ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಕೋವಿಡ್ -19 ಮಾದರಿ ಪರೀಕ್ಷೆ ಕೈಗೆತ್ತಿಕೊಂಡ ಸಿಎಸ್ಐಆರ್-ಇಮ್ಟೆಕ್

Posted On: 04 APR 2020 12:23PM by PIB Bengaluru

ಕೋವಿಡ್ -19 ಮಾದರಿ ಪರೀಕ್ಷೆ ಕೈಗೆತ್ತಿಕೊಂಡ ಸಿಎಸ್ಐಆರ್-ಇಮ್ಟೆಕ್

ವೈಯಕ್ತಿಕ ಸುರಕ್ಷಿತ ಸಾಧನಗಳನ್ನು ಒದಗಿಸುವ ಮೂಲಕ ಆರೋಗ್ಯ ವೃತ್ತಿಪರರಿಗೆ ಸಹಕರಿಸುತ್ತಿರುವ

ಸಿ.ಎಸ್.ಐ.ಆರ್-ಇಮ್ಟೆಕ್

 

ಕೋವಿಡ್ -19 ಆರೋಗ್ಯ ವಲಯಕ್ಕೆ ಹಲವು ಸವಾಲುಗಳನ್ನು ಒಡ್ಡಿದೆ. ಕೋವಿಡ್ -19 ಪರೀಕ್ಷೆಯ ಸೀಮಿತ ಕಿಟ್ ಗಳೇ ಇಂಥ ಒಂದು ಸವಾಲಾಗಿದೆ. ಈವರೆಗೆ, ಭಾರತವು ಪ್ರಾಥಮಿಕವಾಗಿ ಪ್ರವಾಸದ ಇತಿಹಾಸ ಇರುವ ರೋಗಿಗಳ ಪರೀಕ್ಷೆಯನ್ನು ನಡೆಸಿದೆ. ಆದಾಗ್ಯೂ, ಪ್ರತಿ ದಶಲಕ್ಷ ಜನಸಂಖ್ಯೆಯ ಪರೀಕ್ಷೆಯ ದೃಷ್ಟಿಯಿಂದ ಪರೀಕ್ಷೆ ದರವು ಸುಧಾರಿಸಬೇಕಾಗಿದೆ.

ತನ್ನ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ –ಸೂಕ್ಷ್ಮಜೀವಿ ತಂತ್ರಜ್ಞಾನ ಸಂಸ್ಥೆ (ಸಿಎಸ್ಐಆರ್ –ಇಮ್ಟೆಕ್) ಕೋವಿಡ್ -19 ಮಾದರಿಗಳ ಪರೀಕ್ಷೆಯಲ್ಲಿ ಹೆಚ್ಚಳ ಮಾಡಿದೆ. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿಎಸ್.ಎ)ರು ಹೊರಡಿಸಿರುವ ನಿರ್ದೇಶನಗಳಿಗೆ ಅನುಗುಣವಾಗಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬಿಡುಗಡೆ ಮಾಡಿರುವ ಸಲಹೆಗಳಂತೆ ಸಿಎಸ್.ಐ.ಆರ್. ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಅಣು ಇಂಧನ ಇಲಾಖೆ (ಡಿಎಇ)ಯಿಂದ ಮಾನ್ಯತೆ ಪಡೆದ ಇತರ ಪ್ರಯೋಗಾಲಯಗಳಿಂದ ಕೋವಿಡ್ -19 ಪರೀಕ್ಷೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಎಲ್ಲ ಸರ್ಕಾರದ ಮಾನ್ಯತೆ ಪಡೆದ ಪ್ರಯೋಗಾಲಯಗಳನ್ನೂ ತೊಡಗಿಸಿಕೊಳ್ಳುವ ಐಸಿಎಂಆರ್ ನ ಉಪಕ್ರಮ ಸ್ವಾಗತಾರ್ಹ ಹೆಜ್ಜೆಯಾಗಿದೆ ಮತ್ತು ಕೋವಿಡ್ -19ರ ಮಾದರಿಗಳ ಪರೀಕ್ಷೆಯಲ್ಲಿ ಪರಿಣಾಮಕಾರಿಯಾಗಿದೆ. ಇದು ಶಂಕಿತ ರೋಗಿಗಳ ಪರೀಕ್ಷೆಯ ದರವನ್ನು ಹೆಚ್ಚಿಸುತ್ತದೆ. ಪ್ರಾರಂಭಿಕ ಹಂತದಲ್ಲಿ, ಇಮ್ಟೆಕ್ ಪ್ರತಿ ನಿತ್ಯ 50ರಿಂದ 100 ಮಾದರಿಗಳ ಪರೀಕ್ಷೆ ನಡೆಸುವ ಸಾಮರ್ಥ್ಯದ ಕಾರ್ಯಾಚರಣೆಗೆ ಯೋಜಿಸಿದ್ದು, ತರುವಾಯ ಅದನ್ನು ಯಾವಾಗ ಅಗತ್ಯವೋ ಅಗ ಹೆಚ್ಚಿಸಲಾಗುವುದು ಎಂದು ಇಮ್ಟೆಕ್ ಚಂಡೀಗಢದ ನಿರ್ದೇಶಕ ಡಾ. ಸಂಜೀವ್ ಕೋಶಲ ತಿಳಿಸಿದ್ದಾರೆ.

