ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ ಅಗತ್ಯವಿರುವವರಿಗೆ 1 ಮಿಲಿಯನ್ ಗೂ ಹೆಚ್ಚು ಉಚಿತ ಬಿಸಿ ಊಟದ ವಿತರಣೆ

Posted On: 11 APR 2020 2:59PM by PIB Bengaluru

ಭಾರತೀಯ ರೈಲ್ವೆಯಿಂದ ಅಗತ್ಯವಿರುವವರಿಗೆ 1 ಮಿಲಿಯನ್ ಗೂ ಹೆಚ್ಚು ಉಚಿತ ಬಿಸಿ ಊಟದ ವಿತರಣೆ

ಕೋವಿಡ್-19 ಲಾಕ್ಡೌನ್ ಅವಧಿಯಲ್ಲಿ 313 ಸ್ಥಳಗಳಲ್ಲಿ ವಿತರಣೆ

ವಲಯ ರೈಲ್ವೆ, ಜಿಆರ್ಪಿ, ಎನ್ಜಿಒಗಳ ಜೊತೆಗೆ ಉಚಿತ ಊಟ ನೀಡುವ ಸವಾಲು ನಿಭಾಯಿಸುತ್ತಿರುವ ಐಆರ್ಸಿಟಿಸಿ, ಆರ್ಪಿಎಫ್

 

ಐಆರ್ಸಿಟಿಸಿ, ಆರ್ಪಿಎಫ್, ವಲಯ ರೈಲ್ವೆ ಮತ್ತು ಇತರ ಹಲವಾರು ಭಾರತೀಯ ರೈಲ್ವೆ ಸಂಸ್ಥೆಗಳ ಸಿಬ್ಬಂದಿಯು ರೈಲ್ವೆಯ ಸಾಮಾಜಿಕ ಸೇವಾ ಬದ್ಧತೆಯನ್ನು ನಿಸ್ವಾರ್ಥವಾಗಿ ಮತ್ತು ಸ್ವಯಂಪ್ರೇರಣೆಯಿಂದ ಕೋವಿಡ್-19 ಲಾಕ್ ಡೌನ್ ನಂತರ ಅಗತ್ಯವಿರುವವರಿಗೆ ಬಿಸಿ ಊಟವನ್ನು ನೀಡುವ ಮೂಲಕ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಐಆರ್ಸಿಟಿಸಿ ಅಡುಗೆ ಮನೆಗಳು, ಆರ್ಪಿಎಫ್ ಸಂಪನ್ಮೂಲಗಳು ಮತ್ತು ಎನ್ಜಿಒಗಳ ಕೊಡುಗೆಗಳ ಮೂಲಕ ರೈಲ್ವೆಯು 2020 ಮಾರ್ಚ್ 28 ರಿಂದ ದೊಡ್ಡ ಪ್ರಮಾಣದಲ್ಲಿ ಬೇಯಿಸಿದ ಆಹಾರವನ್ನು ಮಧ್ಯಾಹ್ನದ ಊಟಕ್ಕೆ ಕಾಗದದ ತಟ್ಟೆ ಮತ್ತು ರಾತ್ರಿ ಊಟಕ್ಕೆ ಆಹಾರ ಪ್ಯಾಕೆಟ್ ಗಳಲ್ಲಿ ಒದಗಿಸುತ್ತಿದೆ.

ಊಟ ವಿತರಣೆಯು ಇಂದು ಸುಮಾರು 10.2 ಲಕ್ಷಗಳೊಂದಿಗೆ ಒಂದು ಮಿಲಿಯನ್ ಗಡಿ ದಾಟಿದೆ. ಬಡವರು, ಮಕ್ಕಳು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಸಿಲುಕಿರುವ ವ್ಯಕ್ತಿಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಿಂದ ಅನತಿ ದೂರದಲ್ಲಿ ಆಹಾರವನ್ನು ಅರಸುತ್ತಿರುವವರಿಗೆ ಆಹಾರವನ್ನು ವಿತರಿಸಲಾಗುತ್ತಿದೆ. ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುವಾಗ, ಸಾಮಾಜಿಕ ಅಂತರ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.

ನವದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೆಂಟ್ರಲ್, ಅಹಮದಾಬಾದ್, ಭೂಸಾವಲ್, ಹೌರಾ, ಪಾಟ್ನಾ, ಗಯಾ, ರಾಂಚಿ, ಕತಿಹಾರ್, ದೀನ್ ದಯಾಳ್ ಉಪಾಧ್ಯಾಯ ನಗರ, ಬಾಲಸೋರ್, ವಿಜಯವಾಡ, ಖುರ್ದಾ, ಕಟ್ಪಾಡಿ, ತಿರುಚಿರಾಪಳ್ಳಿ, ಧನಬಾದ್, ಗುವಾಹಟಿ, ಸಮಸ್ತಿಪುರ, ಪ್ರಯಾಗರಾಜ್, ಇಟಾರ್ಸಿ, ವಿಶಾಖಪಟ್ಟಣಂ, ಚೆಂಗಲ್ಪಟ್ಟು, ಪುಣೆ, ಹಾಜಿಪುರ, ರಾಯ್ಪುರ ಮತ್ತು ಟಾಟಾನಗರ ಐಆರ್ಸಿಟಿಸಿ,  ಮೂಲ ಅಡಿಗೆಮನೆಗಳ ಸಕ್ರಿಯ ಸಹಕಾರದೊಂದಿಗೆ ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ದಕ್ಷಿಣ ಮಧ್ಯದಂತಹ ವಿವಿಧ ವಲಯಗಳಲ್ಲಿ ಸುಮಾರು 10.2 ಲಕ್ಷ  ಬಿಸಿ ಊಟವನ್ನು ನಿನ್ನೆಯವರೆಗೆ (ಏಪ್ರಿಲ್ 10, 2020) ವಿತರಿಸಲಾಯಿತು. ಪೈಕಿ 60 ಪ್ರತಿಶತದಷ್ಟು ಬೇಯಿಸಿದ ಊಟವನ್ನು ಐಆರ್ಸಿಟಿಸಿ ಒದಗಿಸಿದೆ, ಸುಮಾರು 2.3 ಲಕ್ಷ ಊಟವನ್ನು ಆರ್ಪಿಎಫ್ ತನ್ನದೇ ಆದ ಸಂಪನ್ಮೂಲಗಳಿಂದ ಒದಗಿಸಿದೆ ಮತ್ತು ರೈಲ್ವೆ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಎನ್ಜಿಒಗಳು ಸುಮಾರು 2 ಲಕ್ಷ ಊಟವನ್ನು ನೀಡಿವೆ.

