ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಮತ್ತು ಕುವೇತ್ ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಸಂಭಾಷಣೆ
Posted On:
01 APR 2020 7:08PM by PIB Bengaluru
ಪ್ರಧಾನಮಂತ್ರಿ ಮತ್ತು ಕುವೇತ್ ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಸಂಭಾಷಣೆ
ಪ್ರಧಾನಮಂತ್ರಿ ಅವರಿಂದು ಕುವೇತ್ ನ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಸಬ್ಹಾ ಅಲ್ – ಖಾಲೆದ್ ಅಲ್ – ಹಮದ್ ಅಲ್ – ಸಬ್ಹಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಪ್ರಧಾನಮಂತ್ರಿಯವರು ಮಹಾ ಮಹಿಮ ರಾಜ ಮನೆತನದ ಕುವೇತ್ ನ ದೊರೆ ಹಾಗೂ ಕುವೇತ್ ಜನತೆಗೆ ಉತ್ತಮ ಆರೋಗ್ಯದ ಶುಭ ಹಾರೈಕೆಗಳನ್ನು ತಿಳಿಸಿದರು. ಮೌಲ್ಯಯುತ ಸದಸ್ಯ ಮತ್ತು ಭಾರತದ ವಿಸ್ತರಿತ ನೆರೆ ರಾಷ್ಟ್ರ ಕುವೇತ್ ನೊಂದಿಗೆ ಭಾರತ ಹೊಂದಿರುವ ಬಾಂಧವ್ಯದ ಮಹತ್ವವನ್ನು ಒತ್ತಿ ಹೇಳಿದರು.
ಇಬ್ಬರೂ ನಾಯಕರು ಪ್ರಸಕ್ತ ಬಾಧಿಸುತ್ತಿರುವ ಸಾಂಕ್ರಾಮಿಕ ಕೋವಿಡ್ -19 ಕುರಿತ ದೇಶೀಯ ಮತ್ತು ಅಂತಾರಾಷ್ಟ್ರೀಯ ಅಂಶಗಳ ಕುರಿತು ಚರ್ಚಿಸಿದರು. ಆರೋಗ್ಯದ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ಪರಸ್ಪರ ಸಹಕಾರ, ಮಾಹಿತಿಯ ವಿನಿಮಯ ಮತ್ತು ಹೊಸ ಮಾರ್ಗೋಪಾಯಗಳ ಶೋಧನೆಗೆ ಅವರ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವುದಕ್ಕೆ ಅವರು ಸಮ್ಮತಿಸಿದರು.
ಘನತೆವೆತ್ತ ಕುವೇತ್ ಪ್ರಧಾನಮಂತ್ರಿಯವರು ಕುವೈತ್ ರಾಷ್ಟ್ರವು ದೊಡ್ಡ ಭಾರತೀಯ ಸಮುದಾಯದ ಕೊಡುಗೆಗಳನ್ನು ಬಹುವಾಗಿ ಗೌರವಿಸುತ್ತದೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಅವರ ಸುರಕ್ಷತೆ ಮತ್ತು ಕ್ಷೇಮವನ್ನು ಖಾತ್ರಿಪಡಿಸಿಕೊಳ್ಳುವುದನ್ನು ಮುಂದುವರೆಸುತ್ತದೆ ಎಂದು ಒತ್ತಿ ಹೇಳಿದರು. ಈ ರೀತಿಯ ಪುನರ್ ಭರವಸೆಗಾಗಿ ಪ್ರಧಾನಮಂತ್ರಿಯವರು ತಮ್ಮ ಆತ್ಮೀಯ ಧನ್ಯವಾದಗಳು ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
*****
(Release ID: 1610048)
Visitor Counter : 163
Read this release in:
Manipuri
,
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam