ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಡಲು ಎಸ್ಸಿಟಿಐಎಂಎಸ್ಟಿ (SCTIMST) ವಿಜ್ಞಾನಿಗಳಿಂದ ಸೋಂಕುನಿವಾರಕ ಗೇಟ್ವೇ ಮತ್ತು ಮುಖಗವಸು ವಿಲೇವಾರಿ ಬಿನ್ ಅಭಿವೃದ್ಧಿ
Posted On:
10 APR 2020 12:04PM by PIB Bengaluru
ಕೋವಿಡ್-19 ವಿರುದ್ಧ ಹೋರಾಡಲು ಎಸ್ಸಿಟಿಐಎಂಎಸ್ಟಿ (SCTIMST) ವಿಜ್ಞಾನಿಗಳಿಂದ ಸೋಂಕುನಿವಾರಕ ಗೇಟ್ವೇ ಮತ್ತು ಮುಖಗವಸು ವಿಲೇವಾರಿ ಬಿನ್ ಅಭಿವೃದ್ಧಿ
"ಜನರು, ಉಡುಪು, ಮೇಲ್ಮೈ ಮತ್ತು ಬಳಸಿ ಬಿಸಾಡಬಹುದಾದ ರಕ್ಷಣಾತ್ಮಕ ಸಾಧನಗಳ ಸೋಂಕು ನಿವಾರಣೆಯು ಪ್ರಸರಣ ಸರಪಳಿಯನ್ನು ಮುರಿಯಲು ಅತ್ಯಗತ್ಯ": ಡಿಎಸ್ಟಿ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ
ಕೇರಳದ ತಿರುವನಂತಪುರದಲ್ಲಿರುವ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ) ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (ಎಸ್ಸಿಟಿಐಎಂಎಸ್ಟಿ) ಯ ವಿಜ್ಞಾನಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎರಡು ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಿದ್ದಾರೆ.
ಎಸ್ಸಿಟಿಐಎಂಎಸ್ಟಿಯ ವೈದ್ಯಕೀಯ ಸಲಕರಣೆಗಳ ವಿಭಾಗದ ವಿಜ್ಞಾನಿಗಳಾದ ಜಿತಿನ್ ಕೃಷ್ಣನ್ ಮತ್ತು ಸುಭಾಶ್ ವಿ.ವಿ ಅವರು ಜನರನ್ನು ಸೋಂಕುರಹಿತರನ್ನಾಗಿಸಲು ವಿನ್ಯಾಸಗೊಳಿಸಿದ ಎರಡು ತಂತ್ರಜ್ಞಾನಗಳಲ್ಲಿ ಚಿತ್ರಾ ಸೋಂಕುನಿವಾರಕ ಗೇಟ್ವೇ ಒಂದು. ಇದು ಪೋರ್ಟಬಲ್ ವ್ಯವಸ್ಥೆಯಾಗಿದ್ದು, ಹೈಡ್ರೋಜನ್ ಪೆರಾಕ್ಸೈಡ್ ಮಂಜು ಮತ್ತು ಯುವಿ ಆಧಾರಿತ ಸೋಂಕು ನಿವಾರಕ ಸೌಲಭ್ಯವನ್ನು ಉತ್ಪಾದಿಸುವ ವ್ಯವಸ್ಥೆಯಾಗಿದೆ.
ಹೈಡ್ರೋಜನ್ ಪೆರಾಕ್ಸೈಡ್ ಹೊಗೆಯು ವ್ಯಕ್ತಿಯ ದೇಹ, ಕೈ ಮತ್ತು ಬಟ್ಟೆಗಳನ್ನು ಸೋಂಕುರಹಿತಗೊಳಿಸುತ್ತದೆ. ಯುವಿ ವ್ಯವಸ್ಥೆಯು ಕೊಠಡಿಯನ್ನು ಸೋಂಕುರಹಿತಗೊಳಿಸುತ್ತದೆ. ಇಡೀ ವ್ಯವಸ್ಥೆಯನ್ನು ವಿದ್ಯುನ್ಮಾನದಿಂದ ನಿಯಂತ್ರಿಸಲಾಗುತ್ತದೆ. ಕೊಠಡಿಯಲ್ಲಿ ಅಳವಡಿಸಲಾದ ಸಂವೇದಕಗಳು ವ್ಯಕ್ತಿಯ ಪ್ರವೇಶವನ್ನು ಪತ್ತೆ ಮಾಡುತ್ತವೆ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಮಂಜು ಉತ್ಪಾದನೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. ವ್ಯಕ್ತಿಯು ಕೋಣೆಯಲ್ಲಿ ಅದರ ಅಂತ್ಯದವರೆಗೆ ನಡೆಯಬೇಕು. ವ್ಯಕ್ತಿಯು ನಿರ್ಗಮಿಸಿದಾಗ, ವ್ಯವಸ್ಥೆಯು ಹೈಡ್ರೋಜನ್ ಪೆರಾಕ್ಸೈಡ್ ಧೂಮ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತದೆ ಮತ್ತು ಕೋಣೆಯೊಳಗಿನ ಯುವಿ ದೀಪವನ್ನು ಸೋಂಕುರಹಿತಗೊಳಿಸಲು ಆನ್ ಮಾಡುತ್ತದೆ. ನಿಗದಿತ ಸಮಯದ ನಂತರ ಯುವಿ ಬೆಳಕನ್ನು ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಮಾಡಿದ ನಂತರ, ಮುಂದಿನ ವ್ಯಕ್ತಿಗೆ ಚೇಂಬರ್ ಸಿದ್ಧವಾಗುತ್ತದೆ. ಇಡೀ ಪ್ರಕ್ರಿಯೆಯು ಕೇವಲ 40 ಸೆಕೆಂಡುಗಳಲ್ಲಿ ನಡೆಯುತ್ತದೆ. ಈ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಸೈಡ್ವಾಲ್ಗಳಲ್ಲಿ ಗಾಜಿನ ಫಲಕಗಳನ್ನು ಹೊಂದಿದೆ ಮತ್ತು ಬಳಕೆಯ ಸಮಯವನ್ನು ತಿಳಿಯಲು ದೀಪಗಳನ್ನು ಅಳವಡಿಸಲಾಗಿದೆ. ವಿನ್ಯಾಸ ಮತ್ತು ಜ್ಞಾನವನ್ನು ಕೇರಳದ ಎರ್ನಾಕುಲಂನಲ್ಲಿರುವ ಎಚ್ಎಂಟಿ ಮಷೀನ್ ಟೂಲ್ಸ್ ಗೆ ವರ್ಗಾಯಿಸಲಾಗಿದೆ.
