ಗ್ರಾಮೀಣಾಭಿವೃದ್ಧಿ ಸಚಿವಾಲಯ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸ್ವಸಹಾಯ ಮಹಿಳೆಯರು ಗುಂಪು ನಡೆಸುವ ಸಮುದಾಯ ಅಡಿಗೆಮನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಬಡವರಿಗೆ ಮತ್ತು ದುರ್ಬಲರಿಗೆ ಆಹಾರವನ್ನು ಒದಗಿಸುತ್ತಿವೆ

Posted On: 13 APR 2020 1:11PM by PIB Bengaluru

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸ್ವಸಹಾಯ ಮಹಿಳೆಯರು ಗುಂಪು ನಡೆಸುವ ಸಮುದಾಯ ಅಡಿಗೆಮನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಬಡವರಿಗೆ ಮತ್ತು ದುರ್ಬಲರಿಗೆ ಆಹಾರವನ್ನು ಒದಗಿಸುತ್ತಿವೆ

ಅಗತ್ಯ ಸೇವೆಗಳ ನಿರಂತರ  ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಸ್ವಸಹಾಯ ಗುಂಪುಗಳು ವಿವಿಧ ಉಪಕ್ರಮಗಳೊಂದಿಗೆ ಕಾರ್ಯನಿರ್ವಹಿಸಿವೆ; ಮಕ್ಕಳು, ಯುವಜನರು ಮತ್ತು ತಾಯಿಯಂದಿರ ಆರೋಗ್ಯ ಮತ್ತು ಪೌಷ್ಠಿಕಾಂಶ ಸಂಬಂಧಿತ ವಸ್ತುಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡುತ್ತಿವೆ

 

ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗವು ರಾಷ್ಟ್ರೀಯ ಲಾಕ್‌ಡೌನ್‌ಗೆ ಕಾರಣವಾಗಿದೆ, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ  ಹಿಂದೆಂದೂ ಕಾಣದಂತಹ ಸಾಂಕ್ರಾಮಿಕ ರೋಗ  ಮತ್ತು ಲಾಕ್‌ಡೌನ್‌ನಿಂದ ಹೆಚ್ಚು ಹಾನಿಗೊಳಗಾದವರು ದೈನಂದಿನ ಕೂಲಿ ಕಾರ್ಮಿಕರು, ವಲಸಿಗರು, ಮನೆಯಿಲ್ಲದವರು, ಬಡವರು ಮತ್ತು  ಖಾಯಂ ವಾಸಸ್ಥಳವಿಲ್ಲದ ಜನಸಂಖ್ಯೆಯಲ್ಲಿ ಗುರುತಿಸಿಕೊಳ್ಳುವ ಅನೇಕರು.  ಸಮುದಾಯದ ಅಡಿಗೆಮನೆಗಳು ಅಗತ್ಯವಿರುವವರಿಗೆ ಆಹಾರಕ್ಕಾಗಿ ವಾಸ್ತವಿಕ ಪರಿಹಾರವಾಗಿ ಹೊರಹೊಮ್ಮಿವೆ. ಸಮುದಾಯ ಅಡುಗೆಮನೆಯ ಹಿಂದಿನ ಮುಖ್ಯ ಉದ್ದೇಶವೇನೆಂದರೆ ಅಗ್ಗದ ಮತ್ತು ಪೌಷ್ಟಿಕವಾದ  ಆಹಾರವನ್ನು ಅದನ್ನು ಕೊಳ್ಳಲು ಸಾಧ್ಯವಾಗದ ಜನರಿಗೆ ಉಚಿತವಾಗಿ ನೀಡುವುದು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಸಹಾಯ ಗುಂಪು (ಎಸ್‌ಎಚ್‌ಜಿ)ಗಳ  ಜಾಲ ಮತ್ತು ಸ್ಥಳೀಯ ಸ್ವ-ಆಡಳಿತಗಳೊಂದಿಗಿನ ಸಂಪರ್ಕವು ಸಮುದಾಯ ಅಡಿಗೆಮನೆ/ ದೀದಿ ಕೆಫೆಗಳ ಕಾರ್ಯಾಚರಣೆಯನ್ನು ಅವರಿಗೆ ನಿಯೋಜಿಸುವಲ್ಲಿ ಪ್ರಮುಖ ಅಂಶಗಳಾಗಿವೆ.  ಬಿಹಾರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ ಮತ್ತು ಒಡಿಶಾದ ಐದು ರಾಜ್ಯಗಳಲ್ಲಿ 10,000 ಸಮುದಾಯ ಅಡಿಗೆಮನೆಗಳನ್ನು ಸ್ಥಾಪಿಸಲಾಗಿದೆ.  75 ವಿವಿಧ ಜಿಲ್ಲೆಗಳಲ್ಲಿ ಹರಡಿರುವ ಈ ಅಡಿಗೆಮನೆಗಳು ದುರ್ಬಲ ಮತ್ತು ನಿರ್ಗತಿಕರಾದ ಸುಮಾರು 70,000 ವ್ಯಕ್ತಿಗಳಿಗೆ ದಿನಕ್ಕೆ ಎರಡು ಬಾರಿ ಊಟ ನೀಡುತ್ತಿವೆ. ಇತರ ರಾಜ್ಯಗಳು ಸಹ ಇಂತಹ ಉಪಕ್ರಮಗಳನ್ನು ನಡೆಸುತ್ತಿವೆ.

