ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಬಿಕ್ಕಟ್ಟಿನ ಸಮಯದಲ್ಲಿ ಸಿ.ಐ.ಪಿ.ಇ.ಟಿ .ಯಿಂದ ಸಮುದಾಯ ಪರಿಹಾರ ಕಾರ್ಯ
Posted On:
01 APR 2020 12:58PM by PIB Bengaluru
ಬಿಕ್ಕಟ್ಟಿನ ಸಮಯದಲ್ಲಿ ಸಿ.ಐ.ಪಿ.ಇ.ಟಿ .ಯಿಂದ ಸಮುದಾಯ ಪರಿಹಾರ ಕಾರ್ಯ
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಸಾಯನಿಕಗಳು ಮತ್ತು ರಸ ಗೊಬ್ಬರಗಳ ಸಚಿವಾಲಯದ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯಡಿ ಕಾರ್ಯಾಚರಿಸುವ ಭಾರತ ಸರಕಾರದ ಸಂಸ್ಥೆಯಾಗಿರುವ ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ವಿವಿಧ ರಾಜ್ಯಗಳಲ್ಲಿರುವ ಅದರ ಸೌಲಭ್ಯಗಳನ್ನು ಸಮುದಾಯದ ಒಳಿತಿನ ಪವಿತ್ರ ಕಾರ್ಯಕ್ಕಾಗಿ ವಿನಿಯೋಗಿಸುತ್ತಿದೆ.
ಈ ಕ್ರಮದ ಅಂಗವಾಗಿ , ಸಿ.ಐ.ಇ.ಪಿ.ಟಿ.ಗಳ ಗ್ವಾಲಿಯರ್ ಕೇಂದ್ರ ತನ್ನ ಕೌಶಲ್ಯ ತರಬೇತಿ ಕೇಂದ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್/ ಕಲೆಕ್ಟರ್ ಅವರಿಗೆ ಹಸ್ತಾಂತರಿಸಿದೆ ಮತ್ತು ಅರೆವೈದ್ಯಕೀಯ ತಂಡಕ್ಕೆ ಪೂರಕ ಸೇವೆಗಳಿಗಾಗಿ 24*7 ಮಾದರಿಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ, 72 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯವನ್ನೂ ರೂಪಿಸಿದೆ.
ಅದೇ ರೀತಿ ಸಿ.ಐ.ಇ.ಪಿ.ಟಿ ಭುವನೇಶ್ವರ ಕೂಡಾ ಮುಖಗವಸುಗಳು, ಸ್ಯಾನಿಟೈಸರ್ ಗಳು, ಕ್ರಿಮಿನಾಶಕಗಳು ಮತ್ತು ನೀರಿನ ಬಾಟಲಿಗಳನ್ನು ವಿತರಿಸಿ ಕೊರೋನಾ ಜಾಗತಿಕ ಸಾಂಕ್ರಾಮಿಕದ ಪ್ರಸರಣದ ವಿರುದ್ದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ಅದು ಪ್ರಾತ್ಯಕ್ಷಿಕೆಗಳನ್ನೂ ನೀಡುತ್ತಿದೆ.
ಸಿ.ಐ.ಪಿ.ಇ.ಟಿ.ಯ ಎಲ್ಲಾ ಸಿಬ್ಬಂದಿಗಳು ಸ್ವಯಂ ತಮ್ಮ ಒಂದು ದಿನದ ವೇತನವನ್ನು ದೇಣಿಗೆ ನೀಡಿದ್ದು, ಒಟ್ಟು ಮೊತ್ತವಾದ 18 ಲಕ್ಷ ರೂಪಾಯಿಗಳನ್ನು ಪಿ.ಎಂ. ಕೇರ್ಸ್ ನಿಧಿಗೆ ನೀಡಲಾಗಿದೆ.
ಸಿ.ಐ.ಪಿ.ಇ.ಟಿ.-ಎಸ್.ಎ.ಆರ್.ಪಿ. ಎಲ್.ಎ.ಆರ್.ಪಿ.ಎಂ. ಭುವನೇಶ್ವರದ ಸಂಶೋಧನಾ ಮತ್ತು ಅಭಿವೃದ್ದಿ ವಿಭಾಗ ಡಬ್ಲ್ಯು.ಎಚ್.ಒ. ಮಾರ್ಗದರ್ಶಿಗಳ ಅನ್ವಯ ಸ್ಯಾನಿಟೈಸರ್ ಗಳನ್ನು ತಯಾರಿಸಿದೆ ಮತ್ತು ಅದನ್ನು ಕೋವಿಡ್ -19 ವಿರುದ್ದ ರಕ್ಷಣಾರ್ಥವಾಗಿ ಭದ್ರತಾ ಮತ್ತು ಕಚೇರಿ ಕೆಲಸದ (ಗೃಹ ಕೃತ್ಯ) ಸಿಬ್ಬಂದಿಗೆ ವಿತರಿಸಲಾಗಿದೆ.
ಸಿ.ಐ.ಪಿ.ಇ.ಟಿ.ಲಕ್ನೋ ಸಂಸ್ಥೆಯು ನಗರದಲ್ಲಿ ಅವಶ್ಯಕತೆ ಇದ್ದವರಿಗೆ , ಬಡವರಿಗೆ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಒದಗಿಸಲು ಧಾನ್ಯ ಬ್ಯಾಂಕ್, ನಗರ ನಿಗಮ ಲಿಮಿಟೆಡ್ , ಲಕ್ನೋ ಇವರಿಗೆ 5 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ.
ಆವಶ್ಯಕತೆ ಇರುವವರಿಗೆ ಮತ್ತು ಬಡ ಜನರಿಗೆ ಆಹಾರ ಪೂರೈಸಲು ವಿವಿಧ ಸಿ.ಐ.ಪಿ.ಇ.ಟಿ.ಕೇಂದ್ರಗಳು ಇಂತಹದೇ ಪ್ರಯತ್ನಗಳನ್ನು ಮಾಡುತ್ತಿವೆ.
(Release ID: 1610175)
Visitor Counter : 124