ರಕ್ಷಣಾ ಸಚಿವಾಲಯ
ಮುಂಬೈನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಭಾರತೀಯ ನೌಕಾಪಡೆಯಿಂದ ಪಡಿತರ ಪೂರೈಕೆ
प्रविष्टि तिथि:
09 APR 2020 6:31PM by PIB Bengaluru
ಮುಂಬೈನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಭಾರತೀಯ ನೌಕಾಪಡೆಯಿಂದ ಪಡಿತರ ಪೂರೈಕೆ
ಕೋವಿಡ್-19 ಲಾಕ್ಡೌನ್ ನಿಂದಾಗಿ ಅಗತ್ಯವಿರುವವರಿಗೆ ನೆರವು ನೀಡುವ ಸಲುವಾಗಿ, ಭಾರತೀಯ ನೌಕಾಪಡೆಯು ಏಪ್ರಿಲ್ 04 ಮತ್ತು 08 ರಂದು ಮುಂಬೈನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ವಿತರಿಸಲು ರಾಜ್ಯ ಸರ್ಕಾರಕ್ಕೆ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಪಡಿತರ ಪ್ಯಾಕೆಟ್ಗಳನ್ನು ಒದಗಿಸಿದೆ.
ಲಾಕ್ಡೌನ್ನಲ್ಲಿ ಸಿಲುಕಿರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ಪರಿಹಾರ ಒದಗಿಸುವಂತೆ ಮುಂಬೈ ನಗರದ ಜಿಲ್ಲಾಧಿಕಾರಿ ಕಚೇರಿ ಏಪ್ರಿಲ್ 3 ರಂದು ಅರ್ಜಿಯನ್ನು ಭಾರತೀಯ ನೌಕಾಪಡೆಗೆ ಮನವಿ ಮಾಡಿತ್ತು. ಅದರಂತೆ, ಪಶ್ಚಿಮ ನೌಕಾ ಕಮಾಂಡ್ ತಕ್ಷಣವೇ ಸುಮಾರು 250 ಪಡಿತರ ಪ್ಯಾಕೆಟ್ಗಳನ್ನು ಏಪ್ರಿಲ್ 04 ರಂದು ವ್ಯವಸ್ಥೆಗೊಳಿಸಿತು. ಸಾಕಷ್ಟು ಪ್ರಮಾಣದ ಆಹಾರ ಪದಾರ್ಥಗಳಿರುವ ಪ್ಯಾಕೆಟ್ಗಳನ್ನು ಮುಸಾಫಿರ್ ಖಾನಾ ಬಳಿಯ ಸ್ಥಳೀಯ ಅಧಿಕಾರಿಗಳಿಗೆ ಮತ್ತು ಏಷ್ಯಾಟಿಕ್ ಲೈಬ್ರರಿ ಬಳಿಯ ಕಲೆಕ್ಟರ್ ಕಚೇರಿಗೆ ಹಸ್ತಾಂತರಿಸಲಾಯಿತು. ಕಫ್ ಪೆರೇಡ್ ಮತ್ತು ಕಲ್ಬಾ ದೇವಿಗಳಲ್ಲಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
ಏಪ್ರಿಲ್ 08 ರಂದು ಸ್ಥಳೀಯ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ 500 ಪಡಿತರ ಪ್ಯಾಕೆಟ್ಗಳನ್ನು ನೀಡಲಾಯಿತು ಮತ್ತು ಕಾಮಾಟಿಪುರ ಪ್ರದೇಶದಲ್ಲಿ ಸಿಲುಕಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಿತರಿಸಲಾಯಿತು.
***
(रिलीज़ आईडी: 1612845)
आगंतुक पटल : 121
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu