ರೈಲ್ವೇ ಸಚಿವಾಲಯ

ಕೋವಿಡ್ -19 ವೈರಾಣು ಸೋಂಕು ತಡೆಗೆ ಸಮಗ್ರ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಜ್ಜಾಗಿರುವ ಭಾರತೀಯ ರೈಲ್ವೆ ಆಡಳಿತ

Posted On: 03 APR 2020 4:25PM by PIB Bengaluru

ಕೋವಿಡ್ -19 ವೈರಾಣು ಸೋಂಕು ತಡೆಗೆ ಸಮಗ್ರ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲು ಸಜ್ಜಾಗಿರುವ ಭಾರತೀಯ ರೈಲ್ವೆ ಆಡಳಿತ

ರೈಲ್ವೇ  ಮತ್ತು ವಾಣಿಜ್ಯ ಹಾಗು ಕೈಗಾರಿಕಾ ಸಚಿವರಾದ ಶ್ರೀ ಪೀಯುಷ್ ಗೋಯಲ್, ಎಂ.ಒ.ಎಸ್. (ರೈಲ್ವೇ) ಮತ್ತು ರೈಲ್ವೇ ಮಂಡಳಿ ಅಧ್ಯಕ್ಷರು 2020ರ ಮಾರ್ಚ್ 5 ರಿಂದಲೇ ತಯಾರಿಗಳಿಗೆ ವೇಗ ಕೊಟ್ಟಿದ್ದಾರೆ

24*7 ಅವಧಿಯ ಅಡೆತಡೆ ರಹಿತ ಸರಕು ಸಾಗಾಣಿಕೆ ರೈಲುಗಳು ಕಾರ್ಯಾಚರಣೆಯಲ್ಲಿದ್ದು ದೇಶಾದ್ಯಂತ ಆವಶ್ಯಕ ಸಾಮಗ್ರಿಗಳ ಲಭ್ಯತೆಯನ್ನು ಖಾತ್ರಿಪಡಿಸಲು ಪಾರ್ಸೆಲ್ ರೈಲುಗಳನ್ನು ಓಡಿಸಲಾಗುತ್ತಿದೆ.24.03-2020ರಿಂದ 02.04.2020ರ ನಡುವೆ 4ಲಕ್ಷಕ್ಕೂ ಅಧಿಕ ವ್ಯಾಗನುಗಳ ಮೂಲಕ ಪೂರೈಕೆಗಳನ್ನು ಮಾಡಲಾಗಿದ್ದು, ಪೂರೈಕೆ ಜಾಲವನ್ನು ಸಕ್ರಿಯವಾಗಿಡಲಾಗಿದೆ

ಕೋವಿಡ್ -19 ರೋಗಿಗಳಿಗಾಗಿ ರೈಲ್ವೇ ವ್ಯವಸ್ಥೆಗಳಲ್ಲಿ 11000 ಕ್ವಾರಂಟೈನ್ ಹಾಸಿಗೆಗಳನ್ನು ಮತ್ತು ರೈಲ್ವೇ ಆಸ್ಪತ್ರೆಗಳಲ್ಲಿ ಸುಮಾರು 5000 ಐಸೋಲೇಶನ್ ಹಾಸಿಗೆಗಳನ್ನು ಗುರುತಿಸಿಡಲಾಗಿದೆ

ಹೆಚ್ಚುವರಿಯಾಗಿ 5000 ಬೋಗಿಗಳನ್ನು ಕ್ವಾರಂಟೈನ್/ ಐಸೋಲೇಶನ್ ಸೌಲಭ್ಯಕ್ಕಾಗಿ 80000 ಹಾಸಿಗೆಗಳ ವ್ಯವಸ್ಥೆಯನ್ನು ಒದಗಿಸಲು ಆರಂಭಿಕ ಹಂತದಲ್ಲಿ ಬಳಸಿಕೊಳ್ಳಲಾಗಿದೆ, ಒಟ್ಟು ಇಂತಹ 20000 ಬೋಗಿಗಳನ್ನು ಗುರುತಿಸಲಾಗಿದೆ

