ಗ್ರಾಮೀಣಾಭಿವೃದ್ಧಿ ಸಚಿವಾಲಯ

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ರ ಏಪ್ರಿಲ್ ತಿಂಗಳಿಗೆ ಪಿಎಂ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಮಹಿಳಾ ಪಿಎಂಜೆಡಿವೈ ಖಾತೆದಾರರಿಗೆ ನೇರ ನಗದು ವರ್ಗಾವಣೆ

Posted On: 03 APR 2020 12:25PM by PIB Bengaluru

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ರ ಏಪ್ರಿಲ್ ತಿಂಗಳಿಗೆ ಪಿಎಂ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಮಹಿಳಾ ಪಿಎಂಜೆಡಿವೈ ಖಾತೆದಾರರಿಗೆ ನೇರ ನಗದು ವರ್ಗಾವಣೆ

ಖಾತೆದಾರರಿಂದ ಶಾಖೆಗಳುಬಿಸಿಗಳು ಮತ್ತು ಎಟಿಎಂಗಳಲ್ಲಿ ದಿಗ್ಭ್ರಮೆ ಮೂಡಿಸುವಂತೆ ಹಣ ಹಿಂತೆಗೆತ

 

ಪ್ರಧಾನ ಮಂತ್ರಿ ಜನ್-ಧನ್ ಯೋಜನೆ (ಪಿಎಂಜೆಡಿವೈ) ಖಾತೆದಾರರಿಗೆ (ಬ್ಯಾಂಕುಗಳು ತಿಳಿಸಿದ ಅಂತಹ ಖಾತೆಗಳ ಪ್ರಕಾರ) ಪ್ರತಿ ಮಹಿಳೆಗೆ ಏಪ್ರಿಲ್ 2020ರಲ್ಲಿ ನೀಡಲು ತಲಾ 500 / - ರೂ. ನಂತೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಹಣ ಬಿಡುಗಡೆ ಮಾಡಿದ್ದು, 2020 ರ ಏಪ್ರಿಲ್ 2 ರಂದು ವೈಯಕ್ತಿಕ ಬ್ಯಾಂಕುಗಳ ಗೊತ್ತುಪಡಿಸಿದ ಖಾತೆಗಳಿಗೆ ಸಂದಾಯವಾಗುತ್ತದೆ.

ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಪಿ.ಎಂ. ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ತಲಾ 500 ರೂ.ಗಳ ಎಕ್ಸ್ ಗ್ರೇಷಿಯಾ ಹಣ ಪಾವತಿ ಮಾಡಲಾಗುವುದು ಎಂದು ಹಣಕಾಸು ಸಚಿವರು 26.03.2020ರಂದು ಮಾಡಿರುವ ಪ್ರಕಟಣೆಯ ಅನುಸರಣೆ ಇದಾಗಿದೆ.  

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಫಲಾನುಭವಿಗಳು ಹಣವನ್ನು ಕ್ರಮಬದ್ಧವಾಗಿ ಹಿಂತೆಗೆದುಕೊಳ್ಳುವ ಸಲುವಾಗಿಹಣಕಾಸು ಸೇವಾ ಇಲಾಖೆ (ಡಿಎಫ್‌ಎಸ್) ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದ್ದು, ಬ್ಯಾಂಕ್ ಶಾಖೆಗಳುಬಿಸಿಗಳು ಮತ್ತು ಎಟಿಎಂಗಳಲ್ಲಿ ಖಾತೆದಾರರು ಹಣ ಹಿಂಪಡೆಯಲು ತಂಡೋಪತಂಡವಾಗಿ ಆಗಮಿಸುವುದನ್ನು ತಡೆಯುವಂತೆ ಸೂಚಿಸಿದೆ.

