ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಎನ್.ಟಿ.ಎಫ್.ಪಿ. ವಾಣಿಜ್ಯ ಮತ್ತು ಗುಡ್ಡುಗಾಡು ಹಿತಾಸಕ್ತಿ ಕುರಿತಂತೆ ಕೋವಿಡ್ -19 ನಿಗ್ರಹದ ಪರಿಣಾಮಗಳ ಬಗ್ಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದ ಟ್ರೈಫೆಡ್

Posted On: 03 APR 2020 1:14PM by PIB Bengaluru

ಎನ್.ಟಿ.ಎಫ್.ಪಿ. ವಾಣಿಜ್ಯ ಮತ್ತು ಗುಡ್ಡುಗಾಡು ಹಿತಾಸಕ್ತಿ ಕುರಿತಂತೆ ಕೋವಿಡ್ -19 ನಿಗ್ರಹದ ಪರಿಣಾಮಗಳ ಬಗ್ಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದ ಟ್ರೈಫೆಡ್

 

ಮರಮುಟ್ಟು ಅಲ್ಲದ ಅರಣ್ಯ ಉತ್ಪನ್ನಗಳ (ಎನ್‌.ಟಿ.ಎಫ್‌.ಪಿ) ವ್ಯಾಪಾರ ಮತ್ತು ಬುಡಕಟ್ಟು ಹಿತಾಸಕ್ತಿಗಳ ಮೇಲೆ ಕೋವಿಡ್ -19 ಸಾಂಕ್ರಾಮಿಕ ನಿಗ್ರಹದ ಪರಿಣಾಮ ಕುರಿತಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿಯಲ್ಲಿ ಬರುವ ಟ್ರೈಫೆಡ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಎಲ್ಲ ರಾಜ್ಯ ಮಟ್ಟದ ನೋಡಲ್ ಸಂಸ್ಥೆಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ ಟ್ರೈಫೆಡ್ ಎಂ.ಡಿ. ಶ್ರೀ ಪ್ರವೀರ್ ಕೃಷ್ಣ, ಕೋವಿಡ್ -19 ಮಹಾಮಾರಿ ವಿಶ್ವದಾದ್ಯಂತ ಹಿಂದೆಂದೂ ಕಂಡು ಕೇಳರಿಯದಂಥ ಸಂಕಷ್ಟ ತಂದೊಡ್ಡಿದೆ ಎಂದು ತಿಳಿಸಿದ್ದಾರೆ. ಇದರಿಂದ ಭಾರತದ ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ವ್ಯಾಪಾರ ಮತ್ತು ಉದ್ಯಮದ ಎಲ್ಲಾ ಕ್ಷೇತ್ರಗಳು ಮತ್ತು ಸಮಾಜದ ಎಲ್ಲಾ ವಿಭಾಗಗಳು ವಿವಿಧ ಹಂತಗಳಲ್ಲಿ ಬಾಧಿತವಾಗಿವೆ. ಹಲವು ವಲಯಗಳಲ್ಲಿ ಎನ್.ಟಿ.ಎಫ್.ಪಿ ಉತ್ಕೃಷ್ಟದಲ್ಲಿರುತ್ತಿದ್ದ ಈ ಋತುವಿನಲ್ಲಿ ಬುಡಕಟ್ಟು ಸಂಗ್ರಹಣೆ ಮಾಡುವವರೂ ಇದರಿಂದ ಹೊರತಾಗಿಲ್ಲ ಎಂದು ತಿಳಿಸಿದ್ದಾರೆ.

ಆದ್ದರಿಂದ ಎಲ್ಲರನ್ನೂ, ವಿಶೇಷವಾಗಿ ಬುಡಕಟ್ಟು ಜನರನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮುಂಚಿತವಾಗಿ ಯೋಚಿಸುವುದು ಅವಶ್ಯಕ ಎಂದು ಪತ್ರದಲ್ಲಿ ಹೇಳಲಾಗಿದೆ. ವಿವರಣಾತ್ಮಕ ಮತ್ತು ಸಮಗ್ರವಲ್ಲದ ಪ್ರಮುಖ ಅಂಶಗಳನ್ನು ರಾಜ್ಯಗಳಿಗೆ ಇದರಲ್ಲಿ ತಿಳಿಸಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯಗಳು ಸೇರಿಸಲು ಇಷ್ಟಪಡುವ ಹಲವಾರು ರಾಜ್ಯ-ನಿರ್ದಿಷ್ಟ ಮತ್ತು / ಅಥವಾ ಎನ್‌.ಟಿ.ಎಫ್‌.ಪಿ-ನಿರ್ದಿಷ್ಟ ಅಂಶಗಳನ್ನು ಸೇರಿಸಬಹುದು. ಈ ಅಂಶಗಳು ಶೀಘ್ರವಾಗಿ (ಬುಡಕಟ್ಟು ಸಮೂಹ ಮತ್ತು ಅವರ ಕ್ಷೇತ್ರ ಮಟ್ಟದ ಕಾರ್ಯಕರ್ತರು) ವ್ಯಕ್ತಿಗಳನ್ನು ತಲುಪುವಂತೆ ನೋಡಿಕೊಳ್ಳುವಂತೆ ಟ್ರೈಫೆಡ್ ಎಲ್ಲ ರಾಜ್ಯಗಳು ಮತ್ತು ರಾಜ್ಯ ಮಟ್ಟದ ನೋಡಲ್ ಸಂಸ್ಥೆಗಳಿಗೆ ಮನವಿ ಮಾಡಿದೆ.

ಕೋವಿಡ್ -19 ಭೀತಿಯ ಸಂದರ್ಭದಲ್ಲಿ ಎನ್.ಟಿ.ಎಫ್.ಪಿ. ಸಂಬಂಧಿಸಿದಂತೆ ಮಾಡಬೇಕಾದ್ದು ಮತ್ತು ಮಾಡಬಾರದ್ದು..

· ನಿರ್ಲಜ್ಜ ಮಾರುಕಟ್ಟೆ ಶಕ್ತಿಗಳು ಬುಡಕಟ್ಟು ಎನ್‌.ಟಿ.ಎಫ್‌.ಪಿ, ಸಂಗ್ರಹಕಾರರನ್ನು ಮಾರಾಟದ ಸಂಕಷ್ಟಕ್ಕೆ ತಳ್ಳುವ ಮೂಲಕ ಅವರನ್ನು ಶೋಷಿಸಲು ಪ್ರಯತ್ನಿಸಬಹುದು. ಆದ್ದರಿಂದ, ಎಮ್‌.ಎಫ್‌.ಪಿ ಯೋಜನೆಯನ್ನು ಹೆಚ್ಚುವರಿ ಚೈತನ್ಯದೊಂದಿಗೆ ವಿಶೇಷವಾಗಿ ಅತ್ಯಂತ ದುರ್ಬಲ ಪ್ರದೇಶಗಳಲ್ಲಿ ಕಾರ್ಯಗತಗೊಳಿಸಬೇಕಾಗುತ್ತದೆ.

· ಮರಮುಟ್ಟು ಅಲ್ಲದ ಅರಣ್ಯ ಉತ್ಪನ್ನ ಸಂಗ್ರಹ ಮಾಡುವವರಿಗೆ ಎನ್.ಟಿ.ಎಫ್.ಪಿ. ಸಂಗ್ರಹಣೆ ಕಾರ್ಯದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳು ಬಗ್ಗೆ ಸಲಹೆ ನೀಡಬೇಕು. ಅವರು ಸಂಗ್ರಹಣೆ ಕಾರ್ಯಕ್ಕೆ ಮುನ್ನ ಹಾಗೂ ನಂತರ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

· ವನ್ ಧನ್ ವಿಕಾಸ್ ಕೇಂದ್ರ ಸೇರಿದಂತೆ ಎನ್.ಟಿ.ಎಫ್.ಪಿ. ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳ ಪ್ರವೇಶದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡಬೇಕು. ಪ್ರತಿಯೊಬ್ಬ ಸಂಸ್ಕರಣಾಕಾರರೂ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಮತ್ತು ಕೆಲಸ ಆರಂಭಿಸುವ ಮೊದಲು ಕೈಗಳನ್ನು ಶುಚಿಕೊಳ್ಳಿಸಿಕೊಳ್ಳಬೇಕು.

· ಸಂಸ್ಕರಣಾಕಾರರು ಸಂಸ್ಕರಣಾ ಕೇಂದ್ರಗಳಲ್ಲಿ ಅಸ್ತವ್ಯಸ್ತವಾಗಿ ಕೂರಬಾರದು. ಅವರು ಒಬ್ಬರಿಂದ ಒಬ್ಬರಿಗೆ ಕನಿಷ್ಠ 2 ಮೀಟರ್ ಅಂತರದಲ್ಲಿ ಕೂರಬೇಕು. ಕೇಂದ್ರದಲ್ಲಿ ಜಾಗದ ಕೊರತೆ ಇದ್ದಲ್ಲಿ, ಅವರಿಗೆ ವಿಭಿನ್ನ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಲಹೆ ನೀಡಬೇಕು ಅಥವಾ ಮನೆಯಿಂದಲೇ ಸ್ವಚ್ಛ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಬೇಕು.

· ಯಾವುದೇ ವ್ಯಕ್ತಿ ಯಾವುದೇ ರೀತಿಯ ಕೆಮ್ಮು ಅಥವಾ ಶೀತದಿಂದ ನರಳುತ್ತಿದ್ದರೆ, ಅವರಿಗೆ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಮತ್ತು ಪ್ರತಿಯೊಬ್ಬ ಸಂಗ್ರಹಣಾಕಾರರು ಮತ್ತು ಸಂಸ್ಕರಣಾಕಾರರು ಸಾಮಾಜಿಕ ಅಂತ ವ್ಯಕ್ತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬುದನ್ನು ಕಡ್ಡಾಯವಾಗಿ ಗಮನಿಸಬೇಕು.

· ಸಂಗ್ರಹಣೆಕಾರರು (ಅಥವಾ ಆಕೆಯ ಮನೆಯ ಯಾವುದೇ ವ್ಯಕ್ತಿ)ಗಳಲ್ಲಿ ಕಿಂಚಿತ್ತು ಕೋವಿಡ್ 19ರ ಗುಣಲಕ್ಷಣಗಳು ಕಾಣಿಸಿಕೊಂಡರೂ, ಅವರನ್ನು ತಪಾಸಣೆಗೆ ಗುರಿಪಡಿಸಬೇಕು ಮತ್ತು ಅಗತ್ಯ ಬಿದ್ದರೆ ಪ್ರತ್ಯೇಕೀಕರಣದಲ್ಲಿಡಬೇಕು.

· ಎನ್.ಟಿ.ಎಫ್.ಪಿ. ಗಳನ್ನು ಪ್ಯಾಕ್ ಮಾಡುವ ವಸ್ತುಗಳು ಸ್ವಚ್ಛವಾಗಿರಬೇಕು ಮತ್ತು ಹಾನಿಗೊಳಗಾಗಿರಬಾರದು, ಹೀಗಾಗಿ ಅದನ್ನು ಕೈಯಲ್ಲಿ ಮುಟ್ಟುವವರು ಎನ್.ಟಿಎಫ್.ಪಿ.ಯ ಸಂಪರ್ಕಕ್ಕೆ ಬರುವುದಿಲ್ಲ.

· ಸಾಧ್ಯವಾದಷ್ಟು ಮಟ್ಟಿಗೆ, ನಗದು ವಹಿವಾಟುಗಳನ್ನು ಕಡಿಮೆಗೊಳಿಸಬೇಕು ಮತ್ತು ಹಣವನ್ನು ಸಂಗ್ರಹಣಕಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ರುಪೇ ನಂತಹ ಸರ್ಕಾರಿ ವೇದಿಕೆಗಳ ಮೂಲಕ ನಗದು ರಹಿತ ರೂಢಿಗಳನ್ನು ಅಳವಡಿಸಿಕೊಳ್ಳಲು ಸಂಗ್ರಹಕಣಕಾರರನ್ನು ಪ್ರೋತ್ಸಾಹಿಸಬೇಕು ಮತ್ತು ಬೆಂಬಲಿಸಬೇಕು.

*****



(Release ID: 1610995) Visitor Counter : 119