ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತ ಕೋವಿಡ್ -19 ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆಯ ಸನ್ನದ್ಧತೆ ಪ್ಯಾಕೇಜ್ ಗೆ 15 ಸಾವಿರ ಕೋಟಿ ಮಂಜೂರು ಮಾಡಿದ ಭಾರತ ಸರ್ಕಾರ
Posted On:
09 APR 2020 4:52PM by PIB Bengaluru
ಭಾರತ ಕೋವಿಡ್ -19 ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆಯ ಸನ್ನದ್ಧತೆ ಪ್ಯಾಕೇಜ್ ಗೆ 15 ಸಾವಿರ ಕೋಟಿ ಮಂಜೂರು ಮಾಡಿದ ಭಾರತ ಸರ್ಕಾರ
ಭಾರತ ಸರ್ಕಾರ “ಭಾರತ ಕೋವಿಡ್ -19 ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆ ಸನ್ನದ್ಧತೆ ಪ್ಯಾಕೇಜ್’’ಗಾಗಿ 15,000 ಕೋಟಿ ರೂ. ಹೂಡಿಕೆಯ ಮಹತ್ವದ ಘೋಷಣೆ ಮಾಡಿದೆ. ಮಂಜೂರು ಮಾಡಿರುವ ಹಣವನ್ನು ತತ್ ಕ್ಷಣದ ಕೋವಿಡ್ -19 ತುರ್ತು ಸ್ಪಂದನೆಗೆ (7774 ಕೋಟಿ ರೂ. ಮೊತ್ತ) ಮತ್ತು ಉಳಿದ ಹಣವನ್ನು ಮಧ್ಯಮ ಅವಧಿ ಬೆಂಬಲ (1-4 ವರ್ಷಗಳು)ಕ್ಕಾಗಿ ಯಂತ್ರೋಪಾದಿಯಂತೆ ಒದಗಿಸಲಾಗುತ್ತದೆ.
ಈ ಪ್ಯಾಕೇಜ್ ಪ್ರಮುಖ ಉದ್ದೇಶಗಳಲ್ಲಿ, ಸಮರ್ಪಿತ ಕೋವಿಡ್ ಪತ್ತೆ ಮತ್ತು ಚಿಕಿತ್ಸೆ ಸೌಲಭ್ಯ ಅಭಿವೃದ್ಧಿ, ಅವಶ್ಯ ವೈದ್ಯಕೀಯ ಉಪಕರಣಗಳು ಮತ್ತು ಸೋಂಕಿತ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳ ಕೇಂದ್ರೀಕೃತ ದಾಸ್ತಾನು, ಭವಿಷ್ಯದ ಕಾಯಿಲೆಗಳನ್ನು ತಡೆಯಲು ಸನ್ನದ್ಧತೆ ಮತ್ತು ಬಲವರ್ಧನೆಗಾಗಿ ರಾಷ್ಟ್ರೀಯ ಮತ್ತು ರಾಜ್ಯಗಳ ಆರೋಗ್ಯ ವ್ಯವಸ್ಥೆ ಮತ್ತು ಪರಿಹಾರ, ಪ್ರಯೋಗಾಲಯಗಳು ಮತ್ತು ತೀವ್ರ ಕಣ್ಗಾವಲು ಚಟುವಟಿಕೆ ಸ್ಥಾಪನೆ, ಜೈವಿಕ ಭದ್ರತೆ ಸನ್ನದ್ಧತೆಗಳು, ಸಾಂಕ್ರಾಮಿಕ ರೋಗದ ಸಂಶೋಧನೆ, ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಭಾರತದಲ್ಲಿ ಕೋವಿಡ್ -19ನ್ನು ಸೀಮಿತಗೊಳಿಸಲು ಮತ್ತು ತಗ್ಗಿಸಲು ತುರ್ತು ಸ್ಪಂದನೆ ಹೆಚ್ಚಿಸುವುದು, ಮತ್ತು ಅಪಾಯದ ಸಂವಹನ ಚಟುವಟಿಕೆ ನಿಗ್ರಹವೂ ಸೇರಿದೆ. ಈ ಮಧ್ಯಸ್ಥಿಕೆಗಳು ಮತ್ತು ಉಪಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಒಟ್ಟಾರೆ ಉಸ್ತುವಾರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಮಾನ್ಯ ಪ್ರಧಾನಮಂತ್ರಿಯವರು ದಿನಾಂಕ 2020ರ ಮಾರ್ಚ್ 24ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ “ಕೊರೊನಾ ವೈರಸ್ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಮತ್ತು ದೇಶದ ವೈದ್ಯಕೀಯ ಮೂಲಸೌಕರ್ಯ ಬಲವರ್ಧನೆಗಾಗಿ 15 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಇದು ತ್ವರಿತವಾಗಿ ಕೊರೋನಾ ಪರೀಕ್ಷಾ ಸೌಲಭ್ಯಗಳು, ವೈಯಕ್ತಿಕ ಸುರಕ್ಷತಾ ಸಾಧನಗಳು (ಪಿಪಿಇ), ಪ್ರತ್ಯೇಕೀಕರಣ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್ ಗಳು ಮತ್ತು ಇತರ ಅಗತ್ಯ ಸಾಧನಗಳ ಖರೀದಿಗೆ ಅವಕಾಶ ನೀಡುತ್ತದೆ. ಅದೇ ವೇಳೆ, ವೈದ್ಯ ಮತ್ತು ಅರೆ ವೈದ್ಯಕೀಯ ಮಾನವ ಶಕ್ತಿಯ ತರಬೇತಿಯನ್ನೂ ಕೈಗೊಳ್ಳುತ್ತದೆ. ನಾನು ರಾಜ್ಯ ಸರ್ಕಾರಗಳಿಗೆ ಈಗ ಆರೋಗ್ಯ ಸೇವೆಯನ್ನು ತಮ್ಮ ಪ್ರಥಮ ಮತ್ತು ಸರ್ವೋನ್ನತ ಆದ್ಯತೆಯಾಗಿ ಪರಿಗಣಿಸುವಂತೆ ಮನವಿ ಮಾಡುತ್ತೇನೆ ’’ ಪ್ರತಿಪಾದಿಸಿದ್ದರು.
