ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಅಡಿಯಲ್ಲಿ ವೃದ್ಧರು ಮತ್ತು ರೋಗಿಗಳ ಮನೆ ಬಾಗಿಲಿಗೆ ಔಷಧಿ ಮತ್ತು ಅವಶ್ಯಕ ಸೇವೆ ಒದಗಿಸುತ್ತಿರುವ ‘ಸ್ವಾಸ್ಥ ಕೆ ಸಿಪಾಯಿ’

Posted On: 07 APR 2020 4:24PM by PIB Bengaluru

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಅಡಿಯಲ್ಲಿ ವೃದ್ಧರು ಮತ್ತು ರೋಗಿಗಳ ಮನೆ ಬಾಗಿಲಿಗೆ ಔಷಧಿ ಮತ್ತು ಅವಶ್ಯಕ ಸೇವೆ ಒದಗಿಸುತ್ತಿರುವ ‘ಸ್ವಾಸ್ಥ ಕೆ ಸಿಪಾಯಿ’

 

ಪ್ರಧಾನಮಂತ್ರಿ ಜನೌಷಧಿ ಕೇಂದ್ರದ “ಸ್ವಾಸ್ಥ ಕೆ ಸಿಪಾಯಿ” ಹೆಸರನಲ್ಲಿ ಜನಪತ್ರಿಯವಾಗಿರುವ ಔಷಧ ವ್ಯಾಪಾರಿಗಳು, ಭಾರತ ಸರ್ಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ(ಪಿಎಂಬಿಜೆಪಿ) ಅಡಿಯಲ್ಲಿ ವೃದ್ಧರು ಮತ್ತು ರೋಗಿಗಳ ಮನೆ ಬಾಗಿಲಿಗೆ ಔಷಧಿಗಳು ಹಾಗೂ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಪ್ರಧಾನಮಂತ್ರಿ ಜನೌಷಧಿ ಕೇಂದ್ರ(ಪಿಎಂಜೆಎಕೆ) ಭಾಗವಾಗಿ ಕೆಲಸ ಮಾಡುತ್ತಿರುವ ಇವರು, ದೇಶಾದ್ಯಂತ ಸಾಮಾನ್ಯ ಜನರಿಗೆ ಹಾಗೂ ವೃದ್ಧರ ಮನೆ ಬಾಗಿಲಿಗೆ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಗುಣಮಟ್ಟದ ಔಷಧಿಗಳನ್ನು ಕೈಗೆಟಕುವ ದರದಲ್ಲಿ ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿದ್ದಾರೆ. ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸರ್ಕಾರದ ಕ್ರಮವನ್ನು ಬೆಂಬಲಿಸುತ್ತದೆ.

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಫಾರ್ಮಸಿಟಿಕಲ್ಸ್ ಇಲಾಖೆ ಅಡಿಯಲ್ಲಿ ಬ್ಯೂರೋ ಆಫ್ ಫಾರ್ಮ ಪಿಎಸ್ ಯು ಆಫ್ ಇಂಡಿಯಾ(ಬಿಪಿಪಿಐ)ಗಳು ನಡೆಸುತ್ತಿರುವ ಈ ಪಿಎಂಜೆಕೆಎಸ್ ಗಳ ಉದ್ದೇಶ ಯಾವುದೇ ಅಗತ್ಯವಿರುವವರಿಗೆ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣೆ ನೀಡುವುದಾಗಿದೆ. ಪ್ರಸ್ತುತ ದೇಶಾದ್ಯಂತ 726 ಜಿಲ್ಲೆಗಳಲ್ಲಿ 6300 ಪಿಎಂಜೆಎಕೆಗಳು ಕಾರ್ಯನಿರ್ವಹಿಸುತ್ತಿವೆ.

ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಭಾರತ ಸರ್ಕಾರ, ದೇಶಾದ್ಯಂತ 21 ದಿನಗಳು ಅಂದರೆ 2020ರ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಿದೆ.

ಇಂತಹ ಸಮಯದಲ್ಲಿ ಜನರ ಮನೆ ಬಾಗಿಲಿಗೆ ಅಗತ್ಯ ಔಷಧಿಗಳನ್ನು ಪೂರೈಸುವಲ್ಲಿ ಪಿಎಂಜೆಎಕೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಬಿಪಿಪಿಐ ಹೇಳಿರುವಂತೆ ಇತ್ತೀಚೆಗೆ ತನ್ನ ಓರ್ವ “ಸ್ವಾಸ್ಥ ಕೆ ಸಿಪಾಯಿ” ಹೇಳಿಕೊಂಡಿರುವ ಅನುಭವವನ್ನು ಹಂಚಿಕೊಂಡಿದೆ. ಆತನಿಗೆ ವಾರಣಾಸಿಯ ಪಹಾದಿಯಾದ ಪಿಎಂಬಿಜೆಕೆಗೆ ಕರೆ ಮಾಡಿದ ಓರ್ವ ವೃದ್ಧ ಮಹಿಳೆ ಸಹಾಯ ಕೋರಿದ್ದರು. ಫಾರ್ಮಸಿಸ್ಟ್ ಹೇಳುವಂತೆ ಆ ವೃದ್ಧ ಮಹಿಳೆ ವಾರಾಣಸಿಯಲ್ಲಿ ತನ್ನ ಪತಿ ಜೊತೆ ವಾಸವಿದ್ದಾರೆ, ಆಕೆಯ ಬಳಿ ಇದ್ದ ದಿನ ನಿತ್ಯ ಬಳಸುವ ಔಷಧಗಳೆಲ್ಲ ಖಾಲಿಯಾಗಿದ್ದವು, ದಿನ ಔಷಧಗಳನ್ನು ಸೇವಿಸದಿದ್ದರೆ ಆಕೆ ತನ್ನ ದೇಹವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಪಾರ್ಮಸಿಸ್ಟ್ ಆ ದಂಪತಿಗಳಿಗೆ ನೆರವು ನೀಡಿ ಸುಮ್ಮನಾಗಲಿಲ್ಲ. ಆತ ಅಗತ್ಯ ಔಷಧಗಳನ್ನು ಸಂಗ್ರಹ ಮಾಡಿಕೊಂಡು ಅವರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಕೊಟ್ಟರು. ಅಂದಿನಿಂದ ಆ ಔಷಧ ವ್ಯಾಪಾರಿ, ರೋಗಿಗಳು ಹಾಗೂ ವೃದ್ಧರ ಮನೆ ಬಾಗಿಲಿಗೆ ಔಷಧಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ.

ಗುರುಗ್ರಾಮದಲ್ಲಿರುವ ಒಂದು ಕೇಂದ್ರೀಯ ಗೋದಾಮು, ಗುವಾಹತಿ ಹಾಗೂ ಚೆನ್ನೈನಲ್ಲಿ ಎರಡು ಪ್ರಾದೇಶಿಕ ಗೋದಾಮುಗಳು ಮತ್ತು ಸುಮಾರು 50 ವಿತರಕರು ದೇಶಾದ್ಯಂತ ಎಲ್ಲ ಔಷಧ ಕೇಂದ್ರಗಳಲ್ಲಿ ನಿರಂತರವಾಗಿ ಔಷಧಗಳು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಔಷಧಗಳ ಪೂರೈಕೆ ಮೇಲೆ ನಿಯಂತ್ರಣವಹಿಸಲು ಬಲಿಷ್ಠ ಎಸ್ಎಪಿ ಆಧಾರಿತ ಎಲ್ಲ ಮಾರಾಟದ ಅಂಕಿ-ಅಂಶಗಳನ್ನು ಒಳಗೊಂಡ ಸಾಫ್ಟ್ ವೇರ್ ಅನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ದಾಸ್ತಾನು ಸ್ಥಿತಿಗತಿ ಖಾಲಿಯಾಗುವುದರ ಬಗ್ಗೆ ನಿಗಾ ವಹಿಸಲಾಗುವುದು. ಅಲ್ಲದೆ ‘ಜನ ಔಷಧಿ ಸುಗಮ್” ಎಂಬ ಮೊಬೈಲ್ ಅಪ್ಲಿಕೇಶನ್ ಸಾರ್ವಜನಿಕರಿಗೆ ಲಭ್ಯವಿದ್ದು, ಅದು ಸಮೀಪದ ಕೇಂದ್ರದ ವಿಳಾಸ ಮತ್ತು ಲಭ್ಯವಿರುವ ಔಷಧಗಳು ಮತ್ತು ಅದರ ಬೆಲೆಗಳ ಸಹಿತ ವಿವರಗಳನ್ನು ಒದಗಿಸಲಿದೆ. ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐ-ಫೋನ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಈ ಲಾಕ್ ಡೌನ್ ಸಮಯದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ(ಪಿಎಂಬಿಜೆಪಿ), ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯುಕ್ತ ಪೋಸ್ಟ್ ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಮತ್ತು ಕೊರೊನಾ ಸೋಂಕಿನಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನೆರವಾಗುತ್ತಿದೆ. ನೀವು ಕೂಡ @pmbjpbppi ಮೂಲಕ ಫೇಸ್ ಬುಕ್, ಟ್ವಿಟರ್, ಇನ್ಸ್ ಸ್ಟಾಗ್ರಾಮ್ ಫಾಲೋ ಮಾಡಬಹುದು.

*******

 



(Release ID: 1612072) Visitor Counter : 683