ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಜ್ಞಾನ ಆಧಾರಿತ ಕೋವಿಡ್-19 ವೆಬ್ ಸೈಟ್ ಗೆ ಚಾಲನೆ

Posted On: 13 APR 2020 6:40PM by PIB Bengaluru

ವಿಜ್ಞಾನ ಆಧಾರಿತ ಕೋವಿಡ್-19 ವೆಬ್ ಸೈಟ್ ಗೆ ಚಾಲನೆ

‘ಕೋವಿಡ್ ಗ್ಯಾನ್’ ಹೆಸರಿನ ಇದು ಬಹುಸಂಸ್ಥೆಗಳ, ಬಹುಭಾಷೆಯ ವೈಜ್ಞಾನಿಕ ಸಂವಹನ ಉಪಕ್ರಮ

ಕೋವಿಡ್-19 ಕುರಿತಂತೆ ಕ್ಯಾಂಪಸ್ ನೊಳಗೆ ಜಾಗೃತಿ- ಜನಸಂಪರ್ಕ

ಕ್ಯಾಂಪಸ್ ಇಮೇಲ್ ಡೆಸ್ಕ್, ಕ್ಯಾಂಪಸ್ ಮೆಸೇಜಿಂಗ್ ಸೇವೆಗಳು, ದೂರವಾಣಿ ಸಹಾಯವಾಣಿ ಮತ್ತು ಸಮಾನ ಬೆಂಬಲ ಸೌಕರ್ಯ

 

ಭಾರೀ ಪ್ರಮಾಣದಲ್ಲಿ ಕೋವಿಡ್-19 ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ದೇಶದ ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳು ಈ ಸಾಂಕ್ರಾಮಿಕದ ನಾನಾ ಆಯಾಮಗಳನ್ನು ಅರ್ಥಮಾಡಿಕೊಂಡು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಒಗ್ಗೂಡುತ್ತಿದ್ದಾರೆ.

ನೋವೆಲ್ ಕೊರೊನಾ ವೈರಸ್ (ಸಾರ್ಸ್-ಸಿಒವಿ-2)ನ ಖಚಿತ ವರ್ತನೆ, ಕೊರೊನಾ ಸೊಂಕು ಹರಡುವಿಕೆಯ ಆಯಾಮಗಳು ಮತ್ತು ಅದರ ಪತ್ತೆ ಕುರಿತಂತೆ ನಾನಾ ವಿಷಯಗಳಲ್ಲಿ ಈ ಸವಾಲಿನ ವಿರುದ್ಧ ಎದುರಿಸಲು ಹೊಸ ಹೊಸ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. ಜೊತೆಗೆ ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸಂವಹನದ ಗಂಭೀರ ಮೌಲ್ಯಮಾಪನ ಮಾಡುವ ಕಾರ್ಯಗಳು ನಡೆಯುತ್ತಿವೆ.

ಸೋಂಕಿನ ವಾಸ್ತವಿಕ ಮತ್ತು ವೈಜ್ಞಾನಿಕ ಆಯಾಮಗಳು ಸಾರ್ವಜನಿಕ ವಲಯಕ್ಕೆ ತರಲು, ಬಹು ಸಂಸ್ಥೆಗಳ, ಬಹು ಭಾಷೆಗಳ ವಿಜ್ಞಾನ ಸಂವಹನ ಉಪಕ್ರಮ ‘ಕೋವಿಡ್ ಗ್ಯಾನ್’ಅನ್ನು ಸೃಷ್ಟಿಸಲಾಗಿದೆ.

ಟಾಟಾ ಮೂಲಭೂತ ಸಂಶೋಧನಾ ಕೇಂದ್ರ(ಟಿಐಎಫ್ಆರ್), ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್ ಸಿ) ಮತ್ತು ಟಾಟಾ ಮೆಮೋರಿಯಲ್ ಸೆಂಟರ್ (ಟಿಎಂಸಿ) ಇವುಗಳ ಚಿಂತನೆಯ ಫಲವಾಗಿದೆ. ಇದಕ್ಕೆ ವಿಜ್ಞಾನ್ ಪ್ರಸಾರ, ಇಂಡಿಯಾ ಬಯೋಸೈನ್ಸ್ ಮತ್ತು ಬೆಂಗಳೂರು ಜೀವವಿಜ್ಞಾನ ಕ್ಲಸ್ಟರ್ (ಬಿಎಲ್ಐಎಸ್ ಸಿ)ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು ಸೇರ್ಪಡೆಗೊಂಡಿವೆ. ಅಲ್ಲದೆ ಇದರಲ್ಲಿ ಇನ್ಸ್ ಟಿಟ್ಯೂಟ್ ಆಫ್ ಸ್ಟೆಮ್ ಸೆಲ್ ಮತ್ತು ಪುನರುತ್ಪಾದಕ ಔಷಧ (ಐಎನ್ಎಸ್ ಟಿಇಎಂ), ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲೆಕ್ಯುಲರ್ ಪ್ಲಾಟ್ ಫಾರ್ಮ್ಸ್ (ಸಿ-ಕ್ಯಾಂಪ್) ಮತ್ತು ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (ಎನ್ ಸಿ ಬಿಎಸ್) ಇವುಗಳು ಕೈಜೋಡಿಸಿವೆ.

