ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಆಹಾರ ಧಾನ್ಯಗಳ ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಭಾರತ ಆಹಾರ ನಿಗಮ

Posted On: 05 APR 2020 7:06PM by PIB Bengaluru

ಆಹಾರ ಧಾನ್ಯಗಳ ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಭಾರತ ಆಹಾರ ನಿಗಮ

 

ರಾಷ್ಟ್ರವ್ಯಾಪಿ ಲಾಕ್ಡೌನ್ ಸಮಯದಲ್ಲಿ ದೇಶದ ಪ್ರತಿಯೊಂದು ಭಾಗದಲ್ಲೂ ಸಾಕಷ್ಟು ಆಹಾರ ಧಾನ್ಯದ ದಾಸ್ತಾನು ಲಭ್ಯವಾಗುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ಮುಂದುವರೆಸುತ್ತಿರುವ  ಭಾರತ ಆಹಾರ ನಿಗಮವು, ಒಂದೇ ದಿನ 1.93 ಲಕ್ಷ ಮೆಟ್ರಿಕ್ ಟನ್ (ಎಲ್ಎಮ್ಟಿ) ಆಹಾರ ಧಾನ್ಯಗಳನ್ನು 70 ರೇಕ್ಗಳನ್ನು ಎರಡು ದಿನಗಳವರೆಗೆ -03.04.20 ಮತ್ತು 04.04.20 ರಂದು- ನಿರಂತರವಾಗಿ ಚಲಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. 24.03.2020 ರಂದು ಲಾಕ್ಡೌನ್ ಪ್ರಾರಂಭವಾದಾಗಿನಿಂದ 12 ದಿನಗಳಲ್ಲಿ, ಎಫ್ಸಿಐ ದಿನಕ್ಕೆ ಸರಾಸರಿ 1.41 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯದ ಸಾಗಾಟ ನಡೆಸಿದೆ. ಲಾಕ್ಡೌನ್ ಗೆ ಮುಂಚೆ ದೈನಂದಿನ ಸರಾಸರಿ 0.8 ಲಕ್ಷ ಮೆಟ್ರಿಕ ಟನ್ ಇತ್ತು. ಅವಧಿಯಲ್ಲಿ ಸುಮಾರು 16.94 ಲಕ್ಷ ಮೆ.ಟನ್ ಆಹಾರ ಧಾನ್ಯಗಳನ್ನು ಹೊತ್ತ 605 ರೇಕ್ಗಳನ್ನು ದೇಶಾದ್ಯಂತ ಸಾಗಿಸಲಾಗಿದೆ.

