ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಪುಣೆ ಮೂಲದ ಸ್ಟಾರ್ಟ್ ಅಪ್ ನಿಂದ COVID-19 ಪರೀಕ್ಷೆಗಾಗಿ ಶೀಘ್ರ ರೋಗನಿರ್ಣಯ ಕಿಟ್ ಅಭಿವೃದ್ಧಿ

Posted On: 08 APR 2020 11:31AM by PIB Bengaluru

ಪುಣೆ ಮೂಲದ ಸ್ಟಾರ್ಟ್ ಅಪ್ ನಿಂದ COVID-19 ಪರೀಕ್ಷೆಗಾಗಿ ಶೀಘ್ರ ರೋಗನಿರ್ಣಯ ಕಿಟ್ ಅಭಿವೃದ್ಧಿ

ದೃಢೀಕರಣ ಪರೀಕ್ಷೆಗಳ ಪ್ರಮಾಣವನ್ನು ಮುಂದೆ ಗಂಟೆಗೆ 100 ಮಾದರಿಗಳಿಗೆ ಹೆಚ್ಚಿಸಬಹುದು

 

"COVID-19 ಪರೀಕ್ಷೆಯ ಪ್ರಮುಖ ಸವಾಲುಗಳೆಂದರೆ ವೇಗ, ವೆಚ್ಚ, ನಿಖರತೆ ಮತ್ತು ಆರೈಕೆಯ ಹಂತದಲ್ಲಿ ಅಥವಾ ಬಳಕೆಯಲ್ಲಿನ ಲಭ್ಯತೆ" ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್ ಟಿ) ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳುತ್ತಾರೆ.

ನಿರ್ದಿಷ್ಟವಾಗಿ COVID-19 ಕ್ಕೆ CovE-Sens ತಂತ್ರಜ್ಞಾನ

ಎರಡು ಉತ್ಪನ್ನಗಳು- ಸುಧಾರಿತ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಆಧಾರಿತ ಪತ್ತೆ ಕಿಟ್ ಮತ್ತು ಕ್ಷಿಪ್ರ ಪರೀಕ್ಷೆಗಾಗಿ ಪೋರ್ಟಬಲ್ ಚಿಪ್ ಆಧಾರಿತ ಮಾಡ್ಯೂಲ್.

ಪೋರ್ಟಬಲ್ ಕ್ಷಿಪ್ರ ಡಯಾಗ್ನೋಸ್ಟಿಕ್ಸ್ ಕಿಟ್ ನಿಯಮಿತ ಮೇಲ್ವಿಚಾರಣೆಯ ಮೂಲಕ ಭವಿಷ್ಯದ ಮರುಕಳಿಕೆಯನ್ನು ತಡೆಯುತ್ತದೆ.

ಫಾಸ್ಟ್ಸೆನ್ಸ್ ಡಯಾಗ್ನೋಸ್ಟಿಕ್ಸ್, 2018 ರಲ್ಲಿ ಆರಂಭವಾದ ಸ್ಟಾರ್ಟ್ ಅಪ್. ತ್ವರಿತ ರೋಗ ರೋಗನಿರ್ಣಯಕ್ಕಾಗಿ ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ (ಡಿಎಸ್ಟಿ) ಧನಸಹಾಯ ಪಡೆದಿದೆ.  ಈಗ COVID 19 ಪತ್ತೆಗಾಗಿ ಎರಡು ಸಾಧನಗಳನ್ನು ಅಭಿವೃದ್ಧಿಪಡಿಸುತ್ತಿದೆ.

"COVID-19 ಪರೀಕ್ಷೆಯ ಪ್ರಮುಖ ಸವಾಲುಗಳು ಆರೈಕೆ ಅಥವಾ ಬಳಕೆಯ ಹಂತದಲ್ಲಿ ವೇಗ, ವೆಚ್ಚ, ನಿಖರತೆ ಮತ್ತು ಲಭ್ಯತೆ. ಅಗತ್ಯಗಳನ್ನು ಪೂರೈಸಲು ಹಲವಾರು ಸ್ಟಾರ್ಟ್ ಅಪ್ ಗಳು ಸೃಜನಶೀಲ ಮತ್ತು ನವೀನ ಮಾರ್ಗಗಳನ್ನು ಅಭಿವೃದ್ಧಿಪಡಿಸಿವೆ. ತಾಂತ್ರಿಕವಾಗಿ ಸೂಕ್ತವೆನಿಸಿದರೆ ವಾಣಿಜ್ಯೀಕರಣ ಸರಪಳಿಗೆ ಅವುಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಡಿಎಸ್ಟಿ ಇವುಗಳಿಗೆ ಬೆಂಬಲವನ್ನು ನೀಡುತ್ತದೆಎಂದು ಡಿಎಸ್ಟಿ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳಿದ್ದಾರೆ.

