ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೋವಿಡ್ -19 ವಿರುದ್ಧ ಹೋರಾಟ: 1.37 ಲಕ್ಷ ಇ.ಪಿ.ಎಫ್. ಹಿಂತೆಗೆತ ಕ್ಲೇಮ್ಗಳನ್ನು 10 ದಿನಗಳಿಗೂ ಕಡಿಮೆ ಅವಧಿಯಲ್ಲಿ ಇತ್ಯರ್ಥ ಮಾಡಿದ ಇ.ಪಿ.ಎಫ್.ಒ.

Posted On: 10 APR 2020 1:17PM by PIB Bengaluru

ಕೋವಿಡ್ -19 ವಿರುದ್ಧ ಹೋರಾಟ: 1.37 ಲಕ್ಷ ಇ.ಪಿ.ಎಫ್. ಹಿಂತೆಗೆತ ಕ್ಲೇಮ್ಗಳನ್ನು 10 ದಿನಗಳಿಗೂ ಕಡಿಮೆ ಅವಧಿಯಲ್ಲಿ ಇತ್ಯರ್ಥ ಮಾಡಿದ ಇ.ಪಿ.ಎಫ್.ಒ.

 

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಶಾಸನಾತ್ಮಕ ಸಂಸ್ಥೆಯಾದ ಸಿಬ್ಬಂದಿ ಪ್ರಾವಿಡೆಂಟ್ ಫಂಡ್ ಸಂಘಟನೆ (ಇ.ಪಿ.ಎಫ್.ಒ.) ದೇಶಾದ್ಯಂತ 1.37 ಲಕ್ಷ ಕ್ಲೇಮ್ಗಳನ್ನು ಇತ್ಯರ್ಥ ಮಾಡಿ 279.65 ಕೋ.ರೂ.ಗಳನ್ನು ಕೋವಿಡ್ -19 ರ ವಿರುದ್ದ ಚಂದಾದಾರರು ಹೋರಾಡಲು ಅನುಕೂಲವಾಗುವಂತೆ ಇ.ಪಿ.ಎಫ್. ಯೋಜನೆಗೆ ತಿದ್ದುಪಡಿ ತಂದು ವಿಶೇಷವಾಗಿ ಒದಗಿಸಲಾದ ಪ್ರಸ್ತಾವನೆಯನ್ವಯ ಬಟವಾಡೆ ಮಾಡುತ್ತಿದೆ. ಈ ಮೊತ್ತದ ಪಾವತಿ ಈಗಾಗಲೇ ಆರಂಭಗೊಂದಿದೆ. ಕೆ.ವೈ.ಸಿ. ಗೆ ಪೂರ್ಣ ಬದ್ದವಾಗಿರುವ ಎಲ್ಲಾ ಅರ್ಜಿಗಳನ್ನು 72 ಗಂಟೆಗಳ ಒಳಗೆ ಇತ್ಯರ್ಥಪಡಿಸಲಾಗುತ್ತಿದೆ. ಬೇರಾವುದಾದರೂ ಗುಂಪಿನಲ್ಲಿ ಸದಸ್ಯರು ಕ್ಲೇಮು ಅರ್ಜಿ ಸಲ್ಲಿಸಿದ್ದರೆ , ಅವರು ಜಾಗತಿಕ ಸಾಂಕ್ರಾಮಿಕದ ವಿರುದ ಹೋರಾಟ ಅಡಿಯಲ್ಲಿ ಕ್ಲೇಮು ಸಲ್ಲಿಸಬಹುದು ಮತ್ತು ಪ್ರತೀ ಸದಸ್ಯರ ಕೆ.ವೈ.ಸಿ. ಶರತ್ತಿನ ಅನುಸರಣೆಯನ್ನು ಪರಿಶೀಲಿಸಿ ಸಾಧ್ಯವಿರುವಷ್ಟು ತ್ವರಿತವಾಗಿ ಕ್ಲೇಮ್ಗಳನ್ನು ಇತ್ಯರ್ಥ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟ ಮಾಡಲು ಇ.ಪಿ.ಎಫ್. ಯೋಜನೆಯಿಂದ ಹಣ ಹಿಂಪಡೆಯುವ ವಿಶೇಷ ಪ್ರಸ್ತಾವನೆಯು ಸರಕಾರ ಘೋಷಿಸಿದ ಪಿ.ಎಂ.ಜಿ.ಕೆ.ವೈ. ಯೋಜನೆಯ ಭಾಗವಾಗಿದೆ ಮತ್ತು ಆ ವಿಷಯದ ತುರ್ತು ಅಧಿಸೂಚನೆಯನ್ನು 2020 ರ ಮಾರ್ಚ್ 28 ರಂದು ಇ.ಪಿ.ಎಫ್. ಯೋಜನೆಯ ಪ್ಯಾರ 68 ಎಲ್ (3) ನ್ನು ಸೇರಿಸುವುದರ ಮೂಲಕ ಮಾಡಲಾಗಿದೆ. ಈ ಪ್ರಸ್ತಾವನೆಯ ಅಡಿಯಲ್ಲಿ ಮರು ಪಾವತಿ ಅವಶ್ಯವಿಲ್ಲದೆ ಹಿಂಪಡೆತವನ್ನು ಮೂರು ತಿಂಗಳ ಮೂಲ ವೇತನಗಳು ಮತ್ತು ತುಟ್ಟಿಭತ್ತೆಯಷ್ಟು ಮೊತ್ತದವರೆಗೆ ಮಾಡಬಹುದು ಅಥವಾ ಇ.ಪಿ.ಎಫ್. ಖಾತೆಯಲ್ಲಿ ಇರುವ ಸದಸ್ಯರ ಹಣದ 75 % ವರೆಗಿನ ಹಣವನ್ನು , ಯಾವುದು ಕಡಿಮೆಯೋ ಅದನ್ನು ಹಿಂಪಡೆಯಬಹುದು. ಸದಸ್ಯರು ಅದಕ್ಕಿಂತ ಕಡಿಮೆ ಹಣಕ್ಕಾಗಿಯೂ ಅರ್ಜಿ ಸಲ್ಲಿಸಬಹುದು. ಇದನ್ನು ಮುಂಗಡವಾಗಿ ಪರಿಗಣಿಸಲ್ಪಡುವುದರಿಂದ ಆದಾಯ ತೆರಿಗೆ ಕಡಿತ ಅನ್ವಯವಾಗುವುದಿಲ್ಲ.

