ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನೊವೆಲ್ ಕೊರೊನಾವೈರಸ್ ಜೆನೋಮ್ ಸೀಕ್ವೆನ್ಸಿಂಗ್ ಕೆಲಸ ಆರಂಭಿಸಿದ ಭಾರತೀಯ ಸಂಶೋಧಕರು

Posted On: 08 APR 2020 11:23AM by PIB Bengaluru

ನೊವೆಲ್ ಕೊರೊನಾವೈರಸ್ ಜೆನೋಮ್ ಸೀಕ್ವೆನ್ಸಿಂಗ್ ಕೆಲಸ ಆರಂಭಿಸಿದ ಭಾರತೀಯ ಸಂಶೋಧಕರು

 

ನೊವೆಲ್ ಕೊರೊನಾವೈರಸ್ ಒಂದು ಹೊಸ ವೈರಸ್ ಆಗಿದ್ದು, ಸಂಶೋಧಕರು ಅದರ ಎಲ್ಲಾ ವಿಭಿನ್ನ ಅಂಶಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಹೈದರಾಬಾದ್ ಸೆಂಟರ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಮತ್ತು ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ನೊವೆಲ್ ಕೊರೊನಾ ವೈರಸ್ ಸಂಪೂರ್ಣ ಜೆನೋಮ್ ಸೀಕ್ವೆನ್ಸಿಂಗ್ ನಲ್ಲಿ ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಿವೆ.

ಇದು ವೈರಸ್ ವಿಕಾಸವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ಅದು ಎಷ್ಟು ಕ್ರಿಯಾತ್ಮಕವಾಗಿದೆ ಮತ್ತು ಅದು ಎಷ್ಟು ವೇಗವಾಗಿ ವೃದ್ಧಿಸುತ್ತದೆ. ಮತ್ತು ಅದರ ಭವಿಷ್ಯದ ಅಂಶಗಳು ಯಾವುವು ಎಂಬುದನ್ನು ತಿಳಿಯಲು ಅಧ್ಯಯನವು ನಮಗೆ ಸಹಾಯ ಮಾಡುತ್ತದೆಎಂದು ಸಿಸಿಎಂಬಿಯ ನಿರ್ದೇಶಕ ಡಾ.ರಾಕೇಶ್ ಮಿಶ್ರಾ, ಡಿಎಸ್ಟಿಯ ಇಂಡಿಯಾ ಸೈನ್ಸ್ ವೈರ್ ಹಿರಿಯ ವಿಜ್ಞಾನಿ ಜ್ಯೋತಿ ಶರ್ಮಾ ಅವರೊಂದಿಗೆ ಮಾತನಾಡುತ್ತಾ ಹೇಳಿದರು.

ಹೋಲ್-ಜೆನೋಮ್ ಸೀಕ್ವೆನ್ಸಿಂಗ್ ಎನ್ನುವುದು ನಿರ್ದಿಷ್ಟ ಜೀವಿಗಳ ಜಿನೋಮ್ ಸಂಪೂರ್ಣ ಡಿಎನ್ ಅನುಕ್ರಮವನ್ನು ನಿರ್ಧರಿಸಲು ಬಳಸುವ ವಿಧಾನವಾಗಿದೆ. ಇತ್ತೀಚಿನ ಕೊರೊನಾವೈರಸ್ ಅನ್ನು ಅನುಕ್ರಮಗೊಳಿಸುವ ವಿಧಾನವು ಪಾಸಿಟಿವ್ ರೋಗಿಗಳಿಂದ ಮಾದರಿಗಳನ್ನು ಪಡೆಯುವುದು ಮತ್ತು ಮಾದರಿಗಳನ್ನು ಅನುಕ್ರಮ ಕೇಂದ್ರಕ್ಕೆ ಕಳುಹಿಸುವುದನ್ನು ಒಳಗೊಂಡಿರುತ್ತದೆ. ಜೆನೋಮ್ ಸೀಕ್ವೆನ್ಸಿಂಗ್ ಅಧ್ಯಯನಕ್ಕಾಗಿ ಹೆಚ್ಚಿನ ಸಂಖ್ಯೆಯ ಮಾದರಿಗಳ ಅಗತ್ಯವಿದೆ. “ಹೆಚ್ಚಿ ದತ್ತಾಂಶವಿಲ್ಲದೇ ನೀವು ಮಾಡುವ ಯಾವುದೇ ತೀರ್ಮಾನ ಸರಿಯಿಲ್ಲದಿರಬಹುದು. ಈಗ ನಾವು ಎಷ್ಟು ಸಾಧ್ಯವೋ ಅಷ್ಟು ಸೀಕ್ವೆನ್ಸಿಂಗ್ ಸಂಗ್ರಹಿಸುತ್ತಿದ್ದೇವೆ ಮತ್ತು ಒಮ್ಮೆ, ನಾವು ನೂರಾರು ಸೀಕ್ವೆನ್ಸಿಂಗ್ ಗಳನ್ನು ಹೊಂದಿದ ನಂತರ, ವೈರಸ್ ಅನೇಕ ಜೈವಿಕ ಅಂಶಗಳಿಂದ ನಾವು ಅನೇಕ ನಿರ್ಣಯಗಳನ್ನು ಮಾಡಲು ಸಾಧ್ಯವಾಗುತ್ತದೆಎಂದು ಡಾ ಮಿಶ್ರಾ ಹೇಳುತ್ತಾರೆ.

