ನಾಗರೀಕ ವಿಮಾನಯಾನ ಸಚಿವಾಲಯ
ಕೊವಿಡ್–19 ವಿರುದ್ಧ ಹೋರಾಡುವ ಸಾಮೂಹಿಕ ಉದ್ದೇಶದಿಂದ, ಸಾರ್ವಜನಿಕ ಮತ್ತು ಖಾಸಗಿ ವಿಮಾನಯಾನ ನಿರ್ವಾಹಕರು ಹಾಗು ಸಂಬಂಧಿತ ಏಜೆನ್ಸಿಗಳು ದಣಿವರಿಯದೆ ಕಾರ್ಯನಿರ್ವಹಿಸುತ್ತಿವೆ
प्रविष्टि तिथि:
09 APR 2020 4:55PM by PIB Bengaluru
ಕೊವಿಡ್–19 ವಿರುದ್ಧ ಹೋರಾಡುವ ಸಾಮೂಹಿಕ ಉದ್ದೇಶದಿಂದ, ಸಾರ್ವಜನಿಕ ಮತ್ತು ಖಾಸಗಿ ವಿಮಾನಯಾನ ನಿರ್ವಾಹಕರು ಹಾಗು ಸಂಬಂಧಿತ ಏಜೆನ್ಸಿಗಳು ದಣಿವರಿಯದೆ ಕಾರ್ಯನಿರ್ವಹಿಸುತ್ತಿವೆ
ವೈದ್ಯಕೀಯ ಸಾಮಗ್ರಿಗಳನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ತಲುಪಿಸಲಾಗುತ್ತಿದೆ
ಕೊವಿಡ್ – 19 ಲಾಕ್ ಡೌನ್ ಸಂದರ್ಭದಲ್ಲಿ, ಐ ಸಿ ಎಂ ಆರ್, ಹೆಚ್ ಎಲ್ ಎಲ್ ಮತ್ತು ಇತರರು ಸೇರಿದಂತೆ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ನಿರಂತರವಾಗಿ ದೇಶಾದ್ಯಂತ ತಲುಪಿಸಲಾಗುತ್ತಿದೆ. ಏರ್ ಇಂಡಿಯಾ, ಐ ಎ ಎಫ್, ಪವನ್ ಹನ್ಸ್, ಇಂಡಿಗೊ ಮತ್ತು ಬ್ಲೂ ಡಾರ್ಟ್ ನಂತಹ ದೇಶೀಯ ಸಾರ್ವಜನಿಕ ಮತ್ತು ಖಾಸಗಿ ವಿಮಾನಯಾನ ನಿರ್ವಾಹಕ ಕಂಪನಿಗಳು, ಔಷಧಿಗಳು, ಐ ಸಿ ಎಂ ಆರ್ ಸರಕುಗಳು, ಹೆಚ್ ಎಲ್ ಎಲ್ ಸರಕುಗಳು ಮತ್ತು ಇತರ ಅಗತ್ಯ ಸರಕುಗಳನ್ನು ಶ್ರೀನಗರ, ಕೊಲ್ಕತಾ, ಚೆನ್ನೈ, ಬೆಂಗಳೂರು, ಭುಬನೇಶ್ವರ ಮತ್ತು ದೇಶದ ಇತರ ಪ್ರಾಂತ್ಯಗಳಿಗೆ ಏಪ್ರಿಲ್ 8, 2020 ರಂದು ತಲುಪಿಸಿವೆ. ಆರೋಗ್ಯ ಸಚಿವಾಲಯ, ಜವಳಿ ಸಚಿವಾಲಯ, ಅಂಚೆ ಇಲಾಖೆ ಇತ್ಯಾದಿಗಳೊಂದಿಗೆ ಸರಕುಗಳನ್ನು ತಲುಪಿಸಲು ನಾಗರಿಕ ವಿಮಾನಯಾನ ಸಚಿವಾಲಯ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ದೇಶದ ಎಲ್ಲ ಭಾಗಗಳ ಜನರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡುವ ಮೂಲ ಉದ್ದೇಶ ಪೂರೈಸಬಹುದಾಗಿದೆ. ಜೊತೆಗೆ, ಸಾಮಗ್ರಿಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಿಂದ, ರವಾಣೆ ಮತ್ತು ನಿಗದಿತ ಸ್ಥಳ ತಲುಪುವವರೆಗೂ, ಪ್ರತಿ ಹಂತದಲ್ಲೂ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ
ಕೊವಿಡ್ – 19 ಲಾಕ್ ಡೌನ್ ಅವಧಿಯಲ್ಲಿ ಲೈಫ್ ಲೈನ್ ಉಡಾನ್ ವಿಮಾನಗಳು ಒಟ್ಟು 248 ಟನ್ ಗಳಷ್ಟು ಸರಕುಗಳನ್ನು ಸಾಗಿಸಿವೆ. ಇಲ್ಲಿವರೆಗೆ ಲೈನ್ ಉಡಾನ್ ಅಡಿಯಲ್ಲಿ 167 ವಿಮಾನಗಳು ಕಾರ್ಯ ನಿರ್ವಹಿಸಿದ್ದು 1,50,006 ಕಿ, ಮೀ. ದೂರವನ್ನು ಕ್ರಮಿಸಿವೆ
|
ಕ್ರಮ ಸಂಖ್ಯೆ
|
ದಿನಾಂಕ
|
ಏರ್ ಇಂಡಿಯಾ
|
ಮೈತ್ರಿ
|
ಐ ಎ ಎಫ್
|
ಇಂಡಿಗೊ
|
ಸ್ಪೈಸ್ ಜೆಟ್
|
ನಿರ್ವಹಿಸಿದ ಒಟ್ಟು ವಿಮಾನಗಳು
|
|
1
|
26.3.2020
|
02
|
--
|
-
|
-
|
02
|
04
|
|
2
|
27.3.2020
|
04
|
09
|
01
|
-
|
--
|
14
|
|
3
|
28.3.2020
|
04
|
08
|
-
|
06
|
--
|
18
|
|
4
|
29.3.2020
|
04
|
10
|
06
|
--
|
--
|
20
|
|
5
|
30.3.2020
|
04
|
-
|
03
|
--
|
--
|
07
|
|
6
|
31.3.2020
|
09
|
02
|
01
|
|
--
|
12
|
|
7
|
01.4.2020
|
03
|
03
