ರೈಲ್ವೇ ಸಚಿವಾಲಯ
ಮನೆಯ ಅಡುಗೆ ಮನೆಗಳು ಸದಾ ಕಾರ್ಯಾಚರಿಸುತ್ತಿರುವಂತೆ ಮತ್ತು ರೈತರಿಗೆ ನಿರಂತರ ಬೆಂಬಲ ದೊರೆಯುವಂತೆ ಖಾತ್ರಿಪಡಿಸಲು ರೈಲ್ವೇಯಿಂದ ಪ್ರಮುಖ ಪ್ರಯತ್ನ
ಪ್ರಕಟಣಾ ದಿನಾಂಕ:
13 APR 2020 6:50PM by PIB Bengaluru
ಮನೆಯ ಅಡುಗೆ ಮನೆಗಳು ಸದಾ ಕಾರ್ಯಾಚರಿಸುತ್ತಿರುವಂತೆ ಮತ್ತು ರೈತರಿಗೆ ನಿರಂತರ ಬೆಂಬಲ ದೊರೆಯುವಂತೆ ಖಾತ್ರಿಪಡಿಸಲು ರೈಲ್ವೇಯಿಂದ ಪ್ರಮುಖ ಪ್ರಯತ್ನ
ಏಪ್ರಿಲ್ 1 ರಿಂದ ಏಪ್ರಿಲ್ 12 ರವರೆಗೆ ರೈಲ್ವೇಯಿಂದ 36724 ವ್ಯಾಗನ್ ಆಹಾರಧಾನ್ಯ, 861 ವ್ಯಾಗನ್ ಸಕ್ಕರೆ, 1753 ವ್ಯಾಗನ್ ಉಪ್ಪು, 606 ವ್ಯಾಗನ್/ ಟ್ಯಾಂಕ್ ಗಳಷ್ಟು ಖಾದ್ಯ ತೈಲ, ಮತ್ತು 14317 ವ್ಯಾಗನ್ ರಸಗೊಬ್ಬರ ಸಾಗಾಟ
63 ಮಾರ್ಗಗಳನ್ನು ಗುರುತಿಸಲಾಗಿದೆ ಮತ್ತು 171 ವೇಳಾಪಟ್ಟಿ ನಿಗದಿತ ರೈಲುಗಳು ಈ ಮಾರ್ಗದಲ್ಲಿ ಬೇಗ ಹಾಳಾಗುವಂತಹ ಹಣ್ಣುಗಳು, ತರಕಾರಿ, ಹಾಲು ಮತ್ತು ದೈನಂದಿನ ಬಳಕೆಯ ಉತ್ಪನ್ನಗಳು ಹಾಗು ಕೃಷಿ ಉದ್ದೇಶಕ್ಕಾಗಿ ಬೀಜಗಳನ್ನು ಸಾಗಾಟ ಮಾಡುತ್ತಿವೆ
ಕೃಷಿ ಉತ್ಪನ್ನಗಳಾದ ಆಹಾರ ಧಾನ್ಯಗಳು, ಸಕ್ಕರೆ, ಉಪ್ಪು, ಮತ್ತು ಖಾದ್ಯ ತೈಲಗಳನ್ನು ಸಕಾಲದಲ್ಲಿ ಹೇರಿಕೊಂಡು ಮತ್ತು ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಕೆಯನ್ನು ಖಾತ್ರಿಪಡಿಸಲು ಭಾರತೀಯ ರೈಲ್ವೇಯು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ
ಭಾರತೀಯ ಮನೆಗಳ ಎಲ್ಲಾ ಅಡುಗೆ ಮನೆಗಳು ಸಹಜ ಸ್ಥಿತಿಯಲ್ಲಿ ನಡೆಯುತ್ತಿರುವಂತೆ ಮಾಡಲು ಮತ್ತು ಕೃಷಿ ವಲಯದಲ್ಲಿರುವ ರೈತರಿಗೆ ಕೃಷಿಗೆ ಅವಶ್ಯವಾದ ಎಲ್ಲಾ ಒಳಸುರಿಗಳು ನಿರಂತರ ಲಭಿಸುವಂತೆ ಮಾಡಲು, 2020 ರ ಏಪ್ರಿಲ್ 1 ರಿಂದ ಏಪ್ರಿಲ್ 12 ರವರೆಗಿನ 12 ದಿನಗಳಲ್ಲಿ ರೈಲ್ವೇಯು 36724 ವ್ಯಾಗನ್ ಆಹಾರಧಾನ್ಯಗಳನ್ನು , 861 ವ್ಯಾಗನ್ ಸಕ್ಕರೆ, 1753 ವ್ಯಾಗನ್ ಉಪ್ಪು, 606 ವ್ಯಾಗನ್/ ಟ್ಯಾಂಕ್ ಖಾದ್ಯ ತೈಲ ಮತ್ತು 14317 ವ್ಯಾಗನ್ ರಸಗೊಬ್ಬರ (ಒಂದು ವ್ಯಾಗನ್ ಎಂದರೆ 58-60 ಟನ್ ಸರಕು) ಗಳನ್ನು ಸಾಗಾಟ ಮಾಡಿದೆ.
