ರಕ್ಷಣಾ ಸಚಿವಾಲಯ

ಕೊರೊನಾ ವೈರಸ್ (ಕೋವಿಡ್-19) ವಿರುದ್ಧ ಹೋರಾಡಲು ಭಾರತೀಯ ವಾಯು ಸೇನೆ ತನ್ನ ಬೆಂಬಲ ಮುಂದುವರಿಸಿದೆ

Posted On: 07 APR 2020 6:29PM by PIB Bengaluru

ಕೊರೊನಾ ವೈರಸ್ (ಕೋವಿಡ್-19) ವಿರುದ್ಧ ಹೋರಾಡಲು ಭಾರತೀಯ ವಾಯು ಸೇನೆ ತನ್ನ ಬೆಂಬಲ ಮುಂದುವರಿಸಿದೆ

 

ಭಾರತೀಯ ವಾಯು ಸೇನೆ, ನಾವೆಲ್ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನ ಬೆಂಬಲವನ್ನು ಮುಂದುವರೆಸಿದೆ, ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮತ್ತು ಸಂಬಂಧಪಟ್ಟ ಏಜೆನ್ಸಿಗಳನ್ನು ಸಜ್ಜುಗೊಳಿಸಲು ವೈದ್ಯಕೀಯ ಸರಕುಗಳನ್ನು ಸಾಗಿಸಲಾಗುತ್ತಿದೆ.

ಕಳೆದ ಕೆಲವು ದಿನಗಳಲ್ಲಿ, ಭಾರತೀಯ ವಾಯು ಸೇನೆಯು ಅಗತ್ಯವಾದ ವೈದ್ಯಕೀಯ ಸರಕುಗಳನ್ನು ನೋಡಲ್ ಪಾಯಿಂಟ್‌ಗಳಿಂದ ಈಶಾನ್ಯ ಪ್ರದೇಶದ ಮಣಿಪುರ, ನಾಗಾಲ್ಯಾಂಡ್ ಮತ್ತು ಗ್ಯಾಂಗ್ಟಾಕ್‌ ಗೆ ತಲುಪಿಸಿತು; ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್. ಇದಲ್ಲದೆ, ಎಎನ್ -32 ವಿಮಾನವು , 2020 ರ ಏಪ್ರಿಲ್ 06 ರಂದು ಒಡಿಶಾದಲ್ಲಿ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಸೌಲಭ್ಯಗಳನ್ನು ಸ್ಥಾಪಿಸಲು ಚೆನ್ನೈನಿಂದ ಭುವನೇಶ್ವರಕ್ಕೆ ಐಸಿಎಂಆರ್ ನ 3500 ಕೆಜಿ ವೈದ್ಯಕೀಯ ಉಪಕರಣಗಳು ಮತ್ತು ಸಿಬ್ಬಂದಿಗಳನ್ನು ಸಾಗಿಸಿತು.

ಕೋವಿಡ್ -19 ವಿರುದ್ಧದ ಕಾರ್ಯಾಚರಣೆಯನ್ನು ಪೂರ್ವಭಾವಿಯಾಗಿ ಬೆಂಬಲಿಸಲು ಭಾರತೀಯ ವಾಯು ಸೇನೆಯು ತುರ್ತು ಸೂಚನೆಯ ಮೇರೆಗೆ ನೋಡಲ್ ಪಾಯಿಂಟ್‌ಗಳಿಂದ ವೈದ್ಯಕೀಯ ಸರಕುಗಳನ್ನು ಸಾಗಿಸಲು ತನ್ನ ವಿಮಾನವನ್ನು ನಿಗದಿಪಡಿಸಿದೆ.

***



(Release ID: 1612092) Visitor Counter : 144