|
04
|
--
|
-
|
10
|
|
8
|
02.4.2020
|
04
|
05
|
03
|
--
|
--
|
12
|
|
9
|
03.4.2020
|
08
|
--
|
02
|
--
|
--
|
10
|
|
10
|
04.4.2020
|
04
|
03
|
02
|
--
|
--
|
09
|
|
11
|
05.4.2020
|
--
|
--
|
16
|
--
|
--
|
16
|
|
12
|
06.4.2020
|
03
|
04
|
13
|
--
|
--
|
20
|
|
13
|
07.4.2020
|
04
|
02
|
03
|
--
|
--
|
09
|
|
14
|
08.4.2020
|
03
|
--
|
03
|
|
|
06
|
|
|
ಒಟ್ಟು ವಿಮಾನಗಳು
|
56
|
46
|
57
|
06
|
02
|
167
|
ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗಾಗಿ ಏರ್ ಇಂಡಿಯಾ ಮತ್ತು ಐ ಎ ಫ್ ಜೊತೆಗೂಡಿವೆ.
ಏಪ್ರಿಲ್ 8, 2020 ರಂದು ಏರ್ ಇಂಡಿಯಾ 3.76 ಟನ್ ಗಳಷ್ಟು ಸಾಮಗ್ರಿಗಳನ್ನು ಕೊಲಂಬೊಗೆ ಸಾಗಿಸಿತು. ಅವಶ್ಯಕತೆಗೆ ಅನುಗುಣವಾಗಿ, ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಇತರ ದೇಶಗಳಿಗೆ ಸಾಗಿಸಲು ಏರ್ ಇಂಡಿಯಾ ನಿಯಮಿತ ಕಾರ್ಗೊ ವಿಮಾನಗಳನ್ನು ಮೀಸಲಿರಿಸಿದೆ
ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ; ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಮಾರ್ಚ್ 24 ರಿಂದ ಏಪ್ರಿಲ್ 8 2020 ರ ವರೆಗೆ ಸ್ಪೈಸ್ ಜೆಟ್ 2,99,775 ಕಿ. ಮೀ. ದೂರವನ್ನು ಮತ್ತು 1805.6 ಟನ್ ಗಳಷ್ಟು ಸರಕುಗಳನ್ನು 220 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತ್ತು. ಇವುಗಳಲ್ಲಿ 61 ಅಂತಾರಾಷ್ಟ್ರೀಯ ಕಾರ್ಗೊ ವಿಮಾನಗಳಾಗಿವೆ.
ಏಪ್ರಿಲ್ 3 ರಿಂದ ಏಪ್ರಿಲ್ 8 2020 ರ ವರೆಗೆ ಇಂಡಿಗೊ 12,206 ಕಿ. ಮೀ. ದೂರವನ್ನು ಮತ್ತು 4.37 ಟನ್ ಗಳಷ್ಟು ಸರಕುಗಳನ್ನು ಸಾಗಿಸಿದೆ.
ಸ್ಪೈಸ್ ಜೆಟ್ ನಿಂದ ದೇಶೀಯ ಕಾರ್ಗೊ ಸಾಗಣೆ (08.04.2020 ರಂತೆ)
|
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
|
08-04-2020
|
11
|
100.63
|
10,329
|
ಸ್ಪೈಸ್ ಜೆಟ್ ನಿಂದ ಅಂತಾರಾಷ್ಟ್ರೀಯ ಕಾರ್ಗೊ ಸಾಗಣೆ (08.04.2020 ರಂತೆ)
|
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
|
08-04-2020
|
6
|
57.38
|
12,366
|
ಬ್ಲೂ ಡಾರ್ಟ್ ಕಾರ್ಗೊಯಿಂದ ಸಾಗಣೆ (08.04.2020 ರಂತೆ)
|
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
|
08-04-2020
|
6
|
1,23.300
|
5,027.85
|
ಇಂಡಿಗೊ ಕಾರ್ಗೊಯಿಂದ ಸಾಗಣೆ (08.04.2020 ರಂತೆ)
|
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
|
|
15
|
4.37
|
12,206
|
(ಸೂಚನೆ – ಇಂಡಿಗೊ ಸರಕು ಸಾಗಣೆಯಲ್ಲಿ ಸರ್ಕಾರ ನೀಡುತ್ತಿರುವ ವೈದ್ಯಕೀಯ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸುವುದೂ ಒಳಗೊಂಡಿರುತ್ತದೆ)
****
(रिलीज़ आईडी: 1612752)
आगंतुक पटल : 282
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu