ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಎಂಎಚ್ಆರ್ ಡಿಯ ದೀಕ್ಷಾ ವೇದಿಕೆಯ ಮೂಲಕ ಕೋವಿಡ್-19 ನಿರ್ವಹಣಾ ಸಿಬ್ಬಂದಿಗೆ ‘ಸಮಗ್ರ ಸರ್ಕಾರಿ ಆನ್ ಲೈನ್ ತರಬೇತಿ’ (iGOT) ಆರಂಭಿಸಿದ ಭಾರತ ಸರ್ಕಾರ
प्रविष्टि तिथि:
09 APR 2020 12:24PM by PIB Bengaluru
ಎಂಎಚ್ಆರ್ ಡಿಯ ದೀಕ್ಷಾ ವೇದಿಕೆಯ ಮೂಲಕ ಕೋವಿಡ್-19 ನಿರ್ವಹಣಾ ಸಿಬ್ಬಂದಿಗೆ ‘ಸಮಗ್ರ ಸರ್ಕಾರಿ ಆನ್ ಲೈನ್ ತರಬೇತಿ’ (iGOT) ಆರಂಭಿಸಿದ ಭಾರತ ಸರ್ಕಾರ
ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮುಂಚೂಣಿ ಕಾರ್ಯಕರ್ತರ ಸಾಮರ್ಥ್ಯವೃದ್ಧಿ ಪೋರ್ಟಲ್ ನ ಉದ್ದೇಶ
ಭಾರತ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ ಮತ್ತು ಮುಂಚೂಣಿಯಲ್ಲಿರುವ ಮೊದಲ ವರ್ಗದ ಕಾರ್ಯಕರ್ತರು ಈಗಾಗಲೇ ಕೋವಿಡ್ ಪರಿಹಾರ ಕಾರ್ಯದಲ್ಲಿ ಶ್ಲಾಘನಾರ್ಹ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಮುಂಚೂಣಿ ಕಾರ್ಯಕರ್ತರ ಬದಲಿಗೆ ಕಾರ್ಯನಿರ್ವಹಿಸಲು ಅತಿದೊಡ್ಡ ಶಕ್ತಿಯನ್ನು ಸಜ್ಜುಗೊಳಿಸಬೇಕಿದೆ ಮತ್ತು ಮುಂದಿನ ಹಂತಗಳಲ್ಲಿ ಸಾಂಕ್ರಾಮಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ವಹಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ.


ಅದರಂತೆ ಮುಂಚೂಣಿ ಕಾರ್ಯಕರ್ತರ ತರಬೇತಿ ಅಗತ್ಯತೆಯನ್ನು ಪೂರೈಸಲು ಭಾರತ ಸರ್ಕಾರ, ಕೋವಿಡ್-19 ನಿರ್ವಹಣೆಗೆ ತರಬೇತಿ ಮಾದರಿಯನ್ನು ಆರಂಭಿಸಿದೆ. “ಸಮಗ್ರ ಸರ್ಕಾರಿ ಆನ್ ಲೈನ್ ತರಬೇತಿ(ಐಜಿಒಟಿ) ಹೆಸರಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪೋರ್ಟಲ್ ದೀಕ್ಷಾ ವೇದಿಕೆಯಡಿ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಮುಂಚೂಣಿ ಕಾರ್ಯಕರ್ತರ ಸಾಮರ್ಥ್ಯವೃದ್ಧಿ ಕಾರ್ಯಕ್ರಮ ನಡೆಯಲಿದೆ. ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ತಂತ್ರಜ್ಞರು, ಆಶಾ ಕಾರ್ಯಕರ್ತೆಯರು(ಆಕ್ಸಿಲರಿ ನರ್ಸಿಂಗ್ ಮಿಡ್ ವೈವ್ ಗಳು)(ಎಎನ್ಎಂ), ರಾಜ್ಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ಅಧಿಕಾರಿಗಳು, ನಾನಾ ಪೊಲೀಸ್ ಸಂಘಟನೆಗಳು, ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್ ಸಿಸಿ), ನೆಹರು ಯುವ ಕೇಂದ್ರ ಸಂಘಟನೆ(ಎನ್ ವೈಕೆಎಸ್), ರಾಷ್ಟ್ರೀಯ ಸೇವಾ ಯೋಜನೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇತರೆ ಸ್ವಯಂ ಸೇವಕರಿಗೆ ಐಜಿಒಟಿ ಕೋರ್ಸ್ ಗಳನ್ನು ಆರಂಭಿಸಿದೆ.
ಈ ಪೋರ್ಟಲ್ ನ ವೆಬ್ ಸೈಟ್ ಲಿಂಕ್ https://igot.gov.in/igot/ ವೇದಿಕೆಯಲ್ಲಿ ತರಬೇತಿ ಮಾದರಿಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಆ ಮೂಲಕ ಕೋವಿಡ್ ವಿರುದ್ಧ ಪ್ರತಿಕ್ರಿಯಿಸಲು ಹಾಗೂ ಸಾಂಕ್ರಾಮಿಕವನ್ನು ಎದುರಿಸಲು ಕಾರ್ಯಕರ್ತರ ಪಡೆಯನ್ನು ಹೆಚ್ಚಿಸಬಹುದಾಗಿದೆ.
*****
(रिलीज़ आईडी: 1612511)
आगंतुक पटल : 367
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam