ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್ – 19 ವಿರುದ್ಧ ಹೋರಾಡಲು ಆವಿಷ್ಕಾರಕ 3 ಡಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ ಗುವಾಹಾಟಿಯ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ

Posted On: 11 APR 2020 12:30PM by PIB Bengaluru

ಕೋವಿಡ್ – 19 ವಿರುದ್ಧ ಹೋರಾಡಲು ಆವಿಷ್ಕಾರಕ 3 ಡಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ ಗುವಾಹಾಟಿಯ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ

 

ಗುವಾಹಾಟಿಯಲ್ಲಿರುವ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಎನ್ ಐ ಪಿ ಇ ಆರ್- ಜಿ) ಸಂಶೋಧಕರು ಎರಡು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವು ಪ್ರಸ್ತುತ ವಿಶ್ವದೆಲ್ಲೆಡೆ ಹರಡಿದ ಕೋವಿಡ್ – 19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸಹಾಯ ಮಾಡುವ ಭರವಸೆ ಮೂಡಿಸಿವೆ.     

ಮೊದಲನೇಯದ್ದು 3ಡಿ ಮುದ್ರಿತ ಹ್ಯಾಂಡ್ ಫ್ರೀ ಉತ್ಪನ್ನವಾಗಿದ್ದು ಬಾಗಿಲು, ಕಿಟಕಿ, ಡ್ರಾವರ್ ಗಳು (ಅಡ್ಡಲಾದ ಮತ್ತು ಲಂಬವಾದವುಗಳೆರಡನ್ನೂ) ತೆರೆಯಲು ಅಥವಾ ಮುಚ್ಚಲು ಮತ್ತು ಸ್ವಿಚ್ ಬಟನ್ ಗಳನ್ನು ಆನ್/ಆಫ್ ಮಾಡುವುದು ಸೇರಿದಂತೆ ರೆಫ್ರಿಜಿರೇಟರ್ ಹ್ಯಾಂಡಲ್ ಅಥವಾ ಎಲಿವೇಟರ್ ಗುಂಡಿಗಳನ್ನು ಮತ್ತು ಲ್ಯಾಪ್ ಟಾಪ್/ಡೆಸ್ಕ್ ಟಾಪ್ ಕೀಬೋರ್ಡ್ ಗಳನ್ನು ಒತ್ತಲುಉಪಯುಕ್ತವಾಗಿದೆ.

ಬಾಗಿಲುಗಳು, ಕಿಟಕಿಗಳು, ಸ್ವಿಚ್ ಬಟನ್ ಗಳು, ಎಲಿವೇಟರ್ ಗುಂಡಿಗಳು, ಡ್ರಾವರ್ ಗಳ ಹ್ಯಾಂಡಲ್ ಗಳು,  (ಅಡ್ಡಲಾದ ಮತ್ತು ಲಂಬವಾದವುಗಳೆರಡನ್ನೂ) ತೆರೆಯಲು ಅಥವಾ ಮುಚ್ಚಲು ಮತ್ತು ಮತ್ತು ಲ್ಯಾಪ್ ಟಾಪ್/ಡೆಸ್ಕ್ ಟಾಪ್ ಕೀಬೋರ್ಡ್ ಗಳು ಮುಂತಾದ ವಸ್ತುಗಳು ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ, ಕಾರ್ಖಾನೆಗಳಲ್ಲಿ, ಕಂಪನಿಗಳಲ್ಲಿ, ಸಂಸ್ಥೆಗಳಲ್ಲಿ ಮತ್ತು ಇತರ ಕಟ್ಟಡಗಳಲ್ಲಿನ ಅತಿ ಹೆಚ್ಚು ವೈರಾಣು ಸೋಂಕಿತ ವಸ್ತುಗಳಾಗಿವೆ. ಕೋವಿಡ್ – 19 ಸಾಂಕ್ರಾಮಿಕ ರೋಗದ ಸದ್ಯದ ಪರಿಸ್ಥಿತಿಯಲ್ಲಿ ಬರಿಗೈಯಲ್ಲಿ ಅಥವಾ ಕಲುಷಿತ ಮೇಲ್ಭಾಗದ ಮೂಲಕ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬರಿಗೈಯಿಂದ ಈ ವೈರಾಣುವಿನ ಸೋಂಕು ಹೇಗೆ ಹರಡುತ್ತದೆ ಮತ್ತು ಇದು ಎಷ್ಟು ಅಪಾಯಕಾರಿ ಎಂಬುದರ ಕುರಿತು  ವಿವರವಾದ ವಿಶ್ಲೇಷಣೆಯನ್ನು ಕೈಗೊಂಡು ಸಂಶೋಧಕರು 3ಡಿ ಮುದ್ರಿತ ವಸ್ತುವಿನ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ್ದಾರೆ

