ನಾಗರೀಕ ವಿಮಾನಯಾನ ಸಚಿವಾಲಯ

ದೇಶಾದ್ಯಂತ 161 ಟನ್ ಸರಕು ಸಾಮಗ್ರಿ ಸಾಗಿಸಿದ ಜೀವನಾಡಿ ಉಡಾನ್ ವಿಮಾನಗಳು

Posted On: 05 APR 2020 4:51PM by PIB Bengaluru

ದೇಶಾದ್ಯಂತ 161 ಟನ್ ಸರಕು ಸಾಮಗ್ರಿ ಸಾಗಿಸಿದ ಜೀವನಾಡಿ ಉಡಾನ್ ವಿಮಾನಗಳು

ಜೀವನಾಡಿ ಉಡಾನ್ ವಿಮಾನಗಳ ಹಾರಾಟದ ಬಗ್ಗೆ ಸಾರ್ವಜನಿಕ ಮಾಹಿತಿ ಪ್ರತಿ ದಿನವೂ ಲೈಫ್ ಲೈನ್ ಉಡಾನ್ ವೆಬ್ ಸೈಟ್ ನಲ್ಲಿ ಅಪಲೋಡ್

 

ಜೀವನಾಡಿ ಉಡಾನ್ ಅಡಿ ಏರ್ ಇಂಡಿಯಾ, ಅಲಯನ್ಸ್ ಏರ್, ಐಎಎಫ್, ಪವನ್ ಹನ್ಸ್ ಮತ್ತು ಖಾಸಗಿ ವಿಮಾನಗಳೂ ಸೇರಿ 116 ವಿಮಾನಗಳ ಹಾರಾಟ ನಡೆಸಲಾಗುತ್ತಿದೆ. ಅವುಗಳಲ್ಲಿ 79 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲಯನ್ಸ್ ಏರ್ ಕಾರ್ಯಾಚರಣೆ ನಡೆಸುತ್ತಿವೆ. ಈವರೆಗೆ 161 ಟನ್ ಸರಕು ಸಾಮಗ್ರಿಗಳನ್ನು ಸಾಗಿಸಲಾಗಿದೆ. ಜೀವನಾಡಿ ಉಡಾನ್ ವಿಮಾನಗಳು ಈವರೆಗೆ 112,178 ಕಿ.ಮೀ. ವೈಮಾನಿಕ ದೂರವನ್ನು ಕ್ರಮಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಏರ್ ಇಂಡಿಯಾ ಅತ್ಯಂತ ನಿಕಟವಾಗಿ ಚೀನಾದ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಎರಡೂ ದೇಶಗಳ ನಡುವೆ ಗಂಭೀರ ವೈದ್ಯಕೀಯ ಉಪಕರಣಗಳ ವರ್ಗಾವಣೆಗೆ ಸರಕು ಸಾಗಾಣೆ ಸೇತುವೆ ಸ್ಥಾಪನೆಗೆ ಕ್ರಮ ಕೈಗೊಂಡಿವೆ. ಭಾರತ ಮತ್ತು ಚೀನಾ ನಡುವೆ ಸರಕು ಸಾಗಾಣೆ ಮೊದಲ ವಿಮಾನವನ್ನು ಏರ್ ಇಂಡಿಯಾ 2020ರ ಏಪ್ರಿಲ್ 4ರಂದು ಆರಂಭಿಸಿದ್ದು, ಅದು 21 ಟನ್ ಗಂಭೀರ ವೈದ್ಯಕೀಯ ಉಪಕರಣಗಳನ್ನು ಚೀನಾಕ್ಕೆ ಕೊಂಡೊಯ್ಯಿತು.

ಜೀವನಾಡಿ ಉಡಾನ್ ವಿಮಾನಗಳನ್ನು ಎಂಒಸಿಎ ಕಾರ್ಯಾಚರಣೆ ನಡೆಸುತ್ತಿದ್ದು, ಕೋವಿಡ್-19 ವಿರುದ್ಧ ಭಾರತ ನಡೆಸುತ್ತಿರುವ ಸಮರಕ್ಕೆ ಬೆಂಬಲವಾಗಿ ದೂರದ ಗುಡ್ಡಗಾಡು ಪ್ರದೇಶಗಳಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತಿದೆ.

 

ಜೀವನಾಡಿ ಉಡಾನ್ ವಿಮಾನಗಳ ಹಾರಾಟದ ದಿನಾಂಕಾವಾರು ವಿವರ ಈ ಕೆಳಗಿನಂತಿದೆ:

ಕ್ರಮ ಸಂಖ್ಯೆ

ದಿನಾಂಕ

ಏರ್ ಇಂಡಿಯಾ

ಅಲಯನ್ಸ್

ಐಎಎಫ್

ಇಂಡಿಗೋ

ಸ್ಪೈಸ್ ಜೆಟ್

ಒಟ್ಟು

1

26.3.2020

2

-

-

-

2

4

2

27.3.2020

4

9

-

-

-

13

3

28.3.2020

4

8

-

6

-

18

4

29.3.2020

4

10

6

-

-

20

5

30.3.2020

4

-

3

-

-

7

6

31.3.2020

9

2

1

-

-

12

7

01.4.2020

3

3

4

-

-

10

8

02.4.2020

4

5

3

-

-

12

9

03.4.2020

8

-

2

-

-

10

10

04.4.2020

4

3

2

-

-

9

ಒಟ್ಟು

46

40

22

6

2

116

 

ಈಶಾನ್ಯ ಭಾಗದ ಪ್ರದೇಶ(ಎನ್ಇಆರ್) ದ್ವೀಪ ಪ್ರದೇಶ ಮತ್ತು ಗುಡ್ಡಗಾಡು ರಾಜ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಎಂಒಸಿಎ, ಏರ್ ಇಂಡಿಯಾ ಮತ್ತು ಐಎಎಫ್ ಸಹಭಾಗಿತ್ವದಲ್ಲಿ ಲಡಾಖ್, ದಿಮಾಪುರ್, ಇಂಪಾಲ್, ಗುವಾಹತಿ ಮತ್ತು ಪೋರ್ಟ್ ಬ್ಲೇರ್ ನ ಕೊನೆಯ ಮೈಲುವರೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಬಹುತೇಕ ಸರಕು ಹಗುರ ತೂಕದ್ದು ಮತ್ತು ಗಾತ್ರದಲ್ಲಿ ದೊಡ್ಡದಿದ್ದು, ಅವುಗಳಲ್ಲಿ ಮಾಸ್ಕ್, ಗ್ಲೌಸ್ ಮತ್ತಿತರ ಅವಶ್ಯಕ ವಸ್ತುಗಳಿದ್ದು, ಅವುಗಳು ವಿಮಾನದ ಹೆಚ್ಚಿನ ಸ್ಥಳಾವಕಾಶವನ್ನು ಆಕ್ರಮಿಸಿ ಕೊಂಡಿರುತ್ತವೆ. ಪ್ರಯಾಣಿಕರು ಕೂರುವ ಜಾಗದಲ್ಲಿ ಮತ್ತು ಓವರ್ ಹೆಡ್ ಕ್ಯಾಬಿನ್ ಗಳಲ್ಲಿ ಸರಕು ತುಂಬಲು ವಿಶೇಷ ಮುನ್ನೆಚ್ಚರಿಕೆಗಳೊಂದಿಗೆ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಲಾಗಿತ್ತು. ರಸ್ತೆ ಸಾರಿಗೆ ಮೂಲಕ ಸರಕು ಸಾಗಾಣೆಗೆ ಹಲವು ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಲೈಫ್ ಲೈನ್ ಉಡಾನ್ ವಿಮಾನಗಳ ಹಾರಾಟಕ್ಕೆ ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಸಿಬ್ಬಂದಿ ಸಂಚಾರಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದೆ.

ಜೀವನಾಡಿ ಉಡಾನ್ ವಿಮಾನಗಳ ಹಾರಾಟದ ಸಾರ್ವಜನಿಕ ಮಾಹಿತಿಯನ್ನು ಪ್ರತಿ ದಿನ ಲೈಫ್ ಲೈನ್ ಉಡಾನ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಎನ್ ಐಸಿ, ಲೈಫ್ ಲೈನ್ ಉಡಾನ್ ವಿಮಾನಗಳಿಗೆ ಪ್ರತ್ಯೇಕ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಎಂಒಸಿಎ ವೆಬ್ ಸೈಟ್ ನಲ್ಲಿ ಈ ಲೈಫ್ ಲೈನ್ ಉಡಾನ್ ಪೋರ್ಟಲ್ ನ ಲಿಂಕ್ ಲಭ್ಯವಿದೆ. www.civilaviation.gov.in).

ವಾಣಿಜ್ಯದ ಆಧಾರದಲ್ಲಿ ದೇಶೀಯ ಸರಕು ಸಾಗಾಣೆ ವಿಮಾನಗಳನ್ನು ಸ್ಪೈಸ್ ಜೆಟ್, ಬ್ಲೂಡಾರ್ಟ್ ಮತ್ತು ಇಂಡಿಗೋ ಕಾರ್ಯನಿರ್ವಹಣೆ ಮಾಡುತ್ತಿದೆ. ಸ್ಪೈಸ್ ಜೆಟ್ ನ 166 ಸರಕು ವಿಮಾನಗಳು ಮಾರ್ಚ್ 24 ರಿಂದ ಏಪ್ರಿಲ್ 4ರ ವರೆಗೆ 2,23,241 ಕಿ.ಮೀ. ವೈಮಾನಿಕ ದೂರ ಕ್ರಮಿಸಿವೆ ಮತ್ತು ಅವು 1,327 ಟನ್ ಸರಕುಗಳನ್ನು ಸಾಗಿಸಿವೆ. ಅವುಗಳಲ್ಲಿ 46 ಅಂತಾರಾಷ್ಟ್ರೀಯ ಸರಕು ಸಾಗಾಣೆ ವಿಮಾನಗಳು ಸೇರಿವೆ. ಬ್ಲೂಡಾರ್ಟ್ ನ 52 ದೇಶೀಯ ಸರಕು ಸಾಗಾಣೆ ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಮಾರ್ಚ್ 25 ರಿಂದ ಏಪ್ರಿಲ್ 4ರ ಅವಧಿಯಲ್ಲಿ 50,086 ಕಿ.ಮೀ. ದೂರ ಕ್ರಮಿಸಿ, 761 ಟನ್ ಸರಕು ಸಾಗಿಸಿವೆ. ಇಂಡಿಗೋ ತನ್ನ 8 ಸರಕು ವಿಮಾನಗಳ ಹಾರಾಟ ನಡೆಸಿ, 2020ರ ಏಪ್ರಿಲ್ 3 ಮತ್ತು 4 ರಂದು 6,103 ಕಿ.ಮೀ. ಕ್ರಮಿಸಿ, 3 ಟನ್ ಸರಕು ಸಾಗಿಸಿವೆ. ಇದರಲ್ಲಿ ಸರ್ಕಾರದ ವೈದ್ಯಕೀಯ ಸಲಕರಣೆಗಳನ್ನು ಉಚಿತವಾಗಿ ಸಾಗಿಸಲಾಗಿದೆ.

 

****

 



(Release ID: 1611411) Visitor Counter : 152