ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಸುಮಾರು 85 ಲಕ್ಷ ಪಿಎಂಯುವೈ ಫಲಾನುಭವಿಗಳಿಗೆ 2020ರ ಏಪ್ರಿಲ್ ನಲ್ಲಿ ಎಲ್ ಪಿಜಿ ಅಡುಗೆ ಅನಿಲ ಪೂರೈಕೆ

Posted On: 12 APR 2020 1:50PM by PIB Bengaluru

ಸುಮಾರು 85 ಲಕ್ಷ ಪಿಎಂಯುವೈ ಫಲಾನುಭವಿಗಳಿಗೆ 2020ರ ಏಪ್ರಿಲ್ ನಲ್ಲಿ ಎಲ್ ಪಿಜಿ ಅಡುಗೆ ಅನಿಲ ಪೂರೈಕೆ

ಕೋವಿಡ್-19 ವಿರುದ್ಧ ರಾಷ್ಟ್ರ ನಡೆಸುತ್ತಿರುವ ಹೋರಾಟಕ್ಕೆ ಪೂರಕವಾಗಿ ಅಗತ್ಯ ಸೇವೆಗಳನ್ನು ನೀಡಲು ಪೂರೈಕೆ ಸರಣಿಯಲ್ಲಿರುವ ಸಿಬ್ಬಂದಿ, ಎಲ್ ಪಿಜಿ ಸಿಲಿಂಡರ್ ಗಳ ವಿತರಣೆಗೆ ಅವಿರತ ಶ್ರಮ

 

ಕೋವಿಡ್-19ನಿಂದ ಆಗಿರುವ ಸಂಕಷ್ಟವನ್ನು ದೂರಮಾಡುವ ಆರ್ಥಿಕ ಕ್ರಮದ ಭಾಗವಾಗಿ ಭಾರತ ಸರ್ಕಾರ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ, ಬಡವರ ಪರವಾದ ಹಲವು ಕ್ರಮಗಳನ್ನು ಪ್ರಕಟಿಸಿದೆ. ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟ ಉಂಟಾಗಿರುವುದರಿಂದ ಬಡವರಿಗೆ ಆಗಿರುವ ತೊಂದರೆಗಳನ್ನು ನಿವಾರಿಸುವುದು ಈ ಕ್ರಮಗಳ ಉದ್ದೇಶವಾಗಿದೆ. ಯೋಜನೆಯಂತೆ 2020ರ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಅವಧಿಗೆ ಉಜ್ವಲ ಫಲಾನುಭವಿಗಳಿಗೆ ಉಚಿತವಾಗಿ ಎಲ್ ಪಿಜಿ ಅಡುಗೆ ಅನಿಲ ಮರುಪೂರಣಗೊಂಡ ಸಿಲಿಂಡರ್ ವಿತರಿಸಲಾಗುವುದು.

ಈ ದಿನದವರೆಗೆ ತೈಲ ಮಾರುಕಟ್ಟೆ ಕಂಪನಿಗಳು 7.15 ಕೋಟಿ ಪಿಎಂಯುವೈ ಫಲಾನುಭವಿಗಳ ಖಾತೆಗಳಿಗೆ 5,606 ಹಣ ವರ್ಗಾವಣೆಗೆ ಕ್ರಮ ಕೈಗೊಂಡಿದ್ದು, ಆ ಮೂಲಕ ಪಿಎಂಜಿಕೆವೈ ಎಲ್ ಪಿಜಿ ಸಿಲಿಂಡರ್ ಉಚಿತವಾಗಿ ಲಭ್ಯವಾಗಲಿದೆ. ಫಲಾನುಭವಿಗಳಿಂದ ಈ ತಿಂಗಳಿಗೆ 1.25 ಕೋಟಿ ಸಿಲಿಂಡರ್ ಗಳನ್ನು ಬುಕ್ ಆಗಿವೆ, ಅವುಗಳಲ್ಲಿ 85 ಲಕ್ಷ ಸಿಲಿಂಡರ್ ಗಳನ್ನು ಪಿಎಂಯುವೈ ಫಲಾನುಭವಿಗಳಿಗೆ ವಿತರಿಸಲಾಗಿದೆ.