ಕೇರಳವು ಹೆಚ್ಚಿನ ಸಂಖ್ಯೆಯ ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ.  ಸ್ಥಳೀಯ ಆಡಳಿತಗಳ ಸಹಯೋಗದೊಂದಿಗೆ ಸ್ವಸಹಾಯ ಸಂಘ ಕುಡುಂಬಶ್ರೀಯು  ಸ್ಥಳೀಯ ಸಂಸ್ಥೆಗಳಲ್ಲಿ ಸಮುದಾಯ ಅಡಿಗೆಮನೆಗಳನ್ನು ನಡೆಸುತ್ತಿದೆ, ಅಲ್ಲಿ ವಲಸೆ ಕಾರ್ಮಿಕರು ಮತ್ತು ಬಡತನದಿಂದ ಬಳಲುತ್ತಿರುವ ಕುಟುಂಬಗಳಿವೆ. ಸ್ವಸಹಾಯ ಸಂಘವು ವಿನ್ಯಾಸಗೊಳಿಸಿದ ಮೂಲ ಆಹಾರ ಮೆನು ಮುಖ್ಯವಾಗಿ ಘೀ ರೈಸ್ ಮತ್ತು ಕೋಳಿ ಸಾರು ಆಗಿರುತ್ತದೆ. ಆಹಾರವನ್ನು ತಯಾರಿಸಿದ ನಂತರ ಈ ಸಮುದಾಯ ಅಡಿಗೆಮನೆಗಳು ಅವುಗಳನ್ನು ಸಣ್ಣ ಪ್ಯಾಕೆಟ್ ಗಳಲ್ಲಿ ಪ್ಯಾಕ್ ಮಾಡಿ ಗ್ರಾಮೀಣ ಸಮುದಾಯಗಳಿಗೆ ಕಳುಹಿಸುತ್ತವೆ.  ಈ ಸಣ್ಣ ಪ್ಯಾಕೇಟುಗಳು ಮನೆಯ ಸಂಪರ್ಕತಡೆಯಲ್ಲಿರುವ  (ಹೋಮ್ ಕ್ವಾರಂಟೈನ್) ಬಹಳಷ್ಟು ಜನರಿಗೆ ಪೌಷ್ಠಿಕ ಆಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.

ತ್ರಿಪುರದಲ್ಲಿ, ಅಡುಗೆ ವ್ಯವಹಾರ ಅಥವಾ ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವ ಯಾವುದೇ ಅನುಭವವನ್ನು ಹೊಂದಿರುವ ಸ್ವಸಹಾಯ ಸಂಘಗಳಿಗೆ ತ್ರಿಪುರ ಸರ್ಕಾರವು ಅಡುಗೆ ಒಪ್ಪಂದಗಳನ್ನು ನೀಡಿದೆ. ಅರುಣಾಚಲ ಪ್ರದೇಶದ ಸ್ವಸಹಾಯ ಸಂಘದ ಮಹಿಳೆಯರು ಆಡಳಿತಕ್ಕೆ ನಗದು ಮೊತ್ತವನ್ನು ನೀಡಿದ್ದಾರೆ ಮತ್ತು ಕೋವಿಡ್-19 ಕರ್ತವ್ಯದಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಗೆ ಬೆಳಗಿನ ತಿಂಡಿ, ಊಟ, ಚಹಾ ಮತ್ತು ಉಪಹಾರಗಳನ್ನು ನೀಡುತ್ತಿದ್ದಾರೆ ಮತ್ತು ಅವರಿಗೆ ಉಚಿತವಾಗಿ ಹೊಲಿದ ಮುಖಗವಸುಗಳು, ಅಕ್ಕಿ ಮತ್ತು ತರಕಾರಿ ಇತ್ಯಾದಿಗಳನ್ನು ಒದಗಿಸುತ್ತಿದ್ದಾರೆ.

