ರೈಲ್ವೇ ಸಚಿವಾಲಯ

ಭಾರತ ಸರ್ಕಾರ ಕೈಗೊಂಡಿರುವ ಆರೋಗ್ಯ ರಕ್ಷಣಾ ಕ್ರಮಗಳಿಗೆ ಪೂರಕವಾಗಿ ಸ್ವಯಂ ಮಾಸ್ಕ್ ಮತ್ತು ಸ್ಯಾನಿಟೈಸರ್ ಉತ್ಪಾದೆನೆಯಲ್ಲಿ ಮುಂಚೂಣಿಗೆ ಬಂದ ರೈಲ್ವೆ

Posted On: 03 APR 2020 4:36PM by PIB Bengaluru

ಭಾರತ ಸರ್ಕಾರ ಕೈಗೊಂಡಿರುವ ಆರೋಗ್ಯ ರಕ್ಷಣಾ ಕ್ರಮಗಳಿಗೆ ಪೂರಕವಾಗಿ ಸ್ವಯಂ ಮಾಸ್ಕ್ ಮತ್ತು ಸ್ಯಾನಿಟೈಸರ್ ಉತ್ಪಾದೆನೆಯಲ್ಲಿ ಮುಂಚೂಣಿಗೆ ಬಂದ ರೈಲ್ವೆ

2020ರ ಏಪ್ರಿಲ್ 1 ರ ವರೆಗೆ ಭಾರತೀಯ ರೈಲ್ವೆಯಿಂದ ಒಟ್ಟು 287704 ಮಾಸ್ಕ್ ಗಳು ಮತ್ತು 25806 ಲೀಟರ್ ಸ್ಯಾನಿಟೈಸರ್ ಉತ್ಪಾದನೆ

ಎಲ್ಲ ರೈಲ್ವೆ ವಲಯಗಳಿಂದ ಈ ಕಾರ್ಯ, ಆದರೆ ಸಿಆರ್ ಮತ್ತು ಡಬ್ಲ್ಯೂಆರ್ ನಿಂದ ಹೆಚ್ಚಿನ ಪ್ರಮಾಣದ ಉತ್ಪಾದನೆ

ಕರ್ತವ್ಯನಿರತ ಎಲ್ಲ ಸಿಬ್ಬಂದಿಗೆ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್  ಲಭ್ಯ: ಗುತ್ತಿಗೆ ಕಾರ್ಮಿಕರಿಗೂ ಅವುಗಳ ಖಾತ್ರಿ

 

ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಕ್ರಮಗಳ ಮುಂದುವರಿಕೆ ಭಾಗವಾಗಿ, ಭಾರತೀಯ ರೈಲ್ವೆ, ಭಾರತ ಸರ್ಕಾರ ಕೈಗೊಂಡಿರುವ ಆರೋಗ್ಯ ರಕ್ಷಣಾ ಉಪಕ್ರಮಗಳಿಗೆ ಪೂರಕವಾಗಿ ಹಲವು ಪ್ರಯತ್ನಗಳನ್ನು ಕೈಗೊಂಡಿದೆ. ಆ ನಿಟ್ಟಿನಲ್ಲಿ ಭಾರತೀಯ ರೈಲ್ವೆ, ಎಲ್ಲ ವಲಯ ರೈಲ್ವೆಗಳು, ಉತ್ಪಾದನಾ ಘಟಕಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ್ಲಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಸ್ವಯಂ ಉತ್ಪಾದಿಸಲಾಗುತ್ತಿದೆ.

2020ರ ಏಪ್ರಿಲ್ 1 ರ ವರೆಗೆ ಭಾರತೀಯ ರೈಲ್ವೆ ತನ್ನೆಲ್ಲಾ ವಲಯ ರೈಲ್ವೆಗಳು, ಉತ್ಪಾದನಾ ಘಟಕಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಒಟ್ಟು 287704 ಮಾಸ್ಕ್ ಗಳು ಮತ್ತು 25806 ಲೀಟರ್ ಸ್ಯಾನಿಟೈಸರ್ ಉತ್ಪಾದಿಸಿದೆ. ಭಾರತೀಯ ರೈಲ್ವೆಯ ಕೆಲವು ವಲಯಗಳು ಈ ವಿಷಯದಲ್ಲಿ ಮುಂಚೂಣಿಯಲ್ಲಿವೆ. ಕೇಂದ್ರ ರೈಲ್ವೆ ವಲಯ 22580 ಮಾಸ್ಕ್ ಮತ್ತು 2693 ಲೀಟರ್ ಸ್ಯಾನಿಟೈಸರ್, ಪಶ್ಚಿಮ ವಲಯ 46313 ಮಾಸ್ಕ್ ಮತ್ತು 700 ಲೀಟರ್ ಸ್ಯಾನಿಟೈಸರ್, ಉತ್ತರ ಕೇಂದ್ರ ರೈಲ್ವೆ 26567 ಮಾಸ್ಕ್ ಮತ್ತು 3100 ಲೀಟರ್ ಸ್ಯಾನಿಟೈಸರ್  ಮತ್ತು ಪೂರ್ವ ರೈಲ್ವೆ ವಲಯ 14800 ಮಾಸ್ಕ್ ಗಳು ಮತ್ತು 2620 ಲೀಟರ್ ಸ್ಯಾನಿಟೈಸರ್  ಉತ್ಪಾದಿಸಿದೆ.

ಭಾರತೀಯರ ರೈಲ್ವೆಯ ಸರಕು ಸಾಗಾಣೆ ರೈಲುಗಳು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿರುವುದರಿಂದ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿ ಕೂಡ ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗಳ ಸುರಕ್ಷತೆ ಖಾತ್ರಿಪಡಿಸಲು ಹಾಗೂ ಅವರ ನೈತಿಕ ಸ್ಥೈರ್ಯ ಹೆಚ್ಚಿಸಲು ಕೆಲಸ ಮಾಡುವ ಸ್ಥಳಗಳಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

     i.        ಕರ್ತವ್ಯದಲ್ಲಿರುವ ಎಲ್ಲ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಲಾಗಿದೆ. ಗುತ್ತಿಗೆ ಕಾರ್ಮಿಕರಿಗೂ ಸಹ ಅವುಗಳನ್ನು ಖಾತ್ರಿಪಡಿಸಲಾಗಿದೆ.

    ii.        ಕೆಲಸ ಮಾಡುವ ಸ್ಥಳಗಳಲ್ಲಿ ಸೋಪು, ನೀರು ಮತ್ತು ಕೈತೊಳೆಯುವ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸ್ಥಳೀಯ ಆವಿಷ್ಕಾರಗಳೊಂದಿಗೆ ಹ್ಯಾಂಡ್ಸ್ ಫ್ರೀ ವಾಷಿಂಗ್ ಸೌಕರ್ಯಗಳನ್ನೂ ಸಹ ಕಲ್ಪಿಸಲಾಗಿದೆ.

   iii.        ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಲಾಗಿದೆ. ಟ್ರ್ಯಾಕ್ ಮನ್, ಲೋಕೋಮೋಟಿವ್ ಪೈಲಟ್ ಗಳು ಸೇರಿ ಎಲ್ಲ ಸಿಬ್ಬಂದಿಗಳಲ್ಲಿ ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.

 

****


(Release ID: 1610852) Visitor Counter : 153