ಈ ವೆಚ್ಚದ ದೊಡ್ಡ ಪಾಲನ್ನು ತುರ್ತು ಸ್ಪಂದನೆಯ ಅಗತ್ಯಕ್ಕೆ, ರಾಷ್ಟ್ರಿಯ ಮತ್ತು ರಾಜ್ಯ ಆರೋಗ್ಯ ವ್ಯವಸ್ಥೆಯ ಬಲವರ್ಧನೆ, ಸಾಂಕ್ರಾಮಿಕ ಸಂಶೋಧನೆ ಬಲವರ್ಧನೆ ಮತ್ತು ಬಹು ವಲಯ ರಾಷ್ಟ್ರೀಯ ಸಂಸ್ಥೆಗಳು ಮತ್ತು ಏಕ ಆರೋಗ್ಯ ವೇದಿಕೆ, ಸಮುದಾಯ ಕಾರ್ಯಚಟುವಟಿಕೆ ಮತ್ತು ಅಪಾಯದ ಸಂವಹನ ಮತ್ತು ಅನುಷ್ಠಾನ, ನಿರ್ವಹಣೆ, ಸಾಮರ್ಥ್ಯವರ್ಧನೆ, ನಿಗಾ ಮತ್ತು ಮೌಲ್ಯಮಾಪನ ಅಂಶಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಂಪನ್ಮೂಲವನ್ನು ಪ್ಯಾಕೇಜ್ ನ ಅಂಶಗಳಲ್ಲಿ ಮತ್ತು ವಿವಿಧ ಜಾರಿ ಸಂಸ್ಥೆಗಳ ನಡುವೆ (ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೇಂದ್ರ ದಾಸ್ತಾನು, ರೈಲ್ವೆ, ಆರೋಗ್ಯ ಸಂಶೋಧನೆ/ಐಸಿಎಂಆರ್, ರೋಗ ನಿಯಂತ್ರಣ ಕುರಿತ ರಾಷ್ಟ್ರೀಯ ಕೇಂದ್ರ)ಗಳ ನಡುವೆ ಸಂದರ್ಭೋಚಿತವಾಗಿ ಪುನರ್ ನಿಗದಿ ಮಾಡುವ ಅಧಿಕಾರ ಹೊಂದಿರುತ್ತದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ವಲಯದಲ್ಲಿನ ಪ್ರತಿಕ್ರಿಯೆಯನ್ನು ನಿಯಂತ್ರಣ ಮತ್ತು ನಿಯಂತ್ರಣದೊಂದಿಗೆ ಪ್ರಮುಖ ಪ್ರತಿಕ್ರಿಯೆ ತಂತ್ರಗಳಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ದಿನಾಂಕದವರೆಗೆ 157 ಸರ್ಕಾರಿ ಮತ್ತು 66 ಖಾಸಗಿ ಪ್ರಯೋಗಾಲಯ ಸೇರಿ ಒಟ್ಟು 223 ಪ್ರಯೋಗಾಲಯಗಳ ಜಾಲ ವ್ಯಾಪಕವಾಗಿ ತಪಾಸಣೆ ಪ್ರಕ್ರಿಯೆ ನಡೆಸುತ್ತಿವೆ. ಮಿಗಿಲಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ 4,113 ಕೋಟಿ ರೂ ಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ತುರ್ತು ಸ್ಪಂದನೆಗಾಗಿ ವಿತರಣೆ ಮಾಡಿದೆ.
****
(Release ID: 1612655)
Visitor Counter : 365
Read this release in:
Odia
,
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam