ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಜಿ 20 ರಾಷ್ಟ್ರಗಳ ಇಂಧನ ಸಚಿವರ ವಿಶೇಷ ಸಭೆ

Posted On: 10 APR 2020 8:02PM by PIB Bengaluru

ಜಿ 20 ರಾಷ್ಟ್ರಗಳ ಇಂಧನ ಸಚಿವರ ವಿಶೇಷ ಸಭೆ

 

ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು 2020 ಏಪ್ರಿಲ್ 10 ರಂದು ನಡೆದ ಜಿ 20 ರಾಷ್ಟ್ರಗಳ ಇಂಧನ ಸಚಿವರ ವಿಶೇಷ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದರು. ಜಿ 20 ಅಧ್ಯಕ್ಷ ಸ್ಥಾನದಲ್ಲಿರುವ ಸೌದಿ ಅರೇಬಿಯಾ ಸಭೆಯನ್ನು ಕರೆದಿತ್ತು. ಸೌದಿ ಅರೇಬಿಯಾ ಇಂಧನ ಸಚಿವ ರಾಜಕುಮಾರ ಅಬ್ದುಲಜೀಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿ 20 ದೇಶಗಳ ಇಂಧನ ಸಚಿವರು, ಅತಿಥಿ ರಾಷ್ಟ್ರಗಳು ಮತ್ತು ಒಪೆಕ್, ಐಇಎ ಮತ್ತು ಐಇಎಫ್ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಬೇಡಿಕೆ ಕಡಿತ ಮತ್ತು ಹೆಚ್ಚಿನ ಉತ್ಪಾದನೆ-ಸಂಬಂಧಿತ ವಿಷಯಗಳು ಪರಿಣಾಮ ಬೀರುವ ಸ್ಥಿರ ಇಂಧನ ಮಾರುಕಟ್ಟೆಗಳನ್ನು ಖಾತ್ರಿಪಡಿಸುವ ಮಾರ್ಗಗಳು ಮತ್ತು ವಿಧಾನಗಳ ಮೇಲೆ ಜಿ 20 ಇಂಧನ ಸಚಿವರು ಗಮನ ಕೇಂದ್ರೀಕರಿಸಿದರು.

ಸಭೆಯಲ್ಲಿ, ಶ್ರೀ ಪ್ರಧಾನ್ ಅವರು ಸವಾಲಿನ ಸಂಕಷ್ಟವನ್ನು ಎದುರಿಸಲು ವಿಶೇಷವಾಗಿ ದುರ್ಬಲ ವರ್ಗಗಳಿಗಾಗಿ ಮಾನವ ಕೇಂದ್ರಿತ ವಿಧಾನವನ್ನು ಅನುಸರಿಸಬೇಕು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಜಿ 20 ರಾಷ್ಟ್ರಗಳಿಗೆ ಕರೆ ನೀಡಿದ್ದನ್ನು ಪುನರುಚ್ಚರಿಸಿದರು.

ಹಿನ್ನೆಲೆಯಲ್ಲಿ, 23 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಭಾಗವಾಗಿ ಉಜ್ವಲಾ ಯೋಜನೆಯ ಅಡಿಯಲ್ಲಿ 80.3 ಮಿಲಿಯನ್ ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಿಲಿಂಡರ್ಗಳನ್ನು ಒದಗಿಸುವ ಮಾನ್ಯ ಪ್ರಧಾನ ಮಂತ್ರಿಯವರ ನಿರ್ಧಾರವನ್ನು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತವು ಜಾಗತಿಕ ಇಂಧನ ಬೇಡಿಕೆ ಕೇಂದ್ರವಾಗಿದೆ ಮತ್ತು ಹಾಗೆಯೇ ಮುಂದುವರಿಯುತ್ತದೆ ಎಂದು ಅವರು ಒತ್ತಿ ಹೇಳಿದರು. ನಮ್ಮ ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹಗಳನ್ನು ಭರ್ತಿ ಮಾಡಲು ಭಾರತ ಸರ್ಕಾರದ ಪ್ರಯತ್ನಗಳನ್ನು ಅವರು ತಿಳಿಸಿದರು.

ಸದ್ಯದ ಇಂಧನ ಮಾರುಕಟ್ಟೆಯ ಏರಿಳಿತದ ದೃಷ್ಟಿಯಿಂದ, ಭಾರತವು ಯಾವಾಗಲೂ ಸ್ಥಿರ ತೈಲ ಮಾರುಕಟ್ಟೆಗಾಗಿ ಪ್ರತಿಪಾದಿಸುತ್ತಿದೆ, ಇದರಿಂದ ಉತ್ಪಾದಕರಿಗೆ ಅನುಕೂಲವಾದರೆ, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತಾಗುತ್ತದೆ. ದೀರ್ಘಕಾಲೀನ ಸುಸ್ಥಿರತೆಗೆ ಕಡ್ಡಾಯವಾಗಿರುವ ಪೂರೈಕೆ-ಕಡೆಯ ಅಂಶಗಳನ್ನು ಸಮತೋಲನಗೊಳಿಸಲು ಒಪೆಕ್ ಮತ್ತು ಒಪೆಕ್-ಪ್ಲಸ್ ದೇಶಗಳ ಸಾಮೂಹಿಕ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಆದಾಗ್ಯೂ, ಬಳಕೆ-ನೇತೃತ್ವದ ಬೇಡಿಕೆ ಚೇತರಿಕೆಗೆ ಅನುವು ಮಾಡಿಕೊಡಲು ತೈಲ ಬೆಲೆಗಳನ್ನು ಕೈಗೆಟುಕುವ ಮಟ್ಟಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದರು.

ಜಿ 20 ಇಂಧನ ಸಚಿವರ ಸಭೆಯು ಜಂಟಿ ಹೇಳಿಕೆಯನ್ನು ಅಂಗೀಕರಿಸಲಿದ್ದು, ಇತರ ಹಂತಗಳಲ್ಲಿ, ಜಿ 20 ಇಂಧನ ಸಚಿವರಿಗೆ ಮುಂದಿನ ಹಂತಗಳ ಬಗ್ಗೆ ಸಲಹೆ ನೀಡಲು ಕಾರ್ಯಪಡೆ ಸ್ಥಾಪಿಸಲು ಪ್ರಸ್ತಾಪಿಸಿದೆ ಮತ್ತು ಮುಂಬರುವ ದಿನಗಳಲ್ಲೂ ಕಾರ್ಯ ನಿರತರಾಗಿಲು ಒಪ್ಪಿಕೊಂಡಿತು.

***



(Release ID: 1613222) Visitor Counter : 192