PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ                                

Posted On: 06 APR 2020 6:43PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ                                

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಈವರೆಗೆ 4067 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 109 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. 291 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಲಭ್ಯವಿರುವ  ದತ್ತಾಂಶದ ರೀತ್ಯ, ಈವರೆಗೆ ಸೋಂಕುದೃಢಪಟ್ಟವರಲ್ಲಿ ಶೇ.76 ಪುರುಷರು ಮತ್ತು ಶೇ.24 ಮಹಿಳೆಯರಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಈ ಪೈಕಿ ಶೇ.47ರಷ್ಟು ಮಂದಿ 40 ವರ್ಷ ವಯಸ್ಸಿನ ಒಳಗಿನವರಾಗಿದ್ದರೆ, ಶೇ.34 ರಷ್ಟು ಜನ 40ರಿಂದ 60 ವರ್ಷದೊಳಗಿದ್ದಾರೆ, ಶೇ19ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.  

ಹೆಚ್ಚಿನ ವಿವರಗಳಿಗೆ  https://pib.gov.in/PressReleseDetail.aspx?PRID=1611914

ಕೇಂದ್ರ ಸಚಿವರುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ; ಕೋವಿಡ್ -19 ವಿರುದ್ಧ ಹೋರಾಟದಲ್ಲಿ ಜಾಗೃತರಾಗಿರುವಂತೆ, ದೃಢವಾಗಿರುವಂತೆ ಮತ್ತು ಪ್ರೇರಣಾತ್ಮಕವಾಗಿರುವುದರ ಮಹತ್ವವನ್ನು ಒತ್ತಿ ಹೇಳಿದರು

ಗರೀಬ್ ಕಲ್ಯಾಣ ಯೋಜನೆಯ ಫಲ ಅರ್ಹ ಫಲಾನುಭವಿಗಳಿಗೆ ತಡೆರಹಿತವಾಗಿ ತಲುಪುದನ್ನು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯಿಂದ ನಿಗಾ ಇಡುವಂತೆ  ಪ್ರಧಾನಮಂತ್ರಿಯವರು ಸಂಬಂಧಿತ ಸಚಿವರುಗಳಿಗೆ ಆಗ್ರಹಿಸಿದ್ದಾರೆ. ಸಚಿವರು ರಾಜ್ಯ ಮತ್ತು ಜಿಲ್ಲಾ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೊರಹೊಮ್ಮುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ, ಜಿಲ್ಲಾ ಮಟ್ಟದ ಸೂಕ್ಷ್ಮ ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ. ಸಚಿವರು ವಾಣಿಜ್ಯ ಮುಂದುವರಿಕೆ ಯೋಜನೆ ಸಿದ್ಧಪಡಿಸುವಂತೆ ಮತ್ತು ಕೋವಿಡ್ -19ಯ ಆರ್ಥಿಕ ಪರಿಣಾಮಗಳ ವಿರುದ್ಧ ಸಮರೋಪಾದಿಯಲ್ಲಿ ಹೋರಾಡಲು ಸಜ್ಜಾಗುವಂತೆ ತಿಳಿಸಿದರು.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611757

ಕೋವಿಡ್ 19 ನಿರ್ವಹಣೆಗಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಎರಡು ವರ್ಷಗಳ ಕಾಲ (2020-21 ಮತ್ತು 2021-22) ಕಾರ್ಯಾಚರಣ ಮಾಡದಿರಲು ಸಂಪುಟದ ಅನುಮೋದನೆ

ಕೋವಿಡ್ 19 ಪ್ರಸರಣ ತಡೆಯುವ ಸರ್ಕಾರದ ಮುಂದುವರಿದ ಪ್ರಯತ್ನದ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷಥೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂ.ಪಿ.ಎಲ್.ಎ.ಡಿ.ಎಸ್.)ಯನ್ನು ಎರಡು ವರ್ಷಗಳ ಕಾಲ (2020-21 ಮತ್ತು 2021-22) ಕಾರ್ಯಾಚರಣೆ ಮಾಡದಿರಲು ಸಮ್ಮತಿ ಸೂಚಿಸಿದೆ. ಈ ನಿಧಿಯನ್ನು ದೇಶದಲ್ಲಿ ಕೋವಿಡ್ 19ರಿಂದ ಎದುರಾಗಿರುವ ಪ್ರತೀಕೂಲ ಪರಿಣಾಮಗಳ ಸವಾಲು ಎದುರಿಸಲು ಬಳಸಲಾಗುವುದು.