ಒಡಿಶಾದಲ್ಲಿ, 6 ಲಕ್ಷ ಮಿಷನ್ ಶಕ್ತಿ ಸ್ವಸಹಾಯ ಸಂಘಗಳ ಸುಮಾರು 70 ಲಕ್ಷ ಮಹಿಳಾ ಸದಸ್ಯರು ಒಟ್ಟಾಗಿ ಕೆಲಸ ಮಾಡುತ್ತಿದ್ದು, ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಮತ್ತು ಸಮುದಾಯದ ಅಡುಗೆಮನೆಯಿಂದ ಒಣ ಪಡಿತರ, ದಿನಸಿ ಮತ್ತು ಬೇಯಿಸಿದ ಆಹಾರದಂತಹ ಮೂಲಭೂತ ಅವಶ್ಯಕತೆಗಳನ್ನು ಒದಗಿಸುತ್ತಿದ್ದಾರೆ. ಮಿಷನ್ ಶಕ್ತಿಯ ಅಡಿಯಲ್ಲಿ ಸಮುದಾಯ ಅಡಿಗೆಮನೆಗಳ ಮೂಲಕ ಸುಮಾರು 45,000 ಜನರಿಗೆ ಆಹಾರವನ್ನು ನೀಡಲಾಗುತ್ತಿದೆ.

ಜಾರ್ಖಂಡ್ ನಲ್ಲಿ   ಮುಖ್ಯಮಂತ್ರಿ ದೀದಿ ಕಿಚನ್ (ಎಂಎಂಡಿಕೆ) ಅನ್ನು ಪ್ರಾರಂಭಿಸಿದ್ದು  ಇವುಗಳು ಅತ್ಯಂತ ನಿರ್ಗತಿಕ, ವಿಶೇಷ ಚೇತನದ ಮಕ್ಕಳಿಗೆ ಮತ್ತು ಹಳ್ಳಿಗಳಲ್ಲಿನ ಅತ್ಯಂತ ಬಡ ಕುಟುಂಬಗಳಿಗೆ ಉಚಿತ ಆಹಾರವನ್ನು ಒದಗಿಸುವುದಕ್ಕಾಗಿ ಪ್ರಾರಂಭವಾಗಿವೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 4185 ಸಮುದಾಯ ಅಡಿಗೆಮನೆಗಳನ್ನು ಅನೇಕ ಪಂಚಾಯಿತಿಗಳಲ್ಲಿ ನಡೆಸಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ, ಸ್ವಸಹಾಯ ಗಂಪಿನ ಜಾಲಗಳು ತಮ್ಮ ಅಗತ್ಯಗಳನ್ನು ಪರಿಹರಿಸಲು  ಎಲ್ಲೂ ಹೋಗಲಾಗದೆ ಅಲ್ಲಿಯೇ ಉಳಿದುಕೊಂಡಿರುವ ವಲಸೆ ಕಾರ್ಮಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ.

ಲಾಕ್‌ಡೌನ್ ನಡುವೆ ಸ್ವಸಹಾಯ ಗುಂಪಿನ ಮಹಿಳೆಯರು ಅಗತ್ಯ ಪೌಷ್ಠಿಕ ಆಹಾರ ಮತ್ತು ಆರೋಗ್ಯ ಸೇವೆಗಳು ದೊರಕುವುದನ್ನು ಖಚಿತಪಡಿಸುತ್ತಾರೆ.

ಮನೆಯಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಿ” ("ಸ್ಟೇ ಹೋಮ್ ಮತ್ತು ಸ್ಟೇ ಸೇಫ್")  ಸಹ ಮನೆಯವರು ತಮ್ಮ ಮನೆ ಬಾಗಿಲಿಗೆ ಅಥವಾ ಅವರಿಗೆ ಹತ್ತಿರದಲ್ಲಿಯೇ ಅಗತ್ಯ ಸರಕು ಮತ್ತು ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದನ್ನು ಗುರುತಿಸಿ, ದೇಶಾದ್ಯಂತದ ಸ್ವಸಹಾಯ ಗುಂಪುಗಳು ಈ ಅಗತ್ಯ ಸೇವೆಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಖಡ್ಡಾಯವಾದ ಸಾಮಾಜಿಕ ಅಂತರದೊಂದಿಗೆ ವಿವಿಧ ಉಪಕ್ರಮಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ತಿನ್ನಲು ಸಿದ್ಧವಾದ  ಪಡಿತರ ಮತ್ತು ಒಣ ಪಡಿತರ ಮತ್ತು ತಾಜಾ ತರಕಾರಿಗಳ ಮನೆ ಬಾಗಿಲಿಗೆ ವಿತರಣೆ, ಜೊತೆಗೆ ಮುಟ್ಟಿನ ನೈರ್ಮಲ್ಯದ  ವಸ್ತುಗಳು ಸೇರಿವೆ. ಎನ್‌ಆರ್‌ಎಲ್‌ಎಂ ಅಜೀವಿಕಾ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆ (ಎಜಿಇಇ) ಅಡಿಯಲ್ಲಿ ಬೆಂಬಲಿ ಪಡೆದುಕೊಂಡ ಎಲೆಕ್ಟ್ರಿಕ್ ವಾಹನಗಳು ಮತ್ತು ಇತರ ರೀತಿಯ ವಾಹನಗಳನ್ನು ಈ ಕಾರ್ಯಕ್ಕಾಗಿ ವಿವಿಧ ರಾಜ್ಯಗಳಲ್ಲಿ ಬಳಸಲಾಗುತ್ತಿದೆ. ವೆಜಿಟೇಬಲ್ಸ್ ಆನ್ ವೀಲ್ಸ್”, “ಫ್ಲೋಟಿಂಗ್ ಸೂಪರ್ಮಾರ್ಕೆಟ್ಗಳ ಪರಿಕಲ್ಪನೆಯು ಬಿಕ್ಕಟ್ಟಿನ ಸಮಯದಲ್ಲಿ ಸ್ವಸಹಾಯ ಸಂಘ ದೀದಿಯ ಪರಿಹಾರವಾಗಿದೆ. ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಮಹಿಳೆಯರು ಟೇಕ್ ಹೋಮ್ ರೇಷನ್ ಜೊತೆಗೆ ಮೊಟ್ಟೆಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಅವರು ಐದು ವರ್ಷದೊಳಗಿನ ಎಲ್ಲ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಅಗತ್ಯವಿರುವ ಗುಂಪುಗಳನ್ನು ಸಹ ತಲುಪುತ್ತಿದ್ದಾರೆ.