ವೈಯಕ್ತಿಕ ಸ್ವಚ್ಚತೆ ರಕ್ಷಣಾ ಮುಖಗವಸುಗಳನ್ನು ಮತ್ತು ಸ್ಯಾನಿಟೈಸರ್ ಗಳನ್ನು ಸ್ಥಳೀಯವಾಗಿ ತಯಾರಿಸಲು ದೊಡ್ದ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗಿದ್ದು, 2020 ರ ಏಪ್ರಿಲ್ 1 ರವರೆಗೆ ಭಾರತೀಯ ರೈಲ್ವೇಯು ಒಟ್ಟು 287704 ಮುಖಗವಸುಗಳನ್ನು ಮತ್ತು 25806 ಲೀಟರ್ ಸ್ಯಾನಿಟೈಸರುಗಳ ಉತ್ಪಾದನೆ

ಗೃಹ ಕೃತ್ಯ/ ಸೇವಾ ಗುತ್ತಿಗೆಗಳ ಗುತ್ತಿಗೆ/ಹೊರಗುತ್ತಿಗೆ ಕಾರ್ಮಿಕರಿಗೆ ನಿಯಮಿತ ವೇತನವನ್ನು ಖಾತ್ರಿಪಡಿಸಲಾಗುತ್ತಿದೆ

 

ಕೋವಿಡ್ -19 ಸೋಂಕನ್ನು ತಡೆಯಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ರೈಲ್ವೇಯು ತನ್ನ ಇಡೀ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಿದ್ದವಾಗಿದೆ. ಇದರ ತಯಾರಿಯ ಮಟ್ಟವನ್ನು ರೈಲ್ವೇಗಳು ಮತ್ತು ವಾಣಿಜ್ಯ ಹಾಗು ಕೈಗಾರಿಕಾ ಸಚಿವರಾದ ಶ್ರೀ ಪೀಯುಷ್ ಗೋಯೆಲ್ , ರೈಲ್ವೇಗಳ ಸಹಾಯಕ ಸಚಿವರಾದ ಶ್ರೀ ಸುರೇಶ್ ಅಂಗಡಿ ಮತ್ತು ರೈಲ್ವೇ ಮಂಡಳಿ ಅಧ್ಯಕ್ಷರಾದ ಶ್ರೀ ವಿನೋದ್ ಕುಮಾರ್ ಯಾದವ್ ಅವರು 2020 ರ ಮಾರ್ಚ್ 5 ರಿಂದ ಪರಾಮರ್ಶಿಸುತ್ತಿದ್ದಾರೆ. ಜನರಲ್ ಮ್ಯಾನೇಜರುಗಳು, ಮತ್ತು ರೈಲ್ವೇ ಮಂಡಳಿಯ ಪ್ರಮುಖ ಅಧಿಕಾರಿಗಳ ಜೊತೆ ಪ್ರತಿನಿತ್ಯ ಸಂವಾದ ನಡೆಯುತ್ತಿದೆ. ಇದರಿಂದ ಪ್ರಯತ್ನಗಳ ಸಮನ್ವಯ, ನಿರ್ದೇಶನಗಳ ನೀಡಿಕೆ , ಹಿಮ್ಮಾಹಿತಿ ಪಡೆಯುವಿಕೆ, ಪ್ರಗತಿ ಪರಾಮರ್ಶೆ ಮತ್ತು ಸಮರ್ಪಕ ಸಂಪರ್ಕ ನಿರ್ವಹಿಸಲು ಸಹಾಯವಾಗುತ್ತಿದೆ.

