ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಎಚ್ ಆರ್ ಡಿ ಸಚಿವರ ಸಲಹೆಯಂತೆ ಮಕ್ಕಳ ಶೈಕ್ಷಣಿಕ ಹಿತ ಕಾಯಲು ಕೇಂದ್ರೀಯ ವಿದ್ಯಾಲಯ ಸಂಘಟನೆಗಳಿಂದ ಆನ್ ಲೈನ್ ಬೋಧನೆ – ಕಲಿಸುವ ಪ್ರಕ್ರಿಯೆ ಸೇರಿ ಹಲವು ಕ್ರಮ

Posted On: 05 APR 2020 7:36PM by PIB Bengaluru

ಕೇಂದ್ರ ಎಚ್ ಆರ್ ಡಿ ಸಚಿವರ ಸಲಹೆಯಂತೆ ಮಕ್ಕಳ ಶೈಕ್ಷಣಿಕ ಹಿತ ಕಾಯಲು ಕೇಂದ್ರೀಯ ವಿದ್ಯಾಲಯ ಸಂಘಟನೆಗಳಿಂದ ಆನ್ ಲೈನ್ ಬೋಧನೆ – ಕಲಿಸುವ ಪ್ರಕ್ರಿಯೆ ಸೇರಿ ಹಲವು ಕ್ರಮ

 

ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಶಾಲೆಗಳು ಮುಚ್ಚಿರುವ ಈ ಪ್ರಸಕ್ತ ಸಂದರ್ಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ತಮ್ಮ ಸಚಿವಾಲಯದಡಿ ಬರುವ ಎಲ್ಲ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕಾಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದರು. ಅದರಂತೆ ಕೇಂದ್ರೀಯ ವಿದ್ಯಾಲಯ ಸಂಘಟನೆ ಹಲವು ಆನ್ ಲೈನ್ ಮತ್ತು ಡಿಜಿಟಲ್ ಪದ್ಧತಿಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಅಲ್ಲದೆ ಅದು ಎಲ್ಲ ಪ್ರಾದೇಶಿಕ ಕಚೇರಿಗಳಿಗೆ ವಿದ್ಯಾರ್ಥಿಗಳೊಂದಿಗೆ ಹಾಗೂ ಅವರ ಶಿಕ್ಷಣದ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಕೆವಿಎಸ್ ಶಿಕ್ಷಕರ ಉಪಕ್ರಮಗಳು

ಬಹುಸಂಖ್ಯೆಯ ಕೆವಿಎಸ್ ಶಿಕ್ಷಕರು ಜವಾಬ್ದಾರಿಯುತ ಬೋಧಕರು ಮತ್ತು ಮಾರ್ಗದರ್ಶಕರಾಗಿ ಕೋವಿಡ್-19 ವಿರುದ್ಧದ ಜಾಗತಿಕ ಸಾಂಕ್ರಾಮಿಕದ ಎದುರು ಹೋರಾಟಕ್ಕೆ ಮುಂದಾಗಿದ್ದಾರೆ ಮತ್ತು ಅವರು, ಡಿಜಿಟಲ್ ವೇದಿಕೆಗಳ ಮೂಲಕ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ, ಈಗಾಗಲೇ ನಷ್ಟವಾಗಿರುವ ಗುಣಮಟ್ಟದ ಬೋಧನಾ ಸಮಯವನ್ನು ತುಂಬಿಕೊಡಲು ಶ್ರಮಿಸುತ್ತಿದ್ದಾರೆ.

ಕೆವಿಎಸ್ ಎಲ್ಲ ಪ್ರಾಂಶುಪಾಲರ ಜೊತೆ ಕೆಲವೊಂದು ಕ್ರಿಯಾ ಅಂಶಗಳನ್ನು ಹಂಚಿಕೊಂಡಿದೆ. ಅವುಗಳನ್ನು ಸಾಧ್ಯವಾದಷ್ಟು ಜಾರಿಗೊಳಿಸಲು ಮತ್ತು ವಿದ್ಯಾರ್ಥಿಗಳನ್ನು ಡಿಜಿಟಲ್ ಪದ್ಧತಿಗಳ ಮೂಲಕ ತೊಡಗಿಸಿಕೊಳ್ಳಲು ಎಲ್ಲ ಶಿಕ್ಷಕರನ್ನು ಉತ್ತೇಜಿಸಿದೆ. ಶಿಕ್ಷಕರು ಆನ್ ಲೈನ್ ತರಗತಿಗಳನ್ನು ನಡೆಸಲು ಅಗತ್ಯ ಶಿಷ್ಟಾಚಾರವನ್ನು ರೂಪಿಸಲಾಗಿದೆ.

