ಜವಳಿ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ ಸೆಣಬು ಗಿರಣಿಗಳ ಮುಚ್ಚುವಿಕೆಯಿಂದ ಉಂಟಾಗಿರುವ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಸಮಸ್ಯೆ ನಿವಾರಿಸಲು ಎಚ್.ಡಿ.ಪಿ.ಇ./ ಪಿ.ಪಿ. ಚೀಲಗಳ ಮಿತಿಯನ್ನು 1.80 ಲಕ್ಷ ಬೇಲ್ ಗಳಿಂದ 2.62 ಲಕ್ಷಕ್ಕೆ ಏರಿಕೆ ಮಾಡಿದ ಜವಳಿ ಸಚಿವಾಲಯ

Posted On: 07 APR 2020 7:40PM by PIB Bengaluru

ಲಾಕ್ ಡೌನ್ ಅವಧಿಯಲ್ಲಿ ಸೆಣಬು ಗಿರಣಿಗಳ ಮುಚ್ಚುವಿಕೆಯಿಂದ ಉಂಟಾಗಿರುವ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಸಮಸ್ಯೆ ನಿವಾರಿಸಲು ಎಚ್.ಡಿ.ಪಿ.ಇ./ ಪಿ.ಪಿ. ಚೀಲಗಳ ಮಿತಿಯನ್ನು 1.80 ಲಕ್ಷ ಬೇಲ್ ಗಳಿಂದ 2.62 ಲಕ್ಷಕ್ಕೆ ಏರಿಕೆ ಮಾಡಿದ ಜವಳಿ ಸಚಿವಾಲಯ

ಸೆಣಬು ಬೆಳೆಯುವ ರಾಜ್ಯಗಳ ಸರಕಾರಗಳಿಗೆ ಸೆಣಬಿನ ಬೀಜಗಳು, ರಸಗೊಬ್ಬರ ಮತ್ತು ಇತರ ಕೃಷಿ ಸಲಕರಣೆಗಳ ಸಾಗಾಟ, ಮಾರಾಟ ಮತ್ತು ಪೂರೈಕೆಗೆ ಅವಕಾಶ ನೀಡುವಂತೆ ಪತ್ರ.

 

ಸೆಣಬಿನ ಕೃಷಿಕರು ಮತ್ತು ಕಾರ್ಮಿಕರ ಹಿತ ರಕ್ಷಣೆಗೆ ಸಚಿವಾಲಯ ಬದ್ಧ

 

ಜವಳಿ ಸಚಿವಾಲಯವು ಎಚ್.ಡಿ.ಪಿ.ಇ./ ಪಿ.ಪಿ. ಚೀಲಗಳಿಗಾಗಿ ಗರಿಷ್ಟ ಅನುಮತಿ ಮಿತಿಯನ್ನು 2020 ರ ಮಾರ್ಚ್ 26 ರಂದು 1.80 ಲಕ್ಷ ಬೇಲ್ ಗಳೆಂದು ನಿಗದಿ ಮಾಡಿದ್ದು ಅದನ್ನು 2020 ರ ಏಪ್ರಿಲ್ 6 ರಂದು ಸಡಿಲಿಕೆ ಮಾಡಿ ಮತ್ತೆ 0.82 ಲಕ್ಷ ಬೇಲ್ ಗಳಷ್ಟು ಹೆಚ್ಚಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಸೆಣಬಿನ ಕಾರ್ಖಾನೆಗಳ ಮುಚ್ಚುಗಡೆಯಿಂದ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಗೆ ಉಂಟಾಗಬಹುದಾದ ತುರ್ತು ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಮತ್ತು ಗೋಧಿ ಕೃಷಿಕರಿಗೆ ಪರ್ಯಾಯ ಪ್ಯಾಕೇಜಿಂಗ್ ಚೀಲಗಳನ್ನು ಒದಗಿಸುವ ಮೂಲಕ ಅವರ ಉತ್ಪನ್ನವನ್ನು ರಕ್ಷಿಸುವುದಕ್ಕಾಗಿ ಅದು ಈ ಕ್ರಮ ಕೈಗೊಂಡಿದೆ.