 

Description: WhatsApp Image 2020-03-28 at 17.52.38

 

ಈ ವಸ್ತುವು ವಿನ್ಯಾಸಗೊಳಿಸಲು ಸುಲಭವಾಗಿದೆ ಮತ್ತು ಮೂಲಮಾದರಿಯನ್ನು ವೇಗವಾಗಿ ಅಭಿವೃದ್ಧಿಗೊಳಿಸಲು ಅನುಕೂಲವಾಗಿದೆ ಎಂಬುದನ್ನು ಎನ್ ಐ ಪಿ ಇ ಆರ್- ಜಿ ನಿರ್ದೇಶಕರಾದ ಡಾ. ಯು ಎಸ್ ಎನ್ ಮೂರ್ತಿ ಮನಗಂಡರು. ಅದು ಕೈಯಲ್ಲಿ ಹಿಡಿಯಬಹುದಾದ್ದು, ಸುಲಭವಾಗಿ ಬಳಸಬಹುದಾದದ್ದು, ಗಟ್ಟಿಯಾದದ್ದು ಮತ್ತು ಲಭ್ಯವಿರುವ ಸ್ಯಾನಿಟೈಸರ್ ಗಳು ಅಥವಾ ಮದ್ಯಯುಕ್ತ ಸೋಂಕು ನಿವಾರಕಗಳಿಂದ ಸರಳವಾಗಿ ಸ್ವಚ್ಛಗೊಳಿಬಲ್ಲದ್ದಾಗಿದೆ.

2 ನೇ ಉತ್ಪನ್ನ 3 ಡಿ ಮುದ್ರಿತ ನೋವಲ್ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಕೀಟಾಣು ನಿರೋಧಕ ಮುಖವಾಡವಾಗಿದೆ. ವೈರಾಣುಗಳು ಬಾಯಿಯಿಂದ, ಕಣ್ಣಿನಿಂದ, ಮೂಗಿನಿಂದ ಮತ್ತು ದೇಹದ ಇತರೆ ರಂಧ್ರಗಳಿಂದ ಹರಡುವುದನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಈ ವಸ್ತುವನ್ನು ವಿನ್ಯಾಸಗೊಳಿಸಲಾಗಿದೆ.  

Description: WhatsApp Image 2020-04-02 at 20.23.59Description: WhatsApp Image 2020-04-02 at 17.11.36

 

ಈ ಮುಖಗವಸು ವಿನ್ಯಾಸಗೊಳಿಸಲು ಸುಲಭವಾಗಿದೆ ಮತ್ತು ಮೂಲಮಾದರಿಯನ್ನು ವೇಗವಾಗಿ ಅಭಿವೃದ್ಧಿಗೊಳಿಸಲು ಅನುಕೂಲವಾಗಿದೆ. ಇದು ಕಡಿಮೆ ವೆಚ್ಚದ್ದಾಗಿದೆ, ಧರಿಸಲು ಸುಲಭವಾಗಿದೆ, ಉತ್ತಮ ರಾಸಾಯನಿಕ ಸ್ಥಿರತೆ ಹೊಂದಿದೆ ಗಟ್ಟಿಯಾದದ್ದು ಮತ್ತು ಲಭ್ಯವಿರುವ ಸ್ಯಾನಿಟೈಸರ್ ಗಳು ಅಥವಾ ಮದ್ಯಯುಕ್ತ ಸೋಂಕು ನಿವಾರಕಗಳಿಂದ ಸರಳವಾಗಿ ಸ್ವಚ್ಛಗೊಳಿಬಲ್ಲದ್ದಾಗಿದೆ.

ರಾಷ್ಟ್ರೀಯ ಮಹತ್ವ ಹೊಂದಿದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಎನ್ ಐ ಪಿ ಇ ಆರ್- ಜಿ, ತ್ವರಿತಗತಿಯಲ್ಲಿ ಮೂಲ ಮಾದರಿಗಳನ್ನು ಅಥವಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ತಲುಪಿಸುವಲ್ಲಿ ಕೊರೊನಾ ವೈರಾಣು ವಿರುದ್ಧ ದೇಶದ ಹೋರಾಟಕ್ಕೆ ಸಹಾಯ ಮಾಡಬಹುದು ಎಂದು ಡಾ. ಮೂರ್ತಿಯವರು ಮನಗಂಡರು. “ಎನ್ ಐ ಪಿ ಇ ಆರ್- ಜಿ ಉಪಯುಕ್ತ ಕೊಡುಗೆಗಳನ್ನು ಮತ್ತು ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆಎಂದು ಹೇಳಿದರು

 

*****

 


(Release ID: 1613423) Visitor Counter : 173