ಈ ಎಲ್ಲಾ ಸಂಸ್ಥೆಗಳು ಒಗ್ಗೂಡಿದ ಪರಿಣಾಮ 2020ರ ಏಪ್ರಿಲ್ 3ರಂದು ವೆಬ್ ಸೈಟ್ ಅನಾವರಣಗೊಂಡಿತು. “ಕೋವಿಡ್ ಗ್ಯಾನ್” ಹೆಸರಿನ ಈ ವೆಬ್ ಸೈಟ್ ಕೋವಿಡ್-19 ಸೋಂಕು ಕುರಿತಂತೆ ಎಲ್ಲ ಮಾಹಿತಿ ಸಂಪನ್ಮೂಲಗಳ ಸಂಗ್ರಹ ತಾಣವಾಗಿದೆ. ಈ ಸಂಪನ್ಮೂಲಗಳನ್ನು ಭಾರತದಲ್ಲಿನ ಸಾರ್ವಜನಿಕ ಬೆಂಬಲಿತ ಸಂಶೋಧನಾ ಸಂಸ್ಥೆಗಳು ಮತ್ತು ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸೃಷ್ಟಿಸಲಾಗುತ್ತಿದೆ. ಇಲ್ಲಿ ಲಭ್ಯವಾಗುವ ಪಠ್ಯ ರೋಗ ಮತ್ತು ಅದರ ಹರಡುವಿಕೆ ಕುರಿತಂತೆ ಉತ್ತಮ ಮೌಲ್ಯಯುತವಾದ ವೈಜ್ಞಾನಿಕವಾಗಿ ಅರ್ಥೈಸಿಕೊಂಡಿರುವ ಅಂಶಗಳನ್ನು ಆಧರಿಸಿರುತ್ತವೆ.

ಖಚಿತ ಮಾಹಿತಿಯ ಮೂಲವಾಗಿರುವುದಷ್ಟೇ ಅಲ್ಲದೆ ಈ ವೆಬ್ ಸೈಟ್ ನ ಪ್ರಾಥಮಿಕ ಧ್ಯೇಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾಂಕ್ರಾಮಿಕ ರೋಗ ಹರಡುವ ಸಂಭವನೀಯತೆಗಳನ್ನು ತಗ್ಗಿಸಿ, ರೋಗವನ್ನು ಸರಿಯಾಗಿ ಅರ್ಥೈಸಿಕೊಂಡು ಅದನ್ನು ಎದುರಿಸಲು ಸಮಗ್ರ ಕಾರ್ಯತಂತ್ರಗಳನ್ನು ರೂಪಿಸುವುದಾಗಿದೆ. ಅಲ್ಲದೆ, ಇದು ಕೋವಿಡ್-19 ಕುರಿತಂತೆ ಸಮಗ್ರ ಮಾಹಿತಿಗಳ ಭಂಡಾರವಾಗಿ ನೆರವಾಗಲಿದೆ. ‘ಖಚಿತ ಮಾಹಿತಿ’ಯ ನಾನಾ ಆಯಾಮಗಳನ್ನು ಒಳಗೊಂಡಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಅದರಲ್ಲಿ ಖ್ಯಾತ ವಿಜ್ಞಾನಿಗಳ ಭಾಷಣಗಳ ಧ್ವನಿ/ ಪೋಡ್ ಕಾಸ್ಟ್ ಮಾದರಿ, ಇನ್ಫೋಗ್ರಾಫಿಕ್ಸ್, ಪೋಸ್ಟರ್ ಗಳು, ವಿಡಿಯೋಗಳು, ಪ್ರಶ್ನೋತ್ತರಗಳು ಮತ್ತು ತಪ್ಪು ಮಾಹಿತಿಗಳನ್ನು ಹೋಗಲಾಡಿಸುವಂತಹವು ಹಾಗೂ ವೈಜ್ಞಾನಿಕ ಪ್ರಬಂಧಗಳ ಲಿಂಕ್ ಗಳೂ ಕೂಡ ಲಭ್ಯವಿವೆ.

https://ci4.googleusercontent.com/proxy/vUkHEJdi6xV5WvQRhJf-M_8j0DN1bsOufaoJM3eJmxpcv_qy9jP5kRCV9t1b6mtQYggUi0aQjkRrT3K_oCey-7VfoSdZ3iYbbwq8MhtmBANAQNMrMNkd=s0-d-e1-ft#https://static.pib.gov.in/WriteReadData/userfiles/image/image001KHHY.gif\

 

