೈಗೊಂಡಿದೆ.

.       ಎಂಎಸ್ಡಿಇ ವಿವಿಧ ರಾಜ್ಯಗಳಲ್ಲಿರುವ 1,75,000 ಆರೋಗ್ಯ ವಲಯದ ವೃತ್ತಿಪರರ ಸಂಪರ್ಕ ವಿವರಗಳನ್ನು (ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳು) ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದೆ. ಎಂಎಸ್ಡಿಇ ಕೌಶಲ್ಯ ವ್ಯವಸ್ಥೆಯಲ್ಲಿ ತರಬೇತಿ ಪಡೆದ ಇವರಲ್ಲಿ ಆರೋಗ್ಯ ಕಾರ್ಯಕರ್ತರು, ತುರ್ತು ವೈದ್ಯಕೀಯ ತಂತ್ರಜ್ಞರು, ಸಾಮಾನ್ಯ ಕರ್ತವ್ಯ ಸಹಾಯಕರು, ಫ್ಲೆಬೋಟಮಿ ತಂತ್ರಜ್ಞರು, ಗೃಹ ಆರೋಗ್ಯ ನೆರವು ತಂತ್ರಜ್ಞರು ಇದ್ದಾರೆ. ಅವರ ಸೇವೆಗಳನ್ನು ಕೋವಿಡ್ -19 ಪ್ರತ್ಯೇಕತೆ ಮತ್ತು ಕ್ವಾರಂಟೈನ್ ಕರ್ತವ್ಯಕ್ಕಾಗಿ ರಾಜ್ಯಗಳು ಬಳಸಿಕೊಳ್ಳಬಹುದು. ಎನ್ಎಸ್ಡಿಸಿ ಪ್ರತಿ ರಾಜ್ಯದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಇವರು ಅವಶ್ಯಕತೆಯ ಆಧಾರದ ಮೇಲೆ ಸಿಬ್ಬಂದಿಯನ್ನು ಸಜ್ಜುಗೊಳಿಸಲು ರಾಜ್ಯ ಆಡಳಿತದೊಂದಿಗೆ ಸಂಪರ್ಕದಲ್ಲಿರುತ್ತಾರೆ.

ಬಿ.       ಎಂಎಸ್ಡಿಇ ಅಡಿಯಲ್ಲಿರುವ ಮಹಾನಿರ್ದೇಶಕರು (ತರಬೇತಿ) ಮಾರ್ಚ್ 31, 2020 ರಂದು ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳಂತಹ (ಎನ್ಎಸ್ಟಿಐ) 33 ಕ್ಷೇತ್ರ ಸಂಸ್ಥೆಗಳ ಸೌಲಭ್ಯಗಳನ್ನು ಕ್ವಾರಂಟೈನ್ ಕೇಂದ್ರಗಳು / ಪ್ರತ್ಯೇಕ ವಾರ್ಡ್ಗಳು ಮತ್ತು ತಾತ್ಕಾಲಿಕ ವೈದ್ಯಕೀಯ ಶಿಬಿರಗಳ ಉದ್ದೇಶಗಳಿಗಾಗಿ ಬಳಸಿಕೊಳ್ಳುವಂತೆ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕೇಳಿಕೊಂಡರು. ಅಲ್ಲದೆ, ತಮ್ಮ ರಾಜ್ಯಗಳಲ್ಲಿರುವ ಐಟಿಐಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಯಿತು. ಒಟ್ಟು 15,697 ಐಟಿಐಗಳಿದ್ದು, ಸರ್ಕಾರಿ ವಲಯದಲ್ಲಿ 3,055 ಮತ್ತು ಖಾಸಗಿ ವಲಯದಲ್ಲಿ 12,642 ಇವೆ.

ರಾಜ್ಯಗಳು ಈಗಾಗಲೇ ಕೆಳಗಿನ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿವೆ:

1.        ಎನ್ಎಸ್ಟಿಐ (ಡಬ್ಲ್ಯೂ) ಪಾಣಿಪತ್ ಅನ್ನು ಪ್ರತ್ಯೇಕ ವಾರ್ಡ್ಗಳಿಗೆ (41 ಕೊಠಡಿಗಳು ಮತ್ತು 16 ಶೌಚಾಲಯಗಳು) ಗುರುತಿಸಲಾಗಿದೆ.

