ನೀತಿ ಆಯೋಗ

ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ ಮತ್ತು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಜಂಟಿಯಾಗಿ ಎಟಿಎಲ್ ಶಾಲೆಗಳಲ್ಲಿ ಕೊಲಾಬ್‌ಕ್ಯಾಡ್ ಪ್ರಾರಂಭಿಸಿವೆ

Posted On: 13 APR 2020 3:56PM by PIB Bengaluru

ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ ಮತ್ತು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಜಂಟಿಯಾಗಿ ಎಟಿಎಲ್ ಶಾಲೆಗಳಲ್ಲಿ ಕೊಲಾಬ್‌ಕ್ಯಾಡ್ ಪ್ರಾರಂಭಿಸಿವೆ

ಕೊಲಾಬ್‌ಕ್ಯಾಡ್ ವಿದ್ಯಾರ್ಥಿಗಳಿಗೆ 3ಡಿ ಕಂಪ್ಯೂಟರ್ ನೆರವಿನ ವಿನ್ಯಾಸಗಳನ್ನು ರಚಿಸಲು ಅನುಕೂಲ ಮಾಡಿಕೊಡುತ್ತದೆ

 

ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ್ ಮತ್ತು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ) ಇಂದು ಜಂಟಿಯಾಗಿ ಕೊಲಾಬ್‌ಕ್ಯಾಡ್ - ಸಹಯೋಗಿ ನೆಟ್ವರ್ಕ್, ಕಂಪ್ಯೂಟರ್ ಎನೇಬಲ್ಡ್ ಸಾಫ್ಟ್ವೇರ್ ಸಿಸ್ಟಮ್ ಅನ್ನು ಪ್ರಾರಂಭಿಸಿದ್ದು, ಇದು 2 ಡಿ ಡ್ರಾಫ್ಟಿಂಗ್ ಹಾಗು ಡಿಟೇಲಿಂಗ್ 3 ಡಿ ಉತ್ಪನ್ನ ವಿನ್ಯಾಸಕ್ಕೆ ಒಟ್ಟು ಎಂಜಿನಿಯರಿಂಗ್ ಪರಿಹಾರವನ್ನು ಒದಗಿಸುತ್ತದೆ.

ಸೃಜನಶೀಲತೆ ಮತ್ತು ಮುಕ್ತ ಕಲ್ಪನೆಯೊಂದಿಗೆ 3 ಡಿ ವಿನ್ಯಾಸಗಳನ್ನು ರಚಿಸಲು ಮತ್ತು ಮಾರ್ಪಡಿಸಲು ದೇಶಾದ್ಯಂತದ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಈ ತಂತ್ರಾಂಶವು ವಿದ್ಯಾರ್ಥಿಗಳಿಗೆ ಸಂಕೀರ್ಣ ವ್ಯವಸ್ಥೆಯಲ್ಲಿ ಡೇಟಾವನ್ನು ರಚಿಸಲು ಮತ್ತು ಏಕಕಾಲದಲ್ಲಿ ಶೇಖರಣಾ ಮತ್ತು ದೃಶ್ಯೀಕರಣಕ್ಕಾಗಿ ಒಂದೇ ವಿನ್ಯಾಸದ ಡೇಟಾವನ್ನು ಹೊಂದಲು ಸಹಕಾರಿಯಾಗುತ್ತದೆ.

ಭಾರತದಾದ್ಯಂತ ಸ್ಥಾಪಿಸಲಾದ ಎಟಿಎಲ್ ಗಳು, ಮಕ್ಕಳಿಗೆ ಅವರ ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಅಭಿವೃದ್ಧಿಗೊಳಿಸುವ ವಾತಾವರಣವನ್ನು (ಟಿಂಕರಿಂಗ್ ಸ್ಪೇಸ್) ಕಲ್ಪಿಸುತ್ತದೆ.  ಎನ್ಐಸಿಯ ಕೊಲಾಬ್‌ಕ್ಯಾಡ್, ಎಐಎಂ ಸಹಯೋಗವು 3ಡಿ ಮಾಡೆಲಿಂಗ್/ ಸ್ಲೈಸಿಂಗ್ಗಾಗಿ 3 ಡಿ ಮುದ್ರಣವನ್ನು ಬಳಸಲು ಸ್ಥಳೀಯ, ಅತ್ಯಾಧುನಿಕವಾದ ಭಾರತದಲ್ಲಿ ತಯಾರಿಸಿದ ತಂತ್ರಾಂಶವನ್ನು ವಿದ್ಯಾರ್ಥಿಗಳಿಗೆ ಬಳಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ.

ಎಟಿಎಲ್ ಳಿಗಾಗಿ ಕೊಲಾಬ್‌ಕ್ಯಾಡ್ ಕಸ್ಟಮೈಸ್ ಮಾಡಿದ ಆವೃತ್ತಿಯು ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಭೌತಿಕ ಪರಿಹಾರಗಳಾಗಿ ರೂಪಿಸಲು ಹೆಚ್ಚು ಪ್ರಸ್ತುತವಾದ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ವಿನ್ಯಾಸವನ್ನು ನಿರ್ಬಂಧಗಳಿಲ್ಲದೆ ಸಕ್ರಿಯಗೊಳಿಸಲು ಅಭಿವೃದ್ಧಿಪಡಿಸಲಾಗಿದೆಹೀಗಾಗಿ ಸೃಜನಶೀಲತೆ ಮತ್ತು ನಾವೀನ್ಯತೆ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ.

ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗ ದ ಮಿಷನ್ ನಿರ್ದೇಶಕರಾದ ಶ್ರೀ ಆರ್ ರಮಣನ್ ಅವರು ಕೊಲಾಬ್ಕ್ಯಾಡ್ ಅನ್ನು ಆನ್ಲೈನ್ನಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುವಾಗ ಮಾತನಾಡಿ, 3 ಡಿ ಮುದ್ರಣವು 21ನೇ ಶತಮಾನದ ಹೊಸ ಆವಿಷ್ಕಾರಗಳ ಅವಿಭಾಜ್ಯ ಅಂಗವಾಗಲಿದೆ ಮತ್ತು 2.5 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತಹ ಎಐಎಂ, ನೀತಿ ಆಯೋಗವು  5000 ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ಕೊಲಾಬ್ಕ್ಯಾಡ್ ಮೂಲಕ ವಿನ್ಯಾಸವನ್ನು ಸಕ್ರಿಯಗೊಳಿಸಿದ್ದಕ್ಕೆ ಹೆಮ್ಮೆಪಡುತ್ತದೆ. 

"ಕೊಲಾಬ್‌ಕ್ಯಾಡ್ ವಿನ್ಯಾಸ ಮಾಡ್ಯೂಲ್ ಎಂಬ ಮತ್ತೊಂದು ಪ್ರಮುಖ ಮಾಡ್ಯೂಲ್ ಅನ್ನು ಬಿಡುಗಡೆ ಮಾಡುವುದನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಇದೊಂದು ಅದ್ಭುತ ಸಾಫ್ಟ್ವೇರ್ ಕ್ಯಾಡ್  ವ್ಯವಸ್ಥೆಯಾಗಿದ್ದು, ಇದು ವಿದ್ಯಾರ್ಥಿಗಳಿಗೆ ಅಸಂಖ್ಯಾತ 3ಡಿ ವಿನ್ಯಾಸಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.  ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ಕಲ್ಪನೆಗೆ ಸ್ವಾತಂತ್ರ್ಯವನ್ನು ನೀಡುವುದನ್ನು ಮತ್ತು ಮನೆಯಿಂದ  ಮತ್ತು ಶಾಲೆಗಳು ತೆರೆದಾಗ ಅವರ ಎಟಿಎಲ್ ಲ್ಯಾಬ್ಗಳಲ್ಲಿ ಟಿಂಕರ್ ಮಾಡುವಾಗ ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಆವಿಷ್ಕಾರಗಳನ್ನು ಸೃಷ್ಟಿಸುವುದನ್ನು  ನಾನು ಬಯಸುತ್ತೇನೆಎಂದು ಅವರು ಹೇಳಿದರು.