ಕೋವಿಡ್ -19 ರಾಷ್ಟ್ರವ್ಯಾಪೀ ಲಾಕ್ ಡೌನ್ ಅವಧಿಯಲ್ಲಿ ಕೃಷಿ ಉತ್ಪನ್ನಗಳಾದ ಆಹಾರ ಧಾನ್ಯಗಳು, ಸಕ್ಕರೆ, ಉಪ್ಪು, ಮತ್ತು ಖಾದ್ಯ ತೈಲಗಳು ಸಕಾಲದಲ್ಲಿ ಪೂರೈಕೆಯಾಗುವುದನ್ನು ಖಾತ್ರಿಪಡಿಸಲು ಮತ್ತು ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಲಭಿಸುವುದನ್ನು ಖಾತ್ರಿಪಡಿಸಲು ಈ ಪ್ರಯತ್ನಗಳನ್ನು ಮಾಡಲಾಗಿದೆ. ಈ ಅವಶ್ಯಕ ಸಾಮಗ್ರಿಗಳ ಹೇರಿಕೆ, ಸಾರಿಗೆ ಮತ್ತು ಸರಕುಗಳ ಇಳಿಕೆ 2020 ರ ಏಪ್ರಿಲ್ ತಿಂಗಳ ಮೊದಲ 12 ದಿನ ಪೂರ್ಣ ಪ್ರಮಾಣದ ಪ್ರಗತಿಯಲ್ಲಿತ್ತು.
ಬರಲಿರುವ ಖಾರೀಫ್ ಅವಧಿಗೆ ರಸಗೊಬ್ಬರಗಳ ಲಭ್ಯತೆಯನ್ನು ಮತ್ತು ಸಾಗಾಟವನ್ನು ಖಾತ್ರಿಪಡಿಸಲು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಜೊತೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಲಾಗಿದೆ. ಅದೇ ರೀತಿ ಆಹಾರಧಾನ್ಯಗಳ ಲೋಡಿಂಗ್ ಗೆ ಸಂಬಂಧಿಸಿ ಕೃಷಿ ಸಚಿವಾಲಯದ ಜೊತೆಗೂ ನಿಕಟ ಸಂಪರ್ಕವನ್ನು ಹೊಂದಲಾಗಿದೆ.
ವಿವರಗಳು ಈ ಕೆಳಗಿನಂತಿವೆ:
|
ಕ್ರ. ಸಂ
|
Date
ದಿನಾಂಕ
|
ಆಹಾರ ಧಾನ್ಯಗಳನ್ನು ಹೊತ್ತ ವ್ಯಾಗನ್ನುಗಳ ಸಂಖ್ಯೆ
|
No. of wagons of Sugar
ಸಕ್ಕರೆ ಹೊತ್ತ ವ್ಯಾಗನ್ನುಗಳ ಸಂಖ್ಯೆ.
|
No. of wagons of Salt
ಉಪ್ಪನ್ನು ಹೊತ್ತ ವ್ಯಾಗನ್ನುಗಳ ಸಂಖ್ಯೆ
|
No. of wagons of Edible Oil
ಖಾದ್ಯ ತೈಲ ಹೊತ್ತ ವ್ಯಾಗನ್ನುಗಳ ಸಂಖ್ಯೆ.
|
No. of wagons of Fertilizer
ರಸಗೊಬ್ಬರವನ್ನು ಹೊತ್ತ ವ್ಯಾಗನ್ನುಗಳ ಸಂಖ್ಯೆ.
|
|
1.
|
01.04.2020
|
2343
|
210
|
-
|
-
|
761
|
|
2.
|
02.04.2020
|
2582
|
-
|
133
|
64
|
1047
|
|
3.
|
03.04.2020
|
3285
|
41
|
103
|
122
|
1123
|
|
4.
|
04.04.2020
|
3151
|
42
|
84
|
50
|
996
|
|
5.
|
05.04.2020
|
2810
|
42
|
165
|
42
|
996
|
|
6.
|
06.04.2020
|
2730
|
42
|
170
|
14
|
960
|
|
7.