ಕ್ಯಾನ್ಸರ್, ಪಿತ್ತಜನಕಾಂಗದ ಕಾಯಿಲೆಗಳು ಮತ್ತು ನವಜಾತ ಶಿಶುವಿನ ಸೆಪ್ಸಿಸ್ ಇತ್ಯಾದಿಗಳನ್ನು ಪತ್ತೆಹಚ್ಚಲು ಮತ್ತು ಪರೀಕ್ಷಿಸಲು ಅವರ ಬಳಿ ಅಸ್ತಿತ್ವದಲ್ಲಿರುವ ಸಾರ್ವತ್ರಿಕ ವೇದಿಕೆಯಾದಓಮ್ನಿ-ಸೆನ್ಸ್ಮಾದರಿಯಲ್ಲಿ, ಕಂಪನಿಯು ಕೋವಿಡ್-19 ಕ್ಕೆ ನಿರ್ದಿಷ್ಟವಾಗಿ ಕೋವ್-ಸೆನ್ಸ್ ತಂತ್ರಜ್ಞಾನವನ್ನು ಪ್ರಸ್ತಾಪಿಸಿದೆ. ಸ್ಕ್ರೀನಿಂಗ್ ಮತ್ತು ದೃಢೀಕರಣ ಪರೀಕ್ಷೆಯ ಜೊತೆಗೆ ತ್ವರಿತ ಕಾರ್ಯಾಚರಣೆಯ ಪತ್ತೆಹಚ್ಚುವಿಕೆಯ ಜೊತೆಗೆ ಕಾರ್ಯಾಚರಣೆಯ ಸುಲಭತೆಯನ್ನು ಒದಗಿಸುವ ಕೋವ್-ಸೆನ್ಸ್ಗೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ.

ಕಂಪನಿಯು ಎರಡು ಉತ್ಪನ್ನಗಳನ್ನು ಹೊರತರಲು ಯೋಜಿಸಿದೆ. ಅಸ್ತಿತ್ವದಲ್ಲಿರುವ ಪತ್ತೆ ವಿಧಾನಗಳಿಗೆ ಹೋಲಿಸಿದರೆ ಕಡಿಮೆ ಸಮಯದಲ್ಲಿ ದೃಢೀಕರಣ ವಿಶ್ಲೇಷಣೆಗಾಗಿ ಸುಧಾರಿಸಿದ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಆಧಾರಿತ ಪತ್ತೆ ಕಿಟ್ (ಸುಮಾರು 50 ಮಾದರಿಗಳನ್ನು ಒಂದು ಗಂಟೆಯಲ್ಲಿ ಪರೀಕ್ಷಿಸಬಹುದು) ಮತ್ತು ಪೋರ್ಟಬಲ್ ಚಿಪ್ ಆಧಾರಿತ ಮಾಡ್ಯೂಲ್ ಆನ್-ಚಿಪ್ ಸೆನ್ಸಿಂಗ್ ತಂತ್ರಜ್ಞಾನದ ಆಧಾರದ ಮೇಲೆ ನಿರ್ದಿಷ್ಟ ಗುರಿಯ ಜನರನ್ನು ತ್ವರಿತವಾಗಿ ಸ್ಕ್ರೀನಿಂಗ್ ಮಾಡಬಹುದು, ಇದು ಪ್ರತಿ ಸ್ಯಾಂಪಲ್ಗೆ 15 ನಿಮಿಷಕ್ಕಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ. ದೃಢೀಕರಣ ಪರೀಕ್ಷೆಗಳ ಮಾದರಿ ಪ್ರಮಾಣವನ್ನು ಭವಿಷ್ಯದಲ್ಲಿ ಗಂಟೆಗೆ 100 ಮಾದರಿಗಳಿಗೆ ಹೆಚ್ಚಿಸಬಹುದು.

ಫಾಸ್ಟ್ಸೆನ್ಸ್ ಡಯಾಗ್ನೋಸ್ಟಿಕ್ಸ್ ಆರೈಕೆ ಪತ್ತೆ ಕಿಟ್ಗಳು ತ್ವರಿತವಾಗಿ ಮತ್ತು ಹೆಚ್ಚು ತರಬೇತಿ ಪಡೆದ ತಂತ್ರಜ್ಞರಿಲ್ಲದೆ COVID-19 ವಿರುದ್ಧದ ಹೋರಾಟದಲ್ಲಿ ದೇಶದ ಪರೀಕ್ಷಾ ಪ್ರಯತ್ನಗಳನ್ನು ಹೆಚ್ಚಿಸುತ್ತದೆ.