ಈ ಕೆಳಗಿನ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ-

1.     ದೇಶಾದ್ಯಂತ ಆವಶ್ಯಕ ಸಾಮಾಗ್ರಿಗಳ ಲಭ್ಯತೆಯನ್ನು ಖಾತ್ರಿಪಡಿಸಲು 24*7 ಅವಧಿಯೂ ಅಡೆತಡೆ ರಹಿತ ಸರಕು ರೈಲುಗಳ ಕಾರ್ಯಾಚರಣೆಯನ್ನು 24.03.2020 ರಿಂದ  02.04.2020 ರವರೆಗೆ ನಡೆಸಲಾಗಿದ್ದು, 4 ಲಕ್ಷ ವ್ಯಾಗನ್ನುಗಳು ಪೂರೈಕೆ ಸರಪಳಿಯನ್ನು ಸಕ್ರಿಯವಾಗಿರಿಸಲು ಪೂರೈಕೆಯನ್ನು ಸಾಗಾಟ ಮಾಡಿವೆ. ಇವುಗಳಲ್ಲಿ 2.23 ಲಕ್ಷಕ್ಕೂ ಅಧಿಕ  ವ್ಯಾಗನ್ನುಗಳ ಮೂಲಕ ಅವಶ್ಯಕ ಸಾಮಗ್ರಿಗಳಾದ ಆಹಾರ ಧಾನ್ಯಗಳು, ಉಪ್ಪು, ಸಕ್ಕರೆ, ಹಾಲು, ಖಾದ್ಯ ತೈಲ, ನೀರುಳ್ಳಿ, ಹಣ್ಣುಗಳು ಮತ್ತು ತರಕಾರಿಗಳನ್ನು, ಪೆಟ್ರೋಲಿಯಂ ಉತ್ಪನ್ನಗಳನ್ನು , ಕಲ್ಲಿದ್ದಲು, ರಸಗೊಬ್ಬರಗಳು ಇತ್ಯಾದಿಗಳನ್ನು ದೇಶಾದ್ಯಂತ ಸಾಗಾಟ ಮಾಡಲಾಗಿದೆ.

ವಿವಿಧ ಸರಕು ಶೆಡ್ ಗಳಲ್ಲಿ, ನಿಲ್ದಾಣಗಳಲ್ಲಿ ಮತ್ತು ನಿಯಂತ್ರಣ ಕಚೇರಿಗಳಲ್ಲಿ  ಕಾರ್ಯಾಚರಿಸುವ ಭಾರತೀಯ ರೈಲ್ವೇ ಸಿಬ್ಬಂದಿಗಳು 24*7 ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಅವಶ್ಯಕ ಸಾಮಗ್ರಿಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ಖಾತ್ರಿಪಡಿಸುತ್ತಿದ್ದಾರೆ. ಲೊಕೋಮೋಟಿವ್ ಪೈಲೆಟ್ ಗಳು ಮತ್ತು ಗಾರ್ಡ್ ಗಳು ದಕ್ಷತೆಯಿಂದ ರೈಲುಗಳನ್ನು ನಡೆಸುತ್ತಿದ್ದಾರೆ. ಹಳಿಗಳ , ಸಿಗ್ನಲ್ ಗಳ ಪ್ರಮುಖ ನಿರ್ವಹಣಾ ಸಿಬ್ಬಂದಿಗಳು, ಲೊಕೋಮೋಟಿವ್, ಬೋಗಿಗಳ ಮತ್ತು ವ್ಯಾಗನ್ ಗಳ ನಿರ್ವಹಣಾ ಸಿಬ್ಬಂದಿಗಳು ಮೂಲಸೌಕರ್ಯವನ್ನು ಸರಕು ಸಾಗಾಟ ರೈಲುಗಳ ಸುಗಮ ಓಡಾಟಕ್ಕೆ ಅನುಕೂಲವಾಗುವಂತೆ ನಿರ್ವಹಣೆ ಮಾಡುತ್ತಿದ್ದಾರೆ.

