ರೈಲ್ವೇ ಸಚಿವಾಲಯ 
                
                
                
                
                
                
                    
                    
                        COVID-19 ಲಾಕ್‌ಡೌನ್ ಸಮಯದಲ್ಲಿ ಸಾಮಾನ್ಯ ಜನರ ಬಳಕೆಗಾಗಿ ಸಕ್ಕರೆ, ಉಪ್ಪು ಮತ್ತು ಖಾದ್ಯ ತೈಲ ಪೂರೈಕೆಯ ಸಂಪೂರ್ಣ ನಿರ್ವಹಣೆ: ಭಾರತೀಯ ರೈಲ್ವೆ
                    
                    
                        
                    
                
                
                    Posted On:
                05 APR 2020 3:27PM by PIB Bengaluru
                
                
                
                
                
                
                COVID-19 ಲಾಕ್ಡೌನ್ ಸಮಯದಲ್ಲಿ ಸಾಮಾನ್ಯ ಜನರ ಬಳಕೆಗಾಗಿ ಸಕ್ಕರೆ, ಉಪ್ಪು ಮತ್ತು ಖಾದ್ಯ ತೈಲ ಪೂರೈಕೆಯ ಸಂಪೂರ್ಣ ನಿರ್ವಹಣೆ: ಭಾರತೀಯ ರೈಲ್ವೆ 
2020 ರ ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ರೈಲ್ವೆ 1342 ವ್ಯಾಗನ್ ಸಕ್ಕರೆ, 958 ವ್ಯಾಗನ್ ಉಪ್ಪು ಮತ್ತು 378 ವ್ಯಾಗನ್/ ಟ್ಯಾಂಕ್ ಖಾದ್ಯ ತೈಲವನ್ನು ಸಾಗಿಸಿದೆ
 
COVID-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಸಾಮಾನ್ಯ ಜನರ ಬಳಕೆಗಾಗಿ ಸಕ್ಕರೆ, ಉಪ್ಪು ಮತ್ತು ಖಾದ್ಯ ತೈಲದ ಕೊರತೆಯಾಗದಂತೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಅವಧಿಯಲ್ಲಿ ಈ ಅಗತ್ಯ ವಸ್ತುಗಳ ಲೋಡಿಂಗ್, ಸಾಗಣೆ ಮತ್ತು ಅನ್ ಲೋಡಿಂಗ್ ಭರದಿಂದ ನಡೆದಿದೆ. 
2020 ರ ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗಿನ 13 ದಿನಗಳಲ್ಲಿ, ರೈಲ್ವೆ 1342 ವ್ಯಾಗನ್ ಸಕ್ಕರೆ, 958 ವ್ಯಾಗನ್ ಉಪ್ಪು ಮತ್ತು 378 ವ್ಯಾಗನ್ / ಟ್ಯಾಂಕ್ ಖಾದ್ಯ ತೈಲವನ್ನು ಸಾಗಿಸಿದೆ. (ಒಂದು ವ್ಯಾಗನ್ 58-60 ಟನ್ ವಸ್ತು ಹೊಂದಿರುತ್ತದೆ). 
ವಿವರಗಳು ಹೀಗಿವೆ:
 
	
		
			| ಕ್ರ.ಸಂ. | ದಿನಾಂಕ | ಸಕ್ಕರೆಯ ವ್ಯಾಗನ್ ಗಳ ಸಂಖ್ಯೆ | ಉಪ್ಪಿನ ವ್ಯಾಗನ್ ಗಳ ಸಂಖ್ಯೆ | ಖಾದ್ಯ ತೈಲ ವ್ಯಾಗನ್ ಗಳ ಸಂಖ್ಯೆ | 
		
			| 1 | 23.03.2020 | 42 | 168 | - | 
		
			| 2 | 24.03.2020 | - | 168 | 50 | 
		
			| 3 | 25.03.2020 | 42 | 42 | - | 
		
			| 4 | 26.03.2020 | 42 | 42 | - | 
		
			| 5 | 27.03.2020 | 42 | 42 | - | 
		
			| 6 | 28.03.2020 | 126 | 42 | 50 | 
		
			| 7 | 29.03.2020 | 210 | 42 | 42 | 
		
			| 8 | 30.03.2020 | 252 | 8 | - | 
		
			| 9 | 31.03.2020 | 293 | 84 | - | 
		
			| 10 | 01.04.2020 | 210 | - | - | 
		
			| 11 | 02.04.2020 | - | 133 | 64 | 
		
			| 12 | 03.04.2020 | 41 | 103 | 122 | 
		
			| 13 | 04.04.2020 | 42 | 84 | 50 | 
		
			|   | ಒಟ್ಟು | 1342 | 958 | 378 | 
	
 
ಸರಕು ಸಾಗಣೆಯನ್ನು ಅಧಿಕಾರಿಗಳು ಅತ್ಯಂತ ಉನ್ನತ ಮಟ್ಟದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಲೋಡ್ ಮತ್ತು ಇಳಿಸುವಿಕೆಯ ಕಾರ್ಯಾಚರಣೆಗಳಲ್ಲಿ ರೈಲ್ವೆ ಅನೇಕ ಟರ್ಮಿನಲ್ ಹಂತಗಳಲ್ಲಿ ಈ ಹಿಂದೆ ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲಾಗುತ್ತಿದೆ. ಅಂತಹ ಯಾವುದೇ ಕಾರ್ಯಾಚರಣೆಯ ಸಮಸ್ಯೆಗಳು ಉದ್ಭವಿಸಿದರೆ ಅದನ್ನು ಬಗೆಹರಿಸಲು ಭಾರತೀಯ ರೈಲ್ವೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದೆ.
***
                
                
                
                
                
                (Release ID: 1611407)
                Visitor Counter : 253