ಎನ್ಐಒಎಸ್ ವೇದಿಕೆ ಬಳಕೆ

ಕೆವಿಎಸ್ ಕೆಲವು ರೆಕಾರ್ಡ್ ಮಾಡಲಾಗಿರುವ ಪಾಠಗಳ ವೇಳಾಪಟ್ಟಿಯನ್ನು ಹಂಚಿಕೊಂಡಿದೆ ಹಾಗೂ ಪ್ರೌಢ ಮತ್ತು ಹಿರಿಯ ಪ್ರೌಢ ವಿದ್ಯಾರ್ಥಿಗಳಿಗೆ ಎನ್ಐಎಸ್ಒ ನೇರ ಕಾರ್ಯಕ್ರಮದ ಮೂಲಕ ತಮ್ಮ ಸ್ವಯಂಪ್ರಭ ಪೋರ್ಟಲ್ ನಲ್ಲಿ ಇದೇ 2020ರ ಏಪ್ರಿಲ್ 7 ರಿಂದ ತರಗತಿಗಳು ಆರಂಭವಾಗಲಿವೆ.

ಈ ಕುರಿತ ಮಾಹಿತಿಯನ್ನು ಎಲ್ಲ ವಿದ್ಯಾಲಯಗಳಿಗೆ ತಲುಪಿಸಲಾಗಿದೆ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ತಿಳಿಸಲು ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಜೊತೆ ಇ-ಮೇಲ್, ವಾಟ್ಸ್ ಅಪ್, ಎಸ್ಎಂಎಸ್ ಮತ್ತಿತರ ವಿಧಾನಗಳ ಮೂಲಕ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಆ ಮೂಲಕ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ.

ನೇರ ಸಂವಾದಗಳಿಗೆ ಶಿಕ್ಷಕರ ನಿಯೋಜನೆ

ಕೆವಿಎಸ್, ಎನ್ಐಒಎಸ್ ತನ್ನ ಸ್ವಯಂಪ್ರಭಾ ಪೋರ್ಟಲ್ ಮೂಲಕ ನಡೆಸಲಿರುವ ನೇರ ಪಾಠ ಬೋಧನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಅಲ್ಲಿ ಕೇಳಲಾಗುವ ಪ್ರಶ್ನೆ ಹಾಗೂ ಸಂದೇಹಗಳಿಗೆ ಸ್ಕೈಪ್ ಮತ್ತು ಲೈವ್ ವೆಬ್ ಚಾರ್ಟ್ ಮೂಲಕ ಉತ್ತರಿಸಲು ಶಿಕ್ಷಕರನ್ನು ಆಯ್ಕೆ ಮಾಡಿ, ನಾಮ ನಿರ್ದೇಶನ ಮಾಡಿದೆ. ಅಂತಹ ಶಿಕ್ಷಕರ ವಿವರಗಳನ್ನು ಎಲ್ಲ ಪ್ರಾದೇಶಿಕ ಕಚೇರಿಗಳ ಜೊತೆ ಹಂಚಿಕೊಳ್ಳಲಾಗಿದೆ.