|
07.04.2020
|
3211
|
105
|
168
|
-
|
1504
|
|
8.
|
08.04.2020
|
3478
|
84
|
236
|
50
|
1225
|
|
9.
|
09.04.2020
|
4061
|
64
|
41
|
50
|
1434
|
|
10.
|
10.04.2020
|
3192
|
63
|
275
|
69
|
1518
|
|
11.
|
11.04.2020
|
2973
|
42
|
168
|
70
|
1324
|
|
12.
|
12.04.2020
|
2908
|
126
|
210
|
75
|
1429
|
|
|
ಒಟ್ಟು
|
36724
|
861
|
1753
|
606
|
14317
|
ಭಾರತೀಯ ರೈಲ್ವೇಯು 63 ಮಾರ್ಗಗಳನ್ನು ಪಾರ್ಸೆಲ್ ವಿಶೇಷ ರೈಲುಗಳ ಓಡಾಟಕ್ಕಾಗಿ ಗುರುತು ಮಾಡಿದೆ. ತಕ್ಷಣ ಹಾಳಾಗುವ ವಸ್ತುಗಳಾದ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಹೈನು ಉತ್ಪನ್ನಗಳು ಹಾಗು ಕೃಷಿ ಉದ್ದೇಶಕ್ಕಾಗಿ ಬೀಜಗಳನ್ನು ಲಾಕ್ ಡೌನ್ ಆರಂಭಗೊಂಡಂದಿನಿಂದ ತ್ವರಿತವಾಗಿ ಸಾಗಿಸಲು ಇವುಗಳನ್ನು ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 13 ರವರೆಗೆ 63 ಇಂತಹ ಮಾರ್ಗಗಳನ್ನು ಅಧಿಸೂಚಿಸಲಾಗಿದ್ದು, ವೇಳಾಪಟ್ಟಿಯಂತೆ ಈ ಮಾರ್ಗದಲ್ಲಿ ರೈಲುಗಳು ಓಡಾಟ ಮಾಡುತ್ತಿವೆ.
ದೇಶದಲ್ಲಿಯ ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೀತಿಯಲ್ಲಿ ಈ ಪಾರ್ಸೆಲ್ ವಿಶೇಷ ರೈಲುಗಳನ್ನು ಯೋಜಿಸಲಾಗಿದೆ. ದಿಲ್ಲಿ, ಮುಂಬಯಿ, ಕೋಲ್ಕೊತ್ತಾ, ಚೆನ್ನೈ, ಹೈದರಾಬಾದ್, ಮತ್ತು ಬೆಂಗಳೂರುಗಳನ್ನು ಇವು ಜೋಡಿಸುತ್ತವೆ. ಇದಲ್ಲದೆ ಗುವಾಹಟಿ ಮೂಲಕ ದೇಶದ ಈಶಾನ್ಯ ಭಾಗಕ್ಕೆ ಸಂಪರ್ಕವನ್ನು ಖಾತ್ರಿಗೊಳಿಸಲಾಗಿದೆ. ಈ ರೈಲುಗಳ ಮೂಲಕ ಸಂಪರ್ಕ ಸಾಧಿಸಲಾಗಿರುವ ಇತರ ನಗರಗಳೆಂದರೆ ಭೋಪಾಲ್, ಅಲಹಾಬಾದ್, ಡೆಹ್ರಾಡೂನ್, ವಾರಾಣಸಿ, ಅಹ್ಮದಾಬಾದ್, ವಡೋದರ, ರಾಂಚಿ, ಗೋರಖಪುರ, ತಿರುವನಂತಪುರಂ, ಸೇಲಂ, ವಾರಂಗಲ್, ವಿಜಯವಾಡ, ವಿಶಾಖಪಟ್ಟಣಂ, ರೂರ್ಕೆಲಾ, ಬಿಲಾಸ್ ಪುರ, ಭುಸಾವಾಲ್, ಟಾಟಾನಗರ, ಜೈಪುರ, ಝಾನ್ಸಿ, ಆಗ್ರಾ, ನಾಸಿಕ್, ನಾಗಪುರ, ಅಕೋಲಾ, ಜಲಗಾಂ, ಸೂರತ್, ಪುಣೆ, ರಾಯಪುರ, ಪಟ್ನಾ, ಅಸಾನ್ಸೋಲ್, ಕಾನ್ಪುರ, ಜೈಪುರ, ಬಿಕಾನೇರ್, ಅಜ್ಮೀರ್, ಗ್ವಾಲಿಯರ್, ಮಥುರಾ, ನೆಲ್ಲೋರ್, ಜಬಲ್ಪುರ ಇತ್ಯಾದಿ.