ಆರ್ಪಿಎಫ್, ಜಿಆರ್ಪಿ, ವಲಯಗಳ ವಾಣಿಜ್ಯ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಎನ್ಜಿಒಗಳ ಸಹಾಯದಿಂದ ಆಹಾರ ವಿತರಣೆ ನಡೆಯುತ್ತಿದೆ. ಜಿಲ್ಲಾಡಳಿತ ಮತ್ತು ಎನ್ಜಿಒಗಳ ಸಹಾಯದಿಂದ ರೈಲ್ವೆ ನಿಲ್ದಾಣಗಳ ಫಾಸಲೆಯಿಂದಾಚೆಯೂ ಅಗತ್ಯವಿರುವ ಜನರ ಆಹಾರ ಅಗತ್ಯತೆಗಳನ್ನು ಪೂರೈಸಲು ಐಆರ್ಸಿಟಿಸಿಯ ಪ್ರಯತ್ನವನ್ನು ಹೆಚ್ಚಿಸಲು ಸಂಬಂಧಪಟ್ಟ ವಲಯ ಮತ್ತು ವಿಭಾಗದ ಜಿಎಂಗಳು / ಡಿಆರ್ಎಂಗಳು ಐಆರ್ಸಿಟಿಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಐಆರ್ಸಿಟಿಸಿ, ಎನ್ಜಿಒಗಳು ತಯಾರಿಸಿದ ಮತ್ತು ತನ್ನದೇ ಅಡಿಗೆಮನೆಗಳಿಂದ ತಯಾರಿಸಿದ ಆಹಾರವನ್ನು ಅಗತ್ಯವುರುವವರಿಗೆ ವಿತರಿಸುವಲ್ಲಿ ರೈಲ್ವೆ ರಕ್ಷಣಾ ಪಡೆ ಪ್ರಮುಖ ಪಾತ್ರ ವಹಿಸಿದೆ. 28.03.2020 ರಂದು 74 ಸ್ಥಳಗಳಲ್ಲಿ 5419 ನಿರ್ಗತಿಕರಿಗೆ ಆಹಾರ ವಿತರಣೆಯಿಂದ ಪ್ರಾರಂಭಿಸಿ, ಸಂಖ್ಯೆ ಪ್ರತಿದಿನವೂ ಹೆಚ್ಚಾಗಿದೆ. ಸುಮಾರು 6.5 ಲಕ್ಷ ಊಟವನ್ನು ನಿನ್ನೆಯವರೆಗೆ  313 ಸ್ಥಳಗಳಲ್ಲಿ ಆರ್ಪಿಎಫ್ ವಿತರಿಸಿದೆ.

ಅಗತ್ಯವಿರುವ ಜನರಿಗೆ ಆಹಾರ ಮತ್ತು ಇತರ ನೆರವು ನೀಡುವಲ್ಲಿ ತಮ್ಮ ಪ್ರಯತ್ನಗಳನ್ನು ವಿಸ್ತರಿಸುವಂತೆ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ರೈಲ್ವೆ ಸಿಬ್ಬಂದಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸೂಚನೆಯನ್ವಯ ಐಆರ್ಸಿಟಿಸಿ ಸಿಬ್ಬಂದಿ PM-CARES  ನಿಧಿಗೆ 20 ಕೋಟಿ ರೂ. ನೀಡಿದ್ದಾರೆ. ಇದರಲ್ಲಿ  2019-20 ಸಿಎಸ್ಆರ್ ನಿಧಿಯಿಂದ 1.5 ಕೋಟಿ ರೂ., 2020-21 ಸಿಎಸ್ಆರ್ ನಿಧಿಯಿಂದ 6.5 ಕೋಟಿ ರೂ. ಮತ್ತು 12 ಕೋಟಿ ರೂ. ದೇಣಿಗೆಯಾಗಿದೆ. ಕೊಡುಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮೆಚ್ಚುಗೆಗೂ ಪಾತ್ರವಾಗಿದೆ. “ಕೊರೊನಾವೈರಸ್ ಅನ್ನು ಹಿಮ್ಮೆಟ್ಟಿಸಲು ನೀಡಿದ ಕೊಡುಗೆಗಾಗಿ ನಾನು @IRCTCofficial ಸಮುದಾಯವನ್ನು ಶ್ಲಾಘಿಸುತ್ತೇನೆ. #IndiaFightsCoronaಎಂದು ಅವರು ಟ್ವೀಟ್ ಮಾಡಿದ್ದಾರೆ.

***


(Release ID: 1613441) Visitor Counter : 268