2.       ಎನ್ಎಸ್ಟಿಐ (), ತಿರುವನಂತಪುರಂನಲ್ಲಿ 19 ಕೊಠಡಿಗಳು 12 ಶೌಚಾಲಯಗಳು ಮತ್ತು 6 ಸ್ನಾನಗೃಹಗಳು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಸಿದ್ಧವಾಗಿವೆ.

3.       ಎನ್ಎಸ್ಟಿಐ, ಕಲ್ಲಿಕೋಟೆಯಲ್ಲಿ 46 ಕೊಠಡಿಗಳು 16 ಶೌಚಾಲಯಗಳು ಮತ್ತು 14 ಸ್ನಾನಗೃಹಗಳು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಸಿದ್ಧವಾಗಿವೆ.

4.       200 ವಲಸೆ ಕಾರ್ಮಿಕರಿಗೆ  ಆಶ್ರಯ ನೀಡಲು ಜಿಲ್ಲಾ ಆಡಳಿತವು ಲೂಧಿಯಾನದ ಎನ್ಎಸ್ಟಿಐ ಅನ್ನು ಗುರುತಿಸಿದೆ.

5.       ಎನ್ಎಸ್ಟಿಐ, ಡೆಹ್ರಾಡೂನ್ ಹಾಸ್ಟೆಲ್ ಅನ್ನು ಪ್ರತ್ಯೇಕ ವಾರ್ಡ್ ಎಂದು ಜಿಲ್ಲಾಡಳಿತ ಗುರುತಿಸಿದೆ.

6.       ಎನ್ಎಸ್ಟಿಐ, ಚೆನ್ನೈ ಹಾಸ್ಟೆಲ್ ಅನ್ನು ಜಿಲ್ಲಾ ಆಡಳಿತವು ಪ್ರತ್ಯೇಕ ವಾರ್ಡ್ ಎಂದು ಗುರುತಿಸಿದೆ.

7.        ಐಟಿಐ ಮತ್ತು ಎನ್ಎಸ್ಟಿಐಗಳನ್ನು ಹೊರತುಪಡಿಸಿ, ಒಡಿಶಾದ 38 ಪಾಲಿಟೆಕ್ನಿಕ್ಗಳು ಮತ್ತು ಕಾಲೇಜುಗಳನ್ನು ಪ್ರತ್ಯೇಕ ವಾರ್ಡ್ಗಳಾಗಿ ಬಳಸಲಾಗುತ್ತಿದೆ.

8.       ಇತರ ಎನ್ಎಸ್ಟಿಐಗಳು ಮತ್ತು ಐಟಿಐಗಳು ಸಿದ್ಧವಾಗಿವೆ ಮತ್ತು ಜಿಲ್ಲಾಡಳಿತಗಳು ಬಯಸಿದಾಗ ಅವುಗಳಿಗೆ ವಿನಂತಿ ಮಾಡಬಹುದು.

ಸಿ.       ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಮುಖಗವಸುಗಳನ್ನು ತಯಾರಿಸಲು ಎಂಎಸ್ಡಿಇ ಜನ ಶಿಕ್ಷಣ ಸಂಸ್ಥೆಗೆ (ಜೆಎಸ್ಎಸ್) ಸೂಚನೆ ನೀಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 17 ರಾಜ್ಯಗಳ 99 ಜಿಲ್ಲೆಗಳಲ್ಲಿರುವ 101 ಜೆಎಸ್ಎಸ್ಗಳು ಲಾಕ್ಡೌನ್ ಅವಧಿಯಲ್ಲಿ ಆಯಾ ಜಿಲ್ಲಾಡಳಿತಗಳಿಗಾಗಿ ಸುಮಾರು 5 ಲಕ್ಷ ಮುಖಗವಸುಗಳನ್ನು ತಯಾರಿಸಿವೆ. ಎಂಎಸ್ಡಿಇ ಮಹಾ ನಿರ್ದೇಶಕರು (ತರಬೇತಿ) ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ 64 ಐಟಿಐ ಮತ್ತು 18 ಎನ್ಎಸ್ಟಿಐಗಳ ಪಟ್ಟಿಯನ್ನು ಕಳುಹಿಸಿದ್ದು, ಅವರ ಸೇವೆಗಳನ್ನು ಮುಖಗವಸುಗಳನ್ನು ತಯಾರಿಸಲು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. 18 ಐಟಿಐ ಮತ್ತು 2 ಎನ್ಎಸ್ಟಿಐಗಳು ಈಗಾಗಲೇ ಮುಖಗವಸುಗಳ ತಯಾರಿಕೆಯಲ್ಲಿ ತೊಡಗಿವೆ.

ಡಿ.       ಎನ್ಎಸ್ಟಿಐಗಳು ಸಲ್ಲಿಸುತ್ತಿರುವ ಇತರ ಬೆಂಬಲ ಸೇವೆಗಳು ಹೀಗಿವೆ:

1.        ಎನ್ಎಸ್ಟಿಐ, ಲೂಧಿಯಾನ ಏರೋ ಬ್ಲಾಸ್ಟರ್ ಯಂತ್ರವನ್ನು ತಯಾರಿಸಿ ನಗರವನ್ನು ಸ್ವಚ್ಛಗೊಳಿಸಲು ಜಿಲ್ಲಾಡಳಿತಕ್ಕೆ ನೀಡಿದೆ.

2.       ಡಾ. ಅಂಬೇಡ್ಕರ್ ಸ್ಮಾರಕ ಐಟಿಐ (ಪುಣೆ, ಮಹಾರಾಷ್ಟ್ರದ ಪುಣೆ ಕಂಟೋನ್ಮೆಂಟ್ ಬೋರ್ಡ್ ನಡೆಸುತ್ತಿದೆ) ಆರುಕೊರೊನಾ ಸೋಂಕುನಿವಾರಕ ಕೊಠಡಿಗಳನ್ನು ಸಿದ್ಧಪಡಿಸಿದೆ.

3.       ಬಿಹಾರದ ಜೆಹಾನಾಬಾದ್ ಅರುಣ್ ಪ್ರತಿಮಾ ಪಾಠಕ್ ಮೆಮೋರಿಯಲ್ ಖಾಸಗಿ ಐಟಿಐಸಾರ್ವಜನಿಕ ಟನೆಲ್ ಸ್ಯಾನಿಟೈಸರ್ ಯಂತ್ರ ವನ್ನು ತಯಾರಿಸಿದ್ದು, ಇದನ್ನು ಬಿಹಾರದ ಜೆಹನಾಬಾದ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ.

4.       ಮುಖಗವಸು, ಸ್ಯಾನಿಟೈಜರ್ ವಿತರಣೆ, ಸ್ಥಳೀಯ ಗ್ರಾಮಗಳನ್ನು ನೈರ್ಮಲ್ಯಗೊಳಿಸುವುದು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

5.       ಕೇರಳದ ಕಣ್ಣೂರು ಐಟಿಐ, ಸಂಸ್ಥೆಯ ವಾಹನವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ.

.       ಎಂಎಸ್ಡಿಇಯ ಎಲ್ಲಾ ಅಧಿಕಾರಿಗಳು / ಸಿಬ್ಬಂದಿ ಕನಿಷ್ಠ ಒಂದು ದಿನದ ವೇತನವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ. ಇದಲ್ಲದೆ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ, ವಲಯ ಕೌಶಲ್ಯ ಮಂಡಳಿಗಳು ಮತ್ತು ತರಬೇತಿ ನೀಡುಗರನ್ನು ಸಿಎಸ್ಆರ್ ನಿಧಿಯ ಮೂಲಕ ಕೊಡುಗೆ ನೀಡುವಂತೆ ಕೋರಲಾಗಿದೆ. ಸಂಬಳ ಮತ್ತು ಸಿಎಸ್ಆರ್ನಿಂದ ಒಟ್ಟು ಕೊಡುಗೆ 3.23 ಕೋಟಿ ರೂ. ಆಗಿದೆ. ಇದಲ್ಲದೆ, 2022 ಐಟಿಐಗಳು ಇದುವರೆಗೆ ಪಿಎಂ ಕೇರ್ಸ್ ನಿಧಿಗೆ 1.47 ಕೋಟಿ ರೂ.ದೇಣಿಗೆ ನೀಡಿವೆ.

ಎಫ್.    ಎಂಎಸ್ಡಿಇ ಲಾಕ್ಡೌನ್ ಅವಧಿಯಲ್ಲಿ ತಮ್ಮ ಅಪ್ರೆಂಟಿಸ್ಗಳಿಗೆ ಪೂರ್ಣ ಸ್ಟೈಫಂಡ್ ಪಾವತಿಸುವಂತೆ ಎಲ್ಲಾ ಸಂಸ್ಥೆಗಳಿಗೆ ತಿಳಿಸಿದೆ. ಇದಲ್ಲದೆ, ಸಚಿವಾಲಯವು ಉದ್ದೇಶಿತ ಸಂಸ್ಥೆಗಳಿಗೆ ಅನುಮೋದಿತ ದರಕ್ಕೆ ಅನುಗುಣವಾಗಿ ಸ್ಟೈಫಂಡ್ ಅನ್ನು ಮರುಪಾವತಿ ಮಾಡುತ್ತದೆ.

ಜಿ.       ಪಿಎಂಕೆವಿವೈ 2016-20 ಯೋಜನೆಗೆ ಎಂಟು ಈಶಾನ್ಯ ರಾಜ್ಯಗಳಿಗೆ ಅಭ್ಯರ್ಥಿಗಳನ್ನು 31 ಮೇ, 2020 ರವರೆಗೆ ದಾಖಲಿಸಲು ಸಚಿವಾಲಯವು ದಾಖಲಾತಿ ದಿನಾಂಕವನ್ನು ವಿಸ್ತರಿಸಿದೆ. ಇದಲ್ಲದೆ, 2019-20ರಲ್ಲಿ ನೀಡಲಾದ ಗುರಿಗಳಿಗೆ 2020 ಮೇ 31 ರಿಂದ ತರಬೇತಿ ನೀಡುವ ಅವಧಿಯನ್ನು ಆಗಸ್ಟ್ 31 ರವೆಗೆ ವಿಸ್ತರಿಸಲಾಗಿದೆ.

ಎಚ್.    ಐಟಿಐಗಳನ್ನು ಮುಚ್ಚಲಾಗಿದ್ದರೂ, ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

(i)       ಭಾರತ್ಸ್ಕಿಲ್ಸ್ ಪೋರ್ಟಲ್, ಕ್ವೆಸ್ಟ್ ಅಪ್ಲಿಕೇಶನ್, ಎನ್ಐಎಂಐ ವರ್ಚುವಲ್ ತರಗತಿ ಕೊಠಡಿಗಳು ಮುಂತಾದ ಆನ್ಲೈನ್ ಸಂಪನ್ಮೂಲಗಳ ಮೂಲಕ ಕಲಿಕೆಯನ್ನು ಮುಂದುವರಿಸಲಾಗಿದೆ.

(ii)       ರಾಷ್ಟ್ರವ್ಯಾಪಿ ಲಾಕ್-ಡೌನ್ ಅವಧಿಯಲ್ಲಿ ನಿರ್ವಹಿಸಲು ತರಬೇತಿ ಪಡೆಯುತ್ತಿರುವವರಿಗೆ ಬೋಧಕರು ಕಾರ್ಯಯೋಜನೆಗಳನ್ನು ನೀಡಿದ್ದಾರೆ.

(iii)      ಬೋಧಕರು ವಾಟ್ಸಾಪ್ ಗುಂಪಿನ ಮೂಲಕ ತರಬೇತಿ ಪಡೆಯುತ್ತಿರುವವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತಾರೆ ಮತ್ತು ಅವರ ಕಾರ್ಯಯೋಜನೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

***



(Release ID: 1614305) Visitor Counter : 141