ಕೆಲವು ಮಾರ್ಗಗಳಲ್ಲಿ ಬೇಡಿಕೆ ಕಡಿಮೆ ಇದ್ದರೂ ರೈಲುಗಳನ್ನು ಓಡಿಸಲಾಗುತ್ತಿದೆ, ಯಾಕೆಂದರೆ ದೇಶದ ಯಾವ ಭಾಗವೂ ಸಂಪರ್ಕರಹಿತವಾಗಬಾರದು ಎಂಬ ಕಾರಣಕ್ಕಾಗಿ. ರೈಲುಗಳಿಗೆ ಮಾರ್ಗ ಮಧ್ಯದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ನಿಲುಗಡೆಗಳನ್ನು ನೀಡಲಾಗಿದೆ, ಇದರಿಂದ ಪಾರ್ಸೆಲ್ ಗಳ ಗರಿಷ್ಟ ಪ್ರಮಾಣದ ವಿಲೇವಾರಿ ಸಾಧ್ಯವಾಗುತ್ತದೆ.
ರೈಲ್ವೇಯು ನಡೆಸುತ್ತಿರುವ ಈ ರೈಲುಗಳ ಓಡಾಟದ ಎಲ್ಲಾ ಪ್ರಯೋಜನವನ್ನು ತಮ್ಮ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಪಡೆಯುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿತ ಕಾರ್ಯದರ್ಶಿಗಳನ್ನು, , ಎಲ್ಲಾ ರಾಜ್ಯ ಮಿಷನ್ ನಿರ್ದೇಶಕರನ್ನು ಕೋರಲಾಗಿದೆ. ರಾಜ್ಯಗಳಿಂದ ಹೊಸ ಮಾರ್ಗಗಳಿಗೆ ಅಥವಾ ರೈಲು ನಿಲುಗಡೆಗಳಿಗೆ ಬೇಡಿಕೆ ಬಂದರೆ ಆ ನಿಟ್ಟಿನಲ್ಲಿ ಅವಶ್ಯ ಕ್ರಮಗಳನ್ನು ತಕ್ಷಣವೇ ಜರಗಿಸಲಾಗುವುದು ಎಂದು ರೈಲ್ವೇ ಮಂಡಳಿಯ ಹೆಚ್ಚುವರಿ ಸದಸ್ಯ (ವಾಣಿಜ್ಯ) ಹೇಳಿದ್ದಾರೆ.
ವಿವಿಧ ವಲಯಗಳ ಎಲ್ಲಾ ಪ್ರಿನ್ಸಿಪಲ್ ಸಿ.ಸಿ.ಎಂ. ಗಳು/ ಮುಖ್ಯ ವಾಣಿಜ್ಯ ಮ್ಯಾನೇಜರುಗಳ ಪಟ್ಟಿಯನ್ನು, ಬುಕ್ಕಿಂಗ್ ಪ್ರಕ್ರಿಯೆಯನ್ನು, ಈ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಮತ್ತು ಸರಕು ಲೆಕ್ಕಾಚಾರವನ್ನು ಎಲ್ಲಾ ಅಧಿಕಾರಿಗಳ ಜೊತೆ ವ್ಯಾಪಕ ಪ್ರಚಾರಕ್ಕಾಗಿ ಹಂಚಿಕೊಳ್ಳಲಾಗಿದೆ. ಭಾರತೀಯ ರೈಲ್ವೇ ಜಾಲತಾಣದಲ್ಲಿ ಪಾರ್ಸೆಲ್ ವಿಶೇಷ ರೈಲುಗಳ ವಿವರಗಳ ಸಂಪರ್ಕ ಕೊಂಡಿ ಲಭ್ಯವಿದೆ.
indianrailways.gov.in Direct link for details of Parcel Special trains is as under:
https://enquiry.indianrail.gov.in/mntes/q?opt=TrainRunning&subOpt=splTrnDtl
indianrailways.gov.in ನಲ್ಲಿ ಪಾರ್ಸೆಲ್ ವಿಶೇಷ ರೈಲುಗಳ ವಿವರಗಳ ನೇರ ಸಂಪರ್ಕ ಕೊಂಡಿ ಈ ಕೆಳಗಿನಂತಿದೆ:
https://enquiry.indianrail.gov.in/mntes/q?opt=TrainRunning&subOpt=splTrnDtl
***
(ಪ್ರಕಟಣೆ ಐ.ಡಿ.: 1614298)
ವಿಸಿಟರ್ ಕೌಂಟರ್ : 178