ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಸಿಬ್ಬಂದಿ ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ: ಮಾಂಡವೀಯ
Posted On:
12 APR 2020 5:21PM by PIB Bengaluru
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಸಿಬ್ಬಂದಿ ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ: ಮಾಂಡವೀಯ
ಪ್ರಸ್ತುತ ಕಠಿಣ ಪರಿಸ್ಥಿತಿಗಳಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ (ಪಿಎಂಜೆಕೆ) ಸಿಬ್ಬಂದಿ ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ದೇಶಾದ್ಯಂತ 6300 ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಅವುಗಳ ಗೋದಾಮುಗಳು ಯುದ್ಧೋಪಾದಿಯಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿವೆ ಎಂದು ಶ್ರೀ ಮಾಂಡವೀಯ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಇರುವವುರಿಂದ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಫಾರ್ಮಾಸಿಸ್ಟ್ ಗಳು ಗುಣಮಟ್ಟದ ಸಾಮಾನ್ಯ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ದೇಶದ ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ.
ಪ್ರಸ್ತುತ, ದೇಶಾದ್ಯಂತ 726 ಜಿಲ್ಲೆಗಳನ್ನು ಒಳಗೊಂಡಂತೆ 6300 ಕ್ಕೂ ಹೆಚ್ಚು ಪಿಎಂಜೆಎಕೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಯನ್ನುಅಗತ್ಯವಿರುವವರಿಗೆ ಗುಣಮಟ್ಟದ ಮತ್ತು ಕಡಿಮೆ ವೆಚ್ಚದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಔಷಧೀಯ ಇಲಾಖೆ ನಡೆಸುತ್ತಿದೆ.
ಕಡಿಮೆ ಬೆಲೆಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಗುರುಗ್ರಾಮ್ನ ಒಂದು ಕೇಂದ್ರ ಗೋದಾಮು, ಗುವಾಹಟಿ ಮತ್ತು ಚೆನ್ನೈನಲ್ಲಿ ಎರಡು ಪ್ರಾದೇಶಿಕ ಗೋದಾಮುಗಳು ಮತ್ತು ಸುಮಾರು 50 ವಿತರಕರು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಔಷಧಿಗಳ ಸರಬರಾಜನ್ನು ನಿಯಂತ್ರಿಸುವ ಸಲುವಾಗಿ, ಎಸ್ಎಪಿ ಆಧಾರಿತ ಎಂಡ್ ಟು ಎಂಡ್ ಪಾಯಿಂಟ್ ಆಫ್ ಸೇಲ್ಸ್ ಸಾಫ್ಟ್ವೇರ್ ಅನ್ನು ಸ್ಥಾಪಿಸಲಾಗಿದೆ. “ಜನೌಷಧಿ ಸುಗಮ್”ಮೊಬೈಲ್ ಅಪ್ಲಿಕೇಶನ್ ಜನಸಾಮಾನ್ಯರಿಗೆ ತಮ್ಮ ಹತ್ತಿರದ ಜನೌಷಧಿ ಕೇಂದ್ರವನ್ನು ಪತ್ತೆ ಮಾಡಲು ಮತ್ತು ಬೆಲೆಯೊಂದಿಗೆ ಔಷಧಿಗಳ ಲಭ್ಯತೆಯನ್ನು ತಿಳಿಸುತ್ತದೆ. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐ-ಫೋನ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು.
ಲಾಕ್ಡೌನ್ ಅವಧಿಯಲ್ಲಿ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಮಾಹಿತಿ ಪೋಸ್ಟ್ಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಜನರು ತಮ್ಮನ್ನು ಕೊರೊನಾವೈರಸ್ನಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತಿದೆ. @pmbjpbppi ಅನ್ನು ಅನುಸರಿಸುವ ಮೂಲಕ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಇತ್ಯಾದಿಗಳಲ್ಲಿ ಇತ್ತೀಚಿನ ಮಾಹಿತಿಯನ್ನು ಪಡೆಯಬಹುದು.
***
(Release ID: 1613721)
Visitor Counter : 195
Read this release in:
Bengali
,
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil
,
Telugu
,
Malayalam