ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್ – 19 ಸಂಕಷ್ಟ ಸ್ಥಿತಿಯಲ್ಲಿ ಕರ್ತವ್ಯನಿರತ ಪೋಲಿಸ್ ಸಿಬ್ಬಂದಿಗೆ ಎ ಆರ್ ಸಿ ಐ ನಿಂದ ತಯಾರಿಸಲಾದ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಯಿತು
Posted On:
03 APR 2020 5:38PM by PIB Bengaluru
ಕೋವಿಡ್ – 19 ಸಂಕಷ್ಟ ಸ್ಥಿತಿಯಲ್ಲಿ ಕರ್ತವ್ಯನಿರತ ಪೋಲಿಸ್ ಸಿಬ್ಬಂದಿಗೆ ಎ ಆರ್ ಸಿ ಐ ನಿಂದ ತಯಾರಿಸಲಾದ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಯಿತು
ಹೈದ್ರಾಬಾದ್ ನ ಪೌಡರ್ ಮೆಟಲರ್ಜಿ ಮತ್ತು ನ್ಯೂ ಮಟಿರಿಯಲ್ಸ್ ( ಪುಡಿ ಲೋಹಶಾಸ್ತ್ರ ಮತ್ತು ಹೊಸ ಸಾಮಗ್ರಿಗಳ ) ಅಂತಾರಾಷ್ಟ್ರೀಯ ಸುಧಾರಿತ ಸಂಶೋಧನಾ ಕೇಂದ್ರ (ಎ ಆರ್ ಸಿ ಐ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಡಿ ಎಸ್ ಟಿ), ಭಾರತ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳಿಗನುಸಾರ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ತಯಾರಿಸಿದ್ದು ಮಾರುಕಟ್ಟೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳ ಕೊರತೆಯಿರುವುದರಿಂದ ಹೈದ್ರಾಬಾದ್ ನಲ್ಲಿ ಪೋಲಿಸ್ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ವಿತರಿಸಿದರು. ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ತಂಡವೊಂದು ಸ್ವಯಂ ಪ್ರೇರಿತರಾಗಿ ಮುಂದೆ ಬಂದು 40 ಲೀಟರ್ ನಷ್ಟು ಸ್ಯಾನಿಟೈಸರ್ ತಯಾರಿಸಿದೆ.
ಉತ್ಪಾದನೆ, ಪ್ಯಾಕಿಂಗ್ ಮತ್ತು ವಿತರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಕೇವಲ 6 ಗಂಟೆಗಳಲ್ಲಿ ಪೂರ್ತಿಗೊಳಿಸಲಾಗಿದೆ. ಇದೇ ವೇಳೆ, ಲಾಕ್ ಡೌನ್ ಆದೇಶ ಹೊರಡಿಸಲಾಯಿತು ಮತ್ತು ಬಹಳಷ್ಟು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಅವರ ಸುರಕ್ಷತೆಗಾಗಿ, ಪ್ರಯಾಣ ಬೆಳೆಸುತ್ತಿರುವವರಿಗೆ ಒಂದು ಬಾಟಲಿ ಸ್ಯಾನಿಟೈಸರ್ ಮತ್ತು ಮಾಸ್ಕ ನೀಡಲಾಯಿತು. ಸುರಕ್ಷತಾ ಸಿಬ್ಬಂದಿ, ಕ್ಯಾಂಟೀನ್ ಕೆಲಸ ಮಾಡುವವರು, ವಿಜ್ಞಾನಿಗಳಿಗೂ ಸ್ಯಾನಿಟೈಸರ್ ನ್ನು ವಿತರಿಸಲಾಯಿತು ಮತ್ತು ಸಾಮಾನ್ಯ ಪ್ರದೇಶಗಳು ಹಾಗೂ ಪ್ರವೇಶ ದ್ವಾರಗಳಲ್ಲೂ ಇಡಲಾಯಿತು. ತಂಡದ ಉತ್ಸುಕತೆ, ವಿಪತ್ತು ನಿರ್ವಹಣೆಗೆ ಕೈಗೂಡಬೇಕೆಂಬ ಬಯಕೆ, ಎ ಆರ್ ಸಿ ಐ ಕುಟುಂಬ ಕುರಿತಾದ ಕಾಳಜಿಯಿಂದಾಗಿ ಅತಿ ಕಡಿಮೆ ಸಮಯದಲ್ಲಿ ಇದನ್ನು ಸಾಧಿಸಲು ಸಾಧ್ಯವಾಯಿತು.