ಈ ಮಾಹಿತಿಯುಕ್ತ ವೆಬ್ ಸೈಟ್ ಕೇವಲ ಬಳಕೆದಾರರ ಸ್ನೇಹಿ ಮಾತ್ರವಲ್ಲ, ಅದು ಅತ್ಯಂತ ವಿಶ್ವಾಸಾರ್ಹ, ಅಧಿಕೃತ ಮತ್ತು ನಂಬಿಕೆಗೆ ಅರ್ಹವಾದುದು. ಅದು ಬಿಡುಗಡೆಯ ನಂತರ – ವೈಜ್ಞಾನಿಕ ಸಮುದಾಯದಲ್ಲಿ ಫೇಸ್ ಬುಕ್ ಮತ್ತು ಟ್ವಿಟರ್ ಸೇರಿದಂತೆ ನಾನಾ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಇದನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಭಾರತದ ಬಹುಭಾಷೆಗಳಲ್ಲಿ ಇದರ ಪಠ್ಯ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳು ನಡೆದಿವೆ. https://covid-gyan.in

ಈ ಮಧ್ಯೆ, ಬೆಂಗಳೂರು ಮೂಲದ ಎರಡು ವಿದ್ಯಾರ್ಥಿ ಸ್ವಯಂಸೇವಕರ ಸಂಸ್ಥೆಗಳಾದ ಇನ್ಸ್ ಟ್ಯೂಟ್ ಫಾರ್ ಸ್ಟೆಮ್ ಸೆಲ್ ವಿಜ್ಞಾನ ಮತ್ತು ಪುನರುತ್ಪಾದಕ ಔಷಧ (ಐನ್ ಸ್ಟೆಮ್) ಮತ್ತು ರಾಷ್ಟ್ರೀಯ ಬಯೊಲಾಜಿಕಲ್ ವಿಜ್ಞಾನ ಕೇಂದ್ರ(ಎನ್ ಸಿಬಿಎಸ್) ಹಲವು ಆಂತರಿಕ ಸಂವಹನ ಚಾನಲ್ ಗಳನ್ನು ಸೃಷ್ಟಿಸಿವೆ ಮತ್ತು ಕೋವಿಡ್-19 ಸಾಂಕ್ರಾಮಿಕ ಕುರಿತಂತೆ ಭಯ ಮತ್ತು ಆತಂಕವನ್ನು ಎದುರಿಸಲು ಹಲವು ಗುಂಪುಗಳಿಗೆ ಸಹಾಯ ಮಾಡಲು ಕ್ಯಾಂಪಸ್ ಸಮುದಾಯವನ್ನು ರಚಿಸಿದೆ.

ಇದರಲ್ಲಿ ಕ್ಯಾಂಪಸ್ ಇಮೇಲ್ ಡೆಸ್ಕ್, ಕ್ಯಾಂಪಸ್ ಮೆಸೇಜಿಂಗ್ ಸೇವೆಗಳು, ದೂರವಾಣಿ ಸಹಾಯವಾಣಿ ಮತ್ತು ನಿರಂತರ ಬೆಂಬಲ ಮಾರ್ಗ ಸೌಕರ್ಯಗಳು ಒಳಗೊಂಡಿದ್ದು, ಇದು ಕ್ಯಾಂಪಸ್ ಗಳಲ್ಲಿ ಹಲವು ವರ್ಷಗಳ ಕಾಲ ಉಳಿಯುವ ಸಾಧ್ಯತೆ ಇದೆ. ಯುವ ಸಂಶೋಧಕರ ಗುಂಪು, ಲಾಕ್ ಡೌನ್ ವೇಳೆಯಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲು ನಾನಾ ಸ್ವಯಂಸೇವಕರ ಗುಂಪುಗಳನ್ನು ರಚಿಸಿವೆ. ಅಲ್ಲದೆ ನಾನಾ ಬಗೆಯ ಅಲ್ಪಾವಧಿ ಮತ್ತು ದೀರ್ಘಾವಧಿ ಸವಾಲುಗಳನ್ನು ಎದುರಿಸಲು ನಿರ್ದಿಷ್ಟ ಸಂಶೋಧನೆ/ಕಾರ್ಯಕ್ರಮ/ವಿನ್ಯಾಸ ಕಲೆಗಳನ್ನು ಅಭಿವೃದ್ಧಿಪಡಿಸಲು ಸದ್ಯ ನಡೆಯುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ.

(ಸಂಪರ್ಕ ವ್ಯಕ್ತಿಗಳು) – ಸಂಪರ್ಕ ಕಚೇರಿ, ಬೆಂಗಳೂರು ಜೀವ ವಿಜ್ಞಾನ ಕ್ಲಸ್ಟರ್

ಅಮ್ರಿತಾ ತ್ರಿಪಾಠಿ : tripathya@instem.res.in

ಮಾಹಿನ್ ಅಲಿ ಖಾನ್ : mahinnak@ccamp.res.in)

 

****


(Release ID: 1614269) Visitor Counter : 305