ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

COVID-19 ವಿರುದ್ಧ ಹೋರಾಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವಿವಿಧ ಸಂಸ್ಥೆಗಳು/ ಸ್ವಾಯತ್ತ ಸಂಸ್ಥೆಗಳು/ ಇಲಾಖೆಗಳಿಂದ PM CARES ನಿಧಿಗೆ 38.91 ಕೋ.ರೂ.ಗೂ ಅಧಿಕ ದೇಣಿಗೆ

Posted On: 05 APR 2020 5:48PM by PIB Bengaluru

COVID-19 ವಿರುದ್ಧ ಹೋರಾಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವಿವಿಧ ಸಂಸ್ಥೆಗಳು/ ಸ್ವಾಯತ್ತ ಸಂಸ್ಥೆಗಳು/ ಇಲಾಖೆಗಳಿಂದ PM CARES ನಿಧಿಗೆ 38.91 ಕೋ.ರೂ.ಗೂ ಅಧಿಕ ದೇಣಿಗೆ

COVID-19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬಲಪಡಿಸುವ ಪ್ರಯತ್ನಕ್ಕೆ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್ಶ್ಲಾಘನೆ

 

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ 28 ವಿವಿಧ ಸಂಸ್ಥೆಗಳು / ಸ್ವಾಯತ್ತ ಸಂಸ್ಥೆಗಳು / ಇಲಾಖೆಗಳು PM CARES ನಿಧಿಗೆ 38.91 ಕೋ.ರೂ.ಗೂ ಹೆಚ್ಚಿನ ಕೊಡುಗೆ ನೀಡಿವೆ. COVID-19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬಲಪಡಿಸುವ ಪ್ರಯತ್ನವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ನಿಶಾಂಕ್ಶ್ಲಾಘಿಸಿದ್ದಾರೆ. COVID-19 ವಿರುದ್ಧದ ರೊಂದಿಗೆ ಹೋರಾಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕುಟುಂಬವು ಭಾರತವನ್ನು ಬಲವಾಗಿ ಬೆಂಬಲಿಸುತ್ತಿದೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಸಚಿವರು ತಮ್ಮ ಒಂದು ತಿಂಗಳ ಸಂಬಳ ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿಗಳನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದರು ಮತ್ತು ಎಚ್ಆರ್ಡಿ ಸಚಿವಾಲಯದ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳು / ಸ್ವಾಯತ್ತ ಸಂಸ್ಥೆಗಳಿಗೆ ಪಿಎಂ ಕೇರ್ಸ್ ನಿಧಿಗೆ ತಮ್ಮ ಕೊಡುಗೆಯನ್ನು ನೀಡುವಂತೆ ಮನವಿ ಮಾಡಿದರು.

Kindly click here for the details of contribution made by various Institutions/ Autonomous Organisations/Departments under Ministry of HRD

 

***



(Release ID: 1611451) Visitor Counter : 132