ವಲಯವಾರು ರೈಲ್ವೇಗಳು ಸರಕು ಸಾಗಾಣಿಕೆ ರೈಲುಗಳ ಕಾರ್ಯಾಚರಣೆಗಳು, ಸರಕು ಹೇರಿಕೆ ಮತ್ತು ಸರಕು ಇಳಿಕೆ ಇತ್ಯಾದಿ ವಿಷಯಗಳ ನಿಭಾವಣೆಗಾಗಿ ಸಾಂಸ್ಥಿಕ ವ್ಯವಸ್ಥೆಯೊಂದನ್ನು ರೂಪಿಸಲಾಗಿದ್ದು ಗೃಹ ವ್ಯವಹಾರಗಳ ಸಚಿವಾಲಯದ (ಎಂ.ಎಚ್.ಎ.) ನಿಯಂತ್ರಣ ಕೊಠಡಿಯನ್ನು ರೈಲ್ವೇ ಅಧಿಕಾರಿಗಳು ಇದರ ಭಾಗವಾಗಿರುವಂತೆ ಸ್ಥಾಪಿಸಲಾಗಿದೆ.

2.   ಪಾರ್ಸೆಲ್ ರೈಲುಗಳ ಓಡಾಟ;- ಕೋವಿಡ್ -19ರ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್ ಡೌನ್ ಅವಧಿಯಲ್ಲಿ  ವೈದ್ಯಕೀಯ ಪೂರೈಕೆಗಳು, ವೈದ್ಯಕೀಯ ಸಲಕರಣೆ, ಆಹಾರ, ಇತ್ಯಾದಿ ಅವಶ್ಯಕ ವಸ್ತುಗಳ ಸಾಗಾಟಕ್ಕಾಗಿ ಪಾರ್ಸೆಲ್ ಗಾತ್ರದ ವ್ಯವಸ್ಥೆ ಬಹಳ ಅನುಕೂಲಕರವಾಗಿರುತ್ತದೆ.ಈ ಪ್ರಮುಖ ಆವಶ್ಯಕತೆಯನ್ನು ಪೂರೈಸಲು ಭಾರತೀಯ ರೈಲ್ವೇಯು ರಾಜ್ಯ ಸರಕಾರಗಳು ಸೇರಿದಂತೆ ಇ-ವಾಣಿಜ್ಯ ಸಂಸ್ಥೆಗಳು ಮತ್ತು ಇತರ ಗ್ರಾಹಕರ ಅಗತ್ಯಗಳಿಗಾಗಿ ರೈಲ್ವೇ ಪಾರ್ಸೆಲ್ ವ್ಯಾನುಗಳನ್ನು ಲಭ್ಯ ಇರುವಂತೆ ಮಾಡಿದೆ.  

3.   ವಿಳಂಬ ಶುಲ್ಕ ಮತ್ತು ಸುಂಕದ ನಿಯಮಗಳಲ್ಲಿ ಸಡಿಲಿಕೆ: ಕೊರೊನಾವೈರಸ್ ಚಿಕಿತ್ಸೆಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಎದುರಿಸಲಾಗದ ಶಕ್ತಿ  ಎಂಬ ನಿಬಂಧನೆ ಅಡಿಯಲ್ಲಿ  ವಿಳಂಬ ಶುಲ್ಕ ಮತ್ತು ಸುಂಕ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.

4.  ಖಾಲಿ ಕಂಟೈನರುಗಳ ಚಲನ-ವಲನಗಳ ಮೇಲೆ ಸಾಗಾಣಿಕೆ ಶುಲ್ಕ ಇಲ್ಲ: ಸರಕುಗಳ ಸುಲಲಿತ ಪೂರೈಕೆಯನ್ನು ನಿರ್ವಹಿಸುವುದಕ್ಕಾಗಿ ಖಾಲಿ ಕಂಟೈನರುಗಳು ಮತ್ತು ಫ್ಲಾಟ್ ಕಂಟೈನರುಗಳ ಮೇಲೆ ವಿಧಿಸಲಾಗುತ್ತಿದ್ದ ಸಾಗಾಣಿಕೆ ಶುಲ್ಕವನ್ನು 24.03.2020 ಮತ್ತು 30.04.2020 ರ ನಡುವಿನ ಅವಧಿಗೆ ತೆಗೆದುಹಾಕಲಾಗಿದೆ.