ತದನಂತರ, ಸಾಮಾಜಿಕ ಅಂತರವನ್ನು ಜಾರಿಗೆ ತರಲು ಅವಿರತವಾಗಿ ಕೆಲಸ ಮಾಡುತ್ತಿರುವ ಪೋಲಿಸ್ ಸಿಬ್ಬಂದಿ ಹೆಚ್ಚಿನ ಅಪಾಯ ಎದುರಿಸುವುದರಿಂದ ಅವರಿಗೆ ಈ ಸ್ಯಾನಿಟೈಸರ್ ವಿತರಿಸಲು ಅದರ ಉತ್ಪಾದನೆಯನ್ನು ವೃದ್ಧಿಸುವಂತೆ ತಮ್ಮ ತಂಡಕ್ಕೆ ಎ ಆರ್ ಸಿ ಐ ನಿರ್ದೇಶಕ ಡಾ. ಜಿ ಪದ್ಮನಾಭಮ್ ನಿರ್ದೇಶನ ನೀಡಿದ್ದರು. ಅದರಂತೆ ಸಾಕಷ್ಟು ಪ್ರಮಾಣದ ಸ್ಯಾನಿಟೈಸರ್ ತಯಾರಿಲಾಗಿತ್ತು ಮತ್ತು ಎ ಆರ್ ಸಿ ಐ ಹಿರಿಯ ವಿಜ್ಞಾನಿ ಡಾ. ಆರ್ ವಿಜಯ್ ಅವರಿಂದ ರಾಚಕೊಂಡ ಆಯುಕ್ತರ ಕಛೇರಿಯ ಡಿಸಿಪಿ ಶ್ರೀ ಸನ್ ಪ್ರೀತ್ ಸಿಂಗ್ ಅವರಿಗೆ ಹಸ್ತಾಂತರಿಸಲಾಯಿತು.
ವಿಜ್ಞಾನಿಗಳ ಸಹಾಯವನ್ನು ಶ್ಲಾಘಿಸಿದ ಪೋಲಿಸ್ ಉಪ ಆಯುಕ್ತರು ತಮ್ಮ ಸಿಬ್ಬಂದಿಗೆ ಒದಗಿಸಲು ಇನ್ನೂ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್ ಒದಗಿಸುವಂತೆ ಕೋರಿದರು. ಹೆಚ್ಚಿನ ಪ್ರಮಾಣದಲ್ಲಿ ಸ್ಯಾನಿಟೈಸರ್ ಉತ್ಪಾದಿಸಲು ಎ ಆರ್ ಸಿ ಐ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಮತ್ತು ಪೋಲಿಸರು ತಮ್ಮ ಜೇಬುಗಳಲ್ಲಿ ಸುಲಭವಾಗಿ ಕೊಂಡೊಯ್ಯಲು 100 ಎಂ ಎಲ್ ಬಾಟಲ್ ಗಳಲ್ಲಿ ವಿತರಿಸಲಿದೆ. ಪ್ರತಿ ಬಾಟಲ್ ನ್ನು ಪ್ರತಿ ಪೋಲಿಸ್ ಸಿಬ್ಬಂದಿ ಒಂದು ವಾರಕ್ಕಿಂತ ಹೆಚ್ಚು ಅವಧಿಗೆ ಬಳಸಬಹುದಾಗಿದೆ.
ಈ ಪ್ರಯತ್ನಕ್ಕೆ ನೆರವಾದ ಮತ್ತು ಪ್ರೋತ್ಸಾಹಿಸಿದ ತಮ್ಮ ತಂಡದ ಸದಸ್ಯರೆಲ್ಲರನ್ನೂ ಡಾ. ಪದ್ಮನಾಭಮ್ ತಮ್ಮ ಮೆಚ್ಚುಗೆ ತಿಳಿಸಿದರು ಮತ್ತು ಕೋವಿಡ್ 19 ವಿರುದ್ಧ ಹೋರಾಡಲು ಹೊಸ ಯೋಚನೆಗಳನ್ನು ಹೊರತರಲು ವಿಜ್ಞಾನಿಗಳಿಗೆ ತಿಳಿಸಿದರು.
ಅಪಾಯಕಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗಳನ್ನು, ಮೆಟ್ಟಿಲುಗಳ ರೇಲಿಂಗ್ ಗಳನ್ನು, ಬಾಗಿಲಿನ ಹ್ಯಾಂಡಲ್ ಗಳನ್ನು, “ಐರಿಸ್” ಬಯೋಮೆಟ್ರಿಕ್ ಮೆಶಿನ್ ಕೀ ಗಳನ್ನು ಸಾಮಾನ್ಯ ಉಪಕರಣಗಳನ್ನು ಮತ್ತು ಕಛೇರಿ ವಾಹನಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಕೆಲವೇ ಗಂಟೆಗಳಲ್ಲಿ 40 ಲೀಟರ್ ಹ್ಯಾಂಡ್ ಸ್ಯಾನಿಟೈಜರ್ ತಯಾರಿಸಿದ ತಂಡ
ಡಾ. ಆರ್. ವಿಜಯ್ ಅವರು ಎಆರ್‌ಸಿಐ ನಲ್ಲಿ ತಯಾರಿಸಿದ ಹ್ಯಾಂಡ್ ಸ್ಯಾನಿಟೈಜರ್ ಬಾಟಲಿಗಳನ್ನು ರಾಚಕೊಂಡ ಕಮಿಷನರೇಟ್‌ನ ಡಿಸಿಪಿ ಶ್ರೀ ಸನ್‌ಪ್ರೀತ್ ಸಿಂಗ್ ಅವರಿಗೆ ಹಸ್ತಾಂತರಿಸಿದರು
*****
(Release ID: 1611148)
Visitor Counter : 152