ಫಲಾನುಭವಿಗಳ ಖಾತೆ ಸಂಖ್ಯೆಯ ಕೊನೆಯ ಅಂಕಿಯ ಆಧಾರದ ಮೇಲೆ ವಿತರಣೆಯ ವೇಳಾಪಟ್ಟಿ ಮಾಡಲಾಗಿದ್ದು, ಅದು ಹೀಗಿದೆ:

 

ಮಹಿಳಾ ಪಿಎಂಜೆಡಿವೈ ಖಾತೆದಾರರು ಹೊಂದಿರುವ ಖಾತೆಯ ಕೊನೆಯ ಅಂಕಿ..

ಫಲಾನುಭವಿಗಳಿಂದ ಖಾತೆಯಿಂದ ಹಣ ಹಿಂಪಡೆಯಬಹುದಾದ ದಿನಾಂಕ

ಅಥವಾ 1

3.4.2020

ಅಥವಾ 3

4.4.2020

ಅಥವಾ 5

7.4.2020

ಅಥವಾ 7

8.4.2020

ಅಥವಾ 9

9.4.2020

 

09.04.2020ರ ನಂತರ ಫಲಾನುಭವಿಗಳು, ಯಾವುದೇ ದಿನಾಂಕದಂದು ಸಾಮಾನ್ಯ ಕೆಲಸದ ಅವಧಿಯಲ್ಲಿ ಶಾಖೆಗೆ ಅಥವಾ ಬಿಸಿಗೆ ಹೋಗಬಹುದು. ಬ್ಯಾಂಕುಗಳು ಅದಕ್ಕೆ ಅನುಗುಣವಾಗಿ ಫಲಾನುಭವಿಗಳ ಖಾತೆಗಳಿಗೆ ಹಂತಹಂತವಾಗಿ ಹಣ ಜಮೆ ಮಾಡಬಹುದು. ಈ ಕೆಳಗೆ ನೀಡಿರುವ ಪಠ್ಯದ ಪ್ರಕಾರ ಮೇಲಿನ ವೇಳಾಪಟ್ಟಿಯನ್ನು ಫಲಾನುಭವಿಗಳಿಗೆ ಬ್ಯಾಂಕ್ ಗಳು ಎಸ್‌ಎಂಎಸ್ ಮೂಗಿಲಕ ತಿಳಿಸಲು  ಸೂಚಿಸಲಾಗಿದೆ:

 ನಾವು ನಿಮ್ಮ ಕಾಳಜಿ ವಹಿಸುತ್ತೇವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ಮಾಸಿಕ ರೂ.500/- ನ್ನು ಮಹಿಳಾ ಜನ್ ಧನ್ ಯೋಜನಾ ಫಲಾನುಭವಿಗಳ ಖಾತೆಗೆ ಏಪ್ರಿಲ್ 2020ರ ತಿಂಗಳ ಹಣ ಜಮೆ ಮಾಡಲಾಗಿದೆ. ಅನಾನುಕೂಲತೆ ತಪ್ಪಿಸಲು ನಿಮ್ಮ ಶಾಖೆ/ಬ್ಯಾಂಕ್ ಮಿತ್ರಾಗೆ ನಾಳೆ/........ (ದಿನಾಂಕ) ಸಂಪರ್ಕಿಸಿ. ಸುರಕ್ಷಿತವಾಗಿರಿ ಮತ್ತು ಆರೋಗ್ಯವಾಗಿರಿ!”

(ಬ್ಯಾಂಕ್ ಗಳು ಸೂಕ್ತವಾದ ಆಯ್ಕೆಯನ್ನು ಮೇಲಿನ ಪಠ್ಯದಿಂದ ಆಯ್ಕೆ ಮಾಡಿಕೊಳ್ಳಬಹುದು)