5.  ಕೇಂದ್ರೀಯ ನಿಯಂತ್ರಣ ಕೇಂದ್ರ ಸ್ಥಾಪನೆ: ನಿರ್ದೇಶಕರ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಕೇಂದ್ರೀಯ ನಿಯಂತ್ರಣ ಘಟಕವನ್ನು 27.03.2020 ರಂದು ರೈಲ್ವೇ ಆಡಳಿತ ಮತ್ತು ಸಾರ್ವಜನಿಕರಿಗಾಗಿ ಮಾಹಿತಿ ಮತ್ತು ಸಲಹೆಗಳ ಅಡೆತಡೆರಹಿತ ವಿನಿಮಯಕ್ಕಾಗಿ ಸ್ಥಾಪಿಸಲಾಗಿದೆ. ಈ ನಿಯಂತ್ರಣ ಘಟಕವು ರೈಲ್ವೇ ಸಹಾಯವಾಣಿಗಳಾದ 139 ಮತ್ತು 138 ರಿಂದ ಬರುವ ಕರೆಗಳನ್ನು ನಿರಂತರ ನಿರ್ವಹಿಸುತ್ತದೆ. ಸಾಮಾಜಿಕ ಜಾಲತಾಣದ ಬೆಳವಣಿಗೆಗಳ ಮೇಲೆ ನಿಗಾ ಇಡಲು, ರೈಲ್ವೇ ಗ್ರಾಹಕರು ಮತ್ತು ಇತರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ತಿಳಿಸಲು ಮತ್ತು ನಿರ್ವಹಿಸಲು ಮಿಂಚಂಚೆ  railmadad@rb.railnet.gov.in ಗೆ ಬರುವ ಮಾಹಿತಿಗಳ ಮೇಲೂ ಇದು ಗಮನ ಹರಿಸುತ್ತದೆ.  ಹಾಗು ತಕ್ಷಣ ಕ್ರಮ ಕೈಗೊಳ್ಳುತ್ತದೆ.

6.    ಕ್ವಾರಂಟೈನ್ ಉದ್ದೇಶಕ್ಕಾಗಿ 11000 ಹಾಸಿಗೆಗಳಲ್ಲದೆ ಕೋವಿಡ್-19 ರ ರೋಗಿಗಳ ಚಿಕಿತ್ಸೆಗಾಗಿಯೇ 5000 ಹಾಸಿಗೆಗಳನ್ನು ಅದಕ್ಕಾಗಿಯೇ ಇರುವ 17 ಆಸ್ಪತ್ರೆಗಳಲ್ಲಿ ಮತ್ತು 33 ಆಸ್ಪತ್ರೆ ಬ್ಲಾಕ್ ಗಳಲ್ಲಿ ಕಾಯ್ದಿರಿಸಲಾಗಿದೆ. ಈ ಆಸ್ಪತ್ರೆಗಳನ್ನು ಮತ್ತು ಬ್ಲಾಕುಗಳನ್ನು ಈ ಉದ್ದೇಶಕ್ಕಾಗಿಯೇ ರೂಪಿಸಲಾಗಿದೆ.