ದೇಶದಲ್ಲಿ 27.87 ಕೋಟಿ ಎಲ್ ಪಿಜಿ ಗ್ರಾಹಕರು ದೇಶದಲ್ಲಿದ್ದಾರೆ, ಅದರಲ್ಲಿ ಪಿಎಂಯುವೈ ಫಲಾನುಭವಿಗಳೇ ಸುಮಾರು 8 ಕೋಟಿ ಇದ್ದಾರೆ. ಲಾಕ್ ಡೌನ್ ನಿಂದೀಚೆಗೆ ದೇಶದಲ್ಲಿ ಪ್ರತಿದಿನ ಸುಮಾರು 50 ರಿಂದ 60 ಲಕ್ಷ ಸಿಲಿಂಡರ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರವ್ಯಾಪಿ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಜನರು ಸುರಕ್ಷತಿವಾಗಿ ಮನೆಯಲ್ಲಿರಬೇಕು, ಜನರ ಮನೆಗಳಿಗೆ ಶುದ್ಧ ಇಂಧನ ತಲುಪಿಸಲು ಎಲ್ ಪಿಜಿ ಪೂರೈಕೆ ಸರಣಿಯಲ್ಲಿರುವ ಎಲ್ ಪಿಜಿ ವಿತರಣಾ ಯುವಕರ ಜಾಲ ನಿರಂತರವಾಗಿ ದುಡಿಯುತ್ತಿದೆ.

ಬೆಟ್ಟಗುಡ್ಡಗಳಿಂದ ಹಿನ್ನೀರುಗಳು, ಮರುಭೂಮಿಯ ಜನವಸತಿಗಳಿಂದ ಅರಣ್ಯದಲ್ಲಿನ ಜನರು ವಾಸಿಸುವ ಸ್ಥಳಗಳಿಗೆ, ಈ ಕೊರೊನಾ ಯೋಧರು ತಮ್ಮ ಕರ್ತವ್ಯ ಪ್ರಜ್ಞೆ ಮತ್ತು ಬದ್ಧತೆ ಮೆರೆಯುತ್ತಿದ್ದಾರೆ ಮತ್ತು ಸಕಾಲಕ್ಕೆ ಅನಿಲ ಪೂರೈಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲೂ ಸಹ ಸಿಲಿಂಡರ್ ಗಾಗಿ ಕಾಯುವ ಅವಧಿ ಬಹುತೇಕ ಕಡೆ ಎರಡು ದಿನಗಳಿಗಿಂತ ಕಡಿಮೆ ಇದೆ. ತೈಲ ಮಾರುಕಟ್ಟೆ ಕಂಪನಿಗಳಾದ - ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ ಪಿಸಿಎಲ್ ಇವುಗಳು ಕೋವಿಡ್-19 ಪರಿಣಾಮ ಮತ್ತು ಸೋಂಕಿನಿಂದಾಗಿ ಎಲ್ ಪಿಜಿ ವಿತರಣಾ ಜಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಷೋರೂಂ ಸಿಬ್ಬಂದಿ, ಗೋಡೋನ್ ಕೀಪರ್ ಗಳು ಮ್ಯಾಕಾನಿಕ್ ಮತ್ತು ಡೆಲಿವರಿ ಬಾಯ್ ಗಳು ಆಕಸ್ಮಿಕಕ್ಕೆ ತುತ್ತಾದರೆ ವಿಶೇಷ ಒಮ್ಮೆ ನೀಡುವ ಹೆಚ್ಚುವರಿ ಭತ್ಯೆಯ ಕ್ರಮವಾಗಿ ತಲಾ 5 ಲಕ್ಷ ರೂ. ನೀಡುವುದಾಗಿ ಘೋಷಿಸಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 2020ರ ಮಾರ್ಚ್ 31ರ ವರೆಗೆ ಎಲ್ ಪಿಜಿ ಸಂಪರ್ಕ ಪಡೆದುಕೊಂಡಿರುವ ಎಲ್ಲ ಗ್ರಾಹಕರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಯೋಜನೆ 2020ರ ಏಪ್ರಿಲ್ 1 ರಿಂದ ಆರಂಭವಾಗಿದ್ದು, 2020ರ ಜೂನ್ 30ರ ವರೆಗೆ ಮುಂದುವರಿಯಲಿದೆ. ಯೋಜನೆ ಅಡಿಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು 14.2 ಕೆಜಿ ಮರುಪೂರಣಗೊಂಡ ಸಿಲಿಂಡರ್ ಅಥವಾ 5 ಕೆಜಿ ಸಿಲಿಂಡರ್ ಯಾವುದಕ್ಕೆ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿರುತ್ತದೋ ಅದಕ್ಕೆ ತಗುಲುವ ವೆಚ್ಚದ ಸಮಾನ ಮುಂಗಡ ಹಣವನ್ನು ತೈಲ ಮಾರುಕಟ್ಟೆ ಕಂಪನಿಗಳು ಫಲಾನುಭವಿಯ ಖಾತೆಗೆ ವರ್ಗಾಯಿಸಲಿವೆ. ಗ್ರಾಹಕರು ಈ ಮುಂಗಡ ಹಣವನ್ನು ಬಳಸಿಕೊಂಡು ಭರ್ತಿಮಾಡಿದ ಎಲ್ ಪಿಜಿ ಸಿಲಿಂಡರ್ ಅನ್ನು ಪಡೆದುಕೊಳ್ಳಬಹುದು.

*******

 


(Release ID: 1613796) Visitor Counter : 304