https://pib.gov.in/PressReleseDetail.aspx?PRID=1611701

ಪಿಪಿಇಗಳ ಹೊರಗುತ್ತಿಗೆಯ ಪೂರೈಕೆ ಭಾರತಕ್ಕೆ ಬಂದಿಳಿಯಲು ಆರಂಭಿಸಿದೆ

1.70 ಲಕ್ಷ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ), ನಿಲುವಂಗಿಗಳು ಚೈನಾದಿಂದ ಸ್ವೀಕರಿಸುವುದರೊಂದಿಗೆ ವಿದೇಶಗಳಿಂದ ಪೂರೈಕೆ ಸರಣಿ ಆರಂಭಗೊಂಡಿದೆ. 20000 ನಿಲುವಂಗಿಗಳ ದೇಶೀಯ ಪೂರೈಕೆಯೆ ಜೊತೆಗೆ ಒಟ್ಟು 1.90 ಲಕ್ಷ ನಿಲುವಂಗಿಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತದೆ ಮತ್ತು ಇದು ದೇಶದಲ್ಲಿ ಈವರೆಗೆ ಲಭ್ಯವಿರುವ 3,87,473 ಪಿಪಿಇಗಳ ಜೊತೆಗೂಡಲಿದೆ. ಒಟ್ಟು 2.94 ಲಕ್ಷ ಪಿಪಿಇ ನಿಲುವಂಗಿಗಳನ್ನು ಜೋಡಿಸಿ, ಭಾರತ ಸರ್ಕಾರ ಪೂರೈಕೆ ಮಾಡಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611911

ಒಂದೇ ದಿನದಲ್ಲಿ ದಾಖಲೆಯ ಆಹಾರ ಧಾನ್ಯ ಸಾಗಣೆ ಮಾಡಿದ ಎಫ್.ಸಿ.ಐ.

03.04.20 ಮತ್ತು 04.04.20 ರಂದು ಎರಡು ದಿನಗಳವರೆಗೆ ನಿರಂತರವಾಗಿ 1.93 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಹೊತ್ತ 70 ಬೋಗಿಗಳ ಸಾಗಾಟದ ಮೂಲಕ ಎಫ್‌ಸಿಐ ಏಕದಿನ ಆಹಾರ ಧಾನ್ಯ ಸಾಗಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611484

ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ದೇಶಾದ್ಯಂತ ಸುಗಮವಾಗಿ ಮತ್ತು ಅಡೆತಡೆಯಿಲ್ಲದೆ ನಡೆಸುವ ಬಗ್ಗೆ ವಿಶೇಷ ಗಮನ ಹರಿಸುವಂತೆ  ರಾಜ್ಯಗಳಿಗೆ ಪತ್ರ ಬರೆದ ಎಂಎಚ್‌ಎ

ಕೇಂದ್ರ ಗೃಹ ಕಾರ್ಯದರ್ಶಿಯವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ದೇಶಾದ್ಯಂತ ಸುಗಮವಾಗಿ ಮತ್ತು ಅಡೆತಡೆಯಿಲ್ಲದೆ ನಡೆಸುವ ಬಗ್ಗೆ ವಿಶೇಷ ಗಮನ ಹರಿಸುವಂತೆ ತಿಳಿಸಿದ್ದಾರೆ. ಕೋವಿಡ್ 19 ಮಹಾಮಾರಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಸಾಕಷ್ಟು ಪ್ರಮಾಣದ ವೈದ್ಯಕೀಯ ಆಮ್ಲಜನಕ ನಿರ್ವಹಣೆ ಮಹತ್ವದ್ದಾಗಿದ್ದು, ವೈದ್ಯಕೀಯ ಆಮ್ಲಜನಕವನ್ನು ವಿಶ್ವ ಆರೋಗ್ಯ ಸಂಘಟನೆಯ ಅವಶ್ಯಕ ವೈದ್ಯಕೀಯ ವಸ್ತುಗಳ ರಾಷ್ಟ್ರೀಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611836

