ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಭಾರತದ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ವಿಚಾರಗಳ ಕ್ರೌಡ್ ಸೋರ್ಸಿಂಗ್‌ಗಾಗಿ ಒಂದು ವಾರ ಅವಧಿಯ ‘ಭಾರತ್ ಪಡೆ ಆನ್‌ಲೈನ್’ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’

Posted On: 10 APR 2020 2:43PM by PIB Bengaluru

ಭಾರತದ ಆನ್ಲೈನ್ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ವಿಚಾರಗಳ ಕ್ರೌಡ್ ಸೋರ್ಸಿಂಗ್ಗಾಗಿ ಒಂದು ವಾರ ಅವಧಿಯಭಾರತ್ ಡೆ ಆನ್ಲೈನ್ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್

#BharatPadheOnline ಟ್ವಿಟ್ಟರ್ ಹ್ಯಾಂಡಲ್ ನಲ್ಲಿ @HRDMinistry & DrRPNishank ಗೆ ಟ್ಯಾಗ್ ಮಾಡಿ ಮತ್ತು bharatpadheonline.mhrd[at]gmail[dot]com ನಲ್ಲಿ 16 ಏಪ್ರಿಲ್ 2020 ರವರೆಗೆ ಕುರಿತು ಆಲೋಚನೆಗಳನ್ನು ಹಂಚಿಕೊಳ್ಳಬಹುದು

ಲಭ್ಯವಿರುವ ಡಿಜಿಟಲ್ ಶಿಕ್ಷಣ ವೇದಿಕೆಗಳನ್ನು ಉತ್ತೇಜಿಸಿ ಆನ್ಲೈನ್ ಶಿಕ್ಷಣದ ಅಡೆತಡೆಗಳನ್ನು ನಿವಾರಿಸಲು ದೇಶದ ಬುದ್ಧಿವಂತರಿಂದ ಎಚ್ಆರ್ಡಿ ಸಚಿವಾಲಯವು ಸಲಹೆ/ ಪರಿಹಾರಗಳನ್ನು ನೇರವಾಗಿ ಆಹ್ವಾನಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ: ಶ್ರೀ ರಮೇಶ್ ಪೋಖ್ರಿಯಲ್ನಿಶಾಂಕ್

 

