ರಕ್ಷಣಾ ಸಚಿವಾಲಯ

ವೈದ್ಯಕೀಯೇತರ ಸಿಬ್ಬಂದಿಗೆ ತರಬೇತಿ ಕ್ಯಾಪ್ಸುಲ್ ವಿನ್ಯಾಸಗೊಳಿಸಿದ ದಕ್ಷಿಣ ನೌಕಾ ಕಮಾಂಡ್

Posted On: 04 APR 2020 7:37PM by PIB Bengaluru

ವೈದ್ಯಕೀಯೇತರ ಸಿಬ್ಬಂದಿಗೆ ತರಬೇತಿ ಕ್ಯಾಪ್ಸುಲ್ ವಿನ್ಯಾಸಗೊಳಿಸಿದ ದಕ್ಷಿಣ ನೌಕಾ ಕಮಾಂಡ್

 

ದಕ್ಷಿಣ ನೌಕಾ ಕಮಾಂಡ್ COVID ಕೋರ್ ವರ್ಕಿಂಗ್ ಗ್ರೂಪ್, ತುರ್ತು ಸಂದರ್ಭಗಳಲ್ಲಿ ಫೋರ್ಸ್ ಮಲ್ಟಿಪ್ಲೈಯರ್ಗಳಾಗಿ ಕಾರ್ಯನಿರ್ವಹಿಸುವ ವೈದ್ಯಕೀಯೇತರ ಸಿಬ್ಬಂದಿಗೆ ತರಬೇತಿ ನೀಡಲು ಬ್ಯಾಟಲ್ ಫೀಲ್ಡ್ ನರ್ಸಿಂಗ್ ಅಸಿಸ್ಟೆಂಟ್ (ಬಿಎಫ್ಎನ್) ತರಬೇತಿ ಕ್ಯಾಪ್ಸುಲ್ ಅನ್ನು ಸಿದ್ಧಪಡಿಸಿದೆ.

ಐಎನ್ಎಸ್ ವೆಂದುರುತಿ ಮತ್ತು  ಎನ್ ಎಚ್ ಚ್ಎಸ್  ಸಂಜೀವಿನಿಯ ಕಮಾಂಡ್ ಮೆಡಿಕಲ್ ಆಫೀಸರ್, ಕಮಾಂಡಿಂಗ್ ಅಧಿಕಾರಿಗಳು ಮತ್ತು ಕಮಾಂಡ್ ಟ್ರೈನಿಂಗ್ ಆಫೀಸರ್ಗಳನ್ನು ಒಳಗೊಂಡಿರುವ ಪ್ರಮುಖ ತಂಡವು ಬಿಎಫ್ಎನ್ಎ ಪರಿಕಲ್ಪನೆಯನ್ನು ಬಳಸಿ ಕ್ಯಾಪ್ಸುಲ್ ಅನ್ನು ಅಭಿವೃದ್ಧಿಪಡಿಸಿದೆ.

ಕೈಗಳ ಸ್ವಚ್ಛತೆಯ ಮೂಲ ಪರಿಕಲ್ಪನೆಗಳು, ವೈಯಕ್ತಿತ ಸುರಕ್ಷಾ ಸಾಧನಗಳನ್ನು (ಪಿಪಿಇ) ಬಳಸುವುದು, ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಎಂಬ ಪರಿಕಲ್ಪನೆಯನ್ನು ವೈದ್ಯಕೀಯೇತರ ಸಿಬ್ಬಂದಿಗೆ ಒಳಗೊಂಡಿದೆ. ಸೋಂಕನ್ನು ತಡೆಗಟ್ಟುವ ಸರಳ ತಂತ್ರಗಳನ್ನು ಸಹ ಕೋರ್ಸ್ನಲ್ಲಿ ಪರಿಗಣಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ಫೋರ್ಸ್ ಮಲ್ಟಿಪ್ಲೈಯರ್ಗಳಾಗಿ ಕಾರ್ಯನಿರ್ವಹಿಸುವ ವೈದ್ಯಕೀಯೇತರ ಸಿಬ್ಬಂದಿಗೆ ತರಬೇತಿ ನೀಡುವ ಪ್ರಯತ್ನವಾಗಿ ದಕ್ಷಿಣ ನೌಕಾ ಕಮಾಂಡ್ ಎಲ್ಲಾ ಘಟಕಗಳಲ್ಲಿ ತರಬೇತಿಯನ್ನು ಸಕ್ರಿಯವಾಗಿ ನಡೆಸಲಾಗುತ್ತಿದೆ. ದಕ್ಷಿಣ ನೌಕಾ ಕಮಾಂಡ್ನಲ್ಲಿ ಇಲ್ಲಿಯವರೆಗೆ ಒಟ್ಟು 333 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

***



(Release ID: 1611288) Visitor Counter : 163