ಎರಡು ಪ್ರಸ್ತಾವಿತ ಮಾಡ್ಯೂಲ್ಗಳನ್ನು ವಿಮಾನ ನಿಲ್ದಾಣಗಳು, ಜನನಿಬಿಡ ಪ್ರದೇಶಗಳು, ಆರೋಗ್ಯವಂತ ವ್ಯಕ್ತಿಗಳಿಗೆ ಕೊರೊನಾ ಹರಡುವುದನ್ನು ತಡೆಗಟ್ಟಲು ಜನರನ್ನು ತಪಾಸಣೆ ಮಾಡುವ ಆಸ್ಪತ್ರೆಗಳಂತಹ ಯಾವುದೇ ಸ್ಥಳಗಳಲ್ಲಿ ನಿಯೋಜಿಸಬಹುದು ಮತ್ತು ಡೇಟಾವನ್ನು ಒಂದು ಗಂಟೆಯೊಳಗೆ ಸುಲಭವಾಗಿ ಪಡೆಯಬಹುದು. ಸಂಸ್ಥೆಯು ಇದನ್ನು ಕೈಗೆಟುಕುವ ವೆಚ್ಚದಲ್ಲಿ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತಿದೆ.

ಕಾರ್ಯಕ್ಷಮತೆ ಮೌಲ್ಯಮಾಪನಕ್ಕಾಗಿ ಔಪಚಾರಿಕ ಅನುಮೋದನೆ ಪ್ರಕ್ರಿಯೆಯಲ್ಲಿದ್ದು,  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯೊಂದಿಗೆ ಸಹಭಾಗಿತ್ವ ವಹಿಸಲು ತಂಡವು ಯೋಜಿಸುತ್ತಿದೆ ಮತ್ತು ಸಾಧನಗಳ ಬೃಹತ್ ಪ್ರಮಾಣದ ನಿಯೋಜನೆಗಾಗಿ ಅವರು ಅಸ್ತಿತ್ವದಲ್ಲಿರುವ ಮಾರುಕಟ್ಟೆಯೊಂದಿಗೆ ಸಂಪರ್ಕದಲ್ಲಿದ್ದಾರೆ.

ಚಿತ್ರ-1: CovE-Sens ಕಾರ್ಯನಿರ್ವಹಣೆಯ ರೂಪರೇಖೆ

ವೈರಾಣು ಶಾಸ್ತ್ರ, ಆಣ್ವಿಕ ಜೀವಶಾಸ್ತ್ರ ಮತ್ತು ಬಯೋ ಇನ್ಸ್ಟ್ರುಮೆಂಟೇಶನ್ ತಜ್ಞರನ್ನು ಒಳಗೊಂಡಿರುವ ತಂಡವು 8 ರಿಂದ 10 ವಾರಗಳಲ್ಲಿ ಮೂಲಮಾದರಿಯನ್ನು ನೀಡಬಲ್ಲುದು. ನಿಯೋಜನೆಗಾಗಿ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಯು ಕೆಲವು ಆಂತರಿಕ ಸೌಲಭ್ಯಗಳನ್ನು ಹೊಂದಿದೆ.

ಅಲ್ಲದೆ, ಪ್ರಸ್ತುತ ಸಾಂಕ್ರಾಮಿಕ ಸಮಯದಲ್ಲಿ ರೋಗವು ಮತ್ತಷ್ಟು ಹರಡುವುದನ್ನು ತಡೆಯುವುದಲ್ಲದೇ, ಪೋರ್ಟಬಲ್ ಕ್ಷಿಪ್ರ ಡಯಾಗ್ನೋಸ್ಟಿಕ್ಸ್ ಕಿಟ್ ನಿಯಮಿತ ಮೇಲ್ವಿಚಾರಣೆಯ ಮೂಲಕ ಭವಿಷ್ಯದ ಮರುಕಳಿಕೆಯನ್ನೂ ತಡೆಯುತ್ತದೆ. ಕಡಿಮೆ ವೆಚ್ಚ ಮತ್ತು ಸುಲಭ ಕಾರ್ಯಾಚರಣೆಯ ಗ್ರಾಮೀಣ ಜನರನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ನಗರ ಆರೋಗ್ಯ ಮೂಲಸೌಕರ್ಯಗಳ ಮೇಲಿನ ಹೆಚ್ಚಿನ ಒತ್ತಡವನ್ನುಕಡಿಮೆ ಮಾಡುತ್ತದೆ.

(ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಡಾ. ಪ್ರೀತಿ ನಿಗಮ್ ಜೋಷಿ, ಸಂಸ್ಥಾಪಕ ನಿರ್ದೆಶಕರು, FastSense Diagnostics, preetijoshi@fastsensediagnostics.com , Mob: 8975993781)

***


(Release ID: 1612212) Visitor Counter : 169