ಪಡಿತರ ಅಂಗಡಿಗಳ ವ್ಯವಸ್ಥೆಯ (ಪಿಡಿಎಸ್) ಅಂಗಡಿಗಳ ಜನಸಂದಣಿಯನ್ನು ತಡೆಗಟ್ಟಲು ಕಾರ್ಡ್‌ಗಳನ್ನು ಬಳಸಿಕೊಂಡು ಪಡಿತರ ಸರಬರಾಜನ್ನು ಸಂಗ್ರಹಿಸಿ ಕಾರ್ಡ್‌ದಾರರಿಗೆ ವಿತರಿಸುವ ಮೂಲಕ ಸ್ವಸಹಾಯ ಸಂಘ ಸದಸ್ಯರು ಪಿಡಿಎಸ್ ಪೂರೈಕೆಯನ್ನು ಬೆಂಬಲಿಸುತ್ತಿದ್ದಾರೆ. ಸಮುದಾಯದ ಅತ್ಯಂತ ಬಡ ಮತ್ತು ದುರ್ಬಲರಿಗೆ ಬೆಂಬಲವನ್ನು ಒದಗಿಸಲು ಸಮುದಾಯ ಸಂಸ್ಥೆಗಳಿಗೆ ದುರ್ಬಲತೆ ಕಡಿತ ನಿಧಿಯನ್ನು (ವಿಆರ್ ಎಫ್) ಎನ್ಆರ್ ಎಲ್ ಎಂ ಒದಗಿಸುತ್ತದೆ.  ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ಮೆಘಾಲಯ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ ಮತ್ತು ಸಿಕ್ಕಿಂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿನ ಸಮುದಾಯ ಸಂಸ್ಥೆಗಳು ವಿಆರ್‌ಎಫ್ ಅನ್ನು ವಿವಿಧ ಅಗತ್ಯವಾದ ಅಡುಗೆ ಎಣ್ಣೆ ಮತ್ತು ಆಹಾರ ಕಿಟ್‌ಗಳನ್ನು ತಯಾರಿಸಲು , ಹಳ್ಳಿಗಳ ಅತ್ಯಂತ ದುರ್ಬಲ ಮನೆಗಳಿಗೆ ಬಟ್ಟೆ ಸಾಬೂನು  ಮತ್ತು ವೈಯಕ್ತಿಕ ನೈರ್ಮಲ್ಯ ಉತ್ಪನ್ನಗಳಿಗಾಗಿ .ಬಳಸಿಕೊಂಡಿವೆ. ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ, ಸ್ವಸಹಾಯ ಸಂಘಗಳು ಹದಿಹರೆಯದ ಬಾಲಕಿಯರಿಗೆ ಸಾಕಷ್ಟು ಕ್ಲೀನ್ ಪ್ಯಾಡ್‌ಗಳಿಗೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ದುರ್ಬಲತೆ ಕಡಿತ ನಿಧಿಯನ್ನು (ವಿಆರ್‌ಎಫ್) ಬಳಸಿಕೊಂಡಿವೆ.

ಬಿಹಾರ, ಒಡಿಶಾ ಮತ್ತು ಛತ್ತೀಸ್‌ಗಢದ ಎಸ್‌ಆರ್‌ಎಲ್‌ಎಂಗಳ ಮಹಿಳಾ ಸಂಘಗಳು, ಅಗತ್ಯ ಮಕ್ಕಳ, ತಾಯಿಯ ಮತ್ತು ಯುವಜನತೆಯ ಆರೋಗ್ಯ ಮತ್ತು ಪೋಷಣೆಗೆ ಸಂಬಂಧಿಸಿದ ವಸ್ತುಗಳನ್ನು ತಲುಪಿಸುವಲ್ಲಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡುತ್ತಿವೆ. ಇದು ಪ್ರಸವ ಪೂರ್ವ ಮತ್ತು ಪ್ರಸವ ನಂತರದ  ಸೇವೆಗಳು ಮತ್ತು ಐಎಫ್‌ಎ ಟ್ಯಾಬ್ಲೆಟ್‌ಗಳ ಮೂಲಕ ಸೂಕ್ಷ್ಮ ಪೋಷಕಾಂಶಗಳ ಪೂರಕವನ್ನು ಸಹ ಒಳಗೊಂಡಿದೆ. ಈ ರಾಜ್ಯಗಳ 2118 ಸ್ವಸಹಾಯ ಗುಂಪುಗಳ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವ 4310 ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರನ್ನು ತಲುಪಿದ್ದಾರೆ.

ಆಯಾ ಸಮುದಾಯಗಳಲ್ಲಿ ಸುರಕ್ಷಿತ ನೈರ್ಮಲ್ಯ ಪದ್ಧತಿಗಳನ್ನು ಉತ್ತೇಜಿಸುವಲ್ಲಿ ಸಾಮಾಜಿಕವಾಗಿ ಸ್ಪಂದಿಸುವ ಕೊಡುಗೆಗಳ ಮೂಲಕ ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳುತ್ತಾ, ಈ ಮಹಿಳೆಯರು ಕೋವಿಡ್-19  ಸಾಂಕ್ರಾಮಿಕದ  ವಿರುದ್ಧ  ಅತ್ಯಂತ ಸಮರ್ಪಣಾಭಾವ ಮತ್ತು ನಿಷ್ಠೆಯಿಂದ ಹೋರಾಡುತ್ತಿದ್ದಾರೆ.

 

***



(Release ID: 1614055) Visitor Counter : 390