ಭಾರೀ ಬೇಡಿಕೆ ನಿರೀಕ್ಷೆಯ ಹಿನ್ನೆಲೆಯಲ್ಲಿ , ಇ.ಪಿ.ಎಫ್.ಒ. ಸಂಪೂರ್ಣ ಹೊಸ ಸಾಫ್ಟ್ ವೇರ್ ಅಭಿವೃದ್ದಿಪಡಿಸಿದೆ. ಇದನ್ನು ಕ್ಲೇಮ್ಗಳ ಆನ್ ಲೈನ್ ಸಲ್ಲಿಕೆಗಾಗಿ ಸ್ವೀಕೃತಿ ಮಾದರಿಯಲ್ಲಿ 24 ಗಂಟೆಗಳೊಳಗೆ ಅಳವಡಿಸಲಾಗಿದೆ, 2020 ರ ಮಾರ್ಚ್ 29 ರಿಂದ ಕಾರ್ಯಾಚರಿಸುತ್ತಿದೆ. ಜೊತೆಗೆ ಅರ್ಜಿ ಕಾಗದರಹಿತವಾಗಿ ಸಲ್ಲಿಸಬೇಕಾಗಿದ್ದು, ಇದು ಸಾಮಾಜಿಕ ಅಂತರ ಕಾಪಾಡಬೇಕಾದ ಹಿನ್ನೆಲೆಯಲ್ಲಿ ಯಾವುದೇ ದೈಹಿಕ ಚಲನವಲನವನ್ನು ಕಡಿಮೆ ಮಾಡುತ್ತದೆ. ಎಲ್ಲಾ ರೀತಿಯಿಂದಲೂ ಕೆ.ವೈ.ಸಿ. ಆವಶ್ಯಕತೆಗಳನ್ನು ಪೂರೈಸಿದ ಎಲ್ಲಾ ಸದಸ್ಯರ ಕ್ಲೇಮ್ಗಳ ಇತ್ಯರ್ಥಕ್ಕೆ ಅಟೋ ಮೋಡ್ ನಲ್ಲಿ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಗಂಭೀರ ಬೆದರಿಕೆಯನ್ನು ಉಂಟು ಮಾಡಿದ್ದು, ಅದರ ಪರಿಣಾಮವಾಗಿ ಈ ಸಮಯದಲ್ಲಿ ಎದುರಾಗಬಹುದಾದ ಹಣದ ಆವಶ್ಯಕತೆಯನ್ನು ಪರಿಹರಿಸಲು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ವಿರುದ್ದ ಹೋರಾಟ ಮುಂಗಡವನ್ನು ಆದ್ಯತೆಯ ಮೇಲೆ ನೀಡಲು ನಿರ್ಧರಿಸಲಾಯಿತು.

ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟದ ಮುಂಗಡ ಪಡೆಯುವ ಕ್ಲೇಮ್ಗಳನ್ನು ಆನ್ ಲೈನಿನಲ್ಲಿ ಸಲ್ಲಿಸಬೇಕಾಗುತ್ತದೆ. ಪ್ರತೀ ಇ.ಪಿ.ಎಫ್. ಖಾತೆಯು ಕೆ.ವೈ.ಸಿ. ನಿಯಮಗಳನ್ನು ಅನುಸರಿಸಿರಬೇಕು ಎಂಬುದು ಪೂರ್ವ ಶರತ್ತು ಆಗಿರುತ್ತದೆ. ಇ.ಪಿ.ಎಫ್.ಒ ಜನ್ಮ ದಿನಾಂಕ ತಿದ್ದುಪಡಿ ಮಾನದಂಡವನ್ನು ಸಡಿಲಿಕೆ ಮಾಡಿದ್ದು, ಇದರಿಂದ ಕೆ.ವೈ.ಸಿ. ಅನುಸರಣೆ ಸುಲಭವಾಗುತ್ತದೆ.ಮತ್ತು ಆನ್ ಲೈನ್ ನಲ್ಲಿ ಜಾಗತಿಕ ಸಾಂಕ್ರಾಮಿಕ ವಿರುದ್ದ ಹೋರಾಟ ಕ್ಲೇಮ್ಗಳನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಚಂದಾದಾರರ ಆಧಾರ್ ಕಾರ್ಡಿನಲ್ಲಿ ನಮೂದಿಸಲಾದ ಜನನ ದಿನಾಂಕವನ್ನು ಪಿ.ಎಫ್. ದಾಖಲೆಗಳಲ್ಲಿ ಜನನ ದಿನಾಂಕವನ್ನು ಪರಿಗಣಿಸುವುದಕ್ಕಾಗಿ ಇ.ಪಿ.ಎಫ್.ಒ. ಅಂಗೀಕರಿಸುತ್ತದೆ. ಜನನ ದಿನಾಂಕದಲ್ಲಿ ಮೂರು ವರ್ಷಗಳವರೆಗೆ ವ್ಯತ್ಯಾಸ ಇರುವ ಎಲ್ಲಾ ಪ್ರಕರಣಗಳನ್ನು ಈಗ ಇ.ಪಿ.ಎಫ್.ಒ . ಅಂಗೀಕರಿಸುತ್ತದೆ.

***(Release ID: 1612914) Visitor Counter : 148