ಈ ಸಾಫ್ಟ್ವೇರ್ ಕ್ಯಾಡ್ ವ್ಯವಸ್ಥೆಯ ಮೂಲಕ ದತ್ತಾಂಶದ ಒಂದು ದೊಡ್ಡ ಮೂಲವನ್ನು ಒದಗಿಸುವ ಮೂಲಕ ಆನ್ಲೈನ್ ಮಾಡ್ಯೂಲ್ ಅನ್ನು ದೇಶದಾದ್ಯಂತದ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಎನ್ಐಸಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಡೈರೆಕ್ಟರ್ ಜನರಲ್ ಎನ್ಐಸಿ ಡಾ. ನೀತಾ ವರ್ಮಾರವರು ಮಾತನಾಡಿಭಾರತದಲ್ಲಿ ತಯಾರಾದ 3 ಡಿ ಉತ್ಪನ್ನ ಕೊಲಾಬ್ಕ್ಯಾಡ್ನಲ್ಲಿ ಈ ತಯಾರಿಕೆಯನ್ನು ಹಂಚಿಕೊಳ್ಳಲು ಎನ್ಐಸಿ ಗೆ ಸಂತೋಷವಾಗಿದೆ, ಇದನ್ನು ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಸ್ಥಾಪಿಸಿದ ಸುಮಾರು 5000 ಶಾಲೆಗಳು ಬಳಸಲಿವೆ ಎಂದು ಹೇಳಿದರು.

"ಇದು ಸ್ಥಳೀಯ ಮೂರು ಆಯಾಮದ ಕಂಪ್ಯೂಟರ್ ನೆರವಿನಿಂದಾದ ವಿನ್ಯಾಸ ವ್ಯವಸ್ಥೆಯಾಗಿದ್ದು, ಇದು ವರ್ಚುವಲ್ 3 ಡಿ ವಾತಾವರಣದಲ್ಲಿ ಮಾದರಿಗಳನ್ನು ನಿರ್ಮಿಸಲು ಮತ್ತು ಶಾಪ್ ಫ್ಲೋರ್ ಗಳಲ್ಲಿ  ಎಂಜಿನಿಯರಿಂಗ್ ರೇಖಾಚಿತ್ರಗಳನ್ನು ರಚಿಸಲು ಮತ್ತು ಬಳಸಲು ಸಹಾಯ ಮಾಡುತ್ತದೆ, ಉತ್ತಮವಾದ ಉತ್ಪಾದನೆಗಾಗಿ ಒಂದು ಸಂಪೂರ್ಣ ಪ್ಯಾಕೇಜ್ ಆಗುತ್ತದೆ. ವಿದ್ಯಾರ್ಥಿಗಳಿಗಾಗಿ ಇದನ್ನು ಪ್ರಾರಂಭಿಸಲು ಎಐಎಂ, ನೀತಿ ಆಯೋಗ್ ಸಹಯೋಗದೊಂದಿಗೆ ನಾವು ಬಹಳ ಹೆಮ್ಮೆ ಪಡುತ್ತೇವೆ,” ಎಂದು ಅವರು ಹೇಳಿದರು.

ಇದಲ್ಲದೆ, ಪ್ರಸ್ತುತ ಪರಿಸ್ಥಿತಿಯಲ್ಲಿ, ಎಟಿಎಲ್ ಕಾರ್ಯಕ್ರಮವು ತಮ್ಮನ್ನು ತಾವೇ  ಫಲಪ್ರದವಾಗಿ ತೊಡಗಿಸಿಕೊಂಡಿರಲು ದೇಶಾದ್ಯಂತದ ಮಕ್ಕಳಿಗೆ ಸುಲಭವಾಗಿ ಕಲಿಯಲು ಆನ್ಲೈನ್ ಸಂಪನ್ಮೂಲಗಳು ಸುಲಭವಾಗಿ ಲಭ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮನೆಯಿಂದ ಟಿಂಕರ್ಅಭಿಯಾನವನ್ನು ಪ್ರಾರಂಭಿಸಿದೆ.  ಖುದ್ದು ಪ್ರಾರಂಭಿಸುವ ಮೂಲಕ ಕಲಿಕೆಯನ್ನು ಪ್ರೋತ್ಸಾಹಿಸಿ  ಮಕ್ಕಳನ್ನು ಸೃಜನಶೀಲತೆ ಮತ್ತು ನವೀನತೆಗಾಗಿ ಸಜ್ಜುಗೊಳಿಸುವುದು   ಉಪಕ್ರಮದ ಉದ್ದೇಶವಾಗಿದೆ.