ರೈಲ್ವೆಯಿಂದ 2500 ಬೋಗಿಗಳು ಪ್ರತ್ಯೇಕೀಕರಣದ ಕೋಚ್ ಗಳಾಗಿ ಪರಿವರ್ತನೆ, ತ್ವರಿತ ಸಮಯದಲ್ಲಿ ಅರ್ಧದಷ್ಟು ಆರಂಭಿಕ ಗುರಿ ತಲುಪಿದ ರೈಲ್ವೆ

2500 ಬೋಗಿಗಳನ್ನು  ಪರಿವರ್ತಿಸುವ ಮೂಲಕ, 40,000 ಪ್ರತ್ಯೇಕೀಕರಣ ಹಾಸಿಗೆಗಳನ್ನು ತುರ್ತು ಸ್ಥಿತಿಗೆ ಅಣಿಗೊಳಿಸಲಾಗಿದೆ. ಪ್ರತಿ ದಿನ ಭಾರತೀಯ ರೈಲ್ವೆ ಸರಾಸರಿ 375 ಬೋಗಿಗಳನ್ನು ಪರಿವರ್ತಿಸಿದೆ. ದೇಶದ 133 ತಾಣಗಳಲ್ಲಿ ಈ ಕಾರ್ಯ ನಡೆಯುತ್ತಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611579

ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಕಾಮನ್ ವೆಲ್ತ್ ನ ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಮಾತುಕತೆ

ಇಬ್ಬರೂ ನಯಕರು ಪ್ರಸಕ್ತ ಕಾಡುತ್ತಿರುವ ಕೋವಿಡ್ 19 ಮಹಾಮಾರಿ ಮತ್ತು ತಮ್ಮ ತಮ್ಮ ಸರ್ಕಾರ ದೇಶೀಯವಾಗಿ ಮಾಡಿಕೊಂಡಿರುವ ವ್ಯೂಹಾತ್ಮಕ ಸ್ಪಂದನೆ ಕುರಿತು ಚರ್ಚಿಸಿದರು. ಸಂಯುಕ್ತ ಸಂಶೋಧನಾ ಪ್ರಯತ್ನ ಸೇರಿದಂತೆ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ದ್ವಿಪಕ್ಷೀಯ ಅನುಭವ ಹಂಚಿಕೆಯ ಮಹತ್ವಕ್ಕೆ ಸಮ್ಮತಿಸಿದರು.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611607

ಕೋವಿಡ್-19 ಬಗ್ಗೆ ತಪ್ಪು ಮಾಹಿತಿಯ ವೈರಸ್ ಅನ್ನು ತುರ್ತಾಗಿ ತಡೆಯಿರಿ: ಉಪರಾಷ್ಟ್ರಪತಿ

ಕೋವಿಡ್-19 ವಿರುದ್ಧದ ನಮ್ಮ ಯುದ್ಧವನ್ನು ದುರ್ಬಲಗೊಳಿಸಲು ಮೂಢ ನಂಬಿಕೆಗಳು ಮತ್ತು ಕಿವಿಮಾತುಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಎಚ್ಚರಿಸಿರುವ  ಭಾರತದ ಉಪರಾಷ್ಟ್ರಪತಿ  ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ತಪ್ಪು ಮಾಹಿತಿಯ ಹರಡುವಿಕೆಯನ್ನು, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿನ, "ವೈರಸ್" ತಡೆಯಬೇಕಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611598

ಭುವನೇಶ್ವರದಲ್ಲಿ ಕೋವಿಡ್ -19 ಆಸ್ಪತ್ರೆಗೆ ಕೋಲ್ ಇಂಡಿಯಾ ಅಂಗ ಸಂಸ್ಥೆ ಎಂ.ಸಿ.ಎಲ್. ಹಣ ನೀಡಲಿದೆ

ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ (ಎಂಸಿಎಲ್) ಭುವನೇಶ್ವರದಲ್ಲಿನ ದೇಶದ ಎರಡನೇ ಅತಿ ದೊಡ್ಡ ಕೋವಿಡ್ -19 ಆಸ್ಪತ್ರೆಗೆ ರೋಗಿಗಳ ಚಿಕಿತ್ಸೆಯ ವೆಚ್ಚವೂ ಸೇರಿದಂತೆ ಸಂಪೂರ್ಣ ವೆಚ್ಚಕ್ಕೆ ಹಣಕಾಸು  ಒದಗಿಸಲಿದೆ ಎಂದು ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ ಜೋಶಿ ವಿಡಿಯೋ ಸಂವಾದದ ಮೂಲಕ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.   .

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611727

ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳಲ್ಲಿ ಕೋವಿಡ್ -19 ನಿಗಾಕ್ಕಾಗಿ ಸ್ಮಾರ್ಟ್ ಸಿಟಿ ಅಭಿಯಾನದ ಸಮಗ್ರ ದತ್ತಾಂಶದ ಡ್ಯಾಷ್ ಬೋರ್ಡ್ ಬಳಕೆ

ಸ್ಮಾರ್ಟ್ ಸಿಟಿಗಳಾದ ಪುಣೆ, ಸೂರತ್, ಬೆಂಗಳೂರು ಮತ್ತು ತುಮಕೂರು ತಮ್ಮ ನಗರ ವ್ಯಾಪ್ತಿಯ ವಿವಿಧ ಆಡಳಿತಾತ್ಮಕ ವಲಯಗಳಿಗೆ ಕರೋನಾ ವೈರಾಣು ಸ್ಥಿತಿಯ ಬಗ್ಗೆ ನವೀಕೃತ ಸಂಪೂರ್ಣ ಮಾಹಿತಿಯನ್ನು ಒದಗಿಸಲು ದತ್ತಾಂಶ ವಿಶ್ಲೇಷಕರು ಮತ್ತು ದತ್ತಾಂಶ ತಜ್ಞರು ತಮ್ಮ ಐಸಿಸಿಸಿಗಳೊಂದಿಗೆ  ಅಭಿವೃದ್ಧಿಪಡಿಸಿರುವ (ಅನೇಕ ನಗರಗಳಲ್ಲಿ ಕೋವಿಡ್-19 ವಾರ್ ರೂಂಗಳಲ್ಲೂ ಕಾರ್ಯನಿರ್ವಹಿಸುತ್ತಿವೆ) ಸಮಗ್ರ ದತ್ತಾಂಶ ಡ್ಯಾಶ್‌ಬೋರ್ಡ್‌ಗಳನ್ನು ಬಳಸುತ್ತಿವೆ

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611667

ತ್ವರಿತ ಕಾಲದಲ್ಲಿ ಫಲಿತಾಂಶ ನೀಡುತ್ತಿರುವ ಹೊಸದಾಗಿ ರಚಿಸಲಾದ ರೈಲ್ವೆಯ ಕೇಂದ್ರೀಕೃತ ನಿಯಂತ್ರಣ ಕಚೇರಿ

ರೈಲ್ವೆ ನಿಯಂತ್ರಣ ಕಚೇರಿ 24 x7 ನಾಲ್ಕು ಸಂವಹನ ಮತ್ತು ಪ್ರತಿಕ್ರಿಯೆ ವೇದಿಕೆಗಳ ಸಹಾಯವಾಣಿ 139, 138, ಸಾಮಾಜಿಕ ಮಾಧ್ಯಮ (ಅದರಲ್ಲೂ ಟ್ವಿಟರ್) ಮತ್ತು ಇಮೇಲ್ (railmadad@rb.railnet.gov.in) ಗಳ ಉಸ್ತುವಾರಿ ವಹಿಸಿದೆ. ಇದು ತಡೆರಹಿತ ಮಾಹಿತಿ ಹರಿವನ್ನು ಖಾತ್ರಿಪಡಿಸುತ್ತದೆ ಮತ್ತು ರೈಲ್ವೆ ಆಡಳಿತ ಮತ್ತು ಸಾರ್ವಜನಿಕರಿಗೆ ಲಾಕ್ ಡೌನ್ ವೇಳೆ ಸಲಹೆ ನೀಡಲಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611636

ಕೋವಿಡ್ -19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸೂಚನೆ ಹೊರಡಿಸಿದ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ

ಕೋವಿಡ್ -19 ಒಡ್ಡಿರುವ ಭೀತಿಯ ಪ್ರಸಕ್ತ ಸನ್ನಿವೇಶದ ಹಿನ್ನೆಲೆಯಲ್ಲಿ, ಕೇಂದ್ರ ಎಚ್.ಆರ್.ಡಿ. ಸಚಿವರು ತಮ್ಮ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದು, ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.   ಆ ಪ್ರಕಾರವಾಗಿ, ಯುಜಿಸಿ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಮಾನಸಿಕ ಸಾಮಾಜಿಕ ಅಂಶಗಳು ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611677

132 ಲೈಫ್ ಲೈನ್ ಉಡಾನ್ ವಿಮಾನಗಳು ಈ ದಿನಾಂಕವರೆಗೆ 184 ಟನ್ ವೈದ್ಯಕೀಯ ಸರಕುಗಳನ್ನು ದೇಶದಾದ್ಯಂತ ಸಾಗಾಟ ಮಾಡಿವೆ

ಲೈಫ್ ಲೈನ್ ಉಡಾನ್ ಉಪಕ್ರಮದಡಿ 132 ಕಾರ್ಗೋ ವಿಮಾನಗಳು ಈ ದಿನಾಂಕದವರೆಗೆ ದೇಶದಾದ್ಯಂತ ಹಾರಾಟ ನಡೆಸಿದ್ದು, ಗಿರಿ ಪ್ರದೇಶಗಳೂ ಸೇರಿದಂತೆ ಭಾರತದ ವಿವಿಧ ಭಾಗಗಳಿಗೆ ವೈದ್ಯಕೀಯ ಸರಕು ಸಾಗಾಟ ಮಾಡಿವೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611710

ಎನ್.ಸಿ.ಸಿ. ಕೆಡೆಟ್ ಗಳು ಕೋವಿಡ್ 19 ವೇಳೆ ಜನ ಸೇವೆ ಮಾಡುತ್ತಿದ್ದಾರೆ

ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ನೆರವಾಗುವಂತೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಸೀನಿಯರ್ ವಿಭಾಗಕ್ಕೆ ನಾಗರಿಕ ಮತ್ತು ಪೊಲೀಸ್ ಆಡಳಿತ ಮನವಿ ಮಾಡಲಾರಂಭಿಸಿವೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611753

‘ಸ್ಟ್ರಾಂಡೆಡ್ ಇನ್ ಇಂಡಿಯಾ” ಪೋರ್ಟಲ್ ನಲ್ಲಿ ಮೊದಲ ಐದು ದಿನದಲ್ಲೇ ದೇಶಾದ್ಯಂತದಿಂದ 769 ವಿದೇಶೀ ಪ್ರವಾಸಿಗರ ನೋಂದಣಿ

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಕೋವಿಡ್ -19 ಜಾಗತಿಕ ಮಹಾಮಾರಿಯ ನಿಗ್ರಹಕ್ಕಾಗಿ ಅನಿವಾರ್ಯವಾದ ಲಾಕ್ ಡೌನ್ ಪರಿಸ್ಥಿತಿಯಿಂದ ಇರುವಲ್ಲೇ ಉಳಿಯುವಂತಾಗಿರುವ ವಿದೇಶೀ ಪ್ರವಾಸಿಗರನ್ನು ಗುರುತಿಸಿ, ನೆರವಾಗಲು 2020ರ ಮಾರ್ಚ್ 31ರಂದು www.strandedinindia.com ಪೋರ್ಟಲ್ ಆರಂಭಿಸಿದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611554

ಹಡಗು ಸಚಿವಾಲಯದ ಬಂದರು ಮತ್ತು ಪಿಎಸ್.ಯುಗಳ ಸಿಬ್ಬಂದಿ ಪಿಎಂ ಕೇರ್ಸ್ ನಿಧಿಗೆ 7 ಕೋಟಿ ದೇಣಿಗೆ ನೀಡಿದ್ದಾರೆ

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611568

ಹಡಗು ಸಚಿವಾಲಯದ ಬಂದರು ಮತ್ತು ಪಿ.ಎಸ್.ಯು ಪಿಎಂ ಕೇರ್ಸ್ ನಿಧಿಗೆ ಸಿಎಸ್.ಆರ್. ಆಗಿ 52 ಕೋಟಿ ದೇಣಿ ನೀಡಿದೆ

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611556

ಕೇಂದ್ರೀಯ ವಿದ್ಯಾಲಯ ಸಂಘಟನೆ ಆನ್ಲೈನ್ ಬೋಧನಾ ಕಲಿಕೆ ಪ್ರಕ್ರಿಯೆಗೆ ಹಲವು ಕ್ರಮ ಕೈಗೊಂಡಿದೆ

ಕೇಂದ್ರೀಯ ವಿದ್ಯಾಲಯ ಸಂಘಟನ್ ಹಲವು ಆನ್ ಲೈನ್ ಮತ್ತು ಡಿಜಿಟಲ್ ಮಾದರಿಯ ಬೋಧನಾ ಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಅಳವಡಿಸಿಕೊಂಡಿದೆ. ಲಭ್ಯವಿರುವ ವಿವಿಧ ಸಂಪನ್ಮೂಲಗಳನ್ನು ಅನ್ವೇಷಿಸಲು ಅದು ತನ್ನ ಎಲ್ಲಾ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶನ ನೀಡಿದೆ ಮತ್ತು ಅದು ವಿದ್ಯಾರ್ಥಿಗಳನ್ನು ತಮ್ಮ ಅಧ್ಯಯನದೊಂದಿಗೆ ಸಂಪರ್ಕದಲ್ಲಿರಿಸುತ್ತದೆ.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611482

ಉಪ ರಾಷ್ಟ್ರಪತಿ ಮತ್ತು ಅವರ ಪತ್ನಿ ಉಪರಾಷ್ಟ್ರಪತಿ ಭವನದಲ್ಲಿ ದೀಪ ಬೆಳಗಿದರು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮವು ಮಾರಕ ಕೊರೊನಾ ವೈರಾಣುವಿನಿಂದ ಉಂಟಾಗಿರುವ ಕತ್ತಲೆಯನ್ನು ಹೋಗಲಾಡಿಸಲು ಮತ್ತು ನಮ್ಮ ಏಕಮತ್ಯವನ್ನು ಹಾಗೂ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಲು ಉದ್ದೇಶಿಸಿದೆ ಎಂದು ಹೇಳಿರುವ ಉಪರಾಷ್ಟ್ರಪತಿಯವರು,  ಅಪಾರ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿದ್ದಕ್ಕಾಗಿ ದೇಶದ ಜನತೆಯನ್ನು ಶ್ಲಾಘಿಸಿದರು.

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611551

ವೈರಾಣುವಿನ ಸೋಂಕು ತಡೆಯಲು ಬಹುಮುಖಿ ಲೇಪನ ಅಭಿವೃದ್ಧಿ ಪಡಿಸಿದ ಜೆಎನ್ಸಿಎಎಸ್ಆರ್

ಹೆಚ್ಚಿನ ವಿವರಗಳಿಗೆ https://pib.gov.in/PressReleseDetail.aspx?PRID=1611838

 

ಪಿಐಬಿ ಕ್ಷೇತ್ರ ಕಾರ್ಯಾಲಯಗಳ ಮಾಹಿತಿ

ಈಶಾನ್ಯ ವಲಯ

  • ಭಾರತೀಯ ವೈದ್ಯಕೀಯ ಸಂಘ ಅರುಣಾಚಲ ಚಾಪ್ಟರ್ ರಾಜ್ಯ ಸರ್ಕಾರದ ಸಹಯೋಗದೊಂದಿಗೆ 104 ಮತ್ತು 1075 ಸಂಖ್ಯೆಗಳೊಂದಿಗೆ ಸಂಯೋಜಿಸಲ್ಪಟ್ಟ ಟೆಲಿ ಮೆಡಿಸಿನ್ ಸಹಾಯವಾಣಿ ಸೇವೆಗಳನ್ನು ಒದಗಿಸುತ್ತಿದೆ.
  • ಕರೋನಾ ಮಹಾಮಾರಿ ಸಂದರ್ಭದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ವೈದ್ಯರು, ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ನೋಂದಣಿಗೆ ವೆಬ್ ಸೈಟ್ ಆರಂಭಿಸಿದ ಅಸ್ಸಾಂ ಸರ್ಕಾರ
  • ಮಣಿಪುರದ ಪ್ರಥಮ ಕೋವಿಡ್ ಶಂಕಿತನಿಗೆ ಸೋಂಕಿಲ್ಲ ಎಂದು ದೃಢ ಪಡಿಸಿದ ಆರೋಗ್ಯ ಸಚಿವರು.
  • ಮೇಘಾಲಯ ಕೋವಿಡ್ ಮುಕ್ತ, ಗುವಾಹಟಿಯ ಕೋವಿಡ್ ರೋಗಿಯ ಜೊತೆ ಸಂಪರ್ಕವಿದ್ದ ವ್ಯಕ್ತಿಯ ಪರೀಕ್ಷೆಯಲ್ಲಿ ನಕಾರಾತ್ಮಕ ಅಂಶ.
  • ಮಿಜೋರಾಂ ನಲ್ಲಿ ಲಾಕ್ ಡೌನ್ ವೇಳೆ ಸ್ಥಳೀಯ ಕಾರ್ಯಪಡೆಗಳ ಪಾತ್ರಕ್ಕೆ ಮೆಚ್ಚುಗೆ
  • ನಾಗಾಲ್ಯಾಂಡ್ ನ 11 ಜಿಲ್ಲೆಗಳಿಗೆ ಹಿಂದಿನ 31 ಲಕ್ಷ ಅನುಮೋದನೆಯ ಹೊರತಾಗಿ ಎನ್.ಎಸ್.ಡಿ.ಎಂ.ಎ. ಅಡಿ ತಲಾ 5 ಲಕ್ಷ ಮಂಜೂರು.
  • ಗಾಂಗ್ಟೋಕ್ ನಲ್ಲಿ ಐಸಿಎಂಆರ್. ನಿಯಮಗಳ ಅಡಿಯಲ್ಲಿ ವೈರಾಣು ಸಂಶೋಧನಾ ಪ್ರಯೋಗಾಲಯ ಸ್ಥಾಪನೆ
  • ತ್ರಿಪುರಾದಲ್ಲಿ ಈವರೆಗೆ ಯಾವುದೇ ಕೋವಿಡ್ ಸೋಂಕು ದೃಢಪಟ್ಟಿಲ್ಲ.

ಪಶ್ಚಿಮ ವಲಯ

  • ಗುಜರಾತ್ ನಲ್ಲಿ 16 ಹೊಸ ಪ್ರಕರಣ ಪತ್ತೆ ಬಳಿಕ ಒಟ್ಟು ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 144ಕ್ಕೆ ಏರಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ತಿಳಿಸಿದೆ. ಅಹ್ಮದಾಬಾದ್ ನಲ್ಲಿ 11 ಪ್ರಕರಣ ವರದಿಯಾಗಿದ್ದರೆ, ಎರಡು ವಡೋದರದಲ್ಲಿ ಮತ್ತು ತಲಾ ಒಂದು ಪಾಟ್ನಾ, ಮೆಹ್ಸಾನಾ ಮತ್ತ ಸೂರತ್ ನಿಂದ ವರದಿಯಾಗಿದೆ.
  • ಮಹಾರಾಷ್ಟ್ರ ರಾಜ್ಯದ ಆರೋಗ್ಯ ಇಲಾಖೆ ಮಹಾರಾಷ್ಟ್ರದಲ್ಲಿ ಸೋಮವಾರ 33 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿರುವುದಾಗಿ ಹೇಳಿದೆ.ಇದರೊಂದಿಗೆ ಕೋವಿಡ್ ಸೋಂಕಿತರ ಸಂಖ್ಯೆ 781ಕ್ಕೆ ಏರಿದೆ.
  • ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪುಣೆಯ ಡಿ.ವೈ. ಪಾಟೀಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ 42 ವೈದ್ಯರು ಮತ್ತು 50 ಇತರ ವೈದ್ಯಕೀಯ ಸಿಬ್ಬಂದಿಯನ್ನು ಪ್ರತ್ಯೇಕೀಕರಣದಲ್ಲಿಡಲಾಗಿದೆ.
  • ರಾಜಾಸ್ಥಾನದಲ್ಲಿ ಎಂಟಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ರಾಜಾಸ್ಥಾನದ ಆರೋಗ್ಯ ಇಲಾಖೆಯ ರೀತ್ಯ ಇವರಲ್ಲಿ ಆರು ಮಂದಿ ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗಿಯಾದವರಾಗಿದ್ದಾರೆ. ಈ ಮಧ್ಯೆ ಕೋವಿಡ್ 19ರ ಬಗ್ಗೆ ನವೀಕೃತ ಮಾಹಿತಿ ನೀಡಲು ಸರ್ಕಾರ ಫೇಸ್ ಬುಕ್ ಚಾಟ್ ಬಾಟ್ ಆರಂಭಿಸಿದೆ. 
  • ಛತ್ತೀಸಗಢದಲ್ಲಿ ಈಗ ಒಂದೇ ಒಂದು ಕೋವಿಡ್ ಸೋಂಕಿನ ಪ್ರಕರಣವಿದೆ. 10ರಲ್ಲಿ 9 ರೋಗಿಗಳು ಗುಣಮುಖರಾಗಿದ್ದು ಬಿಡುಗಡೆಯಾಗಿದ್ದಾರೆ.
  • ಗೋವಾ ಮೀನುಗಾರಿಕೆ ಇಲಾಖೆ ರಾಜ್ಯದಲ್ಲಿ ಕೆಲವು ಷರತ್ತುಗಳೊಂದಿಗೆ ಮೀನು ಮಾರಾಟಕ್ಕೆ ಇಂದಿನಿಂದ ಅವಕಾಶ ನೀಡಿದೆ. ಇದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಲಾಕ್ ಡೌನ್ ಘೋಷಿಸಿದಾಗಿನಿಂದ ಮೀನು ಮಾರಾಟ ನಿಲ್ಲಿಸಲಾಗಿತ್ತು.

ದಕ್ಷಿಣ ವಲಯ

  • ಕೇರಳ:   ಕೊಲ್ಲಂ ಜಿಲ್ಲೆಯ ಪ್ರಥಮ ಕೋವಿಡ್ ಪ್ರಕರಣದ ರೋಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಮರಳಿದ್ದಾರೆ. ಕೇರಳದ ಒಬ್ಬ ವ್ಯಕ್ತಿ ಯುಕೆಯಲ್ಲಿ ಕೋವಿಡ್ ಗೆ ಇಂದು ಬಲಿಯಾಗಿದ್ದಾರೆ.
  • ತಮಿಳುನಾಡು : 86 ಹೊಸ ಪ್ರಕರಣ ಮತ್ತು 2 ಸಾವು ನಿನ್ನೆ ಸಂಭವಿಸಿದೆ.; ಒಟ್ಟು ಸಾವು 5; ಒಟ್ಟು ಪ್ರಕರಣಗಳು 571; ಚೆನ್ನೈನಲ್ಲಿ ಗರಿಷ್ಠ ಪ್ರಕರಣ(98). ಕೊಯಮತ್ತೂರಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ. ಭಾನುವಾರ 29ಇದ್ದದ್ದು 58ಕ್ಕೆ ಏರಿಕೆ.
  •  ಕರ್ನಾಟಕ : ನಿನ್ನೆ 12 ಹೊಸ ಪ್ರಕರಣ; ಮೈಸೂರು 7,  ಬೆಂಗಳೂರು 2 ಮತ್ತು ಬಾಗಲಕೋಟೆ 2; ಒಟ್ಟು ಪ್ರಕರಣ 151; ಸಾವು 4;
  • ಆಂಧ್ರಪ್ರದೇಶಈವರೆಗೆ ಒಟ್ಟು +ve ಪ್ರಕರಣಗಳು 266; ದೆಹಲಿ ಸಭೆಯ ನಂಟು 243. ದೆಹಲಿ ಸಭೆಯ ಪ್ರಾಥಮಿಕ ಸಂಪರ್ಕಿತರ ಪರಿಶೀಲನೆ ಬಹುತೇಕ ಪೂರ್ಣ. ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕರ್ನೂಲ್ ನಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿ
  • ತೆಲಂಗಾಣ: 6 ಪ್ರಕರಣ ಸೂರ್ಯ ಪೇಟ್ ನಿಂದ ವರದಿ; ಒಟ್ಟು ಸಂಖ್ಯೆ 340. ನಿಗಾ ಮತ್ತು ಸಕಾಲಿಕ ವಿಶ್ಲೇಷಣೆ ನೀಡಲು ರಾಜ್ಯದಿಂದ ಸ್ವಯಂ ಚಾಲಿತ ಕೋವಿಡ್ 19 ನಿಗಾ ವ್ಯವಸ್ಥೆಯ ಆಪ್. ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿ ತಡೆಗೆ ಸ್ಥಳೀಯ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಯ ವಾಟ್ಸ್ ಅಪ್ ಗ್ರೂಪ್ ರಚನೆ.

 

Fact Check on #Covid19

 

 

 

https://pbs.twimg.com/profile_banners/231033118/1584354869/1500x500

 

 

 

 

 

 

 

***



(Release ID: 1611847) Visitor Counter : 228