ಈ ಕ್ರಮವನ್ನು ಮುಖ್ಯವಾಗಿ ಗೋಧಿ ಕೃಷಿಕರ ಹಿತವನ್ನು ರಕ್ಷಿಸುವುದಕ್ಕಾಗಿ ಕೈಗೊಳ್ಳಲಾಗಿದೆ. ಗೋಧಿ ಕಾಳುಗಳು 2020ರ ಏಪ್ರಿಲ್ ತಿಂಗಳ ಮಧ್ಯಭಾಗದ ಬಳಿಕ ಪ್ಯಾಕಿಂಗ್ ಗೆ ಸಿದ್ದವಾಗುತ್ತವೆ. ಆದಾಗ್ಯೂ ಲಾಕ್ ಡೌನ್ ಅವಧಿ ಮುಕ್ತಾಯಗೊಂಡ ಬಳಿಕ ಸೆಣಬಿನ ಚೀಲಗಳ ಉತ್ಪಾದನೆ ಸೆಣಬಿನ ಕಾರ್ಖಾನೆಗಳಲ್ಲಿ ಆರಂಭಗೊಂಡಾಗ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಗೆ ಸೆಣಬಿನ ಚೀಲಗಳ ಬಳಕೆಗೆ ಪ್ರಥಮಾಧ್ಯತೆಯನ್ನು ನೀಡುವ ಹಿನ್ನೆಲೆಯಲ್ಲಿಯೇ ಸರಕಾರವು ಈ ಸಡಿಲಿಕೆಯನ್ನು ಪರಿಗಣಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಸೆಣಬು ಕೃಷಿಕರಿಗೆ ಸಹಾಯ ಮಾಡಲು ಜವಳಿ ಸಚಿವಾಲಯವು ಸೆಣಬು ಬೆಳೆಯುವ ಎಲ್ಲಾ ರಾಜ್ಯ ಸರಕಾರಗಳಿಗೆ ಸೆಣಬು ಬೀಜಗಳು, ರಸಗೊಬ್ಬರ, ಮತ್ತು ಇತರ ಕೃಷಿ ಸಲಕರಣೆಗಳ ಸಾಗಾಟ, ಮಾರಾಟ ಮತ್ತು ಪೂರೈಕೆಗೆ ಅವಕಾಶ ನೀಡುವಂತೆ ಪತ್ರ ಬರೆದಿದೆ. ಸೆಣಬು ಪ್ಯಾಕೇಜಿಂಗ್ ವಸ್ತುಗಳ ಕಾಯ್ದೆ (ಜೆ.ಪಿ.ಎಂ.) , 1987 ರಡಿಯ ಪ್ರಸ್ತಾವನೆಗಳ ಮೂಲಕ ಸೆಣಬು ಕೃಷಿಕರು ಮತ್ತು ಕಾರ್ಮಿಕರ ಹಿತ ರಕ್ಷಣೆಗೆ ಸರಕಾರ ಬದ್ದವಿದೆ ಮತ್ತು ಈ ನಿಯಮಗಳು ಸೆಣಬಿನ ಚೀಲಗಳಲ್ಲಿ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಗೆ ಶೇಕಡಾ 100 ರಷ್ಟು ಮೀಸಲಾತಿ ನೀಡುತ್ತವೆ.

ಕೋವಿಡ್ -19 ಸಂಬಂಧಿ ಲಾಕ್ ಡೌನ್, ಸೆಣಬಿನ ಕಾರ್ಖಾನೆಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವುಂಟು ಮಾಡಿದೆ. ಆ ಮೂಲಕ ಸೆಣಬಿನ ಚೀಲ ಉತ್ಪಾದನೆಯೂ ಹದಗೆಟ್ಟಿದೆ. ಸೆಣಬಿನ ಕಾರ್ಖಾನೆಗಳು ರಾಜ್ಯ ಖರೀದಿ ಏಜೆನ್ಸಿಗಳ (ಎಸ್.ಪಿ.ಎ.ಗಳು) ಮತ್ತು ಭಾರತೀಯ ಆಹಾರ ನಿಗಮದ (ಎಫ್.ಸಿ.ಐ.) ಆವಶ್ಯಕತೆಯನ್ನು ಪೂರೈಸುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರುವ (ಪಿ.ಡಿ.ಎಸ್.) ಈ ಎರಡು ಸಂಸ್ಥೆಗಳಿಗಾಗಿ ಸರಕಾರವು ಮಧ್ಯಪ್ರವೇಶ ಮಾಡಿ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.

ಭಾರತ ಸರಕಾರವು ರೈತರು ಮತ್ತು ಅವರ ಉತ್ಪನ್ನಗಳ ಬಗ್ಗೆ ಗಂಭೀರ ಕಾಳಜಿಯನ್ನು ಹೊಂದಿದೆ. ರಾಬಿ ಬೆಳೆಗಳು ಕಟಾವಾಗಬೇಕಿವೆ. ಬೃಹತ್ ಪ್ರಮಾಣದ ಪ್ಯಾಕೇಜಿಂಗ್ ಬ್ಯಾಗ್ ಗಳ ಆವಶ್ಯಕತೆ ಇದೆ. ಆಹಾರ ಧಾನ್ಯಗಳನ್ನು ಜೆ.ಪಿ.ಎಂ. ಕಾಯ್ದೆಯಡಿ ಪ್ರಾಥಮಿಕವಾಗಿ ಸೆಣಬಿನ ಚೀಲಗಳಲ್ಲಿ ಸಂಗ್ರಹ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸೆಣಬಿನ ಕಾರ್ಖಾನೆಗಳು ಸೆಣಬಿನ ಗೋಣಿ ಚೀಲಗಳನ್ನು ತಯಾರಿಸಲು ಅಸಮರ್ಥವಾಗಿವೆ, ಆದುದರಿಂದ ಗೋಧಿ ಕೃಷಿಕರಿಗೆ ಅವರ ಆತಂಕವನ್ನು ನಿವಾರಿಸಲು ಪರ್ಯಾಯ ವ್ಯವಸ್ಥೆ ಅನಿವಾರ್ಯವಾಗಿದೆ.

***



(Release ID: 1612183) Visitor Counter : 277