ಎಐಎಂ ಸಂಸ್ಥೆಯು ಡೆಲ್ ಟೆಕ್ನಾಲಜೀಸ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ನ ಸಹಭಾಗಿತ್ವದಲ್ಲಿ ಗೇಮ್ ಡೆವಲಪ್ಮೆಂಟ್ ಮಾಡ್ಯೂಲ್ ಅನ್ನು ಸಹ ಪ್ರಾರಂಭಿಸಿದೆ.  ಇದು ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು, ವಿದ್ಯಾರ್ಥಿಗಳು ಮನೆಯಿಂದ ಟಿಂಕರ್ ಮಾಡುವಾಗ ತಮ್ಮ ಕಲಿಕೆಯ ಪ್ರಯಾಣವನ್ನು ಪ್ರಾರಂಭಿಸಬಹುದು. ಈ ವೇದಿಕೆಯ ಮೂಲಕ ಅವರು ತಮ್ಮದೇ ಆದ ಆಟಗಳನ್ನು ರಚಿಸಲು ಕಲಿಯಬಹುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಈ ಪ್ಲಾಟ್ಫಾರ್ಮ್ ವಿದ್ಯಾರ್ಥಿಗಳನ್ನು ಗೇಮ್ ಪ್ಲೇಯರ್ಸ್ ನಿಂದ ಗೇಮ್ ಮೇಕರ್ಸ್’ ’ ಗೆ ಪರಿವರ್ತಿಸಲು ಉದ್ದೇಶಿಸಿದೆ.

ಅದೇ ರೀತಿ, ‘ಟಿಂಕರ್ ಫ್ರಮ್ ಹೋಮ್ಅಭಿಯಾನದ ಭಾಗವಾಗಿ ಕೊಲಾಬ್‌ಕ್ಯಾಡ್ ಮತ್ತು ಗೇಮಿಂಗ್ ಮಾಡ್ಯೂಲ್ ಅನ್ನು ಪ್ರಾರಂಭಿಸುವ ಮೂಲಕ, ಯುವ ವಿದ್ಯಾರ್ಥಿಗಳಿಗೆ ತಮ್ಮ ಮನೆಗಳ ಸುರಕ್ಷಿತ ಸ್ಥಳದಿಂದ ರಾಷ್ಟ್ರ ನಿರ್ಮಾಣದ ಪ್ರಯಾಣವನ್ನು ಕಲಿಯಲು ಮತ್ತು ಕೊಡುಗೆ ನೀಡಲು ಪ್ರೋತ್ಸಾಹಿಸಲಾಗುತ್ತದೆ.

ಎಐಎಂ ಬಗ್ಗೆ

ನೀತಿ ಆಯೋಗ ಅಟಲ್ ಇನ್ನೋವೇಶನ್ ಮಿಷನ್ ನವೀನತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುವ ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ.  ಶಾಲಾ ಮಟ್ಟದಲ್ಲಿ, ಎಐಎಂ ಭಾರತದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಎಟಿಎಲ್ ಗಳನ್ನು ಸ್ಥಾಪಿಸುತ್ತಿದೆ. ಪ್ರಸ್ತುತ, ಎಐಎಂ ಸಂಸ್ಥೆಯು ಎಟಿಎಲ್ ಸ್ಥಾಪನೆಗಾಗಿ ದೇಶಾದ್ಯಂತ  33 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 14,916 ಶಾಲೆಗಳನ್ನು ಆಯ್ಕೆ ಮಾಡಿದೆ.

***



(Release ID: 1614085) Visitor Counter : 440