ಕ್ವಾರಂಟೈನ್ / ಪ್ರತ್ಯೇಕಿಸಿಡುವ ಸೌಲಭ್ಯಗಳಿಗಾಗಿ 5000 ಬೋಗಿಗಳ ಬದಲಾವಣೆ: ಭಾರತೀಯ ರೈಲ್ವೇಯು ದೇಶಾದ್ಯಂತ ಕೋವಿಡ್ -19 ರ ಕ್ವಾರಂಟೈನ್ ಮತ್ತು ಪ್ರತ್ಯೇಕಿಸಿಡುವ ಸೌಲಭ್ಯಗಳಿಗಾಗಿ  5000 ರೈಲು  ಬೋಗಿಗಳನ್ನು 80000 ಹಾಸಿಗೆಗಳ ವ್ಯವಸ್ಥೆಯಾಗಿ ಪರಿವರ್ತಿಸುತ್ತಿದೆ. ವಿನ್ಯಾಸವನ್ನು ಮಾಡಲಾಗಿದೆ. ಮಾದರಿಯನ್ನು ಒಪ್ಪಲಾಗಿದೆ ಮತ್ತು ವಲಯ ರೈಲ್ವೇಗಳಲ್ಲಿ ಪರಿವರ್ತನೆ ಕಾರ್ಯ ಸಾಗಿದೆ. ಅಗತ್ಯ ಬಿದ್ದರೆ ಒಟ್ಟು ಇಂತಹ 20000 ಬೋಗಿಗಳನ್ನು 3.2 ಲಕ್ಷ ಹಾಸಿಗೆಗಳನ್ನಾಗಿ ಪರಿವರ್ತಿಸುವುದಕ್ಕಾಗಿ ಗುರುತಿಸಲಾಗಿದೆ.

7.  ವೈದ್ಯಕೀಯ ಸಲಕರಣೆಗಳು, ಪಿ.ಪಿ.ಇ.ಗಳು, ವೆಂಟಿಲೇಟರುಗಳ ಖರೀದಿ: ವೈಯಕ್ತಿಕ ರಕ್ಷಣಾ ಸಲಕರಣೆಗಳು (ಪಿ.ಪಿ.ಇ.), ವೆಂಟಿಲೇಟರುಗಳು ಇತ್ಯಾದಿಗಳು ಕೋವಿಡ್ -19 ರ ವಿರುದ್ದದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಅವುಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ರೈಲ್ವೇ ವಲಯಗಳು ಮತ್ತು ಉತ್ಪಾದನಾ ಘಟಕಗಳು ವೆಂಟಿಲೇಟರುಗಳನ್ನು , ಪಿ.ಪಿ.ಇ.ಗಳು ಮತ್ತು ಕೋವಿಡ್ ವಿರುದ್ದದ ಹೋರಾಟದಲ್ಲಿ ಅವಶ್ಯವಾಗಿರುವ  ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು  ಕ್ರಮಗಳನ್ನು ಕೈಗೊಂಡಿವೆ. 

ಕೆಲಸದ ಸ್ಥಳಗಳಲ್ಲಿ ಕೊರೊನಾ ಪ್ರತಿಬಂಧಕ ಕ್ರಮಗಳು: ಅವಶ್ಯಕ ಸಾಮಗ್ರಿಗಳು ಮತ್ತು ಸರಕು ಪೂರೈಕೆಯನ್ನು ನಿರ್ವಹಿಸಲು ಸರಕು ಸಾಗಾಣಿಕೆ ಕಾರ್ಯಾಚರಣೆ 24X7 ಅವಧಿಯೂ ನಡೆಯುತ್ತಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿ ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗಳ ಸುರಕ್ಷೆಯನ್ನು ಖಾತ್ರಿಪಡಿಸಲು ಮತ್ತು ನೈತಿಕ ಬಲವನ್ನು ಹೆಚ್ಚಿಸಲು ಕೆಲಸದ ಸ್ಥಳಗಳಲ್ಲಿ ಈ ಕೆಳಗಿನ ಕ್ರಮಗಳನ್ನು ಖಾತ್ರಿಪಡಿಸಲಾಗುತ್ತಿದೆ.

(i)                ಕರ್ತವ್ಯಕ್ಕೆ ಬರುವ ಎಲ್ಲಾ ಸಿಬ್ಬಂದಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಗಳು ಮತ್ತು ಮುಖಗವಸುಗಳು ಲಭ್ಯ ಇರುವಂತೆ ಮಾಡಲಾಗುತ್ತಿದೆ. ಗುತ್ತಿಗೆ ಕಾರ್ಮಿಕರಿಗೂ ಇದನ್ನು ಖಾತ್ರಿಪಡಿಸಲಾಗುತ್ತಿದೆ. ರೈಲ್ವೇ ಕಾರ್ಯಾಗಾರಗಳು, ಬೋಗಿಗಳ ಡಿಪೋಗಳು ಮತ್ತು ಆಸ್ಪತ್ರೆಗಳನ್ನು ಸಂದರ್ಭಕ್ಕೆ ತಕ್ಕಂತೆ ರೂಪಿಸಲಾಗಿದ್ದು, ಸ್ಥಳೀಯವಾಗಿ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ತಯಾರಿಸಲಾಗುತ್ತಿದೆ.

(ii)             ಸಾಬೂನು, ನೀರು ಮತ್ತು ತೊಳೆಯುವ ಸೌಲಭ್ಯಗಳನ್ನು ಎಲ್ಲಾ ಕೆಲಸದ ಸ್ಥಳಗಳಲ್ಲಿ ಒದಗಿಸಲಾಗುತ್ತಿದೆ. ಸ್ಥಳೀಯ ಅನ್ವೇಷಣೆಯ ಮೂಲಕ ಕೈತೊಳೆಯುವ ಸೌಲಭ್ಯವನ್ನು ಒದಗಿಸಲಾಗಿದೆ.

(iii)         ಸಾಮಾಜಿಕ ಅಂತರವನ್ನು ಖಾತ್ರಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿಯಮಿತವಾಗಿ ಟ್ರ್ಯಾಕ್ ಮನ್, ಲೊಕೋಮೋಟಿವ್ ಪೈಲೆಟ್ ಗಳು ಮತ್ತು ಇತರ ಸಿಬ್ಬಂದಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

8.   ಎಲ್ಲಾ ಕೇಂದ್ರ ಸರಕಾರಿ ಸಿಬ್ಬಂದಿಗಳಿಗೆ ರೈಲ್ವೇ ಆರೋಗ್ಯ ಸೇವೆಗಳ ಸವಲತ್ತು: ರೈಲ್ವೇ ಆಸ್ಪತ್ರೆಗಳಲ್ಲಿ/ಆರೋಗ್ಯ ಕೇಂದ್ರಗಳಲ್ಲಿ ಗುರುತಿನ ಕಾರ್ಡ್ ತೋರಿಸಿದರೆ ಕೇಂದ್ರ ಸರಕಾರದ ಎಲ್ಲಾ ಸಿಬ್ಬಂದಿಗಳಿಗೆ ದೇಶಾದ್ಯಂತ ರೈಲ್ವೇ ಆರೋಗ್ಯ ಸೇವೆ ಲಭ್ಯವಾಗಲಿದೆ

9.  PM CARES ನಿಧಿಗೆ ರೈಲ್ವೇ ಸಿಬ್ಬಂದಿಗಳಿಂದ 151 ಕೋ.ರೂ, ದೇಣಿಗೆ : ರೈಲ್ವೇ ಸಿಬ್ಬಂದಿಗಳು 1 ದಿನದ ವೇತನವನ್ನು ಅಂದರೆ ಸುಮಾರು 151 ಕೋ.ರೂ.ಗಳನ್ನು ಪಿ.ಎಂ. ಕೇರ್ಸ್ ನಿಧಿಗೆ ದೇಣಿಗೆ ನೀಡುವರು.

10.  ಅರೆವೈದ್ಯಕೀಯ ಸಿಬ್ಬಂದಿಗಳ ಗುತ್ತಿಗೆ ನಿಯೋಜನೆ: ಪರಿಸ್ಥಿತಿಯನ್ನು ನಿಭಾಯಿಸಲು ಕಾರ್ಯತಂಡದೊಂದಿಗೆ ಕೈಜೋಡಿಸಲು ಗುತ್ತಿಗೆ ಆಧಾರದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲು ಜನರಲ್ ಮ್ಯಾನೇಜರ್ ಗಳು/ಸಿ.ಎ.ಒ.ಗಳು/ ಡಿ.ಆರ್.ಎಂ.ಗಳಿಗೆ ಅಧಿಕಾರ ನೀಡಲಾಗಿದೆ

11.   ಐ.ಆರ್.ಸಿ.ಟಿ.ಸಿ. ಅಡುಗೆ ಮನೆಗಳಿಂದ ಆವಶ್ಯಕತೆ ಇರುವವರಿಗೆ ಉಚಿತ ಊಟ ಪೂರೈಕೆ: 2020ರ ಮಾರ್ಚ್ 28 ರಿಂದ ಐ.ಆರ್.ಸಿ.ಟಿ.ಸಿ. ಮೂಲನೆಲೆಯ ಅಡುಗೆ ಮನೆಗಳಿಂದ ಆರ್.ಪಿ.ಎಫ್. ಸಿಬ್ಬಂದಿಗಳ ಸಹಾಯದ ಮೂಲಕ ಆವಶ್ಯಕತೆ ಇರುವವರಿಗೆ ಉಚಿತ ಊಟ ಒದಗಿಸಲಾಗುತ್ತಿದೆ. ಸುಮಾರು 2.25 ಲಕ್ಷ ಊಟವನ್ನು ದೇಶದ 25 ಕಡೆಗಳಲ್ಲಿ ಆವಶ್ಯಕತೆ ಇರುವವರಿಗೆ ಒದಗಿಸಲಾಗಿದೆ.

12.  ಗುತ್ತಿಗೆದಾರರಿಗೆ ಮತ್ತು ಪೂರೈಕೆದಾರರಿಗೆ ಡಿಜಿಟಲ್ ಮೂಲಕ ಪಾವತಿ: ಅತ್ಯಂತ ಕಡಿಮೆ ಸಂಖ್ಯೆಯ ಸಿಬ್ಬಂದಿಗಳಿಂದ ನಿಭಾಯಿಸಬಹುದಾದ ಡಿಜಿಟಲ್ ಐ.ಟಿ.ತಂತ್ರಜ್ಞಾನದ ಮೂಲಕ ಎಲ್ಲಾ ಅವಶ್ಯಕ ಪಾವತಿಗಳನ್ನು ಮಾಡಲಾಗುತ್ತಿದೆ. ಗುತ್ತಿಗೆ ಸಿಬ್ಬಂದಿಗಳಿಗೆ ಯಾವುದೇ ಕಠಿಣ ಪರಿಸ್ಥಿತಿ ಎದುರಾಗಬಾರದು ಎಂದು ಎಲ್ಲಾ ಅವಶ್ಯಕ ಗುತ್ತಿಗೆ ಪಾವತಿಗಳನ್ನು ನಿಯಮಿತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಬಿಲ್ ಪಾವತಿಯನ್ನು ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ಮಾಡುವುದಕ್ಕಾಗಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

13.  ಗುತ್ತಿಗೆ ಕಾರ್ಮಿಕರಿಗೆ ಪಾವತಿ ಮತ್ತು ನಿಲ್ಲಲು ವ್ಯವಸ್ಥೆ: ಗೃಹ ನಿರ್ವಹಣೆಯ/ಸೇವಾ ಗುತ್ತಿಗೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಲಾಕ್ ಡೌನ್ ಅವಧಿಯಲ್ಲಿ ನಿಯಮಿತವಾಗಿ ಪಾವತಿಯನ್ನು ಖಾತ್ರಿಪಡಿಸಲಾಗಿದೆ. ಲಾಕ್ ಡೌನ್ ನಲ್ಲಿ ಬಾಕಿಯಾಗಿರುವ ಸಿಬ್ಬಂದಿಗಳಿಗೆ ತಂಗಲು ಮತ್ತು ಆಹಾರದ ವ್ಯವಸ್ಥೆಯನ್ನು ಇಲಾಖಾ ಮತ್ತು ಗುತ್ತಿಗೆ ಸಿಬ್ಬಂದಿಗಳಿಗೆ ಮಾಡಲಾಗಿದೆ.

 

****

 



(Release ID: 1610957) Visitor Counter : 140