ಭಾರತದ ಆನ್ಲೈನ್ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ವಿಚಾರಗಳ ಕ್ರೌಡ್ ಸೋರ್ಸಿಂಗ್ಗಾಗಿ ಒಂದು ವಾರದ ಅವಧಿಯಭಾರತ್ ಪಡೆ ಆನ್ಲೈನ್ ಅಭಿಯಾನಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್ ಇಂದು ನವದೆಹಲಿಯಲ್ಲಿ ಚಾಲನೆ ನೀಡಿದರು. ಸಂದರ್ಭದಲ್ಲಿ ಮಾತನಾಡಿದ ಸಚಿವರು, ಲಭ್ಯವಿರುವ ಡಿಜಿಟಲ್ ಶಿಕ್ಷಣ ವೇದಿಕೆಗಳನ್ನು ಉತ್ತೇಜಿಸಲು, ಆನ್ಲೈನ್ ಶಿಕ್ಷಣದ ಅಡೆತಡೆಗಳನ್ನು ನಿವಾರಿಸಲು ಎಚ್ಆರ್ಡಿ ಸಚಿವಾಲಯದೊಂದಿಗೆ ನೇರವಾಗಿ ಸಲಹೆಗಳು / ಪರಿಹಾರಗಳನ್ನು ಹಂಚಿಕೊಳ್ಳಲು ಭಾರತದ ಬುದ್ಧಿವಂತರನ್ನು ಆಹ್ವಾನಿಸುವುದು ಇದರ ಉದ್ದೇಶ ಎಂದು ಹೇಳಿದರು. bharatpadheonline.mhrd[at]gmail[dot]com ಮತ್ತು #BharatPadheOnline ಟ್ವಿಟರ್ನಲ್ಲಿ 2020 ಏಪ್ರಿಲ್ 16 ರವರೆಗೆ ಸಲಹೆ, ಸೂಚನೆಗಳನ್ನು ನೀಡಬಹುದು. ಟ್ಡಿಟರ್ ಬಳಸುವಾಗ @HRDMinistry and @DrRPNishank ಗಳಿಗೆ ಟ್ಯಾಗ್ ಮಾಡಬೇಕು ಎಂದರು. ಬರುವ ಸಲಹೆ, ಸೂಚನೆಗಳನ್ನು ವೈಯಕ್ತಿಕವಾಗಿ ತಾವೇ ಪರಿಶೀಲಿಸುವುದಾಗಿ ಅವರು ಹೇಳಿದರು.ಅನುಸರಿಸಲು ಬಯಸುತ್ತೇನೆ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಮ್ಮ ಮುಖ್ಯ ಗುರಿ ಎಂದ ಶ್ರೀ ಪೋಖ್ರಿಯಾಲ್, ಅಸ್ತಿತ್ವದಲ್ಲಿರುವ ಆನ್ಲೈನ್ ಶಿಕ್ಷಣ ವಿಧಾನಗಳನ್ನು ಸುಧಾರಿಸಲು ಅವರು ಅಭಿಯಾನದಲ್ಲಿ ಮುಕ್ತ ಮನಸ್ಸಿನಿಂದ ಭಾಗವಹಿಸುತ್ತಾರೆ ಎಂದು ಅವರು ಆಶಿಸಿದರು. ಪ್ರಸ್ತುತ ಶಾಲೆಗಳು ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತಿದಿನ ವಿವಿಧ ಕೋರ್ಸ್ಗಳನ್ನು ನೀಡುವ ಅಸ್ತಿತ್ವದಲ್ಲಿರುವ ಡಿಜಿಟಲ್ ಪ್ಲಾಟ್ಫಾರ್ಮ್ಗಳೊಂದಿಗೆ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ ಆನ್ಲೈನ್ ಪ್ಲ್ಯಾಟ್ಫಾರ್ಮ್ಗಳಲ್ಲಿ ಏನು ಕೊರತೆಯಿದೆ ಮತ್ತು ಅವುಗಳನ್ನು ನಾವು ಹೇಗೆ ಇನ್ನೂ ಹೆಚ್ಚು ಆಕರ್ಷಕವಾಗಿ ಮಾಡಬಹುದು ಎಂಬುದನ್ನು ಅವರು ಹಂಚಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ದೇಶಾದ್ಯಂತದ ಶಿಕ್ಷಣತಜ್ಞರು ತಮ್ಮ ಪರಿಣತಿ ಮತ್ತು ಅನುಭವದೊಂದಿಗೆ ಕೊಡುಗೆ ನೀಡಲು ಮುಂದೆ ಬರಬಹುದು ಎಂದು ಅವರು ಹೇಳಿದರು. ಒಂದು ಆದರ್ಶಪ್ರಾಯವಾದ ಆನ್ಲೈನ್ ಶಿಕ್ಷಣ ಪರಿಸರ ವ್ಯವಸ್ಥೆ ಹೇಗಿರಬೇಕೆಂದು ಅವರು ಯೋಚಿಸುತ್ತಾರೆ? ಭಾರತದ ಪ್ರಸ್ತುತ ಆನ್ಲೈನ್ ಶಿಕ್ಷಣ ವ್ಯವಸ್ಥೆಯ ಮಿತಿಗಳೇನು? ಸಾಂಪ್ರದಾಯಿಕ ತರಗತಿ ಕೋಣೆಗಳಲ್ಲಿ ಅವರು ಎದುರಿಸುತ್ತಿರುವ ಯಾವ ಸವಾಲುಗಳನ್ನು ಆನ್ಲೈನ್ ಶಿಕ್ಷಣದ ಮೂಲಕ ಪರಿಹರಿಸಬಹುದು ಎಂದು ಕೇಳುವ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಚರ್ಚೆ ಪ್ರಾರಂಭಿಸಬಹುದು ಎಂದು ಸಚಿವರು ಹೇಳಿದರು.

ಭಾರತದಲ್ಲಿ ಆನ್ಲೈನ್ ಶಿಕ್ಷಣವನ್ನು ಸುಧಾರಿಸುವ ವಿಶಿಷ್ಟ ಉಪಕ್ರಮದಲ್ಲಿ ಭಾಗವಹಿಸಬೇಕೆಂದು ಶ್ರೀ ನಿಶಾಂಕ್ ಮತ್ತೊಮ್ಮೆ ಎಲ್ಲಾ ಭಾರತೀಯರನ್ನು ಒತ್ತಾಯಿಸಿದರು.

***

 


(Release ID: 1613090) Visitor Counter : 249