ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಡಲು ಅಸ್ಸಾಂ ಗ್ರಾಮೀಣ ಮಹಿಳೆಯರಿಂದ ಹ್ಯಾಂಡ್ ಸ್ಯಾನಿಟೈಜರ್, ಮುಖಗವಸುಗಳ ತಯಾರಿಕೆ

Posted On: 13 APR 2020 11:16AM by PIB Bengaluru

ಕೋವಿಡ್-19 ವಿರುದ್ಧ ಹೋರಾಡಲು ಅಸ್ಸಾಂ ಗ್ರಾಮೀಣ ಮಹಿಳೆಯರಿಂದ ಹ್ಯಾಂಡ್ ಸ್ಯಾನಿಟೈಜರ್, ಮುಖಗವಸುಗಳ ತಯಾರಿಕೆ

 

ಸಿಎಸ್ಐಆರ್-ಈಶಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಜೋರ್ಹಾತ್ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ SEED ವಿಭಾಗದಿಂದ ಬೆಂಬಲಿತವಾದ ಗ್ರಾಮೀಣ ಮಹಿಳಾ ತಂತ್ರಜ್ಞಾನ ಪಾರ್ಕ್ (ಆರ್ಡಬ್ಲ್ಯೂಟಿಪಿ), ಗ್ರಾಮೀಣ ಮಹಿಳೆಯರನ್ನು ಹ್ಯಾಂಡ್ ಸ್ಯಾನಿಟೈಜರ್, ಮುಖಗವಸು ಮತ್ತು ದ್ರವರೂಪದ ಸೋಂಕುನಿವಾರಕವನ್ನುತಯಾರಿಸಲು ತೊಡಗಿಸಿದೆ. ಉತ್ಪನ್ನಗಳನ್ನು ಪ್ರದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಹತ್ತಿರದ ಹಳ್ಳಿಗಳ ಬಡ ಜನರಿಗೆ ಉಚಿತವಾಗಿ ವಿತರಿಸಲಾಗುವುದು,

"ಕೋವಿಡ್-19 ರಂತಹ ಸವಾಲನ್ನು ಎದುರಿಸಲು ಬಲವಾದ ಸಮುದಾಯದ ಭಾಗವಹಿಸುವಿಕೆ ಮತ್ತು ಬೆಂಬಲ ಬೇಕು. ಜಾಗೃತಿ ಮೂಡಿಸುವುದು, ಸಂಬಂಧಿತ ಪರಿಹಾರಗಳನ್ನು ಪರಿಚಯಿಸುವುದು, ಮುಖಗವಸುಗಳು ಮತ್ತು ಸೋಂಕುನಿವಾರಕಗಳಂತಹ ಕಡಿಮೆ ತಂತ್ರಜ್ಞಾನದ ವಸ್ತುಗಳನ್ನು ತಯಾರಿಸಲು ಮತ್ತು ವಿತರಿಸಲು ಸ್ವ-ಸಹಾಯ ಗುಂಪುಗಳು ಮತ್ತು ಸಮರ್ಪಿತ ಎನ್ಜಿಒಗಳು ಪ್ರಸ್ತುತ ಸನ್ನಿವೇಶದಲ್ಲಿ ಪರಿಪೂರ್ಣ ವಾಹಕಗಳಾಗಿವೆ " ಎಂದು ಡಿ ಎಸ್ ಟಿ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳಿದ್ದಾರೆ.

ಜೋರ್ಹಾತ್ ಗ್ರಾಮೀಣ ಮಹಿಳಾ ತಂತ್ರಜ್ಞಾನ ಪಾರ್ಕ್ ನಿಂದ ಸಾಂಪ್ರದಾಯಿಕಗಮೊಚಾ (ಸಾಂಪ್ರದಾಯಿಕ ಅಸ್ಸಾಮೀಸ್ ಹತ್ತಿ ಟವೆಲ್) ದಿಂದದ ಮನೆಯಲ್ಲಿಯೇ ಮುಖಗವಸು ತಯಾರಿಸಲು ಪ್ರದೇಶದ ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಲಾಯಿತು. ಮನೆಯಲ್ಲಿ ತಯಾರಿಸಿದ ಮುಖಗವಸಿನ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ, ಸುಮಾರು 150 ಗಮೊಚಾಗಳನ್ನು ಖರೀದಿಸಲಾಗಿದೆ ಮತ್ತು ಎರಡು ಹೊಲಿಗೆ ಯಂತ್ರಗಳನ್ನು ವ್ಯವಸ್ಥೆ ಮಾಡಲಾಗಿದೆ (ಒಂದು ಗಮೊಚಾದಿಂದ 6 ಮುಖಗವಸುಗಳನ್ನು ತಯಾರಿಸಬಹುದು).

ಪ್ರತಿ ಮುಖಗವಸಿಗೆ ಮಹಿಳೆಯರಿಗೆ ರೂ .15 ನೀಡಬೇಕೆಂದು ಪ್ರಸ್ತಾಪಿಸಲಾಗಿದೆ. ಇದಲ್ಲದೆ 200 ಲೀಟರ್ ದ್ರವ ಸೋಂಕುನಿವಾರಕವನ್ನು ಉತ್ಪಾದಿಸಲಾಗುತ್ತಿದೆ. ದ್ರವ ಸೋಂಕುನಿವಾರಕಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಡೆಟ್ಟಾಲ್, ಎಥೆನಾಲ್, ಗ್ಲಿಸರಿನ್, ಸಾರಭೂತ ತೈಲವನ್ನು ತರಿಸಿಕೊಳ್ಳಲಾಗಿದೆ. ಸೋಂಕುನಿವಾರಕವನ್ನು ಅವರ ಕುಟುಂಬ ಸದಸ್ಯರು ಮತ್ತು ಹತ್ತಿರದ ಹಳ್ಳಿಗಳ ಬಡ ಜನರಿಗೆ ಉಚಿತವಾಗಿ ವಿತರಿಸಲಾಗುವುದು.

ಆರ್ಡಬ್ಲ್ಯುಟಿಪಿಯನ್ನು ಮಾರ್ಚ್ 24 ರಂದು ಮುಚ್ಚುವ ಮೊದಲು ಮಹಿಳೆಯರಿಗೆ ತರಬೇತಿ ನೀಡಲಾಯಿತು. ಭಾಗವಹಿಸಿದ ಮಹಿಳೆಯರು ಸುಮಾರು 50 ಲೀಟರ್ ಹ್ಯಾಂಡ್ ಸ್ಯಾನಿಟೈಜರ್, 160 ಲೀಟರ್ ದ್ರವ ಸೋಂಕುನಿವಾರಕವನ್ನು ತಯಾರಿಸಿದರು, ಇದನ್ನು ತರಬೇತಿಯಲ್ಲಿ ಭಾಗವಹಿಸಿದ 60 ಮಹಿಳೆಯರು ಮತ್ತು ಅವರ ಕುಟುಂಬ ಸದಸ್ಯರಿಗೆ ವಿತರಿಸಲಾಗಿದೆ. ಕೊರೊನಾವೈರಸ್ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಆರ್ಡಬ್ಲ್ಯುಟಿಪಿ ಅಸ್ಸಾಮೀಸ್ ಭಾಷೆಯಲ್ಲಿ ಪೋಸ್ಟರ್ಗಳು ಮತ್ತು ಕರಪತ್ರಗಳನ್ನು ಸಿದ್ಧಪಡಿಸಿದೆ.

 

ಹೆಚ್ಚಿನ ವಿವರಗಳಿಗಾಗಿ ಇವರನ್ನು ಸಂಪರ್ಕಿಸಬಹುದು:

ಶ್ರೀ ಜತಿನ್ ಕಾಳಿತಾ, ಪ್ರಧಾನ ವಿಜ್ಞಾನಿ, ಸಿಎಸ್ಐಆರ್-ನೀಸ್ಟ್, ಜೋರ್ಹತ್, ಇಮೇಲ್: kalitajk74[at]gmail[dot]com, ಮೊಬೈಲ್: + 91-9435557824

ಡಾ ಇಂದೂ ಪುರಿ, ವಿಜ್ಞಾನಿಗಎಫ್, ಡಿ ಎಸ್ ಟಿ, indub.puri[at]nic[dot]in, ಮೊಬೈಲ್: 9810557964

https://ci6.googleusercontent.com/proxy/Shn9WAL60s2iT_D8WyqB5rS0Pg1nr1Z63a1ooSlX40snAThGVD2tjKmHoPI7XrEq7FWvO19TOLO5zGRadnbTflNMGZ9Ryx9btyzd9znTcl8qai3bj--I=s0-d-e1-ft#https://static.pib.gov.in/WriteReadData/userfiles/image/image0014VKB.jpg

 

https://ci5.googleusercontent.com/proxy/ZIIoNnxiKcRy-du9WtxeLzIT-Z-Sr01TSgLH8gEzYOO3dND-zmkl7n4-8FaXhqqX35zto83cTQSIMRYU3B5e_8looGLlc00MWQn2f9jZ4OZuNFlCTeL2=s0-d-e1-ft#https://static.pib.gov.in/WriteReadData/userfiles/image/image002EWGD.jpg

https://ci6.googleusercontent.com/proxy/Vcojm0jy5KajYX8QYqpdJi0KeJEwbYt7JqJrGirPYJvZ7NgL0u9esjFHyB-h92qJK9CbI1XMkMIzlNC2zZH9bUwRH--PnVZ92wGekfo502q1exnTvENI=s0-d-e1-ft#https://static.pib.gov.in/WriteReadData/userfiles/image/image003P1ZA.jpghttps://ci4.googleusercontent.com/proxy/R-9AoVM_LhccUGLSfrARAC2OmKhMdmCasVI9BYssF0dGBSZ41b3DmygetVdXYasbUQkxSPtfJhMp13NAGjZ4f2ub8v-XGIyBweCPfoEwpyoybFY10UdW=s0-d-e1-ft#https://static.pib.gov.in/WriteReadData/userfiles/image/image0048DKJ.jpg

***


(Release ID: 1613906) Visitor Counter : 181