ಮೇಲಿನ ಪಠ್ಯದ ರೀತ್ಯ ಎಸ್.ಎಂ.ಎಸ್. ಸಂದೇಶದ ಜೊತೆಗೆ, ಸ್ಥಳೀಯ ಪ್ರಚಾರ (ಸ್ಥಳೀಯ ವಾಹಿನಿಗಳು/ಮುದ್ರಣ ಮಾಧ್ಯಮ/ಕೇಬಲ್ ಆಪರೇಟರ್ ಗಳು/ಸ್ಥಳೀಯ ರೇಡಿಯೋ/ಇತರ ವಾಹಿನಿಗಳ ಮೂಲಕ) ಸಹ ಮಾಡಿ, ಖಾತೆಗಳಿಗೆ ಜಮಾ ಮಾಡಲಾದ ಹಣವನ್ನು ಅಗತ್ಯವಿದ್ದಾಗ ಹಿಂಪಡೆಯಲು ಲಭ್ಯವಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ಫಲಾನುಭವಿಗೆ ತಕ್ಷಣ ಹಣ ಪಡೆಯುವುದಿದ್ದರೆ, ಆಕೆ, ಮೇಲಿನ ಪ್ಯಾರಾ 3 ರಲ್ಲಿ ಉಲ್ಲೇಖಿಸಿರುವ ವೇಳಾಪಟ್ಟಿಯ ಪ್ರಕಾರ ಬ್ಯಾಂಕ್ ಶಾಖೆ ಅಥವಾ ಬಿ.ಸಿ.ಯನ್ನು ಸಂಪರ್ಕಿಸಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ಸಮರ್ಪಕವಾದ ಹಣ ವಿತರಣೆ ಮಾಡುವಂತೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬುದನ್ನು ಇದು ಪ್ರತಿಪಾಸುತ್ತದೆ.

ಈ ನಿಟ್ಟಿನಲ್ಲಿ, ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್.ಎಲ್.ಬಿ.ಸಿ.) ಸಂಚಾಲಕರಿಗೆ ತಕ್ಷಣವೇ ರಾಜ್ಯ ಸರ್ಕಾರವನ್ನು ಭೇಟಿ ಮಾಡಲು ಮತ್ತು ಅವರಿಗೆ ತಮ್ಮ ಯೋಜನೆಯ ಬಗ್ಗೆ ತಿಳಿಯಪಡಿಸಿ, ಶಾಖೆಗಳು, ಬಿಸಿ ಕಿಯೋಸ್ಕ್ ಗಳು ಮತ್ತು ಎಟಿಎಂಗಳ ಬಳಿ ಸೂಕ್ತ ಭದ್ರತೆಯ ವ್ಯವಸ್ಥೆಯ ಬೆಂಬಲ ಕೋರುವಂತೆ ನಿರ್ದೇಶಿಸಲಾಗಿದೆ. .ರಾಜ್ಯ ಸರ್ಕಾರಗಳಿಗೆ ಕೂಡ ಜಿಲ್ಲಾಡಳಿತ ಮತ್ತು ಪೊಲೀಸ್ ಪ್ರಾಧಿಕಾರಗಳಿಗೆ ಬ್ಯಾಂಕ್ ಗಳು ಫಲಾನುಭವಿಗಳಿಗೆ ಕ್ರಮಬದ್ಧವಾಗಿ ಹಣ ವಿತರಣೆ ಮಾಡಲು ಮತ್ತು ಸ್ಥಳೀಯವಾಗಿ ಪ್ರಚಾರ ಕೈಗೊಳ್ಳಲು ಬೆಂಬಲ ನೀಡುವಂತೆ  ಕೋರಲಾಗಿದೆ.

ಎಲ್ಲ ಸಾರ್ವಜನಿಕ ವಲಯದ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಮುಖ್ಯಸ್ಥರುಗಳಿಗೆ ತಮ್ಮ ಬ್ಯಾಂಕ್ ಶಾಖೆಗಳ ಅಧಿಕಾರಿಗಳಿಗೆ ಮತ್ತು ವಾಣಿಜ್ಯ ಬಾತ್ಮೀದಾರರಿಗೆ ಸೂಕ್ತ ಸೂಚನೆ ನೀಡುವಂತೆ ತಿಳಿಸಲಾಗಿದೆ.

*******


(Release ID: 1610770) Visitor Counter : 355