ಈ ರೀತಿ ನಾಮಕರಣಗೊಂಡಿರುವ ಶಿಕ್ಷಕರು ಪಠ್ಯಕ್ರಮವನ್ನು ಆಧರಿಸಿ ಹೆಚ್ಚುವರಿ ಸಾಮಗ್ರಿ/ಟಿಪ್ಪಣಿಗಳನ್ನು ಅದೇ ದಿನ ಮುಂಜಾನೆ ಸಿದ್ಧಪಡಿಸಲಿದ್ದಾರೆ ಮತ್ತು ನೇರ ಕಾರ್ಯಕ್ರಮದಲ್ಲಿ ಅವುಗಳಿಗೆ ಸ್ಪಷ್ಟ ವಿವರಣೆ ನೀಡಲಿದ್ದಾರೆ ಮತ್ತು ನೇರ ಕಾರ್ಯಕ್ರಮದಲ್ಲಿ ಸಂದೇಹಗಳು ಎದುರಾದರೆ ಬೋಧಕರು ಆ ಪಠ್ಯಕ್ಕೆ ಸೂಕ್ತ ಪಿಪಿಟಿ ಅಥವಾ ಸೂಕ್ತ ಬೋಧನಾ ಸಾಮಗ್ರಿಗಳ ಮೂಲಕ ವಿವರಣೆ ನೀಡಲಿದ್ದಾರೆ.

ಲಭ್ಯವಿರುವ ಸಂಪನ್ಮೂಲಗಳ ಬಳಕೆ

ಎನ್ಐಒಎಸ್ ಮತ್ತು ಎನ್ ಸಿಇಆರ್ ಟಿ ಆನ್ ಲೈನ್ ಪಾಠಗಳನ್ನು ಮತ್ತು ಟಿವಿಯಲ್ಲಿ ಪಾಠಗಳನ್ನು ಪ್ರಸಾರ ಮಾಡುತ್ತಿದೆ. ಅದರ ವಿವರಗಳು ಈ ಕೆಳಗಿನಂತಿವೆ.

  1. ಭಾರೀ ಮುಕ್ತ ಆನ್-ಲೈನ್ ಕೋರ್ಸ್ ಗಳು(ಎಂಒಒಸಿಎಸ್):

ಎನ್ಐಒಎಸ್ ಕೋರ್ಸ್ ಎಲ್ಲ ಪ್ರೌಢ ಮತ್ತು ಹಿರಿಯ ಪ್ರೌಢಮಟ್ಟದ ಎಲ್ಲ ವಿಷಯಗಳ ಎಂಒಒಸಿಎಸ್ ಲಭ್ಯ. https://swayam.gov.in/nc_details/NIOS

  1. ಫ್ರಿ ಟು ಏರ್ ಡಿಟಿಎಚ್ ಚಾನಲ್ಸ್:

ಡಿಟಿಎಚ್ ಚಾನಲ್ ಸಂಖ್ಯೆ 27 (ಪಾನಿನಿ)

https://www.swayamprabha.gov.in/index.php/program/current/27 (ಸೆಕೆಂಡರಿ)

ಡಿಟಿಎಚ್ ಚಾನಲ್ ಸಂಖ್ಯೆ 28 (ಶಾರದಾ)

https://www.swayamprabha.gov.in/index.php/channel_profile/profile/28 (ಸೀನಿಯರ್ ಸೆಕೆಂಡರಿ)

  1. ಯೂಟ್ಯೂಬ್ ಚಾನಲ್ಸ್:

https://www.youtube.com/channel/UC1we0IrHSKyC7f30wE50_hQ (ಸೆಕೆಂಡರಿ) https://www.youtube.com/channel/UC6R9rI-1iEsPCPmvzlunKDg (ಸೀನಿಯರ್ ಸೆಕೆಂಡರಿ)

  1. ಕಿಶೋರ್ ಮಂಚ್: 9 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್ ಸಿ ಇ ಆರ್ ಟಿ ಸ್ವಯಂಪ್ರಭಾ ಚಾನಲ್ ಸಂಖ್ಯೆ 31ರಲ್ಲಿ. 24 X 7 ಡಿಟಿಎಚ್ ಟಿವಿ ಚಾನಲ್.

 

ಅಲ್ಲದೆ ಎನ್ಆರ್ ಒಇಆರ್, ದಿಕ್ಷಾ, ಸ್ವಯಂಪ್ರಭಾ, ಎನ್ ಪಿಟಿಇಎಲ್, ಇ-ಪಾಠಶಾಲಾ ಇತ್ಯಾದಿ ಸೇರಿದಂತೆ ಹಲವು ಈಗಾಗಲೇ ಉಚಿತವಾಗಿ ಇ-ಸಂಪನ್ಮೂಲಗಳು ಲಭ್ಯವಿದೆ.

 

*****

 



(Release ID: 1611482) Visitor Counter : 249