ಪ್ರತಿ ಸಂಸ್ಥೆಯಿಂದ ಮೂರರಿಂದ ನಾಲ್ವರು ಹೋಲ್ ಜೆನೋಮ್ ಸೀಕ್ವೆನ್ಸಿಂಗ್ ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ 3-4 ವಾರಗಳಲ್ಲಿ ಸಂಶೋಧಕರು ಕನಿಷ್ಠ 200-300 ಐಸೊಲೇಟ್ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಮಾಹಿತಿಯು ವೈರಸ್ ವರ್ತನೆಯ ಬಗ್ಗೆ ಮತ್ತಷ್ಟು ನಿರ್ಧಾರಕ್ಕೆ ಬರಲು ಸಹಾಯ ಮಾಡುತ್ತದೆ. ಉದ್ದೇಶಕ್ಕಾಗಿ, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ) ವಿವಿಧ ಸ್ಥಳಗಳಲ್ಲಿ ಪ್ರತ್ಯೇಕವಾಗಿರುವ ವೈರಸ್ನ್ನು ನೀಡುವಂತೆ ಕೋರಿದೆ. ಬೃಹತ್ ಮತ್ತು ಸ್ಪಷ್ಟ ಚಿತ್ರಣವನ್ನು ಪಡೆಯಲು ಇಡೀ ದೇಶವನ್ನು ವ್ಯಾಪಿಸಲು ವಿಜ್ಞಾನಿಗಳಿಗೆ ಇದು ಸಹಾಯ ಮಾಡುತ್ತದೆ. ಇದು ವೈರಸ್ ವಂಶವೃಕ್ಷವನ್ನು ಪತ್ತೆಹಚ್ಚಲು ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ವೈರಸ್ ಎಲ್ಲಿಂದ ಬಂದಿದೆ, ಯಾವ ಸ್ಟ್ರೈನ್ ಹೆಚ್ಚು ಹೋಲಿಕೆ ಹೊಂದಿದೆ, ವೈವಿಧ್ಯಮಯ ರೂಪಾಂತರಗಳು ಮತ್ತು ಯಾವ ಸ್ಟ್ರೈನ್ ದುರ್ಬಲವಾಗಿದೆ ಮತ್ತು ಯಾವ ಸ್ಟ್ರೈನ್ ಪ್ರಬಲವಾಗಿದೆ ಎಂಬುದನ್ನು ಅವರು ಅಧ್ಯಯನ ಮಾಡಬಹುದು ಎಂದು ಡಾ. ಮಿಶ್ರಾ ಹೇಳುತ್ತಾರೆ. "ಇದು ವೈರಸ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮ ಐಸೋಲೇಷನ್ ತಂತ್ರಗಳನ್ನು ಕಾರ್ಯಗತಗೊಳಿಸಲು ನೆರವಾಗುತ್ತದೆ" ಎಂದು ಅವರು ಹೇಳುತ್ತಾರೆ.

ಇದರ ಜೊತೆಗೆ ಸಂಸ್ಥೆಯು ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಹೆಚ್ಚಿನ ಸಂಖ್ಯೆಯ ಜನರು ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಮತ್ತು ಅವರು ಸಾಮೂಹಿಕ ತಪಾಸಣೆಗೆ ಒಳಗಾಗುತ್ತಿದ್ದಾರೆ. ಇದು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಗುರುತಿಸಲು ಮತ್ತು ನಂತರ ಅಂತಹ ಪ್ರಕರಣಗಳನ್ನು ಐಸೋಲೇಷನ್ ಅಥವಾ ಕ್ವಾರಂಟೈನ್ ಗೆ ಕಳಹಿಸಲು ಸಹಾಯ ಮಾಡುತ್ತದೆ.

***


(Release ID: 1612194) Visitor Counter : 157