ಆಯುಷ್

ಕೋವಿಡ್ -19 ಹೇಳಿಕೆಗಳಲ್ಲಿ ಪರಿಶ್ರಮ ಇರಲಿ ಎಂದು ಆಯುಷ್ ಸಚಿವಾಲಯದ ಮನವಿ ಮತ್ತು ಕೊರೊನಾವೈರಸ್ ವಿರುದ್ದದ ಹೋರಾಟದಲ್ಲಿ ಸಾಕ್ಷ್ಯಾಧಾರಿತ ಹಾಗು ವೈಜ್ಞಾನಿಕ ಪರಿಹಾರಗಳ ಕಾರ್ಯದ ಆರಂಭ

Posted On: 31 MAR 2020 2:29PM by PIB Bengaluru

ಕೋವಿಡ್ -19 ಹೇಳಿಕೆಗಳಲ್ಲಿ ಪರಿಶ್ರಮ ಇರಲಿ ಎಂದು ಆಯುಷ್ ಸಚಿವಾಲಯದ ಮನವಿ ಮತ್ತು ಕೊರೊನಾವೈರಸ್ ವಿರುದ್ದದ ಹೋರಾಟದಲ್ಲಿ ಸಾಕ್ಷ್ಯಾಧಾರಿತ ಹಾಗು ವೈಜ್ಞಾನಿಕ ಪರಿಹಾರಗಳ ಕಾರ್ಯದ ಆರಂಭ

 

ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿ ಸಾಕ್ಶ್ಯಾಧಾರರಹಿತ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಪ್ರಧಾನ ಮಂತ್ರಿ ಅವರು ನೀಡಿರುವ ಕರೆಯನ್ನು ಅನುಸರಿಸಿ ಆಯುಷ್ ಸಚಿವಾಲಯವು ಜಾಗೃತಿ ಮೂಡಿಸುವ ಮೂಲಕ ಇಂತಹ ಹೇಳಿಕೆಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಜೊತೆಗೆ ಸಚಿವಾಲಯವು ಪ್ರಧಾನ ಮಂತ್ರಿ ಅವರ ಸಲಹೆಯ ಮೇರೆಗೆ ಈ ಜಾಗತಿಕ ಸಾಂಕ್ರಾಮಿಕದ ಪ್ರಸರಣವನ್ನು ತಡೆಗಟ್ಟಲು ವೈಜ್ಞಾನಿಕ ಸಾಕ್ಷ್ಯಾಧಾರ ಆಧಾರಿತ ಪರಿಹಾರಗಳತ್ತ ಕಾರ್ಯೋನ್ಮುಖರಾಗಲು ಆಯುಷ್ ಪದ್ದತಿಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಆಯುಷ್ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಮತ್ತು ಸಲಹೆಗಳನ್ನು ಪಟ್ಟಿ ಮಾಡಲು ವ್ಯವಸ್ಥೆಯನ್ನು ರೂಪಿಸಲು ಕಾರ್ಯೋನ್ಮುಖವಾಗಿದೆ. ಜೊತೆಗೆ ವಿಜ್ಞಾನಿಗಳ ಗುಂಪಿನ ಮೂಲಕ ಅದರ ಕಾರ್ಯ ಸಾಧ್ಯತೆಯನು ಪರಿಶೀಲಿಸಲೂ ಕ್ರಮ ವಹಿಸಿದೆ.

ಆಯುಷ್ ಪದ್ದತಿಯಲ್ಲಿ ಚಿಕಿತ್ಸೆ ನೀಡುತ್ತಿರುವವರನ್ನು ತಲುಪಲು ಸಚಿವಾಲಯವು ವೀಡಿಯೋ ಕಾನ್ಫರೆನ್ಸಿಂಗ್ ಮತು ಸಾಮಾಜಿಕ  ಮಾಧ್ಯಮಗಳಂತಹ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ಮತ್ತು ಯಾವುದೇ ಸಾಕ್ಶ್ಯಾಧಾರಗಳ ಬೆಂಬಲ ಇಲ್ಲದ ಹೇಳಿಕೆಗಳನ್ನು ಮತ್ತು ಸುಳ್ಳು ಹೇಳಿಕೆಗಳನ್ನು ನಿಲ್ಲಿಸಲು ಮತ್ತು ಅಂತಹ ಹೇಳಿಕೆಗಳಿಗೆ ಉತ್ತೇಜನ ನೀಡದಿರುವುದಕ್ಕೂ ಅವರನ್ನು ಒಳಗೊಳಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. 2020ರ ಮಾರ್ಚ್ 30 ರಂದು ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಆಯುಷ್ ನ ವಿವಿಧ ಶಿಸ್ತುಗಳ ಸುಮಾರು 100 ಚಿಂತಕ ನಾಯಕರು ಭಾಗವಹಿಸಿದ್ದರು. ಅದರಲ್ಲಿ ಇಂತಹ ಸೂಕ್ತವಲ್ಲದ ಹೇಳಿಕೆಗಳ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡುವುದು ಸಹಿತ ಇತರ ಹಲವು ಕ್ರಮಗಳ ಕಾರ್ಯ ನಿರ್ವಹಿಸಲು ನಿರ್ಧರಿಸಲಾಯಿತು.  ರೈಲ್ವೇ ಮತ್ತು ವಾಣಿಜ್ಯ ಸಚಿವರಾದ ಶ್ರೀ ಪೀಯುಷ್ ಗೋಯೆಲ್, ಆಯುಷ್ ಇಲಾಖೆಯ ಸ್ವತಂತ್ರ ನಿರ್ವಹಣೆಯ ಸಹಾಯಕ ಸಚಿವರಾದ ಶ್ರೀ ಶ್ರೀಪಾದ ನಾಯಕ್ ಅವರು ಆಯುಷ್ ಉದ್ಯಮದ ನಾಯಕರನ್ನು ಉದೇಶಿಸಿ 2020ರ ಮಾರ್ಚ್ 30 ರಂದು ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು.

