ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
COVID-19 ಸಾಂಕ್ರಾಮಿಕ ನಿಗ್ರಹಕ್ಕೆ ESIC ನಿಂದ ಹಲವಾರು ಕ್ರಮಗಳು
Posted On:
09 APR 2020 5:02PM by PIB Bengaluru
COVID-19 ಸಾಂಕ್ರಾಮಿಕ ನಿಗ್ರಹಕ್ಕೆ ESIC ನಿಂದ ಹಲವಾರು ಕ್ರಮಗಳು
1042 ಐಸೋಲೇಷನ್ ಹಾಸಿಗೆಗಳನ್ನು ಹೊಂದಿರುವ ಎಂಟು ಇಎಸ್ಐಸಿ ಆಸ್ಪತ್ರೆಗಳನ್ನು COVID-19 ಮೀಸಲು ಆಸ್ಪತ್ರೆಗಳಾಗಿ ಘೋಷಣೆ
COVID-19 ಸಾಂಕ್ರಾಮಿಕ ರೋಗದಿಂದಾಗಿ ದೇಶವು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸಾಮಾಜಿಕ ಅಂತರವನ್ನು ಜಾರಿಗೆ ತರಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಲಾಗಿದೆ. ಬಿಕ್ಕಟ್ಟನ್ನು ಎದುರಿಸಲು, ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಸಾರ್ವಜನಿಕರಿಗೆ ನೆರವಾಗಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
1042 ಐಸೋಲೇಷನ್ ಹಾಸಿಗೆಗಳನ್ನು ಹೊಂದಿರುವ ಭಾರತದಾದ್ಯಂತದ ಈ ಕೆಳಗಿನ ಇಎಸ್ಐಸಿ ಆಸ್ಪತ್ರೆಗಳನ್ನು ಕೋವಿಡ್ -19 ಮೀಸಲು ಆಸ್ಪತ್ರೆಗಳೆಂದು ಘೋಷಿಸಲಾಗಿದೆ:
ಎ. ಇಎಸ್ಐಸಿ ಆಸ್ಪತ್ರೆ, ಅಂಕಲೇಶ್ವರ, ಗುಜರಾತ್: 100 ಹಾಸಿಗೆಗಳು
ಬಿ. ಇಎಸ್ಐಸಿ ಆಸ್ಪತ್ರೆ, ಗುರುಗ್ರಾಮ್, ಹರಿಯಾಣ: 80 ಹಾಸಿಗೆಗಳು
ಸಿ. ಇಎಸ್ಐಸಿ ಆಸ್ಪತ್ರೆ, ವಾಪಿ, ಗುಜರಾತ್: 100 ಹಾಸಿಗೆಗಳು
ಡಿ. ಇಎಸ್ಐಸಿ ಆಸ್ಪತ್ರೆ, ಉದಯಪುರ, ರಾಜಸ್ಥಾನ: 100 ಹಾಸಿಗೆಗಳು
ಇ. ಇಎಸ್ಐಸಿ ಆಸ್ಪತ್ರೆ, ಜಮ್ಮು: 50 ಹಾಸಿಗೆಗಳು
ಎಫ್. ಇಎಸ್ಐಸಿ ಆಸ್ಪತ್ರೆ ಬಡ್ಡಿ, ಹಿಮಾಚಲ ಪ್ರದೇಶ: 100 ಹಾಸಿಗೆಗಳು
ಜಿ. ಇಎಸ್ಐಸಿ ಆಸ್ಪತ್ರೆ, ಆದಿತ್ಯಪುರ, ಜಾರ್ಖಂಡ್: 42 ಹಾಸಿಗೆಗಳು
ಎಚ್. ಇಎಸ್ಐಸಿ ಆಸ್ಪತ್ರೆ, ಜೋಕಾ, ಪಶ್ಚಿಮ ಬಂಗಾಳ: 470 ಹಾಸಿಗೆಗಳು
ಇವುಗಳೊಂದಿಗೆ, ದೇಶಾದ್ಯಂತ ಉಳಿದಿರುವ ಇಎಸ್ಐಸಿ ಆಸ್ಪತ್ರೆಗಳಲ್ಲಿ ಸುಮಾರು 1112 ಐಸೋಲೇಷನ್ ಹಾಸಿಗೆಗಳು ಲಭ್ಯವಿವೆ. ಇದಲ್ಲದೆ, 197 ಆಸ್ಪತ್ರೆಗಳಲ್ಲಿ ಒಟ್ಟು 555 ಐಸಿಯು/ ಎಚ್ಡಿಯು ಹಾಸಿಗೆಗಳನ್ನು ಸಹ ಲಭ್ಯಗೊಳಿಸಲಾಗಿದೆ. ಫರೀದಾಬಾದ್ (ಹರಿಯಾಣ) ಇಎಸ್ಐಸಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಸೌಲಭ್ಯ ಲಭ್ಯವಿದೆ.
ಈ ಕೆಳಗಿನ ಇಎಸ್ಐಸಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ (ಒಟ್ಟು 1184 ಹಾಸಿಗೆಗಳು) ಸೌಲಭ್ಯ ಕಲ್ಪಿಸಲಾಗಿದೆ:
ಇಎಸ್ಐಸಿ ಆಸ್ಪತ್ರೆ, ಅಲ್ವಾರ್ (ರಾಜಸ್ಥಾನ): 444 ಹಾಸಿಗೆಗಳು
ಇಎಸ್ಐಸಿ ಆಸ್ಪತ್ರೆ, ಬಿಹ್ತಾ, ಪಾಟ್ನಾ (ಬಿಹಾರ): 400 ಹಾಸಿಗೆಗಳು
ಇಎಸ್ಐಸಿ ಆಸ್ಪತ್ರೆ, ಕಲಬುರ್ಗಿ (ಕರ್ನಾಟಕ): 240 ಹಾಸಿಗೆಗಳು
ಇಎಸ್ಐಸಿ ಆಸ್ಪತ್ರೆ, ಕೊರ್ಬಾ (ಛತ್ತೀಸ್ಗಢ): 100 ಹಾಸಿಗೆಗಳು
ಈ ಕಠಿಣ ಸಂದರ್ಭದಲ್ಲಿ ಇಎಸ್ಐ ಫಲಾನುಭವಿಗಳ ಕಷ್ಟವನ್ನು ಸರಾಗಗೊಳಿಸುವ ಸಲುವಾಗಿ, ಲಾಕ್ ಡೌನ್ ಅವಧಿಯಲ್ಲಿ ಫಲಾನುಭವಿಗಳು ಖಾಸಗಿ ಕೆಮಿಸ್ಟ್ ಗಳಿಂದ ಔಷಧಿಗಳನ್ನು ಖರೀದಿಸಲು ಇಎಸ್ಐಸಿ ಅನುಮತಿ ನೀಡಿದೆ ಮತ್ತು ನಂತರ ಇಎಸ್ಐಸಿ ಇದನ್ನು ಮರುಪಾವತಿ ಮಾಡುತ್ತದೆ.
ಕೊರೊನಾ ಶಂಕಿತ/ ದೃಢಪಟ್ಟ ಪ್ರಕರಣಗಳೊಇಗಾಗಿ ಇಎಸ್ಐಸಿ ಆಸ್ಪತ್ರೆಯನ್ನು ಮೀಸಲಾದ ಕೋವಿಡ್ -19 ಆಸ್ಪತ್ರೆಯೆಂದು ಘೋಷಿಸಿರುವ ಕಡೆ ಟೈ-ಅಪ್ ಆಸ್ಪತ್ರೆಯಿಂದ ವೈದ್ಯಕೀಯ ಸೇವೆಗಳನ್ನು ಒದಗಿಸಲು ಪರ್ಯಾಯ ಅವಕಾಶ ಮಾಡಲಾಗಿದೆ. ಸಂಬಂಧಿತ ಇಎಸ್ಐಸಿ ಆಸ್ಪತ್ರೆ ಮೀಸಲಾದ ಕೋವಿಡ್ -19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ, ನಿಗದಿತ ದ್ವಿತೀಯ/ ಎಸ್ಎಸ್ಟಿ ಸಮಾಲೋಚನೆ/ ದಾಖಲು/ ಪರೀಕ್ಷೆಗಾಗಿ ಇಎಸ್ಐ ಫಲಾನುಭವಿಗಳನ್ನು ಟೈ-ಅಪ್ ಆಸ್ಪತ್ರೆಗಳಿಗೆ ಉಲ್ಲೇಖಿಸಬಹುದು. ಇಎಸ್ಐ ಫಲಾನುಭವಿಗಳು ಅರ್ಹತೆಗೆ ಅನುಗುಣವಾಗಿ, ಉಲ್ಲೇಖಿತ ಪತ್ರವಿಲ್ಲದೆ ನೇರವಾಗಿ ಟೈ-ಅಪ್ ಆಸ್ಪತ್ರೆಯಿಂದ ತುರ್ತು/ ತುರ್ತುರಹಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಕೊರೊನಾ ವೈರಸ್ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ/ ಕೇಂದ್ರ ಆರೋಗ್ಯ ಪ್ರಾಧಿಕಾರಗಳೊಂದಿಗೆ ಪರಿಣಾಮಕಾರಿ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ಪ್ರತಿ ಇಎಸ್ಐಸಿ ಆಸ್ಪತ್ರೆಗೆ ನೇಮಿಸಲಾಗಿದೆ.
ಇದಲ್ಲದೆ, ಇಎಸ್ಐಸಿ ಆಸ್ಪತ್ರೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ನಿಯಮಿತವಾಗಿ ಅಳವಡಿಸಿಕೊಳ್ಳುತ್ತಿವೆ. ಅಂತಹ ಎಲ್ಲಾ ಕ್ರಮಗಳ ಅನುಷ್ಠಾನವನ್ನು ಇಎಸ್ಐಸಿ ಮುಖ್ಯ ಕಚೇರಿಯಲ್ಲಿ ದೇಶಾದ್ಯಂತ ಇಎಸ್ಐಸಿ ಆಸ್ಪತ್ರೆಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಮುಖಗವಸು ಮತ್ತು ವೈಯಕ್ತಿಕ ರಕ್ಷಣಾ ಸಲಕರಣೆಗಳ (ಪಿಪಿಇ) ಕಿಟ್ಗಳ ಸಮರ್ಪಕ ಸಂಗ್ರಹವನ್ನು ನಿರ್ವಹಿಸಲು ಪ್ರಯತ್ನಿಸಲಾಗುತ್ತಿದೆ. ಇಎಸ್ಐಸಿ ಆರೋಗ್ಯ ಸಂಸ್ಥೆಯ ಆವರಣದ ಸೋಂಕುನಿವಾರಕ, ಅಸೆಪ್ಸಿಸ್ ಮತ್ತು ನೈರ್ಮಲ್ಯೀಕರಣದ ಕ್ರಮಗಳನ್ನು ಹೆಚ್ಚಿಸಲಾಗಿದೆ.
COVID-19 ಸೋಂಕಿನ ನಿರ್ವಹಣೆ ಕುರಿತು ವೈದ್ಯಕೀಯ/ ಅರೆವೈದ್ಯಕೀಯ ಸಿಬ್ಬಂದಿಗೆ ಓರಿಯಂಟೇಷನ್ ನೀಡಲಾಗುತ್ತಿದೆ. ಕೊರೊನಾವೈರಸ್ ಸಾಂಕ್ರಾಮಿಕಕ್ಕೆ ವಿಷಯಗಳಿಗೆ ಸಂಬಂಧಿಸಿದಂತೆ ಇಎಸ್ಐಸಿ ಆಸ್ಪತ್ರೆಗಳು ಆಯಾ ರಾಜ್ಯಗಳ ಆಡಳಿತದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
ಶಾಶ್ವತ ಅಂಗವೈಕಲ್ಯದ ಕಾರಣದಿಂದಾಗಿ ವಿಮೆ ಮಾಡಲಾಗದ ಉದ್ಯೋಗದಲ್ಲಿ ನಿಲ್ಲುವ ವಿಮೆ ಮಾಡಿದ ವ್ಯಕ್ತಿಗಳಿಗೆ ಮತ್ತು ನಿವೃತ್ತ ವಿಮೆದಾರರಿಗೆ ವೈದ್ಯಕೀಯ ಲಾಭವನ್ನು ನಿಯಮ 60-61 ರ ಅಡಿಯಲ್ಲಿ ಒದಗಿಸಲಾಗುತ್ತದೆ, ಒಂದು ವರ್ಷದ ಮುಂಗಡ ಮೊತ್ತದ ಕೊಡುಗೆಯನ್ನು 10/ ರೂ. - ಪ್ರತಿ ತಿಂಗಳು. ಲಾಕ್ಡೌನ್ನ ಚಾಲ್ತಿಯಲ್ಲಿರುವ ಸನ್ನಿವೇಶಗಳಲ್ಲಿ, ಈ ಫಲಾನುಭವಿಗಳಿಗೆ ಲಾಕ್ಡೌನ್ ಕಾರಣದಿಂದಾಗಿ ಮುಂಗಡ ವಾರ್ಷಿಕ ಒಟ್ಟು ಮೊತ್ತದ ಕೊಡುಗೆಯನ್ನು ಜಮಾ ಮಾಡಲು ಸಾಧ್ಯವಾಗದ ಕಾರಣ ಈ ಫಲಾನುಭವಿಗಳಿಗೆ ನೀಡಲಾಗುವ ವೈದ್ಯಕೀಯ ಲಾಭದ ಕಾರ್ಡ್ಗಳ ಸಿಂಧುತ್ವವು ಮುಕ್ತಾಯಗೊಳ್ಳುವ ಸಂದರ್ಭಗಳು ಇರಬಹುದು. ಅಂತಹ ಫಲಾನುಭವಿಗಳಿಗೆ 30.06.2020 ರವರೆಗೆ ಇಎಸ್ಐ (ಕೇಂದ್ರ ನಿಯಮಗಳು) ನ ನಿಯಮ 60 ಮತ್ತು 61 ರ ಅಡಿಯಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ.
ಶಾಶ್ವತ ಅಂಗವೈಕಲ್ಯ ಸೌಲಭ್ಯ ಮತ್ತು ಅವಲಂಬಿತರ ಸೌಲಭ್ಯದ ಪಾವತಿಯನ್ನು (ಮಾರ್ಚ್ 2020 ರ ಸುಮಾರು 4.00 ಲಕ್ಷ ಫಲಾನುಭವಿಗಳು) ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ.
ಉದ್ಯೋಗದಾತರು, ಮಾರ್ಚ್ 15 ರೊಳಗೆ ಪಾವತಿಸಬೇಕಾಗಿದ್ದ ಫೆಬ್ರವರಿಯ ಕೊಡುಗೆ ಅವಧಿಯನ್ನು ಏಪ್ರಿಲ್ ವರೆಗೆ ವಿಸ್ತರಿಸಲಾಗಿದೆ ಮತ್ತು ಮಾರ್ಚ್ ತಿಂಗಳಿನದನ್ನು ಮೇ ವರೆಗೆ ವಿಸ್ತರಿಸಲಾಗಿದೆ ಮತ್ತು ವಿಳಂಬದ ಮೇಲೆ ಸಂಸ್ಥೆಗಳಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸಲಾಗುವುದಿಲ್ಲ.
ಇದಲ್ಲದೆ, ಏಪ್ರಿಲ್, 2019 ರಿಂದ ಸೆಪ್ಟೆಂಬರ್, 2019 ರವರೆಗೆ ಕೊಡುಗೆ ಅವಧಿಯ ಇಎಸ್ಐ ಕೊಡುಗೆಯನ್ನು ಕೊಡುಗೆ ಅವಧಿ ಮುಗಿದ 42 ದಿನಗಳ ಒಳಗೆ ಸಲ್ಲಿಸದ ಉದ್ಯೋಗದಾತರಿಗೆ ಒಂದು ಬಾರಿಯ ವಿನಾಯ್ತಿ ನೀಡಲಾಗಿದೆ. ಈ ಕೊಡುಗೆಯನ್ನು 15.05.2020 ರವರೆಗೆ ಸಲ್ಲಿಸಲು ಉದ್ಯೋಗದಾತರಿಗೆ ಅವಕಾಶ ನೀಡಲಾಗಿದೆ.
***
(Release ID: 1612672)
Visitor Counter : 264