ಒಟ್ಟು ಆಹಾರ ಧಾನ್ಯಗಳ ಸಾಗಣೆಯಲ್ಲಿ ಸುಮಾರು ಶೇ.46 ರಷ್ಟು -7.73 ಲಕ್ಷ ಮೆಟ್ರಿಕ ಟನ್ -ಪಂಜಾಬ್ ರಾಜ್ಯದ್ದಾದರೆ, ನಂತರ ಹರಿಯಾಣ (3.02 ಎಲ್ಎಂಟಿ), ತೆಲಂಗಾಣ (2.04 ಎಲ್ಎಂಟಿ) ಮತ್ತು ಚತ್ತೀಸ್ಗಢ (1.15 ಎಲ್ಎಂಟಿ) ರಾಜ್ಯಗಳಿವೆ. ಒಡಿಶಾ, ಆಂಧ್ರಪ್ರದೇಶ ಮುಂತಾದ ಇತರ ರಾಜ್ಯಗಳು ಉಳಿದ ಆಹಾರ ಸಾಮಗ್ರಿಗಳನ್ನು ಸಾಗಿಸಿವೆ. ಆಹಾರ ಧಾನ್ಯಗಳನ್ನು ಬಳಸುವ ರಾಜ್ಯಗಳಲ್ಲಿ, ಗರಿಷ್ಠ ಸೇರ್ಪಡೆ ಉತ್ತರಪ್ರದೇಶದಲ್ಲಿ (2.07 ಎಲ್ಎಂಟಿ) ನಂತರ ಬಿಹಾರ (1.96 ಎಲ್ಎಂಟಿ), ಪಶ್ಚಿಮ ಬಂಗಾಳ (1.65 ಎಲ್ಎಂಟಿ) ಮತ್ತು ಕರ್ನಾಟಕ (1.57 ಎಲ್ಎಂಟಿ) ರಾಜ್ಯಗಳಲ್ಲಾಗಿದೆ. ಈಶಾನ್ಯದ ಮೇಲೆ ವಿಶೇಷ ಗಮನ ಹರಿಸಿ, ಲಾಕ್ಡೌನ್ ಅವಧಿಯಲ್ಲಿ 1.4 ಎಲ್ಎಂಟಿ ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಿಸಲಾಗಿದೆ. ಎಫ್ಸಿಐ ಪ್ರತಿ ರಾಜ್ಯದ ಅವಶ್ಯಕತೆಗಳಿಗೂ ಯಾವುದೇ ಕೊರತೆಯಾಗದಂತೆ ಪೂರೈಕೆಯನ್ನು ಖಚಿತಪಡಿಸುತ್ತಿದೆ. 04.04.2020 ರಲ್ಲಿದ್ದಂತೆ, ಎಫ್ಸಿಐ 55.47 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು (31.23 ಎಂಎಂಟಿ ಅಕ್ಕಿ ಮತ್ತು 24.24 ಎಂಎಂಟಿ ಗೋಧಿ) ಹೊಂದಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್) ಅಡಿಯಲ್ಲಿ ಆಹಾರ ಧಾನ್ಯಗಳ ನಿಯಮಿತ ಅವಶ್ಯಕತೆಗಳನ್ನು ಮತ್ತು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಮ್ಜಿಕೆಎ) ಅಡಿಯಲ್ಲಿ ಹೆಚ್ಚುವರಿ ಹಂಚಿಕೆ ಮಾಡುವುದರ ಜೊತೆಗೆ, ಎಫ್ಸಿಐ -ಹರಾಜು ಮಾರ್ಗದ ಮೂಲಕ ಹೋಗದೆ ನೇರವಾಗಿ ಗೋಧಿ ಮತ್ತು ಅಕ್ಕಿಯನ್ನು ಒದಗಿಸುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಮಾರಾಟ ದರಗಳಲ್ಲಿಯೇ ಒದಗಿಸುತ್ತಿದೆ. ಆಯಾ ಜಿಲ್ಲಾಧಿಕಾರಿಗಳು ಮಾಡಿದ ಅವಶ್ಯಕತೆಗಳ ಮೌಲ್ಯಮಾಪನದ ಆಧಾರದ ಮೇಲೆ ಗೋಧಿ ಹಿಟ್ಟು ಮತ್ತು ಇತರ ಗೋಧಿ ಉತ್ಪನ್ನಗಳ ತಯಾರಕರ ಅವಶ್ಯಕತೆಗಳನ್ನು ಪೂರೈಸಲು ಗೋಧಿಯನ್ನು ನೀಡಲಾಗುತ್ತದೆ. ತಮ್ಮದೇ ಮಾರ್ಗಗಳ ಮೂಲಕ ಹೆಚ್ಚಿನ ವಿತರಣೆಗಾಗಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ನೀಡಲಾಗುತ್ತದೆ. ಎಫ್ಸಿಐ ಮಾದರಿಯಲ್ಲಿ 13 ರಾಜ್ಯಗಳಿಗೆ 1.38 ಎಲ್ಎಂಟಿ ಗೋಧಿ ಮತ್ತು 8 ರಾಜ್ಯಗಳಿಗೆ 1.32 ಎಲ್ಎಂಟಿ ಅಕ್ಕಿಯನ್ನು ನೀಡಿದೆ.

***



(Release ID: 1611484) Visitor Counter : 171