ಕೋವಿಡ್ -19ನ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಮತ್ತು ಮಾಲಿಕ್ಯುಲರ್ ಮೈಕ್ರೋ ಬಯಾಲಜಿಯಲ್ಲಿ ನೈಪುಣ್ಯವನ್ನು ಸಂಸ್ಥೆ ಹೆಚ್ಚಿಸಿಕೊಂಡಿದೆ. ಪ್ರಯೋಗಾಲಯವು ಜೈವಿಕ ಸುರಕ್ಷತೆ ಮಟ್ಟ (ಬಿಎಸ್‌ಎಲ್) -3 ಸೌಲಭ್ಯವನ್ನು ಒಳಗೊಂಡಂತೆ ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿದ್ದು, ಪರೀಕ್ಷೆಗೆ ಮುನ್ನ ಎಲ್ಲಾ ಸೂಕ್ತ ಜೈವಿಕ ಸುರಕ್ಷತೆ ಮತ್ತು ಜೈವಿಕ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಯೋಗಾಲಯಗಳಿಗೆ ಸಲಹೆ ಮಾಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡಲಾಗಿರುವ ಬಿಎಸ್ಎಲ್ 2+ ವೈರಾಣುಶಾಸ್ತ್ರದ ಪ್ರಯೋಗಾಲಯವು ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್.ಟಿ-ಪಿಸಿಆರ್)ಸಾಧನದಿಂದ ಸುಸಜ್ಜಿತವಾಗಿದೆ. ಕ್ಲಿನಿಕಲ್ ಮಾದರಿಗಳ ಪರೀಕ್ಷೆಗೆ ಅಗತ್ಯವಾದ ಎಲ್ಲ ಕಡ್ಡಾಯ ಅನುಮೋದನೆಗಳನ್ನೂ ಪಡೆಯಲಾಗಿದ್ದು, ಪರೀಕ್ಷೆಗಳು ಶೀಘ್ರವೇ ಕಾರ್ಯಗತವಾಗಲಿವೆ.

ಕ್ಲಿನಿಕಲ್ ಮಾದರಿಗಳ ಪರೀಕ್ಷೆಯ ಜೊತೆಗೆ ಸಿಎಸ್.ಐ.ಆರ್ ಇಮ್ಟೆಕ್ ಆರೋಗ್ಯ ಕಾರ್ಯಕರ್ತರಿಗೂ ಬೆಂಬಲ ನೀಡುತ್ತಿದ್ದು, ರೋಗಿಗಳ ಸೇವೆ ಮಾಡುವಾಗ ಯಾವುದೇ ಸೋಂಕು ತಗುಲದಂತೆ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ)ಗಳನ್ನು ಪೂರೈಸುತ್ತಿದೆ. ಚಂಡೀಗಢದ ಸಾಗಣೆ ಮತ್ತು ಮೂಲಭೂತಸೌಕರ್ಯಗಳ ಬೆಂಬಲ ನೀಡುವುದರೊಂದಿಗೆ ಸ್ಥಳೀಯ ಆಡಳಿತಕ್ಕೆ ಮತ್ತು ರೆಡ್ ಕ್ರಾಸ್ ಘಟಕಗಳಿಗೆ ಸಂಸ್ಥೆ ನೆರವು ವಿಸ್ತರಿಸಿದೆ.

 

*****

 



(Release ID: 1611170) Visitor Counter : 140