ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವೈದ್ಯಕೀಯ ಸಾಧನಗಳ ಉತ್ಪಾದನೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೊಂದಿಗೆ ಕೈ ಜೋಡಿಸಿದ ಪುಣೆಯ ಸಿಎಸ್ಐಆರ್- ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (ಎನ್‌ಸಿಎಲ್)

Posted On: 09 APR 2020 10:46AM by PIB Bengaluru

ವೈದ್ಯಕೀಯ ಸಾಧನಗಳ ಉತ್ಪಾದನೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೊಂದಿಗೆ ಕೈ ಜೋಡಿಸಿದ ಪುಣೆಯ ಸಿಎಸ್ಐಆರ್- ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (ಎನ್ಸಿಎಲ್)

ಸಾಮೂಹಿಕ ಉತ್ಪಾದನೆಯ ಸಿದ್ಧಪಡಿಸಿದ ಹಾರ್ಡ್ ವೇರ್ ಮತ್ತು ಸಾಫ್ಟ್ವೇರ್ ವಿನ್ಯಾಸವು ಭಾರತದಾದ್ಯಂತ ತಯಾರಕರಿಗೆ ಉಚಿತವಾಗಿ ಲಭ್ಯವಿರುತ್ತದೆ

 

ಸಿಎಸ್ಐಆರ್ ಪ್ರಯೋಗಾಲಯ, ಸಿಎಸ್ಐಆರ್- ಎನ್ಸಿಎಲ್ಪುಣೆ, ಕಳೆದ ಒಂದು ದಶಕದಿಂದ ತನ್ನ ವೆಂಚರ್ ಸೆಂಟರ್ ಮೂಲಕ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮುನ್ನಡೆ ಸಾಧಿಸುತ್ತಿದೆ ಮತ್ತು ಅಲ್ಲಿಂದ ಹೊರಬಂದಿರುವ ಹೊಸ ಆವಿಷ್ಕಾರಗಳು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿವೆ. ಕೊರೊನಾ ಸಾಂಕ್ರಾಮಿಕ ನಿಗ್ರಹಿಸಲು ಸಹಾಯ ಮಾಡುವ ಇತ್ತೀಚಿನ ಎರಡು ವಿಶಿಷ್ಟ ಆವಿಷ್ಕಾರಗಳು ಇಲ್ಲಿವೆ:

  1. ಡಿಜಿಟಲ್ ಐಆರ್ ಥರ್ಮಾಮೀಟರ್: ಶ್ರೀ ಪ್ರತೀಕ್ ಕುಲಕರ್ಣಿ ನೇತೃತ್ವದ ಸಿಎಸ್ಐಆರ್-ಎನ್ಸಿಎಲ್ ವೆಂಚರ್ ಸೆಂಟರ್ ಇನ್ಕ್ಯುಬೇಟಿ ಬಿಎಂಇಕೆ ಯು ಕೈಯಲ್ಲಿ ಹಿಡಿಯಬಹುದಾದ ಡಿಜಿಟಲ್ ಐಆರ್ ಥರ್ಮಾಮೀಟರ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಕೊರೊನಾವೈರಸ್ ಸಾಂಕ್ರಾಮಿಕವನ್ನು ತಗ್ಗಿಸುವ ಕ್ರಮಗಳಲ್ಲಿ ಪ್ರಮುಖ ಸಾಧನವಾಗಿದೆ. ಮೊಬೈಲ್ ಫೋನ್ ಅಥವಾ ಪವರ್ ಬ್ಯಾಂಕುಗಳನ್ನು ವಿದ್ಯುತ್ ಮೂಲವಾಗಿ ಬಳಸಬಹುದು. ಐಆರ್ ಥರ್ಮಾಮೀಟರ್ಗಳ ವಿನ್ಯಾಸವು ಮುಕ್ತವಾಗಿದ್ದು, ಸಂಪೂರ್ಣ ಜ್ಞಾನದೊಂದಿಗೆ ಸಾಮೂಹಿಕ ಉತ್ಪಾದನೆಗೆ ಸಿದ್ಧವಾದ ಹಾರ್ಡ್ ವೇರ್ ಮತ್ತು ಸಾಫ್ಟ್ವೇರ್ ವಿನ್ಯಾಸವು ಭಾರತದಾದ್ಯಂತದ ತಯಾರಕರಿಗೆ ಉಚಿತವಾಗಿ ಲಭ್ಯವಿರುತ್ತದೆ. ಹೆಚ್ಚಿನ ಸಂಖ್ಯೆಯ ತಯಾರಕರು ಥರ್ಮಾಮೀಟರ್ಗಳನ್ನು ತಯಾರಿಸಲು ಮತ್ತು ಅವರ ಸ್ಥಳೀಯ ಬೇಡಿಕೆಗಳನ್ನು ಪೂರೈಸಲು ಅನುವು ಮಾಡಿಕೊಡುವ ಪ್ರಯತ್ನ ಇದಾಗಿದೆ. ಈಗ ಇದರ ತಯಾರಿಕೆಯ ಪ್ರಮಾಣವನ್ನು ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪುಣೆ) ಸಹಭಾಗಿತ್ವದಲ್ಲಿ ಹೆಚ್ಚಿಸಲಾಗುತ್ತಿದೆ. ಬೆಂಗಳೂರಿನ TUV Rheinland India Pvt Ltd ನಲ್ಲಿ ಪ್ರಾಯೋಗಿಕ ವಿತರಣೆ ಮತ್ತು ಪರೀಕ್ಷೆಗಾಗಿ ಸುಮಾರು 100 ಮೂಲಮಾದರಿಗಳನ್ನು ತಯಾರಿಸಲಾಗುವುದು.
  2. ಆಮ್ಲಜನಕ ಪುಷ್ಟೀಕರಣ ಘಟಕ (oxygen enrichment unit) (OEU): COVID-19 ರೋಗಿಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಕಂಡುಬರುವುದರಿಂದ ಅವರಿಗೆ ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸುವುದು ನಿರ್ಣಾಯಕವಾದುದು. ಆಮ್ಲಜನಕದ ಸಾಂದ್ರತೆಯನ್ನು 21-22% ರಿಂದ 38-40% ಕ್ಕೆ ಹೆಚ್ಚಿಸಲು ಆಮ್ಲಜನಕ ಪುಷ್ಟೀಕರಣ ಘಟಕವನ್ನು (ಒಇಯು) ಸಿಎಸ್ಐಆರ್-ಎನ್ಸಿಎಲ್ ಮತ್ತು ಎನ್ಸಿಎಲ್ನಲ್ಲಿ ಪಾಲಿಮರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಉಲ್ಹಾಸ್ ಖರುಲ್ ಸ್ಥಾಪಿಸಿರುವ ಸ್ಟಾರ್ಟ್-ಅಪ್ ಜೆನ್ರಿಚ್ ಮೆಂಬ್ರೇನ್ಸ್ ಅಭಿವೃದ್ಧಿಪಡಿಸಿವೆ. ಟೊಳ್ಳಾದ ಫೈಬರ್ ಮೆಂಬರೇನ್ ಕಂತೆಯಾದ ಒಇಯು, ಮನೆ ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪುಷ್ಟೀಕರಿಸಿದ ಆಮ್ಲಜನಕವನ್ನು ಉತ್ಪಾದಿಸಲು ಸುತ್ತುವರಿದ ಗಾಳಿಯನ್ನು ಬೇರ್ಪಡಿಸಲು ಮತ್ತು ಶುದ್ಧೀಕರಿಸುತ್ತದೆ. ಮೂಲಮಾದರಿಗಳು ಪುಣೆಯಲ್ಲಿ ಸಿದ್ಧವಾಗಿದ್ದು, ಪರೀಕ್ಷೆ ಮತ್ತು ಅನುಮೋದನೆಗಾಗಿ ಬೆಂಗಳೂರಿನ ಟಿಯುವಿ ರೈನ್ಲ್ಯಾಂಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಕಳುಹಿಸಲಾಗುವುದು. ಸುಮಾರು 10 ಒಇಯು ಯಂತ್ರಗಳನ್ನು ಪುಣೆಯ ಎನ್ಸಿಎಲ್ -ಬಿಇಎಲ್ ಸಂಯೋಜಿಸುತ್ತವೆ. ಪ್ರಯೋಗಗಳ ನಂತರ, ಪ್ರಮಾಣವನ್ನು ಹೆಚ್ಚಿಸಲಾಗುವುದು.

Description: C:\AKN\NCL AKN\hand held ir thermo.jpgDescription: C:\AKN\NCL AKN\IR thermo BMEK.png

ಐದು, ಸಂಪರ್ಕ ರಹಿತ ಥರ್ಮಾಮೀಟರ್ಗಳನ್ನು ಪುಣೆಯ ಉಪ ಪೊಲೀಸ್ ಆಯುಕ್ತರಿಗೆ ಹಸ್ತಾಂತರಿಸಲಾಯಿತು.

Description: C:\AKN\NCL AKN\Oxigen_Enrichment_Unit-300x144.jpgDescription: C:\AKN\NCL AKN\OEU patient.jpg

ಜೆನ್ರಿಚ್-ಎನ್ಸಿಎಲ್ ಆಮ್ಲಜನಕ ಪುಷ್ಟೀಕರಣ ಯಂತ್ರವನ್ನು ಮೂಲಮಾದರಿಯ ಪರೀಕ್ಷೆಗಾಗಿ ಪುಣೆ ಸಮೀಪದ ವೈದ್ಯಕೀಯ ಕೇಂದ್ರದಲ್ಲಿ ರೋಗಿಯ ಉಸಿರಾಟದ ಮುಖವಾಡಕ್ಕೆ ಸಂಪರ್ಕಿಸಿರುವುದು.

***


(Release ID: 1612455) Visitor Counter : 213