ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
COVID-19 ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಗತ್ಯವಿರುವ ಕುಟುಂಬಗಳಿಗೆ ವಿತರಿಸಲು ಕೇಂದ್ರೀಯ ಭಂಡಾರ ಸಿದ್ಧಪಡಿಸಿರುವ 2200 ಅಗತ್ಯ ಕಿಟ್ಗಳನ್ನು ಡಾ.ಜಿತೇಂದ್ರ ಸಿಂಗ್ ಹಸ್ತಾಂತರಿಸಿದರು
Posted On:
08 APR 2020 3:43PM by PIB Bengaluru
COVID-19 ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಗತ್ಯವಿರುವ ಕುಟುಂಬಗಳಿಗೆ ವಿತರಿಸಲು ಕೇಂದ್ರೀಯ ಭಂಡಾರ ಸಿದ್ಧಪಡಿಸಿರುವ 2200 ಅಗತ್ಯ ಕಿಟ್ಗಳನ್ನು ಡಾ.ಜಿತೇಂದ್ರ ಸಿಂಗ್ ಹಸ್ತಾಂತರಿಸಿದರು
COVID-19 ಸಾಂಕ್ರಾಮಿಕ ರೋಗದ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಕರೆಗೆ ಸ್ಪಂದಿಸಿದ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯಗಳು ಕ್ರಮಗಳ ಕೈಗೊಳ್ಳುತ್ತಿವೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಭಂಡಾರವು ಅಗತ್ಯವಿರುವ ಕುಟುಂಬಗಳಿಗೆ "ಅಗತ್ಯ ಕಿಟ್" ಒದಗಿಸುವ ವಿಶಿಷ್ಟ ಕ್ರಮವನ್ನು ಕೈಗೊಂಡಿದೆ.
ಈಶಾನ್ಯ ಪ್ರದೇಶಾಅಭಿವೃದ್ಧಿ ರಾಜ್ಯ ಸಚಿವ (ಸ್ವತಂತ್ರ) , ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇಂದು ಅಗತ್ಯವಿರುವ ಕುಟುಂಬಗಳಿಗೆ ವಿತರಣೆಗಾಗಿ 2200 ಅಗತ್ಯ ಕಿಟ್ಗಳನ್ನು ಹಸ್ತಾಂತರಿಸಿದರು. ಒಂಭತ್ತು ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಕಿಟ್ COVID-19 ರ ಹಿನ್ನೆಲೆಯಲ್ಲಿ ಒಂದು ನಿರ್ಗತಿಕ ಕುಟುಂಬಕ್ಕೆ ಸ್ವಲ್ಪ ಸಮಯದವರೆಗೆ ಸಹಾಯ ಮಾಡುತ್ತದೆ.
ಡಾ.ಜಿತೇಂದ್ರ ಸಿಂಗ್ ಅವರು 1700 ಕಿಟ್ಗಳನ್ನು ಎಸ್ಡಿಎಂ, ಸಿವಿಲ್ ಲೈನ್ಸ್, ಮಧ್ಯ ದೆಹಲಿ ಜಿಲ್ಲೆಗೆ ಹಸ್ತಾಂತರಿಸಿದರು ಮತ್ತು ಉಳಿದ 500 ಕಿಟ್ಗಳನ್ನು ಡಿಎಂ (ಕೇಂದ್ರ) ಗೆ ನೀಡಲಾಗುವುದು.
ಅಗತ್ಯವಿರುವ ಕುಟುಂಬಗಳಿಗೆ ವಿತರಣೆಗಾಗಿ ಕೇಂದ್ರೀ ಭಂಡಾರ ಒಟ್ಟು 2200 ಕಿಟ್ಗಳನ್ನು ಸಿದ್ಧಪಡಿಸಿದೆ
ಪ್ರತಿ ಅಗತ್ಯ ಕಿಟ್ ನಲ್ಲಿ ಈ ಕೆಳಗಿನ ವಸ್ತುಗಳು ಇರುತ್ತವೆ:
1. ಅಕ್ಕಿ 3 ಕೆ.ಜಿ.
2. ಗೋಧಿ ಹಿಟ್ಟು 3 ಕೆ.ಜಿ.
3. ಬೇಳೆ 2 ಕೆ.ಜಿ.
4. ಅಡುಗೆ ಎಣ್ಣೆ 1 ಲೀಟರ್
5. ಚಿವ್ಡಾ / ಪೋಹಾ 500 ಗ್ರಾಂ
6. ಉಪ್ಪು 1 ಕೆಜಿ
7. ಸ್ನಾನದ ಸೋಪ್ 1 ನಂ.
8. ಡಿಟರ್ಜೆಂಟ್ ಸೋಪ್ 1 ನಂ.
9. ಬಿಸ್ಕತ್ತು 3 ಪ್ಯಾಕ್
***
(Release ID: 1612287)
Visitor Counter : 217