ಆಯುಷ್ ಪದ್ದತಿಗಳಿಂದ ವೈಜ್ಞಾನಿಕ ಸಾಕ್ಷಾಧಾರ ಆಧಾರಿತ ಪರಿಹಾರಗಳು ಬರಲು ಕೆಲಸ ಮಾಡಬೇಕು ಎಂದು ಪ್ರಧಾನ ಮಂತ್ರಿ ಅವರು ಕರೆ ನೀಡಿದ ಬಳಿಕ ಅದನ್ನು ಅನುಸರಿಸಿ ಆಯುಷ್ ಸಚಿವಾಲಯ ತನ್ನ ಜಾಲ ತಾಣದಲ್ಲಿ ನಿಗದಿತ ವೈಜ್ಞಾನಿಕ ಮಾರ್ಗದರ್ಶಿಗಳ ಆಧಾರದಲ್ಲಿ ರೂಪಿಸಲಾದ ,  ಕೋವಿಡ್ -19  ಜಾಗತಿಕ ಸಾಂಕ್ರಾಮಿಕದ ಪ್ರಸರಣವನ್ನು  ತಡೆಯಬಹುದಾದ ಅಥವಾ ಈ ಖಾಯಿಲೆಯನ್ನು ನಿಭಾಯಿಸಬಹುದಾದ ವೈಜ್ಞಾನಿಕ ವಿವರಣೆಗಳು ಮತ್ತು ಪ್ರಸ್ತಾಪಗಳನ್ನು ಒಳಗೊಂಡ ಚಿಕಿತ್ಸಾ ಪ್ರಸ್ತಾವನೆ ಮತ್ತು ಪ್ರಕ್ರಿಯೆಗಳ ಸಹಿತ ಸಲಹೆಗಳನ್ನು ಪಡೆಯಲು ಆನ್ ಲೈನ್ ಚಾನೆಲನ್ನು ಸ್ಥಾಪಿಸಿದೆ. ಇದರನ್ವಯ ಸಚಿವಾಲಯವು ಆಯುಷ್ ಪದ್ದತಿ ಅನುಸರಿಸಿ ಚಿಕಿತ್ಸೆ ನೀಡುವವರಿಂದ ಮತ್ತು ಆಯುಷ್ ಸಂಸ್ಥೆಗಳಿಂದ (ಸಂಸ್ಥೆಗಳಲ್ಲಿ ಕಾಲೇಜುಗಳು/ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು, ಆಯುಷ್ ಉತ್ಪಾದಕರು, ಆಯುಷ್ ಸಂಘಟನೆಗಳು ಇತ್ಯಾದಿಗಳು ಸೇರಿರುತ್ತವೆ.) ಮಾಹಿತಿಗಳನ್ನು ಆಹ್ವಾನಿಸಿದೆ.  ಮಾಹಿತಿಗಳನ್ನು ಸಚಿವಾಲಯದ ಜಾಲತಾಣವಾದ http://ayush.gov.in/covid-19 ರಲ್ಲಿ  (ಒಂದು ವೇಳೆ ನೀವು ಕ್ಲಿಕ್ ಮಾಡಿದಾಗ ಈ ಲಿಂಕ್ ಕೆಅಲಸ ಮಾಡದಿದ್ದರೆ , ನೀವು ಇದನ್ನು ಕಾಪಿ ಮಾಡಿ ಅದನ್ನು ಬಳಿಕ ನಿಮ್ಮ ವೆಬ್ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಅಂಟಿಸಬಹುದು.) ಸಲ್ಲಿಸಬಹುದು. ಈ ಮಾಹಿತಿಗಳನ್ನು ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತದೆ . ಈ ಪರಿಶೀಲನಾ ಸಮಿತಿ ಶಿಫಾರಸು ಮಾಡಿದ ಪ್ರಸ್ತಾವಗಳನ್ನು ಬಳಿಕ ವಿವಿಧ ಕ್ಷೇತ್ರಗಳ ವಿಶೇಷ ತಜ್ಞರು ಮತ್ತೆ ಪರಿಶೀಲನೆ ಮಾಡುವರು. ಆ ಬಳಿಕ ಸಾಧ್ಯ ಇರುವಲ್ಲಿ ಆ ಪ್ರಸ್ತಾಪಗಳನ್ನು ಮಾನ್ಯತಾ ಅಧ್ಯಯನಕ್ಕೆ ಕೈಗೆತ್ತಿಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಅವರ ಅಭಿಪ್ರಾಯಗಳು 2020 ರ ಮಾರ್ಚ್ 28 ರಂದು ನಡೆದ ಆಯುಷ್ ವಲಯದ ಪ್ರಮುಖ ವ್ಯಕ್ತಿಗಳ ಜೊತೆಗಿನ ವೀಡಿಯೋ ಕಾನ್ಫರೆನ್ಸಿಂಗ್ ಸಂವಾದದಲ್ಲಿ ಪ್ರಸ್ತಾವವಾದವು.



(Release ID: 1610093) Visitor Counter : 209