ಎರಡನೇ ತಂತ್ರಜ್ಞಾನ, ಚಿತ್ರ ಯುವಿ ಆಧರಿತ ಮುಖಗವಸು ವಿಲೇವಾರಿ ಬಿನ್ ಅನ್ನು ಎಸ್ಸಿಟಿಎಂಎಸ್ಟಿಯ ಸುಭಾಶ್ ವಿ.ವಿ ವಿನ್ಯಾಸಗೊಳಿಸಿದ್ದಾರೆ,. ‘ಯುವಿ ಬೇಸ್ಡ್ ಫೇಸ್ಮಾಸ್ಕ್ ಡಿಸ್ಪೋಸಲ್ ಬಿನ್’ ಅನ್ನು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬಹುದಾಗಿದೆ, ಅಲ್ಲಿ ಬಳಸಿದ ಮುಖಗವಸು, ತಲೆಗವಸು, ಫೇಸ್ ಶೀಲ್ಡ್ ಮುಂತಾದವುಗಳನ್ನು ಸೊಂಕುರಹಿತಗೊಳಿಸಿ ಸೋಂಕಿನ ಸರಪಳಿಯನ್ನು ಮುರಿಯಲು ಇದು ಅಗತ್ಯವಾಗಿರುತ್ತದೆ.
ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕದ ಕಾರಣ ಮುಖಗವಸುಗಳು ಅಗತ್ಯ ವಸ್ತುಗಳಾಗಿವೆ. ಬಳಸಿದ ಮುಖಗವಸುಗಳು ಅಪಾಯಕಾರಿ ತ್ಯಾಜ್ಯವಾಗಿದ್ದು ಅದನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ತ್ಯಾಜ್ಯ ಸಂಗ್ರಹಕಾರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ COVID19 ಗೆ ಒಡ್ಡಿಕೊಳ್ಳುವ ಅಪಾಯವಿದೆ. ಬಳಸಿದ ಮುಖಗವಸುಗಳನ್ನು ತ್ಯಾಜ್ಯ ತೊಟ್ಟಿಯಲ್ಲಿ ಎಸೆಯುವ ಬದಲು, ಬಳಸಿದ ಮುಖಗವಸುಗಳನ್ನು ಸೋಂಕುರಹಿತಗೊಳಿಸುವುದು ಅತ್ಯಗತ್ಯವಾಗಿದೆ. ವಿನ್ಯಾಸ ಮತ್ತು ಜ್ಞಾನವನ್ನು ಕೇರಳದ ಎರ್ನಾಕುಲಂನ ಎಚ್ಎಂಟಿ ಮಷೀನ್ ಟೂಲ್ಸ್ ಗೆ ವರ್ಗಾಯಿಸಲಾಗಿದೆ.
ಪ್ರಸರಣದ ಸರಪಳಿಯನ್ನು ಮುರಿಯಲು ಜನರು, ಉಡುಪುಗಳು, ಮೇಲ್ಮೈಗಳು ಮತ್ತು ಬಳಸಿ ಬಿಸಾಡಬಹುದಾದ ರಕ್ಷಣಾತ್ಮಕ ಸಾಧನಗಳ ಸೋಂಕುನಿವಾರಣೆ ಅತ್ಯಗತ್ಯವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್ ಸಿಂಡಣೆ ಮತ್ತು ಯುವಿ ಬೆಳಕನ್ನು ಸೂಕ್ತ ಪ್ರಮಾಣದಲ್ಲಿ ಬಳಸುವುದು ಈ ಹೋರಾಟದಲ್ಲಿ ಎರಡು ಪ್ರಮುಖ ಕ್ರಮಗಳಾಗಿವೆ. ಇವೆರಡನ್ನೂ ಇಲ್ಲಿ ಅಭಿವೃದ್ಧಿಪಡಿಲಾಗಿರುವ ನಾವೀನ್ಯತೆಗಳಲ್ಲಿ ಬಳಸಲಾಗಿದೆ" ಎಂದು ಡಿಎಸ್ಟಿ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳುತ್ತಾರೆ.
(ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಶ್ರೀಮತಿ ಸ್ವಪ್ನಾ ವಾಮದೇವನ್, PRO, SCTIMST, Mob: 9656815943, ಇಮೇಲ್: pro@sctimst.ac.in)
***
(Release ID: 1612876)
Visitor Counter : 127
Read this release in:
English
,
Marathi
,
Urdu
,
Hindi
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam